Search
  • Follow NativePlanet
Share
» »ಭಾರತದ ಟಾಪ್ 5 ಡ್ಯಾಂಗಳ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದ ಟಾಪ್ 5 ಡ್ಯಾಂಗಳ ಬಗ್ಗೆ ನಿಮಗೆಷ್ಟು ಗೊತ್ತು?

ವಾರಾಂತ್ಯದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಾಮಾನ್ಯ. ಅಣೆಕಟ್ಟು ಮತ್ತು ನೀರಿನ ಜಲಾಶಯಗಳನ್ನು ಕಾಣುವುದೆಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು ಎಂದೇ ಹೇಳಬಹುದು. ಸ್ವಾಂತ್ರಂತ್ರ್ಯಾ ನಂತರ ನಾವಿ ಅಣೆಕಟ್ಟುಗಳು ಮತ್ತು ನೀರಿನ ಜಲಾಶಯಗಳಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಈ ಅಣೆಕಟ್ಟುಗಳು ಭಾರತದಾದ್ಯಂತದ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.

ಭಾರತೀಯ ಅಣೆಕಟ್ಟುಗಳ ಬಗ್ಗೆ ಕೆಲವು ಸಂಗತಿಗಳು ಹೀಗಿವೆ, ಟೆಹ್ರಿ ಅಣೆಕಟ್ಟು ವಿಶ್ವದಲ್ಲಿಯೇ ಅತಿ ದೊಡ್ಡದಾದ ಅಣೆಕಟ್ಟಾಗಿದೆ. ಇಡುಕ್ಕಿ ಅಣೆಕಟ್ಟು ಕೇರಳದ ಪೆರಿಯಾರ್ ನದಿ ಮತ್ತು ಏಷ್ಯಾದ ಅತಿದೊಡ್ಡ ಕಮಾನು ಅಣೆಕಟ್ಟಿನ ಸುತ್ತ ನಿರ್ಮಿಸಲಾದ ಮೊದಲ ಭಾರತೀಯ ಕಮಾನು ಅಣೆಕಟ್ಟು. ತಮಿಳುನಾಡಿನ ಹೋಲಿ ಕಾವೇರಿ ನದಿಯ ಮೇಲಿರುವ ಕಲ್ಲನೈಯ ಗ್ರ್ಯಾಂಡ್ ಆನಿಕಟ್ ವಿಶ್ವದ ಅತ್ಯಂತ ಹಳೆಯ ಅಣೆಕಟ್ಟುಯಾಗಿದೆ. ಇಂದಿರಾ ಸಾಗರ್ ಅಣೆಕಟ್ಟು ಭಾರತದಲ್ಲಿ ಅತಿದೊಡ್ಡ ಜಲಾಶಯವಾಗಿದೆ.

ಲೇಖನದ ಮೂಲಕ ಟಾಪ್ 5 ಡ್ಯಾಂಗಳ ಬಗ್ಗೆ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯಿರಿ.

1.ತೆಹ್ರಿ ಅಣೆಕಟ್ಟು

1.ತೆಹ್ರಿ ಅಣೆಕಟ್ಟು

PC: Debabrata Ghosh

ಉತ್ತರಾಂಚಲ್‍ನ ಭಾಗೀರಥಿ ನದಿಯ ಮೇಲಿರುವ ತೆಹ್ರಿ ಅಣೆಕಟ್ಟು ಈಗ ಉತ್ತರಾಖಂಡ್ ಆಗಿ ಮಾರ್ಪಾಟಾಗಿದೆ. ಟೆಹ್ರಿ ಅಣೆಕಟ್ಟು ಭಾರತದಲ್ಲಿನ ಅತಿ ದೊಡ್ಡ ಅಣೆಕಟ್ಟು. ಸುಮಾರು 261 ಮೀಟರ್ ಎತ್ತರದಲ್ಲಿದ್ದು, ವಿಶ್ವದಲ್ಲಿಯೇ ಎಂಟನೇ ಅತಿದೊಡ್ಡ ಅಣೆಕಟ್ಟು ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಈ ಡ್ಯಾಂನ ಎತ್ತರ 260 ಮೀಟರ್, ಉದ್ದ, 575 ಮೀಟರ್, ಜಲಾಶಯದ ಸಾಮಥ್ರ್ಯ, 2,100,00 ಎಕರೆ ಅಡಿ ಹೊಂದಿದೆ.

2.ಭಕ್ರ ನಂಗಲ್ ಅಣೆಕಟ್ಟು-ಹಿಮಾಚಲ ಪ್ರದೇಶ

2.ಭಕ್ರ ನಂಗಲ್ ಅಣೆಕಟ್ಟು-ಹಿಮಾಚಲ ಪ್ರದೇಶ

ಭಕ್ರಾ ನಂಗಲ್ ಅಣೆಕಟ್ಟು ಹಿಮಾಚಲ ಪ್ರದೇಶದ ಸಟ್ಲೆಜ್ ನದಿಗೆ ಅಡ್ಡಲಾಗಿರುವ ಒಂದು ಗುರುತ್ವ ಅಣೆಕಟ್ಟು. ಭಕ್ರಾ ನಂಗಲ್ ಭಾರತದ ಅತಿದೊಡ್ಡ ಅಣೆಕಟ್ಟು. ಇದು ಸುಮಾರು 225 ಮೀಟರ್‍ಗಳ ಎತ್ತರ ಮತ್ತು ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡದಾದ ಅಣೆಕಟ್ಟು. ಇದಕ್ಕೆ "ಗೋವಿಂದ್ ಸಾಗರ್ ಲೇಕ್" ಎಂದು ಸಹ ಕರೆಯಲಾಗುತ್ತದೆ. ಈ ಅಣೆಕಟ್ಟಿನ ಉದ್ದ, 520 ಮೀಟರ್, ಜಲಾಶಯದ ಸಾಮಥ್ರ್ಯ, 7,501,775 ಎಕರೆ ಅಡಿ.

