• Follow NativePlanet
Share
Menu
» »ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

Written By:

ತಮಿಳುನಾಡು ರಾಜ್ಯದಲ್ಲಿನ ತಂಜಾವೂರು ಜಿಲ್ಲೆಯಲ್ಲಿ ಇರುವ ವೈದೀಶ್ವರನ್ ದೇವಾಲಯವು ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಈ ಗ್ರಾಮಕ್ಕೆ ಚೋಳರ ಕಾಲದಿಂದಲೂ ವೈದೀಶ್ವರನ್ ದೇವಾಲಯವು ಹೆಸರುವಾಸಿಯಾದ ದೇವಾಲಯವಾಗಿತ್ತು. ಈ ದೇವಾಲಯದಲ್ಲಿ ಒಂದು ಪ್ರತ್ಯೇಕತೆ ಕೂಡ ಇದೆ. ಅದೆನೆಂದರೆ ಇಲ್ಲಿ ನಾಡಿ ಜ್ಯೋತಿಷ್ಯ ಎಂಬುದು ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. ಕೇವಲ ನಾಡಿಯಿಂದ ಜಾತಕವನ್ನು, ಭವಿಷ್ಯವನ್ನು ನುಡಿಯುತ್ತಾರೆ. ಹಾಗಾಗಿಯೇ ಈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಭೇಟಿ ನೀಡಿ ತಮ್ಮ ನಾಡಿ ಭವಿಷ್ಯವನ್ನು ತಿಳಿದುಕೊತ್ತಾರೆ. ಆ ದೇವಾಲಯದ ವಿಶಿಷ್ಟತೆಯ ಬಗ್ಗೆ ನಾವು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

ತಂಜಾವೂರನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಳ್ಳುವುದರ ಮೂಲಕ ಚೋಳ ರಾಜರ ಪರಿಪಾಲನೆಯ ಕಾಲದಲ್ಲಿ ಪ್ರಮುಖ್ಯತೆ ಹೆಚ್ಚಾಯಿತು. ತಂಜಾವೂರು, 18 ನೇ ಶತಮಾನದ ಕೊನೆಯಲ್ಲಿ ದೇಶದಲ್ಲಿಯೇ ಸಾಂಸ್ಕøತಿಕ ಕೇಂದ್ರ ಬಿಂದುವಾಗಿ ಹೊರಹೊಮ್ಮಿತು. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ತಂಜಾವೂರಿಗೆ ಭೇಟಿ ನೀಡುತ್ತಿರುತ್ತಾರೆ. ಒಂದು ಆಧಾರದ ಪ್ರಕಾರ 2009 ರಲ್ಲಿ 2,22,225 ಮಂದಿ ಭಾರತದ ಪ್ರವಾಸಿಗರು ಮತ್ತು 81,435 ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದೆ.

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ತಂಜಾವೂರು ಪಟ್ಟಣದಲ್ಲಿ ಅತ್ಯಧಿಕವಾಗಿ ಭೇಟಿ ನೀಡುವ ತಾಣವೆಂದರೆ ಅದು ಬೃಹದೀಶ್ವರ ದೇವಾಲಯ. ಈ ದೇವಾಲಯವನ್ನು ರಾಜ ರಾಜ ಚೋಳ ಮತ್ತು ಮಧ್ಯಯುಗದ ಚೋಳ ರಾಜನು 11 ನೇ ಶತಮಾನದಲ್ಲಿ ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತದೆ. ಈ ಅದ್ಭುತವಾದ ದೇವಾಲಯವನ್ನು 1987ರ ವರ್ಷದಲ್ಲಿ ಯುನೆಸ್ಕು ವಿಶ್ವ ಪಾರಂಪರಿಕ ಪ್ರದೇಶವಾಗಿ ಪ್ರಕಟಿಸಿದರು. ಹಿಂದೂ ಧರ್ಮದ ದೇವತಾ ಮೂರ್ತಿಯಾದ ಶಿವನನ್ನು ಬೃಹದೀಶ್ವರಾಯಲದಲ್ಲಿ ಪೂಜಿಸುತ್ತಾರೆ.

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ತಂಜಾವೂರಿನ ಮತ್ತೊಂದು ಪ್ರಸಿದ್ಧವಾದ ಪ್ರದೇಶವೆಂದರೆ ಅದು ಮರಾಠ ಪ್ಯಾಲೆಸ್. ಈ ಮರಾಠ ಪ್ಯಾಲೆಸ್ ಅನ್ನು ಭೌಂಸ್ಲೆ ಕುಟುಂಬವು ತಂಜಾವೂರು ನಾಯಕ್ ಕಿಂಗ್ಡಮ್ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ಪ್ಯಾಲೆಸ್ 1674 ರಿಂದ 1855 ರವರೆಗೆ ಆ ಪ್ರದೇಶವನ್ನು ಆಳ್ವಿಕೆ ಮಾಡಿದ್ದ ಅರಮನೆಯಾಗಿತ್ತು.

