Search
  • Follow NativePlanet
Share
» »ಲಕ್ಷ ಕೋಟಿ ಬೆಲೆಯುಳ್ಳ ವೆಂಕಟೇಶ್ವರನ ವಜ್ರ!!!

ಲಕ್ಷ ಕೋಟಿ ಬೆಲೆಯುಳ್ಳ ವೆಂಕಟೇಶ್ವರನ ವಜ್ರ!!!

ತಿರುಪತಿ ಸಮೀಪದಲ್ಲಿ ತಿರುಮಲ ಬೆಟ್ಟವಿದೆ. ಇಲ್ಲಿ ಪ್ರಸಿದ್ಧವಾದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 3200 ಅಡಿಗಿಂತ ಎತ್ತರದಲ್ಲಿದೆ. 7 ಶಿಖರಗಳನ್ನು ಒಳಗೊಂಡಿದೆ.

ತಿರುಪತಿ ಸಮೀಪದಲ್ಲಿ ತಿರುಮಲ ಬೆಟ್ಟವಿದೆ. ಇಲ್ಲಿ ಪ್ರಸಿದ್ಧವಾದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 3200 ಅಡಿಗಿಂತ ಎತ್ತರದಲ್ಲಿದೆ. 7 ಶಿಖರಗಳನ್ನು ಒಳಗೊಂಡಿದೆ. ನಾರಾಯಣಾದ್ರಿ, ನೀಲಾದ್ರಿ, ಶೇಷಾದ್ರಿ, ಅಂಜನಾದ್ರಿ, ಗರುಡಾದ್ರಿ, ವೃಷಭಾದ್ರಿ, ವೆಂಕಟಾದ್ರಿ ಎಂದು ಕರೆಯಲ್ಪಡುವ 7 ಶಿಖರಗಳು ಆದಿ ಶೇಷನಿಗೆ ಮಹತ್ವವನ್ನು ನೀಡಲಾಗುತ್ತದೆ.

ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ವೆಂಕಟಾದ್ರಿ ಎಂಬ 7 ನೇ ಶಿಖರದಲ್ಲಿದೆ. ತಿರುಮಲ ಎಂಬ ಪದವು "ತಿರು"(ಪವಿತ್ರ), ಮಲ (ಪರ್ವತ) ಎಂಬ 2 ಪದಗಳನ್ನು ಹೊಂದಿದೆ. ಹಾಗಾಗಿಯೇ ತಿರುಮಲ ಎಂಬ ಪದವು ದ್ರಾವಿಡ ಭಾಷೆಯಲ್ಲಿ "ಪವಿತ್ರವಾದ ಪರ್ವತ" ಎಂದೇ ಕರೆಯುತ್ತೇವೆ. ಎಲ್ಲಿಯೂ ಕೂಡ ಕಾಣದ ಲಕ್ಷ ಕೋಟಿ ಬೆಲೆಬಾಳುವ ವೆಂಕಟೇಶ್ವರನ ವಜ್ರದ ನಿಮಗೆ ಗೊತ್ತ? ಹಾಗಾದರೆ ಲೇಖನದ ಮೂಲಕ ತಿಳಿಯಿರಿ.

1.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

1.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ತಿರುಪತಿಗೆ ಸಮೀಪದಲ್ಲಿರುವ ತಿರುಮಲ ಬೆಟ್ಟ ಪ್ರದೇಶವು ಅತ್ಯಂತ ಪವಿತ್ರವಾದ ಪುಣ್ಯ ಭೂಮಿಯಾಗಿದೆ. ಇಲ್ಲಿ ಪ್ರಸಿದ್ಧವಾದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 3200 ಅಡಿ ಕ್ಕಿಂತ ಎತ್ತರದಲ್ಲಿದೆ. ಇಲ್ಲಿ ಸಾಕ್ಷಾತ್ ಆ ತಿರುಮಲವಾಸನಾದ ವೆಂಕಟೇಶ್ವರ ಸ್ವಾಮಿ ನೆಲೆಸಿದ್ದಾನೆ. ಇತನ ದರ್ಶನವನ್ನು ಪಡೆಯಲು ದೇಶದ ಮೂಲೆ-ಮೂಲೆಯಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಭಕ್ತರು ಭೇಟಿ ನೀಡುತ್ತಾರೆ.

