Search
  • Follow NativePlanet
Share
» » ತ್ವರಿತವಾಗಿ ವೀಸಾ ಬೇಕಾದರೆ ಇಲ್ಲಿ ಭೇಟಿ ನೀಡಿ

ತ್ವರಿತವಾಗಿ ವೀಸಾ ಬೇಕಾದರೆ ಇಲ್ಲಿ ಭೇಟಿ ನೀಡಿ

ಸಾಮಾನ್ಯವಾಗಿ ಕೋರಿಕೆಗಳನ್ನು ನೆರವೇರಿಸು ಎಂದು ದೇವರನ್ನು ಪಾರ್ಥಿಸುವಾಗ ಕಾಣಿಕೆಯನ್ನು ಅರ್ಪಿಸುತ್ತಾರೆ. ಆದರೆ ವಿಚಿತ್ರ ಏನೆಂದರೆ ಹೈದರಾಬಾದ್‍ನ ಹೊರವಲಯದಲ್ಲಿರುವ ಚಿಲ್ಕುರ್‍ನಲ್ಲಿ ಬಾಲಾಜಿ ದೇವಾಲಯವಿದೆ. ಅಲ್ಲಿ ವೀಸಾವನ್ನು ನೀಡುವ ಅಧಿಕಾರವನ

ದೇವಾಲಯ ಎಂದರೆ ನಮ್ಮ ಭಕ್ತಿ, ಶ್ರದ್ಧೆಗಿಂತ ಹೆಚ್ಚಾಗಿ ಭೇಡಿಕೆಗಳನ್ನು ಕೂರುವ ಸ್ಥಳವಾಗಿಯೇ ಮಾರ್ಪಾಟಾಗಿದೆ. ಪ್ರತಿಯೊಂದು ದೇವಾಲಯದಲ್ಲಿರುವ ದೇವರುಗಳಿಗೆ ಸಿರಿ ಸಂಪತ್ತು, ಧನ, ಧಾನ್ಯ, ಐಶ್ವರ್ಯ, ವಿದ್ಯೆ, ಉದ್ಯೋಗ ಬೇಕು ಎಂದು ವಿಧ ವಿಧವಾಗಿ ದೇವರ ಮುಂದೆ ಕೋರಿಕೆಗಳನ್ನು ಇಡುತ್ತೇವೆ. ಕೋರಿಕೆಗಳನ್ನು ಶೇಖಡ ಎಷ್ಟನ್ನು ನೇರವೇರಿಸುತ್ತಾನೆ ಎಂಬ ವಾದ ಈಗ ಬೇಡ.

ಸಾಮಾನ್ಯವಾಗಿ ಕೋರಿಕೆಗಳನ್ನು ನೆರವೇರಿಸು ಎಂದು ದೇವರನ್ನು ಪಾರ್ಥಿಸುವಾಗ ಕಾಣಿಕೆಯನ್ನು ಅರ್ಪಿಸುತ್ತಾರೆ. ಆದರೆ ವಿಚಿತ್ರ ಏನೆಂದರೆ ಹೈದರಾಬಾದ್‍ನ ಹೊರವಲಯದಲ್ಲಿರುವ ಚಿಲ್ಕುರ್‍ನಲ್ಲಿ ಬಾಲಾಜಿ ದೇವಾಲಯವಿದೆ. ಅಲ್ಲಿ ವೀಸಾವನ್ನು ನೀಡುವ ಅಧಿಕಾರವನ್ನು ಹೊಂದಿದೆ.

ಪ್ರಸ್ತುತ ಲೇಖನದಲ್ಲಿ ವೀಸಾ ನೀಡುವ ಅಧಿಕಾರ ಹೊಂದಿರುವ ದೇವಾಲಯದ ಕುರಿತು ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

"ವೀಸಾ ಬಾಲಾಜಿ ದೇವಾಲಯ" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಚಿಲ್ಕೂರಿ ಬಾಲಾಜಿ ದೇವಾಲಯವು ಹೈದ್ರಾಬಾದ್‍ನ ಉಸ್ಮಾನ್ ಸಾಗರ್ ದಂಡೆಯಲ್ಲಿರುವ ಬಾಲಾಜಿಯ ಪುರಾತನ ದೇವಾಲಯ.

