Search
  • Follow NativePlanet
Share
» » ಬೆಂಗಳೂರಿನ ತಟ್ಟೆಕೆರೆಗೆ ಒಮ್ಮೆ ಹೋಗಿದ್ದೀರಾ?

ಬೆಂಗಳೂರಿನ ತಟ್ಟೆಕೆರೆಗೆ ಒಮ್ಮೆ ಹೋಗಿದ್ದೀರಾ?

By Manjula Balaraj Tantry

ಕರ್ನಾಟಕದ ಭೂಮಿಯು ಅಸಂಖ್ಯಾತ ಬೆಟ್ಟಗಳು ಮತ್ತು ಬೇಸಿಗೆಯ ಸ್ಥಳಗಳಗಳನ್ನು ಹೊಂದಿದ್ದು ವರ್ಷದುದ್ದಕ್ಕೂ ಪ್ರವಾಸಿಗರು ಮತ್ತು ಪ್ರಯಾಣಿಗರಿಂದ ನಿರಂತರವಾಗಿ ಭೇಟಿಕೊಡಲ್ಪಡುತ್ತದೆ. ಆದರೂ ಅತ್ಯುತ್ತಮ ನೈಸರ್ಗಿಕ ಸೌಂದರ್ಯತೆಗಳನ್ನು ಹೇರಳವಾಗಿ ಹೊಂದಿದ್ದರೂ ಗಮನಕ್ಕೆ ಇನ್ನೂ ಬಾರದೇ ಇರುವಂತಹ ಅನೇಕ ಸ್ಥಳಗಳಿವೆ.

1. ಬೆಂಗಳೂರಿನ ತಟ್ಟೆಕೆರೆ

1. ಬೆಂಗಳೂರಿನ ತಟ್ಟೆಕೆರೆ

Unni.hariharan

ಅಂತಹುದೇ ಒಂದು ಸ್ಥಳಗಳಲ್ಲಿ ತಟ್ಟೆಕೆರೆ ಕೂಡಾ ಒಂದು. ಇದು ಬೆಂಗಳೂರಿನಿಂದ 50 ಕಿಮೀ ದೂರದಲ್ಲಿದೆ ಮತ್ತು ರಜಾದಿನಗಳನ್ನು ಆರಾಮವಾಗಿ ಕಳೆಯಲು ಒಂದು ಸೂಕ್ತವಾದ ಸ್ಥಳವಾಗಿದೆ. ನೀವು ನಿಮ್ಮ ಮೈ ಮನಸ್ಸು ಮತ್ತು ಆತ್ಮವನ್ನು ತಾಜಾಗೊಳಿಸಲು ಬೆಂಗಳೂರಿಗೆ ಹತ್ತಿರವಿರುವ ಯಾವುದಾದರೂ ತಾಣಕ್ಕೆ ಹೋಗಲು ನೋಡುತ್ತಿದ್ದಲ್ಲಿ, ನೀವು ತಟ್ಟೆಕೆರೆಗೆ ಒಂದು ಪ್ರವಾಸವನ್ನು ಆಯೋಜಿಸುವುದು ಉತ್ತಮ. ಈ ಭವ್ಯವಾದ ಹಾಗೂ ಸ್ವತಃ ಸಣ್ಣ ಸ್ವರ್ಗದಂತಿರುವ ಸೌಂದರ್ಯತೆಯ ಬಗ್ಗೆ ಓದಿ ತಿಳಿಯಿರಿ.

