Search
  • Follow NativePlanet
Share
» »ಭಾರತದಲ್ಲಿರುವ ಎತ್ತರದ ಮೂರ್ತಿಗಳು

ಭಾರತದಲ್ಲಿರುವ ಎತ್ತರದ ಮೂರ್ತಿಗಳು

By Vijay

ಜಗತ್ತಿನ ಹಲವು ದೇಶಗಳಲ್ಲಿ ಎತ್ತರದ ಮೂರ್ತಿಗಳಿರುವುದು ನಮಗೆ ತಿಳಿದ ವಿಚಾರ. ಹಿಂದಿನಿಂದಲೂ ಮಾನವ ಕುಲವು ತಮಗೆ ಆದರ್ಶಮಯವಾದ ವ್ಯಕ್ತಿಗಳದ್ದೊ ಅಥವಾ ತಾವು ಪೂಜಿಸುವ ಇಷ್ಟ ದೇವರದ್ದೊ ಮೂರ್ತಿಗಳನ್ನು ನಿರ್ಮಿಸಿ ತನ್ನ ಗೌರವ ಸೂಚಿಸಿರುವುದನ್ನು ನಾವು ಇತಿಹಾಸದಿಂದ ಕಂಡುಕೊಳ್ಳಬಹುದು. ವಾಸ್ತವ ಏನೇ ಇದ್ದರೂ, ಮೂರ್ತಿಗಳು ಎಷ್ಟು ಎತ್ತರವಿರುತ್ತದೊ ಅಷ್ಟು ಆಳವಾದ ನಂಬಿಕೆ ಗೌರವಗಳು ಅದರ ಹಿಂದಿರುತ್ತದೆ ಎಂಬ ಅಂಶವನ್ನು ನಾವು ಕೇವಲ ಅವಲೋಕಿಸಬಹುದಷ್ಟೆ.

ಅದೇನೆ ಇರಲಿ... ಎತ್ತರದ ವಿಗ್ರಹಗಳನ್ನು ನೋಡಿದಾಗ ಆಗುವ ಆನಂದವು ಅಷ್ಟಿಷ್ಟಲ್ಲ. ಅಷ್ಟೊಂದು ಎತ್ತರವಾಗಿ ಹೇಗೆ ನಿರ್ಮಿಸಿದ್ದಾರೆ ಎಂದು ನೆನೆಸಿಕೊಳ್ಳುತ್ತಲೆ ಮೈ ಝುಮ್ಮೆನ್ನುತ್ತದೆ. ಹಾಗಾದರೆ ಬನ್ನಿ, ಈ ಲೇಖನದ ಮೂಲಕ ಭಾರತದಲ್ಲಿ ಕಂಡುಬರುವ ಕೆಲವು ಎತ್ತರದ ಮೂರ್ತಿಗಳ ಪರಿಚಯ ಮಾಡಿಕೊಳ್ಳೊಣ.

ವೀರ ಅಭಯ ಆಂಜನೇಯ ಹನುಮಾನ ಸ್ವಾಮಿ

ವೀರ ಅಭಯ ಆಂಜನೇಯ ಹನುಮಾನ ಸ್ವಾಮಿ

135 ಅಡಿಗಳಷ್ಟು ಎತ್ತರವಿರುವ ಈ ಆಂಜನೇಯನ ಮೂರ್ತಿಯು ಇರುವುದು ಆಂಧ್ರಪ್ರದೇಶದ ವಿಜಯವಾಡಾ ನಗರದಿಂದ 30 ಕಿ.ಮೀ ದೂರವಿರುವ ಪರಿತಲಾ ಎಂಬ ಹಳ್ಳಿಯಲ್ಲಿ. 2003 ರಲ್ಲಿ ಪ್ರತಿಷ್ಠಾಪಿಸಲಾದ ಈ ಮೂರ್ತಿಯು ಭಾರತದ ಅತಿ ಎತ್ತರದ ಮೂರ್ತಿ.

