Search
  • Follow NativePlanet
Share
» »ಭಾರತಕ್ಕೆ ಒಂದು ಹೊಸ ಆಯಾಮವನ್ನು ತಂದು ಕೊಟ್ಟ ನಗರ- ಬೆಂಗಳೂರು

ಭಾರತಕ್ಕೆ ಒಂದು ಹೊಸ ಆಯಾಮವನ್ನು ತಂದು ಕೊಟ್ಟ ನಗರ- ಬೆಂಗಳೂರು

ಸದ್ದುಗದ್ದಲಗಳಿಂದ ಕೂಡಿದ ಮಾಲ್ ಗಳು, ಯಾವಾಗಲೂ ತುಂಬಿ ತುಳುಕುವ ರಸ್ತೆಗಳು ಮತ್ತು ಬಹುಮಹಡಿ ಕಟ್ಟಗಳನ್ನೊಳಗೊಂಡ ಬೆಂಗಳೂರು ಸಮಕಾಲೀನ ಭಾರತಕ್ಕೆ ಒಂದು ಹೊಸ ಆಯಾಮವನ್ನು ತಂದು ಕೊಡುತ್ತದೆ. ಮುಖ್ಯವಾಗಿ ಇದು ಯುವ ಪೀಳಿಗೆಯನ್ನು ಹೆಚ್ಚಾಗಿ ತನ್ನತ್ತ ಆಕರ್ಷಿಸುತ್ತಿದೆ. ವಿಜಯನಗರ ಸಾಮ್ರಾಜ್ಯದ ಮುಖ್ಯಸ್ಥರಾದ ಕೆಂಪೇಗೌಡರು 1537 ರಲ್ಲಿ ಪ್ರಸ್ತುತ ಆಧುನಿಕ ಬೆಂಗಳೂರಿನಲ್ಲಿ ಮೊದಲ ಪ್ರಮುಖ ವಸಾಹತು ಸ್ಥಾಪಿಸಿದರು.

bangalorekids

ಬೆಂಗಳೂರು ನಗರದ ಕೆಲವು ಅತ್ಯಗತ್ಯವಾಗಿ ತಿಳಿಯಬೇಕಾದ ವಿಷಯಗಳು

ಬೆಂಗಳೂರನ್ನು ಮೊದಲು ಪಶ್ಚಿಮ ಗಂಗ ವಂಶಸ್ಥರು ಆಳುತ್ತಿದ್ದರು ನಂತರ ಇದು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತು. ಆನಂತರದ ದಿನಗಳಲ್ಲಿ ಈ ಸ್ಥಳವನ್ನು ಹೈದರಾಲಿ ಮತ್ತು ಅವನ ನಂತರ ಅವನ ಮಗನಾದ ಟಿಪ್ಪು ಸುಲ್ತಾನನಿಂದ ಆಳಲ್ಪಟ್ಟಿತು. ಒಂದೊಮ್ಮೆ ಬೆಂದಕಾಳೂರು ಎಂದು ಕರೆಯಲ್ಪಡುತ್ತಿದ್ದು, ನಂತರ ಬೆಂಗ್ಳೂರ್ ಎಂದು ಬದಲಾಗಿ ಈಗ ಈಗ ಅಧಿಕೃತವಾಗಿ ಬೆಂಗಳೂರು ಎಂದು ಕರೆಯಲಾಗುತ್ತದೆ.
ಹಿಂದೆ ಭಾರತದ ಗಾರ್ಡನ್ ಸಿಟಿ ಎಂದು ಕರೆಯಲಾಗುತ್ತಿದ್ದ ಬೆಂಗಳೂರು ನಗರವನ್ನು ಈಗ ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ಐಟಿ ಯ ಪ್ರಮುಖ ಕೇಂದ್ರವಾಗಿರುವ ಬೆಂಗಳೂರು, ಭಾರತದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ.

