Search
  • Follow NativePlanet
Share
» »ಒಂದೇ ಕಲ್ಲಿನಲ್ಲಿ ನೆಲೆಸಿರುವ 8 ಶಿವಲಿಂಗಗಳು ಎಲ್ಲಿವೆ ಗೊತ್ತ?

ಒಂದೇ ಕಲ್ಲಿನಲ್ಲಿ ನೆಲೆಸಿರುವ 8 ಶಿವಲಿಂಗಗಳು ಎಲ್ಲಿವೆ ಗೊತ್ತ?

ಭೈರವಕೋನದ ಬಗ್ಗೆ ನಿಮಗೆ ತಿಳಿಯದ ಕೆಲವು ಆಶ್ಚರ್ಯಕರವಾದ ವಿಷಯಗಳನ್ನು ಈ ಲೇಖನದ ಮೂಖಾಂತರ ತಿಳಿದುಕೊಳ್ಳೋಣ. ಭೈರವ ಕೋನದಲ್ಲಿ ಭೈರವ ದೇವಾಲಯವೇ ಅಲ್ಲದೇ ಆನೇಕ ದೇವಾಲಯಗಳು ಕೂಡ ಇವೆ.

ಆಂಧ್ರ ಪ್ರದೇಶದಲ್ಲಿನ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಶಿವಾಲಯದ ಸಂಖ್ಯೆ ಹೆಚ್ಚಾಗಿದೆ. ಆ ಶಿವಾಲಯ ಚಿಕ್ಕದಾಗಿದ್ದರು, ದೊಡ್ಡದಿದ್ದರು ಅಲ್ಲಿಗೆ ತೆರಳಲು ಭಕ್ತರು ಉತ್ಸುಕರಾಗಿರುತ್ತಾರೆ. ಅಂತಹ ಶಿವಾಲಯದಲ್ಲಿ ಒಂದು ಭೈರವಕೋನದಲ್ಲಿರುವ ವಿಭಿನ್ನವಾದ ಶಿವಾಲಯ. ಇಲ್ಲಿ ಕೇವಲ ಶಿವಲಿಂಗಗಳೇ ಅಲ್ಲ, ಪಾರ್ವತಿ ದೇವಿ ದೇವಾಲಯ, ದೇವಿ ದೇವತೆಗಳ ಶಿಲಾರೂಪಗಳು, ಗ್ರಾನೈಟ್ ಶಿಲೆಗಳಿಂದ ಕೆತ್ತನೆ ಮಾಡಿರುವ ಶಿವಲಿಂಗಗಳು, ಆಕಾಶಗಂಗದಂತೆ ಕಾಣುವ ಜಲಪಾತ, ಸುತ್ತಲೂ ಆಹ್ಲಾದಕರವಾದ ಪ್ರಕೃತಿ ರಮಣೀಯತೆ ಇವೆಲ್ಲವೂ ಕೂಡ ಯಾತ್ರಿಕರಿಗೆ ವಿಶೇಷವಾಗಿ ಆಕರ್ಷಿಸುತ್ತದೆ.

ಭೈರವಕೋನದ ಬಗ್ಗೆ ನಿಮಗೆ ತಿಳಿಯದ ಕೆಲವು ಆಶ್ಚರ್ಯಕರವಾದ ವಿಷಯಗಳನ್ನು ಈ ಲೇಖನದ ಮೂಖಾಂತರ ತಿಳಿದುಕೊಳ್ಳೋಣ. ಭೈರವ ಕೋನದಲ್ಲಿ ಭೈರವ ದೇವಾಲಯವೇ ಅಲ್ಲದೇ ಆನೇಕ ದೇವಾಲಯಗಳು ಕೂಡ ಇವೆ. ಆದರೆ ಬೆಟ್ಟದ ನಡುವೆ ಏರ್ಪಟ್ಟ ಶಿಲಾ ದೇವಾಲಯದ ನಿರ್ಮಾಣವು ಇಲ್ಲಿನ ಪ್ರಮುಖವಾದ ಮತ್ತು ಆಶ್ಚರ್ಯಕರವಾದುದಾಗಿದೆ. ಹಾಗಾದರೆ ಭೈರವಕೋನದಲ್ಲಿರುವ ಆ ವಿಭಿನ್ನವಾದ ದೇವಾಲಯಗಳ ಬಗ್ಗೆ ಮಾಹಿತಿಯನ್ನು ಪಡೆಯೋಣ.

