Search
  • Follow NativePlanet
Share
» »600 ವರ್ಷಗಳಿಂದ ಪೂಜೆಗಳನ್ನು ಸ್ವೀಕಾರ ಮಾಡುತ್ತಿರುವ ಆದಿ ಭೀಕ್ಷು...

600 ವರ್ಷಗಳಿಂದ ಪೂಜೆಗಳನ್ನು ಸ್ವೀಕಾರ ಮಾಡುತ್ತಿರುವ ಆದಿ ಭೀಕ್ಷು...

ಪರಮೇಶ್ವರನು ಭಕ್ತರಲ್ಲಿ ಆರಾಧನೆಗೆ ಒಳಪಡುವ ದೇವರಲ್ಲಿ ಪ್ರಪಥಮನು. ಸಾಧಾರಣ ಮಾನವರು ಕೂಡ ಹಾಲಿನ ಅಭೀಷಕಗಳು, ರಕ್ತ ತಿಲಕದಿಂದ ಪೂಜಿಸುವ ಮೂರ್ತಿ ಅವನು. ಪ್ರಸ್ತುತದ ಆಧುನಿಕ ಸಮಾಜದಲ್ಲಿಯೂ ವಿಗ್ರಹ ಆರಾಧನೆಯನ್ನು ಮಾಡುತ್ತಿರುವುದನ್ನು ಗಮನಿಸಿದರೂ ಕೂಡ ಆ ಮಹದೇವನಿಗೆ ಮಾತ್ರ ಸುಮಾರು 600 ವರ್ಷಗಳಿಂದ ವಿಗ್ರಹಾರಧನೆ ಇಲ್ಲದೇ ಪೂಜಿಸುತ್ತಿರುವ ಒಂದು ದಿವ್ಯವಾದ ಕ್ಷೇತ್ರವಿದೆ. ಆ ಮಹಿಮಾನ್ವಿತವಾದ ದೇವಾಲಯದಲ್ಲಿ ಮಹದೇವನು ಆದಿ ಭೀಕ್ಷುವಿನ ರೂಪದಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ.

ಸುಮಾರು 600 ವರ್ಷಗಳಷ್ಟು ಹಳೆಯದು ಎಂದರೆ ಅತ್ಯಂತ ಪುರಾತನವಾದ ದೇವಾಲಯವೆ ಅಲ್ಲವೇ? ಅಷ್ಟು ವರ್ಷಗಳಿಂದ ಆರಾಧನೆಗೆ ಒಳಪ್ಪಟ್ಟ ದೇವಾಲಯಕ್ಕೆ ಒಂದು ರೋಚಕವಾದ ಮಹತ್ವವಿರಬಹುದು ಅಲ್ಲವೇ? ಹಾಗಾದರೆ ಆ ಎಲ್ಲಾ ಸಂಪೂರ್ಣ ವಿವರವನ್ನು ಲೇಖನದ ಮೂಲಕ ಸಂಕ್ಷೀಪ್ತವಾದ ತಿಳಿದುಕೊಂಡು ಒಮ್ಮೆ ಭೇಟಿ ನೀಡಿ ಬನ್ನಿ.

1.ಮಹಾಭಾರತ

1.ಮಹಾಭಾರತ

PC:YOUTUBE

ಈ ದೇವಾಲಯವು ಮಹಾಭಾರತ ಕಾಲದಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದ್ದ ಈ ಕ್ಷೇತ್ರಕ್ಕೆ "ದ್ರೋಣ ಕ್ಷೇತ್ರ" ವೆಂಬ ಹೆಸರಿನಿಂದ ಕರೆಯುತ್ತಾರೆ. ಇದಕ್ಕೆ ಒಂದು ಕಥನವು ಕೂಡ ಇದೆ. ಅದೆನೆಂದರೆ ದ್ರೋಣ ಚಾರ್ಯರು ತಪಸ್ಸು ಮಾಡುವ ಸಮಯದಲ್ಲಿ ತನ್ನ ಕುಮಾರ ಅಶ್ವಥಮಾನಿಗಾಗಿ ಅತ್ಯಂತ ಶ್ರದ್ಧೆ-ಭಕ್ತಿಯಿಂದ ಪೂಜೆಗಳನ್ನು ನಿರ್ವಹಿಸಿದನು. ತನ್ನ ಪತ್ನಿ ಕೃಪಿ ಸ್ತಾನ ಪಾನವನ್ನು ಮಾಡದೇ ಇದ್ದುದ್ದರಿಂದ ಅಶ್ವಥಾಮನಿಗೆ ಉತ್ತಮವಾದ ಆರೋಗ್ಯ ಹಾಗು ದೇಹವನ್ನು ನೀಡು ಎಂದು ದ್ರೋಣಚಾರ್ಯರು ಆ ಪರಮೇಶ್ವರನಲ್ಲಿ ಕುರಿತು ತಪಸ್ಸನ್ನು ಆಚರಿಸುತ್ತಾರೆ.