3.ಸರ್ದಾರ್ ಸರೋವರ್ ಡ್ಯಾಂ, ಗುಜರಾತ್

3.ಸರ್ದಾರ್ ಸರೋವರ್ ಡ್ಯಾಂ, ಗುಜರಾತ್

ಗುಜರಾತ್‍ನ ಪವಿತ್ರವಾದ ನರ್ಮದಾ ನದಿಯ ಮೇಲೆ ಸುಮಾರು 163 ಮೀಟರ್ ಎತ್ತರದಲ್ಲಿರುವ ನರ್ಮದಾ ಅಣೆಕಟ್ಟು ಕೂಡ ಅತಿ ದೊಡ್ಡದಾದ ಡ್ಯಾಂ ಆಗಿದೆ. ಭಾರತದ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ತಾನದ 4 ಪ್ರಮುಖ ರಾಜ್ಯಗಳಿಗೆ ಈ ಡ್ಯಾಂ ಅನುಕೂಲಕರವಾಗಿದೆ. ಈ ಡ್ಯಾಂನ ಎತ್ತರ 163 ಮೀಟರ್, ಉದ್ದ, ,1,210 ಮೀಟರ್, ಜಲಾಶಯದ ಸಾಮಥ್ರ್ಯ, 7,701,775 ಎಕರೆ ಅಡಿ.

4.ಹಿರಾಕುಡ್ ಡ್ಯಾಂ, ಒರಿಸ್ಸಾ

4.ಹಿರಾಕುಡ್ ಡ್ಯಾಂ, ಒರಿಸ್ಸಾ

ಹಿರಾಕುಡ್ ಅಣೆಕಟ್ಟು ಬುಡಕಟ್ಟು ರಾಜ್ಯ ಒರಿಸ್ಸಾದಲ್ಲಿ ಮಹಾನಾಡಿ ನದಿಗೆ ನಿರ್ಮಿಸಾಲಾಗಿದೆ. ಹಿರಾಕುಡ್ ಅಣೆಕಟ್ಟು ಸುಮಾರು 26 ಕಿ.ಮೀ ಉದ್ದವಿದ್ದು, ವಿಶ್ವದ ಅತಿದೊಡ್ಡ ಅಣೆಕಟ್ಟುಗಳಲ್ಲಿ ಒಂದಾಗಿದೆ. ಅಣೆಕಟ್ಟಿನ ಮೇಲೆ ಎರಡು ಗಡಿಯಾರದ ಗೋಪುರಗಳಿದ್ದು, ಅವುಗಳನ್ನು "ಗಾಂಧಿ ಮಿನಾರ್" ಮತ್ತು "ನೆಹರು ಮಿನಾರ್" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಡ್ಯಾಂನ ಎತ್ತರ 60.96 ಮೀಟರ್, ಉದ್ದ, 25 ಕಿ.ಮೀ ಇದೆ. ಇದು ಪ್ರವಾಹ ನಿಯಂತ್ರಣ ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗೆ ಉದ್ದೇಶಿಸಿ ವಿವಿಧೋದ್ದೇಶ ಯೋಜನೆಗಳಿಗೆ ಬಳಸಲಾಗುತ್ತಿದೆ.

5.ನಾಗಾರ್ಜುನ ಡ್ಯಾಂ, ಆಂಧ್ರ ಪ್ರದೇಶ

5.ನಾಗಾರ್ಜುನ ಡ್ಯಾಂ, ಆಂಧ್ರ ಪ್ರದೇಶ

ನಾರ್ಗಾಜನ ಸಾಗರ ಅಣೆಕಟ್ಟು ಆಂಧ್ರ ಪ್ರದೇಶದ ಕೃಷ್ಣ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ. ಸುಮಾರು 124 ಮೀಟರ್ ಎತ್ತರವಿರುವ ವಿಶ್ವದ ಅತಿ ದೊಡ್ಡ ಕಲ್ಲಿನ ಅಣೆಕಟ್ಟು ಇದಾಗಿದೆ. ನಾಗಾರ್ಜುನ ಸಾಗರ ಅಣೆಕಟ್ಟು ಭಾರತದ ಹೆಮ್ಮೆ ಎಂದೇ ಹೇಳಬಹುದು. ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಮಾನವ ನಿರ್ಮಿತ ಸರೋವರವಿಂದು ಪರಿಗಣಿಸಲಾಗಿದೆ. ಇದು 1.6 ಕಿ.ಮೀ ಉದ್ದದ ಆಧುನಿಕ ಭಾರತ ವಾಸ್ತುಶಿಲ್ಪದ ಮತ್ತು ತಾಂತ್ರಿಕತೆಯ ವಿಜಯೋತ್ಸವದ ಸಂಕೇತವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X