1.ಭೈರವಕೋನದಲ್ಲಿರುವ 8 ಶಿವಲಿಂಗ

1.ಭೈರವಕೋನದಲ್ಲಿರುವ 8 ಶಿವಲಿಂಗ

ಭೈರವಕೋನ, ಆಂಧ್ರ ಪ್ರದೇಶದ ಪ್ರಕಾಶ ಜಿಲ್ಲೆ ಚಂದ್ರಶೇಖರಪುರಂ ಎಂಬ ಮಂಡಲದಲ್ಲಿನ ಕೊತ್ತಪಲ್ಲಿ ಗ್ರಾಮ ಸಮೀಪದಲ್ಲಿದೆ. ಕೊತ್ತಪಲ್ಲಿ ಗ್ರಾಮದಿಂದ ಕೇವಲ 5 ಕಿ.ಮೀ ದೂರದಲ್ಲಿ ಭೈರವಕೋನ ಕ್ಷೇತ್ರವಿದೆ. ನೆಲ್ಲೂರು ಸರಿಹದ್ದುವಿನಲ್ಲಿ ಈ ಭೈರವಕೋನ ಎಂಬ ಪುಣ್ಯಕ್ಷೇತ್ರವಿದೆ.

2.ಭೈರವಕೋನದಲ್ಲಿರುವ 8 ಶಿವಲಿಂಗ

2.ಭೈರವಕೋನದಲ್ಲಿರುವ 8 ಶಿವಲಿಂಗ

ಈ ಕ್ಷೇತ್ರದಲ್ಲಿ ಬ್ರಹ್ಮ, ರುದ್ರ, ವಿಷ್ಣು ಇರುವ ಹಾಗೆಯೇ ಪ್ರಕೃತಿಯ ರಮಣೀಯತೆಯಿಂದ ಕಂಗೊಳಿಸುತ್ತಿರುವ ಪ್ರದೇಶವೇ ಭೈರವಕೋನ. ಇಲ್ಲಿ ಒಂದೇ ಕಲ್ಲಿನಲ್ಲಿ 8 ಶಿವಾಲಯವಿರುವುದು ಭೈರವ ದೇವಾಲಯದ ವಿಶೇಷತೆಯನ್ನು ಹೊಂದಿದೆ. ಭೈರವಕೋನದಲ್ಲಿ ಪ್ರಸಿದ್ಧಿಯನ್ನು ಹೊಂದಿರುವ ಶಿವಾಲಯವಿದು. ಇದನ್ನು ಕ್ರಿ.ಶ 9 ನೇ ಶತಮಾನದಲ್ಲಿ ನಿರ್ಮಾಣ ಮಾಡಿದರು.

3.ಭೈರವಕೋನದಲ್ಲಿರುವ 8 ಶಿವಲಿಂಗ

3.ಭೈರವಕೋನದಲ್ಲಿರುವ 8 ಶಿವಲಿಂಗ

ಪಲ್ಲವ ರಾಜರು ಅದ್ಭುತವಾದ ಶಿಲ್ಪಕಲೆಗಳ ನಿದರ್ಶನ ಈ ಭೈರವಕೋನ. ಬೆಟ್ಟಗಳನ್ನು ಕೊರೆದು ಗುಹೆಗಳಾಗಿ ನಿರ್ಮಾಣ ಮಾಡುವುದು ಆ ಕಾಲದಲ್ಲಿ ಅತ್ಯಂತ ಅದ್ಭುತವಾದ ಕಲೆಯಾಗಿತ್ತು. ಗುಹೆಗಳ ಗೋಡೆಗಳ ಮೇಲೆ ಕೆತ್ತನೆ ಮಾಡಿದ ಶಿಲ್ಪಗಳು ಪಲ್ಲವರ ಶೈಲಿಯ ಶಿಲ್ಪಕಲೆಗಳು ಗೋಚರಿಸುತ್ತದೆ. ಸ್ಥಳ ಪುರಾಣದ ಪ್ರಕಾರ, ಕೃತಯುಗವು ನೃಸಿಂಹಾಲಯದಲ್ಲಿ ಪ್ರಹ್ಲಾದನು ನೇಮಕ ಮಾಡಿದ ಅರ್ಚಕನೇ ಭೈರವನು.