2. ತಟ್ಟೆಕೆರೆ ಭೇಟಿ ಕೊಡಲು ಸೂಕ್ತ ಸಮಯ

2. ತಟ್ಟೆಕೆರೆ ಭೇಟಿ ಕೊಡಲು ಸೂಕ್ತ ಸಮಯ

Unni.hariharan

ತಟ್ಟೆಕೆರೆಯ ಹವಾಮಾನ ಪರಿಸ್ಥಿತಿಯು ವರ್ಷವಿಡೀ ಅನುಕೂಲಕರವಾಗಿ ಇರುವುದರಿಂದ ಇದು ವಾರಾಂತ್ಯದ ರಜಾದಿನಗಳನ್ನು ಕಳೆಯುವ ಸಲುವಾಗಿ ಭೇಟಿಕೊಡುವ ಪ್ರಯಾಣಿಕರಿಗೆ ಅತ್ಯಂತ ಮೆಚ್ಚಿನ ತಾಣವಾಗಿದೆ. ಆದರೂ ಬೇಸಿಗೆಯಲ್ಲಿ ಇಲ್ಲಿನ ತಾಪಮಾನವು ಅದೂ ಮಧ್ಯಾಹ್ನದ ಸಮಯದಲ್ಲಿ ತುಸು ಹೆಚ್ಚಾಗಿರುವುದರಿಂದ ಈ ಸ್ಥಳಕ್ಕೆ ಪ್ರವಾಸಿಗರು ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಹೆಚ್ಚಾಗಿ ಭೇಟಿ ಕೊಡುತ್ತಾರೆ.
ನೀವು ಈ ಸ್ಥಳದಲ್ಲಿ ನಿಮ್ಮ ಇಡೀ ದಿನವನ್ನು ಯಾವುದೇ ಅಡ್ಡಿಯಿಲ್ಲದೆ ಕಳೆಯಬಯಸುವಿರಾದಲ್ಲಿ ಈ ಸ್ಥಳಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಸೆಪ್ಟಂಬರ್ ತಿಂಗಳಿನಿಂದ ಮಾರ್ಚ್ ತಿಂಗಳ ಕೊನೆಯವರೆಗೆ.

3. ತಟ್ಟೆಕೆರೆ ಮತ್ತು ಅದರ ಸುತ್ತಮುತ್ತಲಿನ ಬಗ್ಗೆ ಸಣ್ಣ ಮಾಹಿತಿ

3. ತಟ್ಟೆಕೆರೆ ಮತ್ತು ಅದರ ಸುತ್ತಮುತ್ತಲಿನ ಬಗ್ಗೆ ಸಣ್ಣ ಮಾಹಿತಿ

Shruti.morabad

ತಟ್ಟೆಕೆರೆಯು ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ಬೆಂಗಳೂರಿನಿಂದ ಸುಮಾರು 50 ಕಿ.ಮೀ ಅಂತರದಲ್ಲಿದೆ ಮತ್ತು ಮೆಟ್ರೋ ನಗರ ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ ಒಂದು ಉತ್ತಮವಾದ ತಾಣವಾಗಿದೆ.ಇಲ್ಲಿ ಸುಂದರವಾದ ಕೊಳಗಳು, ಹಸಿರು ಕಾಡುಗಳು ಶ್ರೀಮಂತ ಸಸ್ಯಗಳು, ಮತ್ತು ನಿಮ್ಮನ್ನು ಆಹ್ವಾನಿಸುವಂತಹ ಹವಾಮಾನ ಇವೆಲ್ಲವುಗಳನ್ನೂ ಹೊಂದಿದ್ದು ಇದನ್ನು ಆಪ್ಭೀಟ್ ಪ್ರಯಾಣಿಕರು ಮತ್ತು ಸ್ಥಳೀಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿಗೆ ಜನರು ನಗರದ ಮಾಲಿನ್ಯ ಮತ್ತು ಶಬ್ದಗಳಿಂದ ಬೇಸತ್ತು ಇಲ್ಲಿಯ ಪ್ರಶಾಂತವಾದ ವಾತಾವರಣದಲ್ಲಿ ಸಮಯ ಕಳೆಯಲು ಭೇಟಿ ನೀಡುತ್ತಾರೆ.