ಬೆಂಗಳೂರು ಆಗ್ನೇಯ ಕರ್ನಾಟಕದಲ್ಲಿದೆ ಮತ್ತು ಈ ನಗರವು ಹಳೆ ಮೈಸೂರಿನ ಹೃದಯಭಾಗದಲ್ಲಿದ್ದು, ಅತ್ಯಂತ ವಿಸ್ತಾರವಾದ ಭಾಗವಾಗಿದೆ. 741 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಬೆಂಗಳೂರು ಸುಮಾರು 5.8 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ (ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ). ಹಾಗೂ ಸಮುದ್ರ ಮಟ್ಟದಿಂದ 3113 ಅಡಿ (949 ಮೀ) ಎತ್ತರದಲ್ಲಿದೆ ಆದುದರಿಂದ ಈ ನಗರವು ಆಹ್ಲಾದಕರವಾದ ಹವಾಮಾನವನ್ನು ಅನುಭವಿಸುತ್ತದೆ.
ಪ್ರವಾಸಿಗರು ಮುಖ್ಯವಾಗಿ ಬೆಂಗಳೂರಿಗೆ ಭೇಟಿ ನೀಡಲು ಏಕೆ ಉತ್ಸುಕರಾಗಿರುತ್ತಾರೆ? - ಬೆಂಗಳೂರಿನಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳು.

ಜವಾಹರಲಾಲ್ ನೆಹರು ತಾರಾಲಯ, ಲಾಲ್ ಬಾಗ್, ಕಬ್ಬನ್ ಪಾರ್ಕ್, ಬೆಂಗಳೂರು ಅಕ್ವೇರಿಯಂ, ವೆಂಕಟಪ್ಪ ಆರ್ಟ್ ಗ್ಯಾಲರಿ, ವಿಧಾನಸೌಧ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಂತಹ ಇತರ ಸ್ಥಳಗಳು ಮತ್ತು ಕ್ರೀಡಾ ಪ್ರಮುಖ ಪ್ರವಾಸಿ ಆಕರ್ಷಣೆಗಳಿಗಾಗಿ ಈ ನಗರವು ಉತ್ತಮ ಸಂಪರ್ಕವನ್ನು ಹೊಂದಿರುವುದರಿಂದ ಬೆಂಗಳೂರು ಪ್ರವಾಸಿಗರಿಗೆ ಸ್ವರ್ಗವಾಗಿದ್ದು, ಭೇಟಿ ನೀಡಲೇಬೇಕಾದಂತಹ ಸ್ಥಳವೆನಿಸಿದೆ.
ಬೆಂಗಳೂರಿನಿಂದ ಮುತ್ಯಾಲ ಮಡುವು (ಮುತ್ತಿನ ಕಣಿವೆ), ಮೈಸೂರು, ಶ್ರವಣಬೆಳಗೊಳ, ನಾಗರಹೊಳೆ, ಬಂಡೀಪುರ, ರಂಗನತಿಟ್ಟು, ಬೇಲೂರು ಮತ್ತು ಹಳೇಬೀಡು ಮುಂತಾದ ಸ್ಥಳಗಳಿಗೆ ಪ್ರಯಾಣಿಸಲು ಸಹ ಅನುಕೂಲಕರವಾಗಿದೆ.

ಈ ನಗರವು ಕಡಿಮೆ ವೆಚ್ಚದಿಂದ ಐಷಾರಾಮಿ ವಸತಿಗಳವರೆಗೆ ಎಲ್ಲಾ ಆಯ್ಕೆಯನ್ನು ಹೊಂದಿದೆ. ಇಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತ ಲೀಲಾ ಪ್ಯಾಲೇಸ್, ಗೋಲ್ಡನ್ ಲ್ಯಾಂಡ್ ಮಾರ್ಕ್, ವಿಂಡ್ಸರ್ ಮ್ಯಾನರ್ , ಲೇ ಮೆರಿಡಿಯನ್, ತಾಜ್ ಮತ್ತು ದಿ ಲಲಿತ್ ಅಶೋಕದಂತ ಪ್ರಮುಖ ಐಷಾರಾಮಿ ಹೋಟೇಲುಗಳನ್ನೂ ಹೊಂದಿದೆ.