4.ಭೈರವಕೋನದಲ್ಲಿರುವ 8 ಶಿವಲಿಂಗ

4.ಭೈರವಕೋನದಲ್ಲಿರುವ 8 ಶಿವಲಿಂಗ

ಪ್ರಹ್ಲಾದನು ಮರಣ ಹೊಂದಿದ ನಂತರ ಈ ಗುಡಿಯನ್ನು ಯಾರು ಅಷ್ಟಾಗಿ ಬಾರದೇ ಇದ್ದ ಕಾರಣದಿಂದ ಭೈರವನು ಪೂಜೆ ಮಾಡುವುದನ್ನು ಬಿಟ್ಟು ಬೇರೆ ದಾರಿಯನ್ನು ಹಿಡಿದುಕೊಂಡನು. ಇದಕ್ಕೆ ಆಗ್ರಹಿಸಿದ ನೃಸಿಂಹಸ್ವಾಮಿಯು ಕೋಪದಿಂದ, ಭೈರವನಿಗೆ ರಾಕ್ಷಸನಾಗು ಎಂದೂ, ತನ್ನ ಕಣ್ಣಿಗೆ ಕಾಣಿಸದೇ ಕೇವಲ ಭಕ್ತರು ತಂದಿರುವ ಆಹಾರವನ್ನು ಮಾತ್ರ ಸ್ವೀಕರಿಸುವಂತೆ ಹಾಗೆಯೇ ಕಲಿಯುಗದ ನಂತರ ಮತ್ತೇ ತನ್ನ ಸೇವೆಗೆ ಬಾ ಎಂದು ಹೇಳುತ್ತಾನೆ.

5.ಭೈರವಕೋನದಲ್ಲಿರುವ 8 ಶಿವಲಿಂಗ

5.ಭೈರವಕೋನದಲ್ಲಿರುವ 8 ಶಿವಲಿಂಗ

ಅಂದಿನಿಂದ ಇಂದಿನವರೆವಿಗೂ ಭೈರವಕೋನದಲ್ಲಿ ಭೈರವನು ಪೂಜೆಗಳನ್ನು ಪಡೆಯುತ್ತಿದ್ದಾನೆ. ಶ್ರೀ ಭೈರವೇಶ್ವರ ಸ್ವಾಮಿ ದೇವಾಲಯವು ಆಂಧ್ರ ಪ್ರದೇಶ ರಾಜ್ಯದ ಪ್ರಕಾಶ ಜಿಲ್ಲೆಯ ಚಂದ್ರಶೇಖರಪುರ ಮಂಡಲದಲ್ಲಿನ ಅಂಬವರಂ ಕೊತ್ತಪಲ್ಲಿ ಗ್ರಾಮಕ್ಕೆ ಕೇವಲ 5 ಕಿ.ಮೀ ದೂರದಲ್ಲಿದೆ ಭೈರವ ಕೋನ.