PC:YOUTUBE

ನಿರ್ಮಿಸಿದವರು

ನಿರ್ಮಿಸಿದವರು

ಈ ದೇವಾಲಯವು ಹಳೆಯ ದೇವಾಲಯಗಳಲ್ಲಿ ಇದು ಕೂಡ ಒಂದು. ಈ ದೇವಾಲಯದ ನಿರ್ಮಾಣವನ್ನು ಮಾಡಿದವರು ಮುದ್ದಣ್ಣ ಮತ್ತು ಅಕ್ಕಣ್ಣ. ಎಲ್ಲ ದೇವಾಲಯಗಳಂತೆ ಈ ದೇವಾಲಯದಲ್ಲಿ ಹುಂಡಿ ಇಲ್ಲ. ಭಕ್ತರಿಂದ ಯಾವುದೇ ಹಣವನ್ನು ಸ್ವೀಕರಿಸುವುದಿಲ್ಲ.


PC:YOUTUBE

 ಭಕ್ತರು

ಭಕ್ತರು

ಚಿಲ್ಕುರ್ ಬಾಲಾಜಿ ದೇವಾಲಯಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾ ಇರುತ್ತಾರೆ. ಈ ದೇವಾಲಯಕ್ಕೂ ಕೂಡ ಒಂದು ಸುಂದರವಾದ ಕಥೆಯಿದೆ. ಅದೆನೆಂದರೆ ......


PC:YOUTUBE

ಶ್ರೀ ವೆಂಕಟೇಶ್ವರ ಸ್ವಾಮಿ

ಶ್ರೀ ವೆಂಕಟೇಶ್ವರ ಸ್ವಾಮಿ

ಒಮ್ಮೆ ಶ್ರೀ ವೆಂಕಟೇಶ್ವರ ಸ್ವಾಮಿ ಭಕ್ತನು ಪ್ರತಿ ವರ್ಷವೂ ತಿರುಪತಿಗೆ ಹೋಗಿ ಸ್ವಾಮಿಯ ದರ್ಶನವನ್ನು ಮಾಡಿಕೊಳ್ಳುತ್ತಿದ್ದ. ವರ್ಷಗಳು ಕಳೆದಂತೆ ಆತನಿಗೆ ಕೆಲವು ರೋಗಗಳಿಂದ ನರಳುತ್ತಿದ್ದನು. ಹೀಗಾಗಿ ತಿರುಪತಿಗೆ ತಿಮ್ಮಪ್ಪನ ದರ್ಶನವನ್ನು ಪಡೆಯದಾದ.

PC:YOUTUBE

ಕನಸು

ಕನಸು

ತನ್ನ ಭಕ್ತನು ಮಾನಸಿಕವಾಗಿ ನೋವನ್ನು ಅನುಭವಿಸುತ್ತಿರುವುದುನ್ನು ಕಂಡ ಶ್ರೀ ವೆಂಕಟೇಶ್ವರ ಸ್ವಾಮಿಯು ಭಕ್ತನ ಕನಸ್ಸಿನಲ್ಲಿ ಹೋಗಿ ನಿನಗೆ ನಾನು ಇದ್ದೇನೆ ಎಂದು ಅಭಯ ಹಸ್ತವನ್ನು ನೀಡಿದನು. ಒಮ್ಮೆ ಸ್ವಾಮಿಯು ಭಕ್ತನ ಕನಸ್ಸಿನಲ್ಲಿ ಬಂದು ಒಂದು ಪ್ರದೇಶದ ಕುರಿತು ತಿಳಿಸಿದನು.

PC:YOUTUBE

ಶ್ರೀ ದೇವಿ, ಭೂ ದೇವಿ

ಶ್ರೀ ದೇವಿ, ಭೂ ದೇವಿ

ಭಕ್ತನು ಆ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿ ಶ್ರೀ ದೇವಿ ಹಾಗೂ ಭೂ ದೇವಿಯ ಸಮೇತ ಸ್ವಾಮಿ ವೆಂಕಟೇಶ್ವರ ಸ್ವಾಮಿ ಕೂಡ ದರ್ಶನ ನೀಡುತ್ತಾನಂತೆ. ನಂತರ ಭಕ್ತನು ಶಾಸ್ತ್ರೋತ್ರವಾಗಿ ವಿಗ್ರಹವನ್ನು ಪ್ರತಿಷ್ಟಾಪಿಸಿ ದೇವಾಲಯ ನಿರ್ಮಾಣ ಮಾಡಿದನಂತೆ.