ತಿರುವಳ್ಳುವರ್ ಪ್ರತಿಮೆ:

ತಿರುವಳ್ಳುವರ್ ಪ್ರತಿಮೆ:

133 ಅಡಿಗಳಷ್ಟು ಎತ್ತರವಿರುವ ತಮಿಳಿನ ಅತಿ ಪುರಾತನ ಕವಿ ತಿರುವಳ್ಳುವರ್ ನ ಈ ಪ್ರತಿಮೆಯು ಭಾರತದ ಎರಡನೆಯ ಅತಿ ಎತ್ತರದ ಮೂರ್ತಿ. ಜನವರಿ ಒಂದು 2000 ರಲ್ಲಿ ಉದ್ಘಾಟನೆಗೊಂಡ ಈ ಪ್ರತಿಮೆಯು ನೆಲೆನಿಂತಿರುವುದು ಕನ್ಯಾಕುಮಾರಿ ಬಳಿಯಿರುವ ದ್ವೀಪವೊಂದರಲ್ಲಿ.

ಚಿತ್ರಕೃಪೆ: Docku

ಪದ್ಮಸಂಭವ ಪ್ರತಿಮೆ:

ಪದ್ಮಸಂಭವ ಪ್ರತಿಮೆ:

ಎರಡನೆಯ ಬುದ್ಧನೆಂದು ಪರಿಗಣಿಸಲಾಗುವ ಪದ್ಮಸಂಭವನ ಈ ಮೂರ್ತಿಯು 123 ಅಡಿಗಳಷ್ಟು ಎತ್ತರವಾಗಿದೆ. ಈ ಮೂರ್ತಿಯು ಇರುವುದು ಹಿಮಾಚಲ ಪ್ರದೇಶದ ರೆವಲ್ಸರ್ ಎಂಬಲ್ಲಿ.

ಚಿತ್ರಕೃಪೆ: John Hill

ಮುರುಡೇಶ್ವರ ಶಿವನ ಪ್ರತಿಮೆ:

ಮುರುಡೇಶ್ವರ ಶಿವನ ಪ್ರತಿಮೆ:

ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಜನಪ್ರಿಯ ಧಾರ್ಮಿಕ ಕ್ಷೇತ್ರ ಮುರುಡೇಶ್ವರದಲ್ಲಿ ಈ ಬೃಹತ್ತಾದ ಕುಳಿತಿರುವ ಶಿವನ ಪ್ರತಿಮೆಯಿದೆ. 122 ಅಡಿಗಳಷ್ಟು ಎತ್ತರವಾಗಿರುವ ಈ ವಿಗ್ರಹವು ತನ್ನ ಹಿನ್ನಿಲೆಯಲ್ಲಿ ಅರಬ್ಬಿ ಸಮುದ್ರದ ಭವ್ಯವಾದ ನೋಟವನ್ನು ಒದಗಿಸುತ್ತದೆ.

ಚಿತ್ರಕೃಪೆ: Lucky vivs

ನಾಮ್ಚಿಯ ಪದ್ಮಸಂಭವ ಪ್ರತಿಮೆ:

ನಾಮ್ಚಿಯ ಪದ್ಮಸಂಭವ ಪ್ರತಿಮೆ:

ರಿನ್ಪೊಚೆ ಅಥವಾ ಎರಡನೆಯ ಬುದ್ಧನೆಂದು ಪರಿಗಣಿಸಲಾಗುವ ಪದ್ಮಸಂಭವನ ಈ ಮೂರ್ತಿಯು 118 ಅಡಿಗಳಷ್ಟು ಎತ್ತರವಿದ್ದು ಸಿಕ್ಕಿಂ ರಾಜ್ಯದ ನಾಮ್ಚಿ ಎಂಬಲ್ಲಿ ಪ್ರತಿಷ್ಠಾಪನೆಗೊಂಡಿದೆ.

ಚಿತ್ರಕೃಪೆ: dhillan chandramowli

ಬಸವ ಪ್ರತಿಮೆ:

ಬಸವ ಪ್ರತಿಮೆ:

ಕರ್ನಾಟಕದ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿರುವ 108 ಅಡಿಗಳ ಈ ಬಸವ ಪ್ರತಿಮೆಯು ಜಗತ್ತಿನಲ್ಲೆ ಅತಿ ದೊಡ್ಡದಾದ ಬಸವ ಪ್ರತಿಮೆಯಾಗಿದೆ.

ಚಿತ್ರಕೃಪೆ: Irrigator

ಮಿಂಡ್ರೊಲಿಂಗ್ ಬೌದ್ಧ ಮಠದ ಬುದ್ಧ ಪ್ರತಿಮೆ:

ಮಿಂಡ್ರೊಲಿಂಗ್ ಬೌದ್ಧ ಮಠದ ಬುದ್ಧ ಪ್ರತಿಮೆ:

ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ನಲ್ಲಿರುವ ಈ ಗೌತಮ ಬುದ್ಧನ ಪ್ರತಿಮೆಯು 107 ಅಡಿಗಳಷ್ಟು ಎತ್ತರವಾಗಿದೆ.

