
ಟ್ಯಾಗೋರ್ ಹೌಸ್ ಮ್ಯೂಸಿಯಂನ್ನು 'ಜಾರಾಸಂಕೋ ಥಕುರ್ಬಾರಿ' ಎಂದೂ ಕರೆಯಲಾಗುತ್ತದೆ. ರವೀಂದ್ರನಾಥ ಟ್ಯಾಗೋರ್‌ರ ಪೂರ್ವಿಕರ ಮನೆಯೇ ಇಂದು ವಸ್ತುಸಂಗ್ರಹಾಲಯವಾಗಿದೆ. ಇದು ರವೀಂದ್ರನಾಥ ಟ್ಯಾಗೋರ್‌ರವರ ಜೀವನ ಮತ್ತು ಕೆಲಸಗಳಿಗೆ ಸಮರ್ಪಿತವಾದ ವಸ್ತುಸಂಗ್ರಹಾಲಯವಾಗಿ ಮಾರ್ಪಟ್ಟಿದೆ. 35000 ಚದರ ಮೀ ವಿಸ್ತೀರ್ಣದಲ್ಲಿ ಹರಡಿರುವ ಇದನ್ನು 1785 ರಲ್ಲಿ ನಿರ್ಮಿಸಲಾಯಿತು.

ಜವಾಹರಲಾಲ್ ನೆಹರು ಉದ್ಘಾಟಿಸಿದರು
ಇದನ್ನು ಜವಾಹರಲಾಲ್ ನೆಹರು ಅವರು 8 ನೇ ಮೇ 1962 ರಂದು ಟ್ಯಾಗೋರ್‌ರ ಜನ್ಮ ಶತಮಾನೋತ್ಸವದಂದು ಉದ್ಘಾಟಿಸಿದರು. ಮ್ಯೂಸಿಯಂ ಸಂಕೀರ್ಣದಲ್ಲಿ ಮಹರ್ಷಿ ಭವನವಿದೆ, ಇದಕ್ಕೆ ಈ ನೊಬೆಲ್ ಪ್ರಶಸ್ತಿ ವಿಜೇತ ತಂದೆ ಮಹರ್ಷಿ ದೇಬೇಂದ್ರನಾಥ್ ಟ್ಯಾಗೋರ್ ಅವರ ಹೆಸರನ್ನು ಇಡಲಾಗಿದೆ. ಅವರು ಇಲ್ಲಿ ಆಗಸ್ಟ್ 7, 1941 ರಂದು ಕೊನೆಯುಸಿರೆಳೆದಿದ್ದರು.

3 ಗ್ಯಾಲರಿಗಳನ್ನು ಹೊಂದಿದೆ
ಟ್ಯಾಗೋರ ಮನೆ ವಸ್ತುಸಂಗ್ರಹಾಲಯವು 3 ಗ್ಯಾಲರಿಗಳನ್ನು ಹೊಂದಿದೆ. ಟಾಗೋರ್ ಅವರ ಕುಟುಂಬದ ಸದಸ್ಯರು, ಮತ್ತು ಬಂಗಾಳ ನವೋದಯಕ್ಕೆ ಸಮರ್ಪಿತವಾಗಿದೆ. ಪ್ರವಾಸಿಗರು ಟಾಗೋರ್ ಕುಟುಂಬ ಸದಸ್ಯರ ಛಾಯಾಚಿತ್ರಗಳನ್ನು, ಕವಿ ಜೀವನ-ಗಾತ್ರದ ಭಾವಚಿತ್ರಗಳನ್ನು ಮತ್ತು ಒಂದು ಕವಿ ತತ್ವಜ್ಞಾನಿಯಾಗಿ ಅವರ ಪ್ರಯಾಣವನ್ನು ನೋಡಬಹುದು.