PC:YOUTUBE

11 ಪ್ರದಿಕ್ಷಿಣೆಗಳು

11 ಪ್ರದಿಕ್ಷಿಣೆಗಳು

ವೆಂಕಟೇಶ್ವರ ಸ್ವಾಮಿಯು ಕೋರುವ ಕೋರಿಕೆಗಳನ್ನು ತಿರಿಸುವ ಕಲಿಯುಗ ವೈಕುಂಠ ಪುರುಷ ಎಂದು ಪ್ರಸಿದ್ಧಿ ಹೊಂದಿದ್ದಾನೆ. ಚಿಲ್ಕೂರಿನಲ್ಲಿರುವ ಬಾಲಾಜಿ ದೇವಾಲಯದಲ್ಲಿ ಮೊದಲ ಬಾರಿಗೆ ದರ್ಶನ ಮಾಡಲು ಬರುವ ಭಕ್ತರು 11 ಪ್ರದಕ್ಷಿಣೆಯನ್ನು ಮಾಡಿ ಕೋರಿಕೆಗಳನ್ನು ಕೋರಬೇಕಂತೆ. ಹಾಗೇಯೇ ಕೋರಿಕೆಗಳು ನೆರವೇರಿದ ನಂತರ 108 ಪ್ರದಕ್ಷಿಣೆಯನ್ನು ಮಾಡಬೇಕಂತೆ.

PC:YOUTUBE

ವೀಸಾ ಗಾಡ್

ವೀಸಾ ಗಾಡ್

ಚಿಲ್ಕೂರಿನ ಬಾಲಾಜಿ ದೇವಾಲಯವನ್ನು ವೀಸಾ ಗಾಡ್ ಎಂದು ಸಹ ಕರೆಯುತ್ತಾರೆ. ಕೆಲವು ವರ್ಷಗಳ ಹಿಂದೆ ಪಾಶ್ಚಿಮಾತ್ಯ ದೇಶಗಳಲ್ಲಿ ತಮ್ಮ ವಿಧ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗಕ್ಕಾಗಿ ವೀಸಾ ಇಲ್ಲದೇ ತೊಂದರೆಯನ್ನು ಅನುಭವಿಸುತ್ತಿದ್ದರು.


PC:YOUTUBE

ಕೋರಿಕೆ

ಕೋರಿಕೆ

ಚಿಲ್ಕೂರಿನ ಬಾಲಾಜಿಯ ದೇವಾಲಯದ ಬಗ್ಗೆ ತಿಳಿದುಕೊಂಡ ಕೆಲವು ಭಕ್ತರು ಈ ದೇವಾಲಯಕ್ಕೆ ಬಂದು ವೀಸಾಗಾಗಿ ಪಾರ್ಥನೆ ಮಾಡತೊಡಗಿದರು. ಅವರು ಕೋರುವ ಕೋರಿಕೆಗಳು ನೇರವೇರುತ್ತಿದ್ದರಿಂದ ಬಾಲಾಜಿಯನ್ನು ಚಿಲ್ಕೂರಿನ ಬಾಲಾಜಿ ಎಂದು ಹೆಸರು ಬಂದಿತು.


PC:YOUTUBE

ಸಮಾನ ದರ್ಶನ

ಸಮಾನ ದರ್ಶನ

ಈ ದೇವಾಲಯದಲ್ಲಿ ಯಾವುದೇ ಜಾತಿ, ಭೇದ, ಭಾವ, ಮೇಲು, ಕೀಳು ಎಂಬ ಭೇದವಿಲ್ಲದೇ ಭಕ್ತರನ್ನು ಕಾಣಲಾಗುತ್ತದೆ. ಪ್ರಧಾನ ಮಂತ್ರಿಯಾದರೂ ಕೂಡ ಈ ದೇವಾಲಯದಲ್ಲಿ ಮಾಮೂಲಿ ದರ್ಶನ ಮಾಡಿಕೊಳ್ಳಬೇಕಷ್ಟೆ.


PC:YOUTUBE

ಅಶ್ವಥ ವೃಕ್ಷ

ಅಶ್ವಥ ವೃಕ್ಷ

ಈ ದೇವಾಲಯದ ಪ್ರಾಂಗಣದಲ್ಲಿ 350 ವರ್ಷಗಳ ಚರಿತ್ರೆ ಇರುವ ಆಶ್ವಥ ವೃಕ್ಷವಿದೆ. ಈ ಪವಿತ್ರವಾದ ಮರವನ್ನು ಮುಟ್ಟಿ ನಮಸ್ಕರಿಸಿದರೆ ಒಳ್ಳೆದಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

PC:YOUTUBE

ಅಭಿಷೇಕ

ಅಭಿಷೇಕ

ಈ ಬಾಲಾಜಿ ದೇವಾಲಯದಲ್ಲಿ ದರ್ಶನ, ಅಭಿಷೇಕ್ಕಾಗಿ ಪ್ರತ್ಯೇಕವಾದ ಟಿಕೆಟ್‍ಗಳು ಇರುವುದಿಲ್ಲ. ಬದಲಾಗಿ ಕೋರಿಕೆಯನ್ನು ಕೋರಿ 11 ಪ್ರದಕ್ಷಿಣೆ ಹಾಕಿದರೆ ಸಾಕು.