4. ಭೇಟಿ ಕೊಡಲೇ ಬೇಕು

4. ಭೇಟಿ ಕೊಡಲೇ ಬೇಕು

ಸರಾಸರಿಯಾಗಿ ಇಲ್ಲಿ ಪ್ರತೀ ವರ್ಷ ನೂರಾರು ಜನ ಪ್ರವಾಸಿಗರು ನಿರಂತರವಾಗಿ ಭೇಟಿ ನೀಡುತ್ತಿರುತ್ತಾರೆ. ಅದು ಬೇಸಿಗೆ ಅಥವಾ ಚಳಿಗಾಲ ಆಗಿರಬಹುದು ಇಲ್ಲಿಯ ಸ್ಥಳೀಯರಲ್ಲಿ ತಟ್ಟೆಕೆರೆಯ ಜನಪ್ರಿಯತೆ ಯಾವತ್ತಿಗೂ ಕಡಿಮೆಯಾಗಿಲ್ಲ.
ನೀವು ಬೆಂಗಳೂರಿನಲ್ಲಿ ಅಥವಾ ಬೆಂಗಳೂರಿನ ಆಸುಪಾಸಿನಲ್ಲಿದ್ದು, ಪ್ರಕೃತಿಗೆ ಹತ್ತಿರವಿರುವ ಸ್ಥಳಕ್ಕೆ ಹೋಗಿ ಅಲ್ಲಿಯ ವಾತಾವರಣವನ್ನು ಆನಂದಿಸಬೇಕೆಂದಿದ್ದಲ್ಲಿ, ಈ ವಾರಾಂತ್ಯದಲ್ಲಿ ತಟ್ಟೆಕೆರೆಗೆ ನೀವು ಭೇಟಿ ಕೊಡಲೇ ಬೇಕು.

5. ತಟ್ಟೆಕೆರೆಯಲ್ಲಿ ಅತ್ಯಂತ ವಿಶೇಷವಾದುದು ಯಾವುದು

5. ತಟ್ಟೆಕೆರೆಯಲ್ಲಿ ಅತ್ಯಂತ ವಿಶೇಷವಾದುದು ಯಾವುದು

Unni.hariharan

ತಟ್ಟೆಕೆರೆಯ ಪ್ರತೀಯೊಂದು ಮೂಲೆಯೂ ವಿಶೇಷತೆಯಿಂದ ಕೂಡಿದ್ದು ಇದರಿಂದಾಗಿ ಈ ಸ್ಥಳದ ಒಟ್ಟಾರೆ ಸೌಂದರ್ಯತೆಯನ್ನು ಹೆಚ್ಚಿಸುವಲ್ಲಿ ಸಹಾಯಮಾಡಿದೆ. ಕೊಳದ ಹತ್ತಿರ ವಿಶ್ರಾಂತಿ ಪಡೆಯುವುದರಿಂದ ಹಿಡಿದು ಸೊಂಪಾದ ಹಸಿರಿನ ಸೌಂದರ್ಯತೆಯನ್ನು ಸೆರೆ ಹಿಡಿಯುವವರೆಗೆ ಮತ್ತು ವರ್ಣಮಯ ಪಕ್ಷಿಗಳನ್ನು ನೋಡುವುದರಿಂದ ಹಿಡಿದು ಇಲ್ಲಿಯ ಹಳ್ಳಿಯ ಜೀವನದ ಅನುಭವವನ್ನು ಪಡೆಯುವವರೆಗೆ ಪ್ರತೀಯೊಂದು ಇಲ್ಲಿ ಮಾಡುವ ಚಟುವಟಿಕೆಗಳು ಸ್ಮರಣೀಯವಾದುದಾಗಿದೆ. ಇಂತಹ ಕೆಲವು ಎಂದೆಂದಿಗೂ ಮರೆಯಲಾರದ ನೆನಪುಗಳನ್ನು ನೀವು ಇಷ್ಟ ಪಡುವುದಿಲ್ಲವೆ?

6. ಜನಪ್ರಿಯ ಪಿಕ್ನಿಕ್ ತಾಣ

6. ಜನಪ್ರಿಯ ಪಿಕ್ನಿಕ್ ತಾಣ

ಇಲ್ಲಿಯ ಆಹ್ಲಾದಕರ ವಾತಾವರಣ ಮತ್ತು ಸುಂದರವಾದ ಸುತ್ತಮುತ್ತಲಿನ ಕಾರಣದಿಂದಾಗಿ ಇದೊಂದು ಸ್ಥಳೀಯರಲ್ಲಿ ಜನಪ್ರಿಯ ಪಿಕ್ನಿಕ್ ತಾಣವಾಗಿದೆ ಆದುದರಿಂದ ನೀವು ಇಲ್ಲಿ ಕೆಲವು ಜನರು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಬೇಸಿಗೆ ಸಮಯದಲ್ಲಿ ಕಾಲ ಕಳೆಯಲು ಬರುವುದನ್ನು ಗಮನಿಸಬಹುದು.