ಟ್ಯಾಗೋರ್ ಕುಟುಂಬಸ್ಥರ ಕೃತಿಗಳು
ಭೇಟಿ ನೀಡುವವರು ಟ್ಯಾಗೋರ್‌ರ ಕುಟುಂಬದ ಇತರ ಪ್ರಮುಖ ಸದಸ್ಯರುಗಳಾದ ಜ್ಯೋತೀಂಧ್ರನಾಥ್ ಟ್ಯಾಗೋರ್, ಅಬಿನೀಂದ್ರನಾಥ ಟ್ಯಾಗೋರ್, ಮಹರ್ಷಿ ದೇವೇಂದ್ರನಾಥ ಟ್ಯಾಗೋರ್ ಮತ್ತು ದಿನೇಂದ್ರನಾಥ ಟ್ಯಾಗೋರ್ ಕೃತಿಗಳನ್ನು ನೋಡಬಹುದು. ಟ್ಯಾಗೋರ್ ಅವರು ತಮ್ಮ ಕುಟುಂಬದೊಂದಿಗಿರುವ ಕೆಲವು ವರ್ಣಚಿತ್ರಗಳನ್ನೂ ಇಲ್ಲಿ ಕಾಣಬಹುದು. ರವೀಂದ್ರ ಭಾರತಿ ವಸ್ತುಸಂಗ್ರಹಾಲಯದಲ್ಲಿ ಟ್ಯಾಗೋರ್ ಅವರಿಗೆ ದೊರೆತಿರುವ ಪ್ರಶಸ್ತಿಗಳನ್ನು ಕಾಣಬಹುದು.

ಪ್ರಸಿದ್ಧ ವ್ಯಕ್ತಿಗಳ ಮಾಹಿತಿ ಲಭ್ಯವಿದೆ
ಹಳೆಯ ಸಂಗೀತ ದಾಖಲೆಗಳನ್ನು ಹೊಂದಿರುವ ಇನ್ನೊಂದು ವಿಭಾಗವಿದೆ. ಇಲ್ಲಿ ಪ್ರವಾಸಿಗರು 19 ನೇ ಶತಮಾನ ಮತ್ತು 20 ನೇ ಶತಮಾನದ ಪ್ರಸಿದ್ಧ ವ್ಯಕ್ತಿಗಳ ಮಾಹಿತಿ ಲಭ್ಯವಿದೆ. 53 ಪೀಠೋಪಕರಣಗಳು, 770 ನಿಯತಕಾಲಿಕಗಳು, 2071 ಪುಸ್ತಕಗಳು, 16 ವರ್ಣಚಿತ್ರಗಳು, 27 ಕರಕುಶಲ ಮತ್ತು ಶಿಲ್ಪಕಲೆಗಳು, 53 ಪೀಠೋಪಕರಣಗಳು, 3297 ಛಾಯಾಚಿತ್ರಗಳು, 27 ಕರಕುಶಲ ಮತ್ತು ಶಿಲ್ಪಕಲೆಗಳು, 208 ವೈಯಕ್ತಿಕ ವಸ್ತುಗಳು ಸೇರಿದಂತೆ ಹಲವಾರು ವಸ್ತುಗಳನ್ನು ಕಾಣಬಹುದು.

ರವೀಂದ್ರ ಭಾರತಿ ವಿಶ್ವವಿದ್ಯಾಲಯ
217 ವರ್ಷದ ಈ ಕಟ್ಟಡವು ಹ್ಯೂಮನಿಟೀಸ್ ಮತ್ತು ಪರ್ಫಾರ್ಮಿಂಗ್ ಆಟ್ರ್ಸ್‌ವಿಭಿನ್ನ ವಿಭಾಗಗಳಲ್ಲಿ ಮುಂದುವರಿದ ಅಧ್ಯಯನಗಳನ್ನು ಬೋಧಿಸಲು 1962 ರಲ್ಲಿ ಸ್ಥಾಪನೆಯಾದ ರವೀಂದ್ರ ಭಾರತಿ ವಿಶ್ವವಿದ್ಯಾಲಯದ ಒಂದು ಭಾಗವಾಗಿದೆ. ರವೀಂದ್ರನಾಥ ಟ್ಯಾಗೋರ್‌ರ ಸುಮಾರು 40 ಮೂಲ ವರ್ಣಚಿತ್ರಗಳನ್ನು ಪಶ್ಚಿಮ ಬಂಗಾಳ ಸರ್ಕಾರವು ಟ್ಯಾಗೋರ್‌ರ ಮಗ ರತಿಂದ್ರನಾಥ ಟ್ಯಾಗೋರ್‌ರಿಂದ ಪಡೆದುಕೊಂಡಿದೆ. ಕೆಲವು ಛಾಯಾಚಿತ್ರಗಳನ್ನು ಶಾಶ್ವತವಾಗಿ ರಾಷ್ಟ್ರೀಯ ಗ್ರಂಥಾಲಯದಿಂದ ಎರವಲು ಪಡೆಯಲಾಗಿದೆ.