2.ಕ್ಷೀರ

2.ಕ್ಷೀರ

PC:YOUTUBE

ಪರಮೇಶ್ವರನು ಗುಹೆಯ ಒಳಭಾಗದಲ್ಲಿ ಸ್ವಲ್ಪ-ಸ್ವಲ್ಪವೇ ಕ್ಷೀರ ಬರುವುದು ಪ್ರಾರಂಭವಾಯಿತು. ಸಾಕ್ಷಾತ್ ಆ ಪರಮೇಶ್ವರನು ನೀಡಿದ ಹಾಲು ಕುಡಿದ ಆಶ್ವಥಾಮನು ಯುದ್ಧದಲ್ಲಿ ಅತ್ಯಂತ ಶೌರ್ಯದಿಂದ ಪಾಲ್ಗೊಂಡಿದ್ದನು ಕಂಡ ಪ್ರಜೆಗಳು ಆಶ್ಚರ್ಯ ಪಟ್ಟರಂತೆ. ಇನ್ನು ಅಂದಿನಿಂದ ಪ್ರಾರಂಭವಾದ ಶೈವಾರಾಧನೆ ಇಂದಿಗೂ ಕೂಡ ಸಾಗುತ್ತಲೇ ಇದೆ. ಇದೊಂದು ಆಧ್ಯಾತ್ಮಿಕವಾದ ತಾಣವಾದ್ದರಿಂದ ದೇಶದ ಮೂಲೆ-ಮೂಲೆಗಳಿಂದ ಭಕ್ತರ ದಂಡೇ ಇಲ್ಲಿಗೆ ಭೇಟಿ ನೀಡುತ್ತದೆ.

3.ಗುಹಾಲಯ

3.ಗುಹಾಲಯ

PC:YOUTUBE

ಇದೊಂದು ಗುಹಾಲಯವಾದ್ದರಿಂದ ಪ್ರಜೆಗಳು ಅನೇಕ ಕಥನಗಳಲ್ಲಿ ಯಾವುದು ನಿಜವಾದುದು ಎಂಬ ಗೊಂದಲವನ್ನು ಪರಿಹಾರ ಮಾಡಲು ಆರ್ಕಿಯಾಲಜಿ ಇಂಡಿಯಾ ಸರ್ವೆಯವರು ಪ್ರತ್ಯೇಕವಾದ ಶ್ರದ್ಧೆಯನ್ನು ವಹಿಸಿ ಉತ್ತರಖಂಡದವರು ಅನೇಕ ಆಶ್ಚರ್ಯಕರವಾದ ವಿಷಯಗಳನ್ನು ಬೆಳಕಿಗೆ ತಂದರು.

4.ಎರಡು ಶಿವಲಿಂಗಗಳು

4.ಎರಡು ಶಿವಲಿಂಗಗಳು

PC:YOUTUBE

ಈ ಗುಹಾದೇವಾಲಯದಲ್ಲಿ ಎರಡು ಶಿವಲಿಂಗಗಳಿಗೆ. ಆ ಶಿವಲಿಂಗಗಳು ಪ್ರಕೃತಿಸಿದ್ಧವಾಗಿ ಏರ್ಪಟ್ಟ ಶಿವಲಿಂಗಗಳೇ ಆಗಿವೆಯೇ ಹೊರತು ಮಾನವ ನಿರ್ಮಿತವಲ್ಲ ಎಂದು ಸರ್ವೆಯ ಮೂಖಾಂತರ ತಿಳಿದು ಬಂದಿತು. ಹಾಗಾಗಿಯೇ ಈ ತಾಣಕ್ಕೆ ತಂಡೋಪ ತಂಡವಾಗಿ ಭೇಟಿ ನೀಡಿ ಶಿವನಾಮ ಸ್ಮರಣೆಯಿಂದ ಆಧ್ಯಾತ್ಮಿಕವಾದ ಭಾವವನ್ನು ಉಂಟು ಮಾಡುತ್ತಾರೆ.

5.ಹನುಮಂತನ ವಿಗ್ರಹ

5.ಹನುಮಂತನ ವಿಗ್ರಹ

PC:YOUTUBE

ಇಲ್ಲಿನ ಪ್ರಧಾನವಾದ ಆಕರ್ಷಣೆಯಾಗಿ ಕಾಣಿಸುವ ಆಂಜನೇಯ ಸ್ವಾಮಿಯ ವಿಗ್ರಹವು ಉತ್ತಮ ಸೆಲ್ಪಿ ಸ್ಪಾಟ್ ಆಗಿ ಹೆಸರುವಾಸಿಯಾಗಿದೆ. ಹಾಗಾಗಿಯೇ ಯುವಕ-ಯುವತಿಯರ ಫೆವರೆಟ್ ಸ್ಥಳ ಇದಾಗಿದೆ. ಈ ತಪಕೇಶ್ವರ ಗುಹಾಲಯವು ಗೋವಿನ ಸ್ತನದ ಆಕಾರದಲ್ಲಿರುವುದರಿಂದ "ಮಾ ಕ್ಷೇತ್ರ" ಎಂಬ ಹೆಸರಿನಿಂದಲೂ ಕೂಡ ಕರೆಯುತ್ತಾರೆ.