6.ಭೈರವಕೋನದಲ್ಲಿರುವ 8 ಶಿವಲಿಂಗ

6.ಭೈರವಕೋನದಲ್ಲಿರುವ 8 ಶಿವಲಿಂಗ

ಈ ನಲ್ಲಮಲ ಅರಣ್ಯದಲ್ಲಿ ಎಲ್ಲಿ ನೋಡಿದರೂ ಕೂಡ ದೇವಿ ದೇವತೆಗಳ ಶಿಲಾರೂಪಗಳೇ ಕಾಣಿಸುತ್ತವೆ. ಮುಖ್ಯವಾಗಿ ಒಂದು ಬೆಟ್ಟದ ಮೇಲೆ 8 ದೇವಾಲಯಗಳನ್ನು ಕೆತ್ತನೆ ಮಾಡಿರುವುದು ಅಪರೂಪವಾಗಿ ಕಾಣುತ್ತದೆ. ಒಂದೇ ಬೆಟ್ಟದ ಮೇಲೆ ನೆಲೆಸಿದ 8 ಶಿವಾಲಯವನ್ನು ಇಲ್ಲಿ ಏಕಕಾಲದಲ್ಲಿ ದರ್ಶನ ಮಾಡಿಕೊಳ್ಳಬಹುದು.

7.ಭೈರವಕೋನದಲ್ಲಿರುವ 8 ಶಿವಲಿಂಗ

7.ಭೈರವಕೋನದಲ್ಲಿರುವ 8 ಶಿವಲಿಂಗ

ಇವುಗಳಲ್ಲಿ 7 ದೇವಾಲಯಗಳು ಪೂರ್ವಾಭಿಮುಖವಾಗಿ, ಅದರಲ್ಲಿ ಒಂದು ಮಾತ್ರ ಉತ್ತರ ಮುಖವಾಗಿ ಕೆತ್ತನೆ ಮಾಡಿದ್ದಾರೆ. ಇವುಗಳೆಲ್ಲದರಲ್ಲೂ ಗರ್ಭಾಲಯಗಳು, ವರಂಡಗಳು, ಸ್ತಂಭಗಳು ಎಲ್ಲಾ ಆ ಬೆಟ್ಟದ ಕಲ್ಲಿನಿಂದಲೇ ಕೆತ್ತನೆ ಮಾಡಿರುವುದು ವಿಶೇಷ. ಶಿವಲಿಂಗವನ್ನು ಮಾತ್ರವೇ ಗ್ರಾನೈಟ್ ಶಿಲೆಯಲ್ಲಿ ಕೆತ್ತನೆ ಮಾಡಿ ಪ್ರತಿಷ್ಟಾಪಿಸಿದ್ದಾರೆ.

8.ಭೈರವಕೋನದಲ್ಲಿರುವ 8 ಶಿವಲಿಂಗ

8.ಭೈರವಕೋನದಲ್ಲಿರುವ 8 ಶಿವಲಿಂಗ

ಅಷ್ಟೇ ಅಲ್ಲ ಒಂದೇ ಕಲ್ಲಿನಲ್ಲಿ ನೆಲೆಸಿರುವ 8 ಶಿವಾಲಯದಲ್ಲಿ 8 ರೂಪದಲ್ಲಿ ಶಿವಲಿಂಗವನ್ನು ಕಾಣಬಹುದು. ಈ ಎತ್ತರವಾದ ಭೈರವಕೋನದಲ್ಲಿ ಒಂದು ವಿಶೇಷವಾದ ಲಿಂಗವನ್ನು ಪ್ರತಿಷ್ಟಾಪಿಸಿದರು ಎಂದು ಪುರಾಣಗಳ ಪ್ರಕಾರ ತಿಳಿಯುತ್ತದೆ. ಪೂರ್ವದಲ್ಲಿ ಇಲ್ಲಿ ಭೈರವ, ದುರ್ಗಾರಿಗೆ ಸಂಬಂಧಿಸಿದ 128 ದೇವಾಲಯಗಳನ್ನು ನಿರ್ಮಾಣ ಮಾಡಿದ ಹಾಗೆ ಪ್ರತೀತಿ.

