Search
  • Follow NativePlanet
Share
» »250 ವರ್ಷ ಹಳೆಯ ಈ ಬಾವಿಯ ನೀರು ಕುಡಿದ್ರೆ ಜಗಳವಾಗುತ್ತಂತೆ !

250 ವರ್ಷ ಹಳೆಯ ಈ ಬಾವಿಯ ನೀರು ಕುಡಿದ್ರೆ ಜಗಳವಾಗುತ್ತಂತೆ !

ಯಾವುದಾದರೂ ಬಾವಿಯ ನೀರು ಕುಡಿದ್ರೆ ಜಗಳ ಆಗುತ್ತೆ ಅನ್ನೋದನ್ನು ಕೇಳಿದ್ದೀರಾ? ಇಲ್ಲಾ ಆಂದ್ರೆ ಅದಕ್ಕೊಂದು ಉದಾಹರಣೆ ಇಲ್ಲಿದೆ. ಈ ಬಾವಿಯ ನೀರು ಕುಡಿಯುವುದರಿಂದ ಸ್ವಂತ ಅಣ್ಣ ತಮ್ಮಂದಿರು ಕೂಡಾ ಜಗಳಕ್ಕಿಳಿಯುತ್ತಾರಂತೆ. ರಾಜಪರಿವಾರ ಹಾಗೂ ಇತರ ಜನರ ನಡುವೆ ಈ ಸಮಸ್ಯೆ ಹೆಚ್ಚಿದಾಗ ರಾಜರು ಆ ಬಾವಿಯನ್ನು ಮುಚ್ಚಲು ಆದೇಶಿಸಲಾಯಿತಂತೆ.

ಎಲ್ಲಿದೆ ಈ ಬಾವಿ

ಎಲ್ಲಿದೆ ಈ ಬಾವಿ

ಈ ಬಾವಿಯು ಮಧ್ಯಪ್ರದೇಶದ ಗಿರಿಧರಪುರ ಜಿಲ್ಲೆಯ ಹಿರಾಪುರ್ ಪಟ್ಟಣದಲ್ಲಿದೆ. ಈಗ ಇದು ಅವಶೇಷಗಳ ರೂಪದಲ್ಲಿ ಕಂಡುಬರುತ್ತದೆ. 250 ವರ್ಷಗಳ ಹಿಂದೆಯೇ ರಾಜಾ ಗಿರಿಧರ್ ಸಿಂಗ್ ಗೌರ್ ತನ್ನ ಶಾಸನಕಾಲದಲ್ಲಿ ಎಂಟು ಬಾವಿಗಳನ್ನು ನಿರ್ಮಿಸಿದ್ದನು. ಅದರಲ್ಲಿ ಒಂದನ್ನು ತಾಂತ್ರಿಕ ಬಾವಿ ಎಂದು ಕರೆಯಲಾಗುತ್ತದೆ.

ಇಲ್ಲಿನ ಕೊಠಡಿಯಲ್ಲಿದೆ ಚೋಳರು ಬಚ್ಚಿಟ್ಟಿರುವ ನಿಗೂಢ ಖಜಾನೆ

ನೀರು ಕುಡಿದ್ರೆ ಜಗಳವಾಗುತ್ತೆ

ನೀರು ಕುಡಿದ್ರೆ ಜಗಳವಾಗುತ್ತೆ

ಈ ಬಾವಿಯ ಕುರಿತಾಗಿ ಸ್ಥಳೀಯರಲ್ಲಿ ಒಂದು ಕಥೆ ಇದೆ. ಅದೇನೆಂದರೆ ಈ ಬಾವಿಯ ನೀರು ಕುಡಿದರೆ ಸ್ವಂತ ಅಣ್ಣ ತಮ್ಮಂದಿರ ನಡುವೆ ಜಗಳವಾಗುತ್ತದೆ. ಒಬ್ಬ ತಾಂತ್ರಿಕ ಈ ಬಾವಿಗೆ ಜಾದು ಮಾಡಿದ್ದಾನೆ. ಆ ನಂತರ ಇಂತಹ ಘಟನೆಗಳು ಸಂಭವಿಸಲಾರಂಭಿಸಿದವು ಎನ್ನಲಾಗುತ್ತದೆ.

 100 ಚದರ ಅಡಿ ಬಾವಿ

100 ಚದರ ಅಡಿ ಬಾವಿ

PC- Nicolas Rénac

ಈ ಬಾವಿಯು ಸುಮಾರು 100 ಚದರ ಅಡಿ ಮತ್ತು 10 ಅಡಿ ಆಳವಿದೆ. ಇದು ಸೊರಥಿ ಬಾಗ್‌ನಲ್ಲಿ ಶಿವಾಜಿ ಸ್ಥಳದಲ್ಲಿದೆ. ಅಲ್ಲಿ ಮೊದಲು ಮಾವಿನ ಮರಗಳಿದ್ದವು ರಾಜನು ಈ ತೋಟಳಿಗೆ ಭೇಟಿ ನೀಡುತ್ತಿದ್ದನು. ಇಂದು, ನಾಲ್ಕು ಅಥವಾ ಐದು ಬಾವಿಗಳು ಉಳಿದಿವೆ. ಅವುಗಳಲ್ಲಿ ಒಂದು ಬಾವಿಯಲ್ಲಿ ಇಂದಿಗೂ ನೀರಿದೆ.

