Search
  • Follow NativePlanet
Share
» » ಬೆಂಗ್ಳೂರಲ್ಲಿದ್ದೇ ಗೋವಾ, ಕೇರಳ, ಆಂಧ್ರ, ದೆಹಲಿ ಫುಡ್ ಚಪ್ಪರಿಸಿ

ಬೆಂಗ್ಳೂರಲ್ಲಿದ್ದೇ ಗೋವಾ, ಕೇರಳ, ಆಂಧ್ರ, ದೆಹಲಿ ಫುಡ್ ಚಪ್ಪರಿಸಿ

ಈ ಕೆಲಸಕ್ಕೆ ಹೋಗುವವರಿಗೆ ಬೇರೆ ಊರೆಲ್ಲಾ ಸುತ್ತಾಡೋಕ್ಕೆ ಸಮಯಾನೇ ಇರೋದಿಲ್ಲ . ಹೀಗಿರುವಾಗ ಫ್ಯಾಮಿಲಿ ಜೊತೆ ಬೇರೆ ರಾಜ್ಯಕ್ಕೆ ಹೋಗೋಕ್ಕೆ ಸಮಯ ಇರುತ್ತಾ ಹೇಳಿ. ಹಾಗಂತ ಅವರು ಬೇರೆ ಊರಿನ ಸಂಸ್ಕೃತಿ, ಆಹಾರ ಪದ್ಧತಿಯನ್ನೆಲ್ಲಾ ಮಿಸ್ ಮಾಡ್ಕೋತ್ತಾರೆ. ಎಲ್ಲಾ ಕಂಪನಿಗಳು ಒಂದೇ ರೀತಿ ಇರೋದಿಲ್ಲ. ಹೀಗಿರುವಾಗ ಕೆಲವರ ಕಂಪನಿಯಲ್ಲಿ ರಜಾ ಸಿಗುತ್ತದೆ. ಇನ್ನೂ ಕೆಲವರ ಕಂಪನಿಯಲ್ಲಿ ಒಂದು ದಿನದ ರಜಾ ಸಿಗೋದೋ ಕಷ್ಟವಾಗಿರುತ್ತದೆ. ನಿಮ್ಮ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಬೇರೆ ರಾಜ್ಯಕ್ಕೆ ಹೋಗಿರುವ, ಅಲ್ಲಿನ ರುಚಿರುಚಿಯಾದ ಆಹಾರವನ್ನು ಸವಿಯುವ ಫೋಟೋ ಹಾಕಿದಾಗ ಅದನ್ನ ನೋಡಿ ಹೊಟ್ಟೆ ಉರಿಯೋದು ಸಹಜಾನೇ ತಾನೆ.

ಬೇರೆ ರಾಜ್ಯದ ಬೆಸ್ಟ್ ಫುಡ್‌

ಬೇರೆ ರಾಜ್ಯದ ಬೆಸ್ಟ್ ಫುಡ್‌

ನಿಮಗೂ ಬೇರೆ ಊರಿನ ರುಚಿಕರ ಖಾದ್ಯವನ್ನು ಸವಿಯಬೇಕೆಂಬ ಆಸೆ ಇದ್ರೆ ಅದಕ್ಕೆ ಅವಕಾಶಗಳು ಬೇಕಾದಷ್ಟಿದೆ. ಇನ್ನೂ ಬೆಂಗಳೂರಿನಲ್ಲಿರುವವರಿಗಂತೂ ಸಿಕ್ಕಾಪಟ್ಟೆ ಅವಕಾಶಗಳಿವೆ. ಬೇರೆ ರಾಜ್ಯದ ಆಹಾರವನ್ನು ಸವಿಯಲು ಆ ಊರಿಗೆ ಹೋಗಬೇಕೆಂದೇನಿಲ್ಲ. ಬದಲಾಗಿ ನಿಮ್ಮ ಊರಿನಲ್ಲಿ ಬೇರೆ ರಾಜ್ಯದ ಸವಿಯನ್ನು ಸವಿಯಬಹುದು. ಹಾಗಾದ್ರೆ ಬನ್ನಿ ಬೆಂಗಳೂರಿನ ಎಲ್ಲೆಲ್ಲಾ ಬೇರೆ ರಾಜ್ಯದ ಬೆಸ್ಟ್ ಫುಡ್‌ ಸಿಗುತ್ತದೆ ಅನ್ನೋದನ್ನು ನಾವು ತಿಳಿಸಲಿದ್ದೇವೆ.