ಚಿತ್ರಕೃಪೆ: Teemu Kiiski

ಜೈ ಹನುಮಾನ್ ಪ್ರತಿಮೆ:

ಜೈ ಹನುಮಾನ್ ಪ್ರತಿಮೆ:

ಮಹಾರಾಷ್ಟ್ರ ರಾಜ್ಯದ ಬುಲ್ಡಾನಾ ಜಿಲ್ಲೆಯ ನಂದುರಾ ಪಟ್ಟಣದಲ್ಲಿ ಈ ಪ್ರತಿಮೆಯನ್ನು ಕಾಣಬಹುದು. ಮನಸೂರೆಗೊಳ್ಳುವಂತಹ ಈ ಪ್ರತಿಮೆಯು 105 ಅಡಿಗಳಷ್ಟು ಎತ್ತರವಿದೆ.

ಚಿತ್ರಕೃಪೆ: Surabhi Dhake

ಹರ್ ಕಿ ಪೌರಿ ಶಿವ ಪ್ರತಿಮೆ:

ಹರ್ ಕಿ ಪೌರಿ ಶಿವ ಪ್ರತಿಮೆ:

ಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿ 100 ಅಡಿಗಳ ಈ ನಿಂತಿರುವ ಶಿವನ ಪ್ರತಿಮೆಯಿದೆ. ಜಗತ್ತಿನಲ್ಲೆ ಮೂರನೆಯ ಅತಿ ಎತ್ತರದ ಶಿವ ಮೂರ್ತಿ ಇದಾಗಿದ್ದು, ಭಾರತದಲ್ಲಿ ಎರಡನೆಯ ಎತ್ತರದ ಶಿವ ಪ್ರತಿಮೆ ಹೆಗ್ಗಳಿಕೆಯನ್ನು ಪಡೆದಿದೆ.

ಚಿತ್ರಕೃಪೆ: Daniel Echeverri

ಚಿನ್ಮಯ ಗಣಾಧೀಶ:

ಚಿನ್ಮಯ ಗಣಾಧೀಶ:

ಮಹಾರಾಷ್ಟ್ರದ ಕೋಲ್ಹಾಪುರಿನ ಚಿನ್ಮಯ ಸಾಂದೀಪನಿ ಆಶ್ರಮದಲ್ಲಿರುವ ಗಣೆಶನ ಈ ವಿಗ್ರಹವು 85 ಅಡಿಗಳಷ್ಟು ಎತ್ತರವಾಗಿದೆ.

ಚಿತ್ರಕೃಪೆ: Vineet Timble

ಶಿವಗಿರಿ/ಬಸಂತವನ

ಶಿವಗಿರಿ/ಬಸಂತವನ

ಬಸಂತ ವನ: ಬಿಜಾಪುರ ನಗರದಿಂದ 3 ಕಿ.ಮೀ ದೂರದಲ್ಲಿ ಉಕ್ಕಲಿ ರಸ್ತೆಯಲ್ಲಿರುವ ರಂಬಾಪುರ ಹಳ್ಳಿಯಲ್ಲಿ ಕಾಣಬಹುದಾಗಿದೆ 85 ಅಡಿಗಳಷ್ಟು ಎತ್ತರದ ಸಿಮೆಂಟ್ ಹಾಗು ಉಕ್ಕಿನಿಂದ ಮಾಡಲಾದ ಈ ಬೃಹತ್ ಶಿವ ಪ್ರತಿಮೆಯನ್ನು. ಇದನ್ನು 26 ನೇಯ ಫೆಬ್ರುವರಿ 2006 ರ ಶಿವರಾತ್ರಿಯ ದಿನದಂದು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಈ ಶಿವ ಪ್ರತಿಮೆಯ ಕೆಳಬದಿಯಲ್ಲಿ ಪುಟ್ಟ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಲಾಗಿದ್ದು ಸುತ್ತಲಿರುವ ಗೋಡೆಗಳ ಮೇಲೆ ಶಿವ ಚರಿತೆಯನ್ನು ಕನ್ನಡದಲ್ಲಿ ಕೆತ್ತಲಾಗಿದೆ. ಇದರ ಎತ್ತರ 85 ಅಡಿಗಳು.