ಬೆಳಕಿನ ಮತ್ತು ಧ್ವನಿ ಪ್ರದರ್ಶನ
ಬೆಳಕಿನ ಮತ್ತು ಧ್ವನಿ ಪ್ರದರ್ಶನವು ಈ ವಸ್ತು ಸಂಗ್ರಹಾಲಯದ ಪ್ರಮುಖ ಆಕರ್ಷಣೆಯಾಗಿದೆ. ಕಾರ್ಯಕ್ರಮದ ಮೊದಲಾರ್ಧದಲ್ಲಿ ಟಾಗೋರ್ ಕುಟುಂಬದವರು ಈ ಮನೆಗೆ ಬರುವ ಕಥೆಯ ಚಿತ್ರಣವಾಗಿದೆ. ಅದರ ನಂತರ ಬಂಗಾಳ ಪುನರುಜ್ಜೀವನದ ಪಾತ್ರವೂ ಇದೆ. ಕೊನೆಯ ಭಾಗದಲ್ಲಿ, ಮಹಾನ್ ಕವಿ ಜೀವನವನ್ನು ತೋರಿಸಲಾಗಿದೆ.

ಭೇಟಿಯ ಸಮಯ
ಬೆಳಗ್ಗೆ 10.30 ರಿಂದ ಸಂಜೆ 5 ಗಂಟೆಯ ವರೆಗೆ ತೆರೆದಿರುತ್ತದೆ. ಸೋಮವಾರ ವಾರದ ರಜಾದಿನವಾಗಿರುತ್ತದೆ. ಭಾನುವಾರ ಮಾತ್ರ 4.30ರವರೆಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.
ಪ್ರವೇಶ ಶುಲ್ಕ
ಭಾರತೀಯರಿಗೆ 10 ರೂ. ವಿದೇಶಿಯರಿಗೆ 50 ರೂ.

ತಲುಪುವುದು ಹೇಗೆ?
ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೊಲ್ಕತ್ತಾ ನಗರವನ್ನು ಜಗತ್ತಿನ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ಇದು ರಾಜಧಾನಿ ನಗರದಿಂದ 17 ಕಿ.ಮೀ ದೂರದಲ್ಲಿದೆ. ಇದು ಟ್ಯಾಕ್ಸಿಗಳು ಮತ್ತು ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದು. ವಿಮಾನ ನಿಲ್ದಾಣವು ಕೋಲ್ಕತ್ತಾಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ನಿರ್ದೇಶಿಸುತ್ತದೆ.
ಉತ್ತಮವಾದ ಸ್ಥಾಪಿತವಾದ ರೈಲುಮಾರ್ಗವು ಭಾರತದ ಪ್ರಮುಖ ನಗರಗಳಿಗೆ ಕೋಲ್ಕತಾವನ್ನು ಸಂಪರ್ಕಿಸುತ್ತದೆ. ನಗರವು ಎರಡು ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಹೊಂದಿದೆ, ಒಂದು ಹೌರಾದಲ್ಲಿ ಮತ್ತು ಮತ್ತೊಂದನ್ನು ಸಲ್ದಾಹ್ನಲ್ಲಿದೆ. ಶತಾಬ್ದಿ ಎಕ್ಸ್ಪ್ರೆಸ್ ಮತ್ತು ರಾಜಧಾನಿ ಎಕ್ಸ್ಪ್ರೆಸ್ ನಂತಹ ಸೂಪರ್‌ಫಾಸ್ಟ್ ರೈಲುಗಳು ಕೋಲ್ಕತ್ತಾ ಸೇರಿದಂತೆ ಭಾರತದ ಮಹಾನಗರದ ಎಲ್ಲಾ ಕಡೆಗೂ ಸಾಗುತ್ತದೆ.
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 2 ಮತ್ತು 6 ರಿಂದ ಸಂಪರ್ಕ ಹೊಂದಿದ ಕೊಲ್ಕತ್ತಾ ಪಶ್ಚಿಮ ಬಂಗಾಳದ ಇತರ ನಗರಗಳೊಂದಿಗೆ ಸಂಪರ್ಕ ಕಲ್ಪಿಸಲು ಸರ್ಕಾರಿ ಮತ್ತು ಖಾಸಗಿ ಬಸ್ಸುಗಳ ವಿಶಾಲ ಜಾಲವನ್ನು ಹೊಂದಿದೆ. ಅಲ್ಲದೆ, ರಸ್ತೆಗಳು ಉತ್ತಮವಾಗಿ ನಿರ್ವಹಿಸಲ್ಪಡುತ್ತವೆ, ಆದ್ದರಿಂದ ತಮ್ಮದೇ ವಾಹನದ ಮೂಲಕವೂ ಸುಲಭವಾಗಿ ಕೋಲ್ಕತ್ತಾಗೆ ಪ್ರಯಾಣಿಸಬಹುದು.