2.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

2.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಅತ್ಯಂತ ಪುರಾತನವಾದುದು. ದೇಶದಲ್ಲಿ ಅತ್ಯಂತ ಹೆಚ್ಚು ಭಕ್ತರನ್ನು ಹೊಂದಿರುವ ಕ್ಷೇತ್ರಗಳಲ್ಲಿ ಇದು ಕೂಡ ಒಂದಾಗಿದೆ. ಇದು ವೆಂಕಟ ತಿರುಮಲ ಬೆಟ್ಟದ ಮೇಲೆ 7 ಶಿಖರಗಳ ಮಧ್ಯೆಯಲ್ಲಿದೆ. ಸ್ವಾಮಿ ಪುಷ್ಕರಣಿ ನದಿ ದಕ್ಷಿಣ ದಿಕ್ಕಿಗೆ ಇದೆ. ಈ ದೇವಾಲಯದ ಸಂಪ್ರದಾಯವು ದ್ರಾವಿಡ ನಿರ್ಮಾಣ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. 2.2 ಎಕರೆ ಭೂಮಿಗಳಷ್ಟು ವಿಶಾಲವಾಗಿರುವ ಈ ದೇವಾಲಯದಲ್ಲಿ 8 ಅಡಿ ಎತ್ತರದ ವೆಂಕಟೇಶ್ವರ ಸ್ವಾಮಿಯ ವಿಗ್ರಹವಿದೆ.

3.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

3.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ಈ ವಿಗ್ರಹವನ್ನು ಆನಂದ ನಿಲಯ ದಿವ್ಯ ವಿಮಾನವಾಗಿ ಕರೆಯುವ ಬಂಗಾರದ ಶಿಖರವು ಕೂಡ ಇಲ್ಲಿ ಕಾಣಬಹುದು. ಈ ವಿಗ್ರಹದ ಕಣ್ಣು ಕರ್ಪೂರದ ತಿಲಕದಿಂದ ಶೃಂಗಾರ ಮಾಡಿ, ಈ ವಿಗ್ರಹವನ್ನು ಅದ್ಭುತವಾಗಿ ಅಲಂಕಾರ ಮಾಡುತ್ತಾರೆ. ಇಲ್ಲಿನ ಸಂಪ್ರದಾಯದ ಪ್ರಕಾರ ಮೊದಲು ವರಹ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯನ್ನು ದರ್ಶನ ಮಾಡಿದ ನಂತರವೇ ವೆಂಕಟೇಶ್ವರ ಸ್ವಾಮಿಯನ್ನು ದರ್ಶಿಸಬೇಕು.

4.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

4.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ವೆಂಕಟೇಶ್ವರ ಸ್ವಾಮಿಯು ಧರಿಸುವ ಸ್ವರ್ಣಮಾಲವು ಸುಮಾರು 12 ಕೆ.ಜಿ ಭಾರದಿಂದ ಕೂಡಿರುತ್ತದೆ. ಇದನ್ನು ಸ್ವಾಮಿಗೆ ಅಲಂಕಾರ ಮಾಡಲು 3 ಪಂಡಿತರು ಬೇಕಾಗುತ್ತದೆ. ದೇವಾಲಯದಲ್ಲಿ ನೀಲ ವಜ್ರವು ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ ಎಂದು ಪುರೋಹಿತರು ಹೇಳುತ್ತಾರೆ. ಇದರ ಬೆಲೆ ಮಾತ್ರ ಲಕ್ಷಕೋಟಿ.

5.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

5.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ರಾಜೇಂದ್ರಚೋಳನು, ಕೃಷ್ಣ ದೇವರಾಯನು ಕೆಲವು ಆಭರಣಗಳನ್ನು ಸ್ವಾಮಿಗೆ ಕಾಣಿಕೆಯಾಗಿ ಸಮರ್ಪಿಸಿದನು. ಆಜಾನುಬಾಹುವಾದ ಶ್ರೀ ವೆಂಕಟೇಶ್ವರನ ಆಭರಣಗಳನ್ನು ಧರಿಸಿದ ಕಲಿಯುಗ ಪ್ರತ್ಯಕ್ಷವಾದ ದೈವವಾಗಿ ಭಕ್ತರೆಲ್ಲರಿಗೂ ದರ್ಶನವನ್ನು ನೀಡುತ್ತಾನೆ.