ಬಿಹಾರದ ಬುದ್ಧ ಪ್ರತಿಮೆ:

ಬಿಹಾರದ ಬುದ್ಧ ಪ್ರತಿಮೆ:

ಬಿಹಾರಿನ ಬೌದ್ಧ ಧಾರ್ಮಿಕ ಕ್ಷೇತ್ರವಾದ ಬೋಧ ಗಯಾದಲ್ಲಿರುವ ಈ ಮಹಾನ್ ಬುದ್ಧ ಪ್ರತಿಮೆಯು 80 ಅಡಿಗಳಷ್ಟು ಎತ್ತರವಾಗಿದೆ.

ಹನುಮಾನ್ ಪ್ರತಿಮೆ:

ಹನುಮಾನ್ ಪ್ರತಿಮೆ:

ಒಡಿಶಾ ರಾಜ್ಯದ ರೂರ್ಕೆಲಾ ಪಟ್ಟಣದ ಹನುಮಾನ್ ವಾಟಿಕಾ ಎಂಬಲ್ಲಿ 75 ಅಡಿಗಳಷ್ಟು ಎತ್ತರದ ಆಂಜನೇಯನ ಈ ಮೂರ್ತಿಯನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Akilola

ಗೋಲ್ಡನ್ ಬುದ್ಧ ಪ್ರತಿಮೆ:

ಗೋಲ್ಡನ್ ಬುದ್ಧ ಪ್ರತಿಮೆ:

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಲಡಾಖ್ ಪ್ರದೇಶದಲ್ಲಿರುವ ಲಿಕಿರ್ ಬೌದ್ಧ ಮಠದಲ್ಲಿ ಮೈತ್ರೇಯ ಬುದ್ಧನ 75 ಅಡಿಗಳಷ್ಟು ಎತ್ತರವಿರುವ ಈ ಸುಂದರ ಮೂರ್ತಿಯನ್ನು ಕಾಣಬಹುದು.

ಚಿತ್ರಕೃಪೆ: John Hill

ದೆಹಲಿಯ ಹನುಮಾನ ಪ್ರತಿಮೆ:

ದೆಹಲಿಯ ಹನುಮಾನ ಪ್ರತಿಮೆ:

ನವ ದೆಹಲಿಯ ಝಂಡೇವಾಲಾ ಪ್ರದೇಶದಲ್ಲಿ 65.5 ಅಡಿಗಳಷ್ಟು ಎತ್ತರವಿರುವ ಈ ಆಂಜನೇಯ ಮೂರ್ತಿಯನ್ನು ಕಾಣಬಹುದಾಗಿದೆ.

ಕೆಂಪ್ ಫೋರ್ಟ್ ಶಿವಾ:

ಕೆಂಪ್ ಫೋರ್ಟ್ ಶಿವಾ:

ಬೆಂಗಳೂರಿನ ಕೆಂಪ್ ಫೋರ್ಟ್ ನಲ್ಲಿರುವ 65.5 ಅಡಿಗಳಷ್ಟು ಉದ್ದದ ಈ ಶಿವನ ಪ್ರತಿಮೆಯು ನಗರದ ಒಂದು ಜನಪ್ರಿಯ ಆಕರ್ಷಣೆ.

ಚಿತ್ರಕೃಪೆ: Indianhilbilly

ಎಚ್.ಎಸ್.ಆರ್. ಲೇಔಟ್ ಹನುಮಂತನ ಪ್ರತಿಮೆ

ಎಚ್.ಎಸ್.ಆರ್. ಲೇಔಟ್ ಹನುಮಂತನ ಪ್ರತಿಮೆ

ಬೆಂಗಳೂರಿನಲ್ಲಿ ಎಚ್.ಎಸ್.ಆರ್. ಲೇಔಟ್ ಬಳಿಯ ಅಗರದಲ್ಲಿ ಸುಮಾರು 90 ಅಡಿಯಷ್ಟು ದೊಡ್ಡ ಈ ಹನುಮಂತನ ಪ್ರತಿಮೆಯಿದೆ. ಇದರ ವಿಶೇಷತೆಯೆಂದರೆ ಇದು ಒಂದು ಮಸೀದಿಯ ಪಕ್ಕದಲ್ಲಿದೆ. ಸರ್ಜಾಪುರಕ್ಕೆ ಹೋಗುವ ದಾರಿಯಲ್ಲಿ ಈ ಮೂರ್ತಿಯನ್ನು ಕಾಣಬಹುದು.

ಚಿತ್ರಕೃಪೆ: Shrideep

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X