ನಡೆದಾಡುವ ದೇವರಿರುವ ಸಿದ್ಧಗಂಗಾ ಮಠದ ಬಗ್ಗೆ ನಿಮಗೆಷ್ಟು ಗೊತ್ತು?ನಡೆದಾಡುವ ದೇವರಿರುವ ಸಿದ್ಧಗಂಗಾ ಮಠದ ಬಗ್ಗೆ ನಿಮಗೆಷ್ಟು ಗೊತ್ತು?

ಹೈದರಾಬಾದಿ ಬಿರಿಯಾನಿ

ಹೈದರಾಬಾದಿ ಬಿರಿಯಾನಿ

PC:pelican

ಹೈದರಾಬಾದ್‌ನಲ್ಲಿ ಬಹಳ ಫೇಮಸ್ ಅಂದ್ರೆ ಹೈದರಾಬಾದ್‌ ಬಿರಿಯಾನಿ, ಇದನ್ನು ತಿನ್ನೋಕೆ ನೀವು ಹೈದರಾಬಾದ್‌ಗೆ ಹೋಗಬೇಕೆಂದೇನಿಲ್ಲ. ಬೆಂಗಳೂರಿನ ಜೆ.ಪಿ ನಗರ ಎರಡನೇ ಹಂತದಲ್ಲಿ ಪ್ಯಾರಡೈಸ್‌ ರೆಸ್ಟೋರೆಂಟ್‌ ಇದೆ. ಇಲ್ಲಿ ಫೇಮಸ್ ಹೈದರಾಬಾದಿ ಬಿರಿಯಾನಿ ಸಿಗುತ್ತದೆ. ರುಚಿಯೂ ಸಖತ್ ಆಗಿದೆ. ರಿಚ್‌ಮಂಡ್‌ ರೋಡ್‌ನಲ್ಲಿರುವ ಹೈದರಾಬಾದಿ ಬಿರಿಯಾನಿ ಹೌಸ್‌ನಲ್ಲೂ ಹೈದರಾಬಾದ್ ಬಿರಿಯಾನಿ ಸವಿಯಬಹುದು.

ಗೋವಾನ್ ಕುಸಿನ್

ಗೋವಾನ್ ಕುಸಿನ್

ನಿಮಗೆ ಗೋವಾದ ಅಡುಗೆ ರುಚಿಯನ್ನು ಸವಿಯಬೇಕೆಂದಿದ್ದರೆ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ಫೀಶರ್‌ಮಾನ್ಸ್‌ ವಾರ್ಫ್ ರೆಸ್ಟೋರೆಂಟ್‌ಗೆ ಭೇಟಿ ನೀಡಿ. ಇಲ್ಲಿ ನೀವು ವಿವಿಧ ಸೀ ಫುಡ್‌ ಡಿಶ್‌ಗಳನ್ನು ಸವಿಯಬಹುದು.

ಪಂಜಾಬಿ ಫುಡ್

ಪಂಜಾಬಿ ಫುಡ್

ಪಕ್ಕಾ ಪಂಜಾಬಿ ಫುಡ್ ಸವಿಯಬೇಕೆಂದಿದ್ದರೆ ನೀವು ಬಾಬಾ ಚಟ್ಕೋರಕ್ಕೆ ಹೋಗಿ ಇಲ್ಲಿ ನಿಮಗೆ ಪಂಜಾಬಿ ಥಾಲಿ ಯಿಂದ ಹಿಡಿದು ಕಡಾಯಿ ಲಸ್ಸಿ ಕೂಡಾ ಸಿಗುತ್ತದೆ. ಪಂಜಾಬಿ ಟೆಸ್ಟ್‌ ಇಲ್ಲಿದೆ. ಈ ಡಾಬಾವು ಬೆಂಗಳೂರಿನ ಬಿಟಿಎಮ್‌ ೨ನೇ ಹಂತ ೧೬ನೇ ಕ್ರಾಸ್‌ನಲ್ಲಿದೆ. ಇನ್ನು ನಿಮಗೆ ಪಂಜಾಬಿ ನಾನ್‌ವೆಜ್ ಟೇಸ್ಟ್ ಮಾಡಬೇಕಾದರೆ ಬೆಳ್ಳಂದೂರಿನಲ್ಲಿರುವ ಪಂಜಾಬಿ ಟೈಮ್ಸ್‌ಗೆ ಹೋಗಿ.