6.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

6.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ಡಿಸೆಂಬರ್ ನಿಂದ ಫೆಬ್ರವರಿ ತಿಂಗಳವರೆಗೆ ಚಳಿಗಾಲದಲ್ಲಿ ತಿರುಪತಿಗೆ ಭೇಟಿ ನೀಡುವುದು ಒಳ್ಳೆಯದು. ಇಲ್ಲಿ ಬೇಸಿಗೆಯ ಕಾಲದಲ್ಲಿ ಅತ್ಯಂತ ಹೆಚ್ಚು ಉಷ್ಣಾಂಶ ಇರುವುದರಿಂದ ಈ ಕಾಲದಲ್ಲಿ ತಿರುಪತಿಗೆ ತೆರಳುವುದು ಸೂಕ್ತವಲ್ಲ. ಮಳೆಗಾಲದ ಅವಧಿಯಲ್ಲಿಯೂ ತಿರುಪತಿಗೆ ಭೇಟಿ ನೀಡಬಹುದು. ಏಕೆಂದರೆ ಮಳೆಗಾಲದಲ್ಲಿ ತಿರುಪತಿಯ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳಿಸುತ್ತದೆ.

7.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

7.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ತಿರುಪತಿ ಪ್ರಧಾನವಾಗಿ ದೇವಾಲಯಗಳಿರುವ ನಗರವಾದ್ದರಿಂದ, ಅತ್ಯಂತ ಪವಿತ್ರವಾದುದು ಎಂದು ಭಾವಿಸಲಾಗುತ್ತದೆ. ಹೀಗಾಗಿಯೇ ಯಾತ್ರಿಕರು ಕೆಲವು ವಿಷಯಗಳನ್ನು ಗುರುತಿಸಬೇಕು. ಸಂಪ್ರದಾಯ ಬದ್ಧ ವಸ್ತ್ರಗಳನ್ನು ಧರಿಸಿ. ಯಾವುದೇ ಕಾರಣಕ್ಕೂ ಟೋಪಿ, ಕ್ಯಾಪ್‍ಗಳನ್ನು ಧರಿಸಬೇಡಿ.

8.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

8.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ಇಲ್ಲಿನ ಹೂವುಗಳೆಲ್ಲಾ ಆ ಸ್ವಾಮಿಗೆ ಸೇರಿದ್ದು, ಹಾಗಾಗಿಯೇ ಇಲ್ಲಿ ಹೂವುಗಳನ್ನು ಮುಡಿಯಬಾರದು. ಮಾಂಸ ಹಾಗು ಮದ್ಯವು ಯಾವುದೇ ಕಾರಣಕ್ಕೂ ದೊರೆಯುವುದಿಲ್ಲ. ಮೊಬೈಲ್, ಕ್ಯಾಮೆರಾಗಳನ್ನು ದೇವಾಲಯದ ಒಳಗೆ ಅನುಮತಿ ನೀಡುವುದಿಲ್ಲ. ಧರ್ಮ, ಸಂಸ್ಕøತಿಯನ್ನು ಪ್ರೇಮಿಸುವ ಪ್ರತಿ ಪ್ರವಾಸಿಗರು ತಪ್ಪದೇ ಕಾಣಬೇಕಾದ ಪ್ರದೇಶವೇ ತಿರುಪತಿ.

9.ನೋಡಬೇಕಾದ ಆಕರ್ಷಣೆಗಳು

9.ನೋಡಬೇಕಾದ ಆಕರ್ಷಣೆಗಳು

ತಿರುಪತಿ, ವರಹಸ್ವಾಮಿ, ವೆಂಕಟೇಶ್ವರ ಸ್ವಾಮಿ, ಪದ್ಮಾವತಿ ದೇವಿ ದೇವಾಲಯ, ಗೋವಿಂದರಾಜು ಸ್ವಾಮಿ ದೇವಾಲಯ, ಶ್ರೀನಿವಾಸ ಮಂಗಾಪುರದಂತಹ ಪ್ರಸಿದ್ಧ ದೇವಾಲಯಗಳ ಜೊತೆ ಜೊತೆಗೆ ವಿವಿಧ ಪ್ರಾಣಿ-ಪಕ್ಷಿಗಳನ್ನು ಹೊಂದಿರುವ ಪಾರ್ಕಗಳಿಗೂ ಕೂಡ ಕಾಣಬಹುದು. ಶಿಲಾತೋರಣ ಎಂದು ಕರೆಯುವ ಕಲ್ಲಿನ ಉದ್ಯಾನವನವನ್ನು ಕೂಡ ಕಾಣಬಹುದು.