ಬೆಂಗಳೂರು ಸಮೀಪದ ಗುಡಿಬಂಡೆಗೆ ಹೋಗಿದ್ದೀರಾ?

ತಾಂತ್ರಿಕರಿಗೆ ಪ್ರಸಿದ್ದವಾದ ಈ ನಗರ

ತಾಂತ್ರಿಕರಿಗೆ ಪ್ರಸಿದ್ದವಾದ ಈ ನಗರ

ಈ ನಗರವನ್ನು ರಾಜ ಗಿರಿಧರ್ ಸಿಂಗ್ ಗೌಡ್ ಅವರು ನಿರ್ಮಿಸಿದರರು. ಈ ನಗರವು ಜಾದೂಗಾರರು ಮತ್ತು ತಂತ್ರಜ್ಞರಿಗೆ ಹೆಸರುವಾಸಿಯಾಗಿದೆ. ತಂತ್ರಜ್ಞರ ಬಗ್ಗೆ ಜನರಲ್ಲಿ ಒಂದು ದಂತಕಥೆಯು ಕೂಡ ಜನಪ್ರಿಯವಾಗಿದೆ. ಒಮ್ಮೆ ಇಬ್ಬರು ಜಾದೂಗಾರರ ನಡುವೆ ಕಠಿಣ ಹೋರಾಟ ನಡೆಯುತ್ತಿದೆ ಎಂದು ಹೇಳಲಾಗಿದೆ.

ಮಂತ್ರವಾದಿಗಳ ಜಗಳ

ಮಂತ್ರವಾದಿಗಳ ಜಗಳ

ಇಬ್ಬರು ಮಂತ್ರವಾದಿಗಳ ನಡುವೆ ದೊಡ್ಡ ಜಗಳವಾಗುತ್ತದೆ. ಓರ್ವ ತನ್ನ ಮಂತ್ರಶಕ್ತಿಯಿಂದ ಮರವನ್ನು ಕಡಿದರೆ ಇನ್ನೊಬ್ಬ ಅದನ್ನು ಜೋಡಿಸಿದ. ಆದರೆ ಮರದೊಂದಿಗೆ ಸಂಪರ್ಕವಿರುವ ಒಂದು ತುದಿ ಸ್ವಲ್ಪ ವ್ಯತ್ಯಾಸದೊಂದಿಗೆ ಸಂಪರ್ಕ ಹೊಂದಿದೆ. ಈ ಮರದ ದೀರ್ಘಕಾಲ ಅಸ್ತಿತ್ವದಲ್ಲಿದೆ.

ಊರಿನ ಹೆಸರು

ಊರಿನ ಹೆಸರು

ಈ ಊರಿನ ನಿಜವಾದ ಹೆಸರು ಹಿರಾಪುರ್ ಆದರೆ ಜನರು ಇದನ್ನು ಗಿರಿಧರ್‌ಪುರ ಎನ್ನುತ್ತಾರೆ. ಈಗ ಇಲ್ಲಿ ನೈರೋಗೇಜ್ ರೈಲು ನಿಲ್ದಾಣವಿದೆ. ಅದನ್ನು ಗಿರಿಧರ್‌ಪುರ ಎಂದು ಹೆಸರಿಡಲಾಗಿದೆ. ರಾಜ ಗಿರಿಧರ ಸಿಂಗ್‌ನ ಹೆಸರಿನಿಂದ ಜನರು ಈ ಊರಿನ ಒಂದು ಭಾಗವನ್ನು ಗಿರಿಧರ್‌ಪುರ ಎಂದು ಕರೆದರೆ ಹಳೆಯ ಭಾಗವನ್ನು ಹಿರಾಪುರ್ ಎಂದು ಕರೆಯುತ್ತಾರೆ.

ಇಲ್ಲಿ ವಿವಾಹಿತ ಮಹಿಳೆಯರು ಐದು ದಿನಗಳ ಕಾಲ ಬೆತ್ತಲಾಗಿರಬೇಕು ಯಾಕೆ?

ಶಿವ ಮಂದಿರ

ಶಿವ ಮಂದಿರ

ಈ ಮಹಲ್‌ ಈಗ ಶಿಥೀಲಾವಸ್ಥೆಗೆ ತಲುಪಿದೆ. ಮಹಲ್‌ನ ಹೊರಗಡೆ ಒಂದು ಶಿವನ ಮಂದಿರವಿದೆ. ಆದರೆ ಈಗ ಅಲ್ಲಿ ದೇವಿಯ ವಿಗ್ರಹವನ್ನು ಇಡಲಾಗಿದೆ. ಗಡಿಯ ಒಳಗಡೆ ಒಂದು ಸಣ್ಣ ಶಿವಮಂದಿರವಿದೆ ಅಲ್ಲಿ ಶಿವಲಿಂಗ ಹಾಗೂ ಬೈರವನ ಪ್ರತಿಮೆ ಇದೆ. ಜನರು ಇದನ್ನು ಉಳಿಸುವ ಬದಲು ನಷ್ಟ ಮಾಡುತ್ತಿರುವುದು ನಿಜಕ್ಕೂ ದುಃಖಕರವಾಗಿದೆ.

ವಿ.ಸೂ: ಈ ಲೇಖನದಲ್ಲಿ ಬಳಸಲಾಗಿರುವ ಚಿತ್ರಗಳೆಲ್ಲವೂ ಕಾಲ್ಪನಿಕ ಚಿತ್ರಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more