ಬೆಸ್ಟ್‌ ಸ್ಟ್ರೀಟ್ ಫುಡ್ ಸಿಗುವ ಸ್ಥಳಗಳಿವುಬೆಸ್ಟ್‌ ಸ್ಟ್ರೀಟ್ ಫುಡ್ ಸಿಗುವ ಸ್ಥಳಗಳಿವು

ಕೇರಳ ಸೀ ಫುಡ್

ಕೇರಳ ಸೀ ಫುಡ್

ಕೇರಳದ ಸೀ ಫುಡ್ ಫೀಶ್ ಕರಿಯನ್ನು ಸವಿಯಬೇಕಾದರೆ ಬೆಂಗಳೂರಿನ ದೊಲ್ಮೂರಿನಲ್ಲಿರುವ ವೆಂಬನಾಡ್ ದಿ ಪೌಲ್ ರೆಸ್ಟೋರೆಂಟ್‌ಗೆ ಭೇಟಿ ನೀಡಿ. ಇನ್ನೂ ಅಪ್ಪಟ ಕೇರಳ ಬಾಳೆ ಎಲೆಯ ಊಟ ಮಾಡಬೇಕಾದರೆ ಎಂಟೆ ಕೇರಳಂ ರೆಸ್ಟೋರೆಂಟ್‌ಗೆ ಹೋಗಿ. ರಿಚಡ್ರ್ಸ್ ಟೌನ್, ಕ್ಲಾರ್ಕ್ಸ್ ರೋಡ್‌ನಲ್ಲಿರುವ ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿ. ಇದು ನಿಮಗೆ ಅಪ್ಪಟ ಕೇರಳದ ಕೈ ರುಚಿಯನ್ನು ಬಡಿಸುತ್ತದೆ.

ದೆಹಲಿ ಟೇಸ್ಟ್

ದೆಹಲಿ ಟೇಸ್ಟ್

ದೆಹಲಿಯ ಆಹಾರದ ರುಚಿ ನೊಡಬೇಕಾದರೆ ನೀವು ಬೆಂಗಳೂರಿನ ಇಂದಿರಾನಗರದ ಹೆಚ್‌ಎಎಲ್‌ ೨ನೇ ಹಂತದಲ್ಲಿರುವ ದೆಹಲಿ ಹೈವೆ ರೆಸ್ಟೋರೆಂಟ್‌ಗೆ ಹೋಗಬೇಕು. ಇದು ಪಕ್ಕಾ ಸಸ್ಯಹಾರಿ ರೆಸ್ಟೋರೆಂಟ್ ಆಗಿದ್ದು ನಾರ್ತ್ ಇಂಡಿಯನ್ ಡಿಶ್‌ಗಳು ಲಭ್ಯವಿದೆ.

ತಮಿಳುನಾಡು ಡಿಶ್

ತಮಿಳುನಾಡು ಡಿಶ್

ತಮಿಳುನಾಡಿನ ರುಚಿಯನ್ನು ಸವಿಯಬೇಕೆಂದರೆ ಉಲ್‌ಸೂರ್‌ನಲ್ಲಿರುವ ನಾಚೆಯ್ಯಾರ್ ರೆಸ್ಟೋರೆಂಟ್‌ಗೆ ಹೋಗಿ. ಇಲ್ಲಿ ನಿಮಗೆ ಎಲ್ಲಾ ರೀತಿಯ ನಾನ್‌ವೆಜ್ ಆಹಾರವನ್ನು ಸವಿಯಬಹುದು. ಕೋರಮಂಗಲ ೪ನೇ ಹಂತದಲ್ಲಿರುವ ಅಂಜಪ್ಪಾರ್ ನಲ್ಲೂ ಉತ್ತಮ ತಮಿಳು ಫುಡ್ ಸಿಗುತ್ತದೆ. ಇಲ್ಲೂ ಟೇಸ್ಟ್ ಮಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X