10.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

10.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ಸಕ್ಕರೆ ಪೊಂಗಲ್, ಲಾಡುವಿನ ರುಚಿ ಕಾಣದೇ ಹೋದರೆ ತಿರುಪತಿ ಕ್ಷೇತ್ರದ ದರ್ಶನ ಸಂಪೂರ್ಣವಾಗುವುದಿಲ್ಲ. ಮರದ ಗೊಂಬೆಗಳು, ಬಿಳಿ ಮರದಿಂದ ಮಾಡಿದ ವಸ್ತುಗಳು, ಅಲಂಕಾರಿಕ ಚಿತ್ರಗಳು, ತಂಜಾವೂರಿನ ಬಂಗಾರದ ಆಕಾರದ ಚಿತ್ರಗಳು, ಮುಖ್ಯವಾಗಿ ಚಂದನದಿಂದ ತಯಾರಾದ ಬೊಂಬೆಗಳಂತಹ ಇಲ್ಲಿನ ಕಲಾಕೃತಿಗಳನ್ನು ಇಲ್ಲಿ ಕಾಣಬಹುದು.

11.ಗೋವಿಂದ ಸ್ವಾಮಿ ದೇವಾಲಯ, ತಿರುಪತಿ

11.ಗೋವಿಂದ ಸ್ವಾಮಿ ದೇವಾಲಯ, ತಿರುಪತಿ

ತಿರುಪತಿಯಲ್ಲಿನ ಪ್ರಧಾನವಾದ ಕ್ಷೇತ್ರದಲ್ಲಿ ಗೋವಿಂದ ಸ್ವಾಮಿ ದೇವಾಲಯವು ಕೂಡ ಒಂದು. ವೈಷ್ಣವ ಸಂಪ್ರದಾಯದ ಪ್ರಕಾರ, ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. 1235 ರಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯಕ್ಕೆ ವೈಷ್ಣವ ಗುರುವಾದ ಶ್ರೀಮದ್ರಾಮಾನುಜಾಚಾರ್ಯರು ಶಂಖುಸ್ಥಾಪನೆ ಮಾಡಿದರು ಎಂದು ಹೇಳುತ್ತಾರೆ. ಈ ಗೋಪುರವೇ ಅಲ್ಲದೇ ಇನ್ನು 2 ದೇವಾಲಯದ ಸುತ್ತ ಹೊರ ಪ್ರಕಾರವೂ ಕೂಡ ಇದೆ.

12.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

12.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ದಕ್ಷಿಣ ದಿಕ್ಕಿನಲ್ಲಿರುವ ಪಾರ್ಥಸಾರಥಿ ಸ್ವಾಮಿ ವಿಗ್ರಹವು ಇರುವ, ಉತ್ತರದ ದಿಕ್ಕಿಗೆ ಗೋವಿಂದ ರಾಜ ಸ್ವಾಮಿ ದೇವಾಲಯವಿದೆ. ಹಾಗೆಯೇ ಇಲ್ಲಿ ಮನವಾಲ ಮಾಮುನಿ, ಶ್ರೀ ಚಕ್ರಾತಾಳ್ವಾರ್, ಸಲಾಯಿ ನಾಚಿಯಾರ್ ಅಮ್ಮ, ಶ್ರೀ ಮಚುರಕವಿ ಆಳ್ವಾರ್, ಶ್ರೀ ವ್ಯಾಸರಾಜ ಆಂಜನೇಯ ಸ್ವಾಮಿ, ಶ್ರೀ ತಿರುಮಂಗಾಯ್ ಆಳ್ವಾರ್, ಶ್ರೀ ವೇದಾಂತ ದೇಶಿಕರ್‍ರ ಚಿಕ್ಕ ಚಿಕ್ಕ ದೇವಾಲಯಗಳು ಕೂಡ ಇವೆ.