7. ಮನಮೋಹಕ ದೃಶ್ಯ

7. ಮನಮೋಹಕ ದೃಶ್ಯ

Unni.hariharan

ಸೂರ್ಯನ ಮನಮೋಹಕ ಕಿರಣಗಳ ದೃಶ್ಯವು ಭೂಮಿಯ ಮೇಲೆ ಬೀಳುತ್ತದೆ ಅಲ್ಲದೆ ಹೊಳೆಯುವ ನೀಲಿ ಬಣ್ಣದ ಸರೋವರಗಳು ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ಕೆಂಪುಬಣ್ಣವನ್ನು ಹೊಂದುವ ದೃಶ್ಯವು ಸೆರೆಹಿಡಿಯುವಂತಹುದಾಗಿದೆ.
ಈ ದೃಶ್ಯವು ಪ್ರತೀ ಪ್ರಯಾಣಿಕರು ಮತ್ತು ಛಾಯಾಗ್ರಾಹಕರೂ ತಮ್ಮಲ್ಲಿ ಸೆರೆಹಿಡಿಯಬೇಕಾದುದೇ ಆಗಿದೆ.

8. ಬನ್ನೇರುಘಟ್ಟ

8. ಬನ್ನೇರುಘಟ್ಟ

Unni.hariharan

ನೀವು ಇಲ್ಲಿ ಊಹಿಸಿರುವುದಕ್ಕಿಂತ ಹೆಚ್ಚಿನದನ್ನು ಅನ್ವೇಷಣೆ ಮಾಡಬಹುದು ಮತ್ತು ಇಲ್ಲಿಗೆ ಹತ್ತಿರವಿರುವ ಕೆಲವು ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡಬಹುದು. ಅವುಗಳಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಪರ್ಲ್ ಕಣಿವೆಗಳೂ ಸೇರಿವೆ. ಆದ್ದರಿಂದ, ತಟ್ಟೆಕೆರೆಯಲ್ಲಿ ಸಣ್ಣ ಸ್ವರ್ಗ ನಿಮಗಾಗಿ ಕಾಯುತ್ತಿರುವಾಗ ಹೋಗಲು ಇಷ್ಟ ಪಡದೆ ಇರಲು ಸಾಧ್ಯವೆ?

9. ತಟ್ಟೆಕೆರೆಗೆ ತಲುಪುವುದು ಹೇಗೆ

9. ತಟ್ಟೆಕೆರೆಗೆ ತಲುಪುವುದು ಹೇಗೆ

ವಿಮಾನದ ಮೂಲಕ: ತಟ್ಟೆಕೆರೆಗೆ ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರಿನ ವಿಮಾನ ನಿಲ್ದಾಣವಾಗಿದ್ದು, ಇದು ಸುಮಾರು 90 ಕಿ.ಮೀ ದೂರದಲ್ಲಿದೆ. ಆದ್ದರಿಂದ, ವಿಮಾನ ನಿಲ್ದಾಣದಿಂದ ನಿಮ್ಮ ಗಮ್ಯಸ್ಥಾನವನ್ನು ತಲುಪಲು ನಿಮಗೆ ಸರಾಸರಿ 2 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.

ರೈಲು ಮೂಲಕ: ನೀವು ರೈಲಿನ ಮೂಲಕ ಪ್ರಯಾಣಿಸಲು ನೋಡುತ್ತಿದ್ದರೆ, ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಸಬೇಕಾಗುವುದು ಮತ್ತು ನಂತರ ಅಲ್ಲಿಂದ, ಥಟ್ಟೆಕೆರೆಗೆ ಕ್ಯಾಬ್ ನಲ್ಲಿ ಪ್ರಯಾಣಿಸುವುದು ಉತ್ತಮ. ತಟ್ಟೆಕೆರೆ ಮತ್ತು ಬೆಂಗಳೂರು ರೈಲ್ವೆ ನಿಲ್ದಾಣದ ನಡುವಿನ ಅಂತರವು 56 ಕಿ.ಮೀ.

ರಸ್ತೆ ಮೂಲಕ : ರಸ್ತೆಯ ಮೂಲಕ ಉತ್ತಮ ಸಾರಿಗೆ ಜಾಲವನ್ನು ಹೊಂದಿದ್ದು, ಥಟ್ಟೆಕೆರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X