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ಸರಸ್ವತಿ ಮಹೆಲ್ ಲೈಬ್ರರಿ ಪ್ಯಾಲೆಸ್‍ನ ಪ್ರಾಂಗಣವಿದೆ. ಈ ಲೈಬ್ರರಿಯಲ್ಲಿ ಕೆಲವು ಗ್ರಂಥಗಳು ಹಾಗು ತಾಳೆಪತ್ರಗಳಿವೆ. ಅವುಗಳ ಮೇಲೆ ಬರೆದ 30.000 ಕ್ಕಿಂತ ಹೆಚ್ಚು ಭಾರತೀಯ ಮತ್ತು ಯೊರೋಪಿಯನ್ ತಾಳೆ ಪತ್ರಗಳ ಶೇಖರಣೆಗಳಿವೆ. ಹಾಗೆಯೇ ರಾಜಭವನದ ಒಳಗೆ ರಾಜ ರಾಜ ಚೋಳನ ಗ್ಯಾಲರಿ ಕೂಡ ಇದೆ. ಆ ಗ್ಯಾಲರಿಯ ಒಳಗೆ 12 ರಿಂದ 12 ನೇ ಶತಮಾನದ ಚಿತ್ರಗಳ ಭಾರಿ ಶೇಖರಣೆಗಳಿವೆ.

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ಹಿಂದೂ ಧರ್ಮದ ಪುರಾಣಗಳ ಪ್ರಕಾರ ತಂಜನ್ ಎಂಬ ರಾಕ್ಷಸನು ಈ ಪ್ರದೇಶದಲ್ಲಿಯೇ ಶಿವನ ಕೈಯಲ್ಲಿ ಮರಣ ಹೊಂದಿದನು ಎಂದು ಹೇಳುತ್ತದೆ. ಆ ರಾಕ್ಷಸನ ಕೊನೆಯ ಆಸೆಯ ಮೇರೆಗೆ ಈ ಪಟ್ಟಣಕ್ಕೆ ಈ ಹೆಸರು ಬಂದಿತು ಎಂದು ಸ್ಥಳ ಪುರಾಣ ತಿಳಿಸುತ್ತದೆ. ತಂಜಾವೂರಿಗೆ ಆ ಹೆಸರು ಬರಲು ಮತ್ತೊಂದು ಕಾರಣ ಕೂಡ ಇದೆ. "ತನ್-ಜಾ-ಉರ್" ಎಂದರೆ ನದಿಗಳು ಮತ್ತು ಹಚ್ಚ ಹಸಿರಿನ ಫಲವತ್ತಾದ ಭೂಮಿ ಎಂಬ ಅರ್ಥ ಕೂಡ ಬರುತ್ತದೆ.

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ತಂಜಾವೂರ್ ಅನ್ನು "ತಮಿಳುನಾಡು ರೈಸ್ ಬೌಲ್" ಎಂದು ಕರೆಯುತ್ತಾರೆ. ತಂಜಾವೂರು ಮೆಕ್ಕೆ ಜೋಳ, ಕೊಬ್ಬರಿ ಇನ್ನು ಹಲವಾರು ಬೆಳೆಗಳನ್ನು ಇಲ್ಲಿ ಬೆಳೆಯುತ್ತಾರೆ. ನಗರದಲ್ಲಿ ಇನ್ನು ಪ್ರಧಾನವಾದ ಆಕರ್ಷಣೆಗಳೆಂದರೆ ಸಂಗೀತ ಮಹಲ್, ಮನೋರಾ ಪೋರ್ಟ್, ಆರ್ಟ್ ಗ್ಯಾಲರಿ, ಶಿವ ಗಂಗಾ ದೇವಾಲಯ, ಸರಸ್ವತಿ ಮಹಲ್ ಲೈಬ್ರರಿ, ವಿಜಯನಗರ ಕೋಟೆ ಇನ್ನು ಹಲವಾರು

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ಚಿದಂಬರಂನಿಂದ ಸ್ವಲ್ಪ ದೂರದಲ್ಲಿಯೇ ಈ ದೇವಾಲಯವಿದೆ. ಅಲ್ಲಿ ಶಿವನನ್ನು ವೈದೀಶ್ವರನ್ ಎಂದು ಕರೆಯುತ್ತಾರೆ. ಸ್ವಾಮಿಯ ದರ್ಶನ ಮಾಡುವುದರಿಂದ ಸರ್ವರೋಗ ನಿವಾರಣೆಯಾಗುತ್ತದೆ ಎಂದು ನಂಬುತ್ತಾರೆ. ಶಿವನನ್ನು ವೈದ್ಯನ ರೂಪದಲ್ಲಿ ನೆಲೆಸಿರುವುದರಿಂದಲೇ ಸ್ವಾಮಿಯನ್ನು ವೈದೀಶ್ವರನ್ ಎಂದು ಕರೆಯುತ್ತಾರೆ. ಈ ದೇವಾಲಯವು ಅತ್ಯಂತ ಪುರಾತನವಾದುದು. ಅಂದರೆ 1600 ವರ್ಷಗಳ ಹಿಂದಿನದು ಎಂದು ಗುರುತಿಸಲಾಗಿದೆ.