13.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

13.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ತಿರುಮಲ ಬೆಟ್ಟದಿಂದ ಶ್ರೀ ಪದ್ಮಾವತಿ ದೇವಿ ದೇವಾಲಯವು 5 ಕಿ.ಮೀ ದೂರದಲ್ಲಿದೆ. ಈ ದೇವಾಲಯದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಮತ್ತು ಪದ್ಮಾವತಿ ದೇವಿಯ ದೇವಾಲಯದಲ್ಲಿ ನೆಲೆಸಿದ್ದಾರೆ. ತೊಂಡಮಾನ್ ಚಕ್ರವರ್ತಿ ನಿರ್ಮಾಣ ಮಾಡಿದ ಈ ದೇವಾಲಯವನ್ನು ಮೊದಲು ದರ್ಶಿಸಿದ ನಂತರ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಮಾಡಬೇಕು ಎಂದು ಕರೆಯುತ್ತಾರೆ.

14.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

14.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ಈ ದೇವಾಲಯವು ಪದ್ಮಾವತಿ ದೇವಿಯ ಕುರಿತು, ಪದ್ಮಾವತಿ ವೆಂಕಟೇಶ್ವರ ಪರಿಣಯದ ಕುರಿತು ಕಥೆಗಳನ್ನು ಹೇಳುತ್ತಾರೆ. ಆಕಾಶ ರಾಜನು ಒಂದು ಯಜ್ಞವನ್ನು ಮಾಡುವ ಸಮಯದಲ್ಲಿ ಒಂದು ತಾವರೆ ಹೂವಿನಲ್ಲಿ ದೊರೆಕಿದ ಮಗುವೇ ಪದ್ಮಾವತಿ. ಆ ಮಗುವಿಗೆ ಪದ್ಮಾವತಿ ಎಂದು ಹೆಸರನ್ನು ಇಟ್ಟು ತನ್ನ ಸ್ವಂತ ಮಗುವಂತೆ ಬೆಳೆಸಿದನು.

15.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

15.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ಅವಳೇ ಅಲವೇಲು ಮಂಗ ಎಂದು ಕೂಡ ಕರೆಯುತ್ತಾರೆ. ಅಂದರೆ ಪ್ರೇಮ, ಕರುಣೆ ಎಂಬ ಅರ್ಥವೇ ಆಗಿದೆ. ಆಕೆ ದೊಡ್ಡವಳಾದ ನಂತರ ದೈವ ನಿರ್ಣಯಕದ ಪ್ರಕಾರ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ವಿವಾಹವನ್ನು ಮಾಡಿದರು.

16.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

16.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ತಿರುಪತಿ, ತಿರುಮಲದಂತಹ ಪ್ರಸಿದ್ಧವಾದ ನಗರಕ್ಕೆ ಸಮೀಪದಲ್ಲಿ ಶಿವನ ವಿಗ್ರಹವಿರುವ ಒಂದೇ ಒಂದು ದೇವಾಲಯವೇ ಕಪಿಲ ತೀರ್ಥ. ಈ ದೊಡ್ಡ ದೇವಾಲಯವು ತಿರುಮಲ ಬೆಟ್ಟ ಪಾದಗಳ ಹತ್ತಿರ ಪರ್ವತ ಪ್ರವೇಶದಲ್ಲಿದೆ. ಈ ದೇವಾಲಯದ ಪ್ರವೇಶದ ಸಮೀಪದಲ್ಲಿ ಶಿವನ ವಾಹನವಾದ "ನಂದಿ" ಇದೆ. ಶಿವನ ವಿಗ್ರಹ ಮುಂದೆ ಇಲ್ಲಿ ಕಪಿಲ ಮಹರ್ಷಿ ಇಲ್ಲಿ ಇದ್ದರಿಂದ, ಆತನ ಹೆಸರಿನಿಂದ ಈ ಪ್ರದೇಶಕ್ಕೆ ಹೆಸರು ಬಂದಿತು.