6.ಪುರಾಣಗಳು ಪ್ರಕಾರ

6.ಪುರಾಣಗಳು ಪ್ರಕಾರ

PC:YOUTUBE

ಪುರಾಣಗಳ ಪ್ರಕಾರ ಅಶ್ವಥಾಮ ಜನನ, ಸ್ತನಪಾನ ವೃತ್ತಾಂತವೆಲ್ಲಾ ಈ ದೇವಾಲಯವು ಕಣ್ಣಿಗೆ ಕಟ್ಟಿ ಆಧ್ಯಾತ್ಮಿಕವಾದ ಭಾವನೆಯನ್ನು ಉಂಟು ಮಾಡುತ್ತದೆ. ರುದ್ರಾಕ್ಷರ ಮಹಾದೇವ, ದೂದೇಶ್ವರ ಮಹಾ ದೇವ ಎಂಬ ಹಲವಾರು ಹೆಸರುಗಳಿಂದ ಕರೆಸಿಕೊಂಡು ಪೂಜಿಸಲ್ಪಡುತ್ತಿರುವ ಈ ಸ್ವಾಮಿಯನ್ನು ದೇವತೆಗಳು ಕೂಡ ಆರಾಧಿಸಿದ್ದರು ಎಂಬ ವಿಶ್ವಾಸದಿಂದ ಅನೇಕ ಭಕ್ತರು ತಪ್ಪದೇ ಈ ಸ್ವಾಮಿಯ ದರ್ಶನಕ್ಕೆ ಭೇಟಿ ನೀಡುತ್ತಾರೆ.

7.ತಪಕೇಶ್ವರ ದೇವಾಲಯ

7.ತಪಕೇಶ್ವರ ದೇವಾಲಯ

PC:YOUTUBE

ಆ ದೇವಾಲಯವೇ ತಪಕೇಶ್ವರ ದೇವಾಲಯ. ಈ ದೇವಾಲಯಕ್ಕೆ ಈ ಹೆಸರು ಬರಲು ಕಾರಣವೇನೆಂದರೆ, ತಪಕ್ ಎಂದರೆ ಹಿಂದಿಯಲ್ಲಿ ತುಟ್ಟು-ತುಟ್ಟು. ಅಂದರೆ ಇಲ್ಲಿನ ಶಿವಲಿಂಗದ ಮೇಲೆ ಜಲವು ತುಟ್ಟು-ತುಟ್ಟಾಗಿ ಬೀಳುವ ಪ್ರಕ್ರಿಯೆ ನಡೆಯುವುದರಿಂದ ಈ ಕ್ಷೇತ್ರಕ್ಕೆ ತಪಕೇಶ್ವರ ದೇವಾಲಯ ಎಂಬ ಹೆಸರು ಬಂದಿತು. ಸುಮಾರು 600 ವರ್ಷಗಳಿಂದ ಪೂಜೆಗಳನ್ನು ಮಾಡಿಕೊಳ್ಳುತ್ತಿರುವ ಮಹೇಶ್ವರನು ಬೇಡಿದ ವರವನ್ನು ಕರಣಿಸುತ್ತಾನೆ ಎಂಬ ನಂಬಿಕೆ ಪ್ರವಾಸಿಗರದ್ದು.

8.ತಲುಪುವ ಬಗೆ ಹೇಗೆ?

8.ತಲುಪುವ ಬಗೆ ಹೇಗೆ?

ಈ ಮಹಿಮಾನ್ವಿತವಾದ ತಪಕೇಶ್ವರ ದೇವಾಲಯವು ಡೆಹ್ರಾಡೂನ್‍ನಿಂದ ಕೇವಲ 6.5 ಕಿ.ಮೀ ದೂರದಲ್ಲಿದೆ. ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಡೆಹ್ರಾಡೂನ್ ರೈಲ್ವೆ ನಿಲ್ದಾಣ ಇಲ್ಲಿಂದ ಕೇವಲ 7 ಕಿ.ಮೀ ದೂರದಲ್ಲಿ ತಪಕೇಶ್ವರ ದೇವಾಲಯವಿದೆ. ಇನ್ನು ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಜಾಲಿ ಗ್ರಾಂಟ್ ಏರ್ರ್‍ಪೋರ್ಟ್ ಸುಮಾರು 32 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more