9.ಭೈರವಕೋನದಲ್ಲಿರುವ 8 ಶಿವಲಿಂಗ

9.ಭೈರವಕೋನದಲ್ಲಿರುವ 8 ಶಿವಲಿಂಗ

ಒಂದೇ ಕಲ್ಲಿನ ಮೇಲೆ ದೇವತೆಗಳ ಚಿತ್ತಾರಗಳ ಜೊತೆ ಜೊತೆಗೆ ದೇವಾಲಯವನ್ನು ನಿರ್ಮಾಣ ಮಾಡಿರುವುದು ಎಲ್ಲರಿಗೂ ಆಶ್ಚರ್ಯಕರವಾಗಿಸಿದೆ. ಭೈರವಕೋನದಲ್ಲಿ 7 ದೇವಾಲಯಗಳ ಮಧ್ಯೆಯಲ್ಲಿ ಸುಮಾರು 7 ಅಡಿ ಆಳದಲ್ಲಿ ದುರ್ಗಾದೇವಿ ದೇವಾಲವಿದೆ. ಇಲ್ಲಿ ಕನಕದುರ್ಗಾದೇವಿ ವಿಗ್ರಹ ಅತ್ಯಂತ ಅದ್ಭುತವಾಗಿದೆ.

10.ಭೈರವಕೋನದಲ್ಲಿರುವ 8 ಶಿವಲಿಂಗ

10.ಭೈರವಕೋನದಲ್ಲಿರುವ 8 ಶಿವಲಿಂಗ

ಅಲ್ಲಿನ ಮುಖ್ಯವಾದ ವಿಗ್ರಹಗಳೆಂದರೆ ದುರ್ಗಾ ದೇವಿ, ಸರಸ್ವತಿ ದೇವಿ, ಪಾರ್ವತಿ ದೇವಿಗಳನ್ನು ಕಾಣಬಹುದು. ದುರ್ಗಾದೇವಿ ದೇವಾಲಯವು ಸ್ವಲ್ಪ ಕೆಳಭಾಗದಲ್ಲಿ ನೆಲೆಸಿದ್ದಾಳೆ. ಇಲ್ಲಿ ಒಂದು ಕೊಳವಿದೆ. ಅದು ಬೇಸಿಗೆ ಕಾಲದಲ್ಲಿಯೂ ಕೂಡ ಪ್ರವಹಿಸುತ್ತಿರುತ್ತದೆ.

11.ಭೈರವಕೋನದಲ್ಲಿರುವ 8 ಶಿವಲಿಂಗ

11.ಭೈರವಕೋನದಲ್ಲಿರುವ 8 ಶಿವಲಿಂಗ

ಒಂದೇ ಸ್ಥಳದಲ್ಲಿ ಮೂರು ಮೂರ್ತಿಗಳು, 8 ಗುಹೆಗಳಲ್ಲಿ ಒಂದು ಮಾತ್ರ ಉತ್ತರಮುಖವಾಗಿರುವ ಒಂದು ಹಾಗು ಉಳಿದ 7 ಗುಹೆಗಳು ಪೂರ್ವ ಮುಖವಾಗಿರುತ್ತದೆ. ಇಲ್ಲಿನ ದ್ವಾರ ಪಾಲಕರು ಈ ಗುಹೆಯ ಪ್ರಧಾನವಾದ ಆಕರ್ಷಣೆಯಾಗಿದೆ. ಗರ್ಭಗುಡಿಯ ಎದುರಿನಲ್ಲಿ ನಂದಿ ವಿಗ್ರಹ ಕೂಡ ಇರುತ್ತದೆ.

12.ಭೈರವಕೋನದಲ್ಲಿರುವ 8 ಶಿವಲಿಂಗ

12.ಭೈರವಕೋನದಲ್ಲಿರುವ 8 ಶಿವಲಿಂಗ

ಭೈರವಕೋನ ಕ್ಷೇತ್ರದಲ್ಲಿ ದೇವಿಯ ದೇವಾಲಯವನ್ನು ನೂತನವಾಗಿ ನಿರ್ಮಾಣ ಮಾಡಿದ್ದಾರೆ. ದೇವಾಲಯದಲ್ಲಿ ಪ್ರತಿಷ್ಟಾಪಿಸಿದ ವಿಗ್ರಹ ಮಾತ್ರ ಪುರಾತನವಾದುದು. ಈ ದೇವಾಲಯವು ಅರಣ್ಯದಲ್ಲಿ ಇದ್ದರು ಕೂಡ ಪ್ರತಿದಿನ ಶುಕ್ರವಾರ ಹಬ್ಬದ ವಾತಾವರಣವಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X