17.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

17.ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ತೀರ್ಥ ಎಂದರೆ ಪ್ರಸಿದ್ಧ ನದಿ ಎಂದೇ ಅರ್ಥ. ಪಾಪ ವಿನಾಶನಂ ಜಲಪಾತವು ದೇವಾಲಯ ಸಮೀಪದಲ್ಲಿ ಏರ್ಪಾಟು ಮಾಡಲಾಯಿತು. ಈ ದೇವಾಲಯವು 13 ಅಥವಾ 16 ನೇ ಶತಮಾನದಲ್ಲಿ ವಿಜಯನಗರ ರಾಜರ ಪ್ರೋತ್ಸಹದಿಂದ ಪ್ರಾಚೀನ ಕಾಲದಲ್ಲಿ ಹೆಚ್ಚು ಪ್ರಚಾರವನ್ನು ಹೊಂದಿದೆ. ಈ ದೇವಾಲಯವು ತಿರುಮಲ ತಿರುಪತಿ ದೇವಾಲಯದವರ ಸಂರಕ್ಷಣೆಯಲ್ಲಿ ಪೋಷಿಸಿದರು.

18.ರಸ್ತೆ ಮಾರ್ಗದ ಮೂಲಕ

18.ರಸ್ತೆ ಮಾರ್ಗದ ಮೂಲಕ

ತಿರುಪತಿಗೆ ಅತಿ ದೊಡ್ಡ ಬಸ್ಸುಗಳ ವ್ಯವಸ್ಥೆಯನ್ನು ಕಾಣಬಹುದು. ಎಲ್ಲಾ ಪ್ರದೇಶಗಳಿಂದಲೂ ಸುಲಭವಾಗಿ ಬಸ್ಸುಗಳ ಮೂಲಕ ತಿರುಪತಿಗೆ ಸೇರಿಕೊಳ್ಳಬಹುದು. ಬೆಂಗಳೂರಿನಿಂದ ತಿರುಪತಿಗೆ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ವ್ಯವಸ್ಥೆ ಕೂಡ ಇದೆ. ತಿರುಪತಿಯಿಂದ ತಿರುಮಲಕ್ಕೆ ಆನೇಕ ಬಸ್ಸು ಸಂಚಾರಗಳಿವೆ.

19.ರೈಲು ಮಾರ್ಗದ ಮೂಲಕ

19.ರೈಲು ಮಾರ್ಗದ ಮೂಲಕ

ದೇಶ ವ್ಯಾಪಕವಾಗಿ ರೈಲುಗಳು ತಿರುಪತಿಗೆ ಸಂಚಾರ ಮಾಡುತ್ತವೆ. ತಿರುಪತಿಯಿಂದ ರೇಣಿಗುಂಟ ಜಂಕ್ಷನ್‍ಗೆ ಪ್ರಯಾಣ ಕೇವಲ 10 ನಿಮಿಷ ದೂರದಲ್ಲಿದೆ. ತಿರುಪತಿಯಿಂದ 84 ಕಿ.ಮೀ ದೂರದಲ್ಲಿರುವ ಗುಡೂರ್ ಜಂಕ್ಷನ್ ಮೂಖಾಂತರ ಕೂಡ ತಿರುಪತಿಗೆ ತೆರಳಬಹುದು.

20.ವಾಯುಮಾರ್ಗದ ಮೂಲಕ

20.ವಾಯುಮಾರ್ಗದ ಮೂಲಕ

ತಿರುಪತಿ ವಿಮಾನವು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಕಟಿಸಿದೆ. ಆದರೆ ಇಂದಿಗೂ ಅಂತರರಾಷ್ಟ್ರೀಯ ವಿಮಾನ ನಡೆಯುತ್ತಿಲ್ಲ. ಪ್ರಸ್ತುತ ಹೈದ್ರಾಬಾದ್, ದೆಹಲಿ, ವೈಜಾಗ್, ಕೊಯಂಬತ್ತೂರ್, ಕೋಲ್ಕತ್ತಾ, ಮುಂಬೈ ವಿಮಾನಗಳು ಇವೆ. ಈ ವಿಮಾನ ನಿಲ್ದಾಣವು ನಗರಕ್ಕೆ 15 ಕಿ.ಮೀ ದೂರದಲ್ಲಿದೆ. ಚೆನ್ನೈ ಇದಕ್ಕೆ ಸಮೀಪದ ವಿಮಾನ ನಿಲ್ದಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X