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ಈ ಗ್ರಾಮದಲ್ಲಿ ಸುಮಾರು 1200 ಪಂಡಿತರು ಅನುವಂಶಿಕವಾಗಿ ಸಂಗ್ರಹಿಸಿದ ತಾಳಪತ್ರೆ ಆಧಾರವಾಗಿ ನಾಡಿಜ್ಯೋತಿಷ್ಯ ಹೇಳುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಈ ನಾಡಿಜ್ಯೋತಿಷ್ಯ ತಾಳೆಪತ್ರ ಗ್ರಂಥಗಳು ಈ ದೇವಾಲಯದಲ್ಲಿ ಇವೆ. ಈ ದೇವಾಲಯ ಸುತ್ತಲೂ ಈ ನಾಡಿ ಜಾತಕ ಹೇಳುವವರು ಹೆಚ್ಚಾಗಿಯೇ ಇರುತ್ತಾರೆ. ಇವರು ನಾಡಿ ಜಾತಕವನ್ನು ಹೇಳುವುದರಲ್ಲಿ ಅತ್ಯಂತ ಪರಿಣಿತರಾಗಿದ್ದು, ಅನೇಕ ಮಂದಿ ಜನರು ತಮ್ಮ ತಮ್ಮ ಭವಿಷ್ಯವನ್ನು ಹಾಗು ಜಾತಕವನ್ನು ತಿಳಿದುಕೊಳ್ಳಲು ಭೇಟಿ ನೀಡುತ್ತಾರೆ.

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ಉತ್ತಮ ಸಮಯ
ತಂಜಾವೂರು ಭೇಟಿ ನೀಡಲು ಪ್ರಶ್ಯಸ್ತವಾದ ಸಮಯವೆಂದರೆ ಅದು ಅಕ್ಟೋಬರ್ ನಿಂದ ಮಾರ್ಚ್ ತಿಂಗಳ ಮಧ್ಯೆ ತೆರಳಬೇಕು. ಈ ಸಮಯದಲ್ಲಿ ವಾತಾವರಣವು ಹೆಚ್ಚು ಅನುಕೂಲವಾಗಿರುತ್ತದೆ. ಹೀಗಾಗಿಯೇ ಈ ಸಮಯದಲ್ಲಿ ತೆರಳುವುದು ಅತ್ಯುತ್ತಮ ಎಂದು ಹೇಳಲಾಗುತ್ತದೆ.

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....

ತಂಜಾವೂರಿಗೆ ಹೇಗೆ ಸಾಗಬೇಕು?
ತಂಜಾವೂರಿಗೆ ಬಸ್ಸುಗಳು, ರೈಲುಗಳು, ವಿಮಾನ ಮಾರ್ಗಗಳ ಮೂಲಕ ಸುಲಭವಾಗಿ ತೆರಳಬಹುದು. ತಂಜಾವೂರಿನಿಂದ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಲಭ್ಯವಿವೆ. ತಮಿಳುನಾಡು ರಸ್ತೆ ಸಾರಿಗೆ ಸಂಸ್ಥೆ ಇದಕ್ಕೆಲ್ಲಾ ವ್ಯವಸ್ಥೆ ಮಾಡಿದೆ. ತ್ರಿಚಿ ಜಂಕ್ಷನ್ ಸಮೀಪದ ರೈಲ್ವೆ ನಿಲ್ದಾಣವಾಗಿದ್ದು, ತಂಜಾವೂರಿಗೆ ಸುಮಾರು 58 ಕಿ.ಮೀ ದೂರದಲ್ಲಿದೆ. ತಂಜಾವೂರು ಸಮೀಪದಲ್ಲಿ ಅಂತರ್‍ಜಾತಿ ವಿಮಾನ ನಿಲ್ದಾಣವು 61 ಕಿ.ಮೀ ದೂರದಲ್ಲಿರುವ ತ್ರಿಚಿ ಸಮೀಪದಲ್ಲಿದೆ. ಬೆಂಗಳೂರಿನಿಂದ ಸುಮಾರು 433 ಕಿ.ಮೀ ದೂರದಲ್ಲಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