banglorecrwing

ಬೆಂಗಳೂರನಲ್ಲಿ ಮಾಡಬಹುದಾದ ಚಟುವಟಿಕೆಗಳು

ಬೆಂಗಳೂರು ಬಹು ಸಂಸ್ಕೃತಿಯ ಸಮಾಜವನ್ನು ಹೊಂದಿರುವುದರಿಂದ ಇಲ್ಲಿ ವಿವಿಧ ರೀತಿಯ ಪಾಕ ಪದ್ದತಿಗಳನ್ನು ಕಾಣಬಹುದಾಗಿದೆ. ಸ್ಟ್ರೀಟ್ ಪುಡ್ ನಿಂಡ ಅಂತರಾಷ್ಟ್ರೀಯ ಫ಼ಾಸ್ಟ್ ಪುಡ್ ವರೆಗೆ ಎಲ್ಲವೂ ಇಲ್ಲಿ ಲಭ್ಯವಿರುತ್ತದೆ. ಬೆಂಗಳೂರಿನಾದ್ಯಂತ ಹೆಚ್ಚಿನ ಸಂಖ್ಯೆಯ ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ ಮತ್ತು ಪಿಜ್ಜಾ ಹಟ್ ಔಟ್‌ಲೆಟ್‌ಗಳನ್ನು ಕಾಣಬಹುದು ಮತ್ತು ಆಸಕ್ತ ಪ್ರವಾಸಿಗರು ಎಂಟಿಆರ್‌ನಂತಹ ಹೋಟೇಲುಗಳಲ್ಲಿ ಅನೇಕ ಸ್ಥಳಗಳಲ್ಲಿ ಸ್ಥಳೀಯ ಪಾಕಪದ್ಧತಿಯನ್ನು ಸಹ ಪ್ರಯತ್ನಿಸಬಹುದು. ಬೆಂಗಳೂರಿನಲ್ಲಿ ಉತ್ತರ ಅಥವಾ ಪೂರ್ವ ಭಾರತೀಯ ಪಾಕಪದ್ಧತಿಗಳ ಲಭ್ಯತೆಯು ಸಮಸ್ಯೆಯಾಗಿಲ್ಲ ಏಕೆಂದರೆ ಇಲ್ಲಿ ಅನೇಕ ರೆಸ್ಟೋರೆಂಟ್‌ಗಳು ಭಾರತದ ಇತರ ರಾಜ್ಯಗಳ ಆಹಾರ ಪದಾರ್ಥಗಳನ್ನು ಜನರಿಗೆ ಒದಗಿಸಿಕೊಡುತ್ತದೆ.

ಫೋರಮ್, ಗರುಡಾ ಮಾಲ್, ಸೆಂಟ್ರಲ್ ಮತ್ತು ಮಂತ್ರಿ ಮಾಲ್‌ಗಳಂತಹ ಮಾಲ್‌ಗಳು ಶಾಪಿಂಗ್ ಮಾಡಲು ಉತ್ತಮ ಸ್ಥಳಗಳಾಗಿವೆ ಏಕೆಂದರೆ ಅವುಗಳು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳನ್ನು ತಮ್ಮಲ್ಲಿ ಹೊಂದಿವೆ. ಎಂಜಿ ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಂ ಶ್ರೀಗಂಧದ ಸಾಂಪ್ರದಾಯಿಕ ಉಡುಗೆಗಳ ಖರೀದಿಗೆ ಮತ್ತು ಚನ್ನಪಟ್ಟಣದ ಮರದ ಆಟಿಕೆಗಳಂತಹ ಕರಕುಶಲ ವಸ್ತುಗಳನ್ನು ಖರೀದಿಸಲು ಉತ್ತಮ ಸ್ಥಳವಾಗಿದೆ. ಬೆಂಗಳೂರಿನ ರಾತ್ರಿಜೀವನವು ಅತ್ಯಂತ ಜನಪ್ರಿಯವಾಗಿದ್ದು ಅದನ್ನು ಇನ್ನೂ ರೋಮಾಂಚಕಗೊಳಿಸುವ ಇಲ್ಲಿನ ಯುವಕರಿಗೆ ಧನ್ಯವಾದ ಹೇಳಬೇಕು.