PC:YOUTUBE

ವಿದೇಶಿಯರು

ವಿದೇಶಿಯರು

ಹೈದ್ರಾಬಾದ್ ನಿಂದಲೇ ಅಲ್ಲದೇ ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದಲೂ ಕೂಡ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೇವಾಲಯದ ಒಳಭಾಗದಲ್ಲಿ ಒಂದು ಪತ್ರಿಕೆಯನ್ನು ನಡೆಸುತ್ತಿದೆ. ಈ ಪತ್ರಿಕೆಯ ಆದಾಯದ ಮುಖಾಂತರವೇ ದೇವಾಲಯದ ನಿರ್ವಹಣ ನಡೆಯುತ್ತಿದೆ.

PC:YOUTUBE

ವೀಸಾ ದೇವರು

ವೀಸಾ ದೇವರು

ಅಮೇರಿಕಾ, ಆಸ್ಟೇಲಿಯದಂತಹ ದೇಶಗಳಿಗೆ ಐ.ಟಿ ರಂಗಗಳಿಗೆ ಉದ್ಯೋಗವಕಾಶವು ಹೆಚ್ಚಾಯಿತು. ಯುವಕರೆಲ್ಲಾರು ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ತಿ ಮಾಡಿ ವಿದೇಶಕ್ಕಾಗಿ ವೀಸಾಗೆ ತೊಂದರೆ ಅನುಭವಿಸುವಾಗ ಈ ದೇವಾಲಯಕ್ಕೆ ಬಂದು ತಮ್ಮ ವೀಸಾಗಳಿಗೆ ಅಪ್ಲೀಕೇಶನ್ ಹಾಕತೊಡಗಿದರು. ಹಾಗಾಗಿಯೇ ಬಾಲಾಜಿಗೆ ವೀಸಾ ಗಾಡ್ ಎಂದು ಭಾರತ ದೇಶದಾದ್ಯಂತ ಪ್ರಸಿದ್ಧಿಯನ್ನು ಪಡೆಯಿತು.


PC:YOUTUBE

ದರ್ಶನ ಭಾಗ್ಯ

ದರ್ಶನ ಭಾಗ್ಯ

ಚಿಲ್ಕೂರಿನ ಬಾಲಾಜಿ ದೇವಾಲಯವು ಮುಂಜಾನೆ 5 ಗಂಟೆಯಿಂದ ರಾತ್ರಿ 7:45 ಗಂಟೆಯ ವರೆಗೆ ಭಕ್ತರಿಗೆ ಬಾಲಾಜಿ ಸ್ವಾಮಿಯು ದರ್ಶನವನ್ನು ನೀಡುತ್ತಾನೆ. ಪ್ರತ್ಯೇಕವಾದ ದರ್ಶನ ಟಿಕಿಟ್, ಪೂಜೆಗಳು ಇರುವುದಿಲ್ಲ. ಯಾರಾದರೂ ಸರಿ ಕ್ಯೂ ನಲ್ಲಿಯೇ ಹೋಗಬೇಕು.


PC:YOUTUBE

ತಲುಪುವ ಬಗೆ?

ತಲುಪುವ ಬಗೆ?

ಚಿಲ್ಕೂರಿನ ಬಾಲಾಜಿ ದೇವಾಲಯವು ಬೆಂಗಳೂರಿನಿಂದ ಸುಮಾರು 570 ಕಿ,ಮೀ ದೂರದಲ್ಲಿದೆ. ಹೈದ್ರಾಬಾದ್‍ನಿಂದ ಚಿಲ್ಕೂರಿಗೆ ಸುಮಾರು 30 ಕಿ,ಮೀ ದೂರದಲ್ಲಿದೆ. ಇಲ್ಲಿಂದ ಚಿಲ್ಕೂರಿಗೆ ಹಲವಾರು ಬಸ್ ಸೌಕರ್ಯ ವ್ಯವಸ್ಥೆಗಳಿವೆ.


PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X