country-road-4

ಬೆಂಗಳೂರಿನ ಹವಾಮಾನ

ಬೆಂಗಳೂರು ಉಷ್ಣವಲಯದ ಹವಾಮಾನಕ್ಕೆ ಸಾಕ್ಷಿಯಾಗಿದೆ.ನಗರವು ಬೆಚ್ಚಗಿನ ಬೇಸಿಗೆ ಮತ್ತು ತಂಪಾದ ಚಳಿಗಾಲದ ಜೊತೆಗೆ ಮಳೆಗಾಲದಲ್ಲಿ ಮಳೆಯನ್ನು ಅನುಭವಿಸುತ್ತದೆ. ಇಲ್ಲಿಯ ಹವಾಮಾನವು ಎಲ್ಲ ನಿವೃತ್ತ ವರ್ಗದ ಜನರನ್ನು ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಆಕರ್ಷಿಸುವಂತಿತ್ತು ಆದುದರಿಂದ ಇದನ್ನು ಈ ನಗರವನ್ನು ಒಂದೊಮ್ಮೆ ಇಂತಹ ಜನರ ಸ್ವರ್ಗ ಎಂದು ಕರೆಯಲಾಗುತ್ತಿತ್ತು. ಬೇಸಿಗೆಯಲ್ಲಿ ತಾಪಮಾನವು ಸಾಮಾನ್ಯವಾಗಿ 20 ° ಸೆಲ್ಸಿಯಸ್ ನಿಂದ 36 °ಸೆಲ್ಸಿಯಸ್ ಮತ್ತು ಚಳಿಗಾಲದಲ್ಲಿ 17 ° ಸೆಲ್ಸಿಯಸ್ ನಿಂದ 27 ° ಸೆಲ್ಸಿಯಸ್ ವರೆಗೆ ಇರುತ್ತದೆ.

paintball

ಸಂಪರ್ಕ ಮತ್ತು ಪ್ರಯಾಣಕ್ಕೆ ಸುಲಭವಾಗುವ ವಿಧಾನಗಳು - ಬೆಂಗಳೂರನ್ನು ತಲುಪುವ ಬಗೆ ಹೇಗೆ?

ಒಳಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಸೌಲಭ್ಯವು ಉತ್ತಮವಾಗಿರುವುದರಿಂದ ಇಲ್ಲಿಗೆ ತಲುಪುವುದು ಬಹಳ ಸುಲಭ. ನಗರದ ಒಳಗೆ ಜನರು ಬಸ್ಸುಗಳು, ಆಟೋರಿಕ್ಷಾಗಳು, ಕ್ಯಾಬ್ ಗಳು ಮತ್ತು ಮೆಟ್ರೋ ರೈಲುಗಳನ್ನು ಅವಲಂಬಿಸಿರುತ್ತಾರೆ. ವಾಯುವಜ್ರ ಬಸ್ಸು ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಚಲಿಸುತ್ತಾ ಸಂಪರ್ಕವನ್ನು ಸುಲಭಗೊಳಿಸುತ್ತದೆ ಅಲ್ಲದೆ ರೈಲು, ರಸ್ತೆ ಮತ್ತು ವಾಯುಮಾರ್ಗಗಳ ಮೂಲಕ ಬೆಂಗಳೂರನ್ನು ದೇಶದ ಇನ್ನಿತರ ಭಾಗಗಳಿಂದ ಸಂಪರ್ಕಿಸಬಹುದಾಗಿದೆ.

ಬೆಂಗಳೂರು ಭಾರತದ ನೈಋತ್ಯ ರೈಲ್ವೆಯ ಪ್ರಮುಖ ಕೇಂದ್ರವಾಗಿದ್ದು, ನಗರದ ಸುತ್ತಲೂ ಸಿಟಿ ಸೆಂಟ್ರಲ್, ಯಶವಂತಪುರ, ಕಂಟೋನ್ಮೆಂಟ್ ಮತ್ತು ಕೆ ಆರ್ ಪುರಂನಂತಹ ಕೆಲವು ರೈಲು ನಿಲ್ದಾಣಗಳಿವೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಗರದಿಂದ 40 ಕಿಮೀ ದೂರದಲ್ಲಿರುವ ದೇವನಹಳ್ಳಿಯಲ್ಲಿದೆ, ಇದು ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X