Search
  • Follow NativePlanet
Share
» »ಸುಂದವರದನ ಬಲು ಅಂದದ ದೇವಾಲಯ ಇದಯ್ಯ!

ಸುಂದವರದನ ಬಲು ಅಂದದ ದೇವಾಲಯ ಇದಯ್ಯ!

By Vijay

ವಿಷ್ಣುವಿಗೆ ಮುಡಿಪಾದ ದೇವಾಲಯಗಳ ಸಂಖ್ಯೆಗೇನೂ ಕಮ್ಮಿ ಇಲ್ಲ ಭಾರತದಲ್ಲಿ. ವಿಷ್ಣುವಿನ ದಶಾವತಾರಗಳಿಗೆಂದೆ ಪ್ರತ್ಯೇಕವಾಗಿ ಮುಡಿಪಾದ ನೂರಾರು ದೇವಾಲಯಗಳಿದ್ದು ಇಂದು ಅವು ಪ್ರಸಿದ್ಧ ಧಾರ್ಮಿಕ ತಾಣಗಳಾಗಿ ಹೆಸರುವಾಸಿಯಾಗಿವೆ. ವರ್ಷದ ವಿವಿಧ ಸಮಯದಲ್ಲಿ ಹಲವಾರು ಉತ್ಸವಗಳನ್ನು ಈ ದೇವಾಲಯಗಳಲ್ಲಿ ಆಚರಿಸಲಾಗುವುದರಿಂದ ಇವುಗಳಿಗೆ ಭೇಟಿ ನೀಡುವ ಪ್ರವಾಸಿಗ ಭಕ್ತಾದಿಗಳ ಸಂಖ್ಯೆಯೂ ಅಪಾರ.

ಹಲವು ನಾಮಗಳಿಂದ, ರೂಪಗಳಿಂದ ವರ್ಣಿಸಲ್ಪಡುವ ವಿಷ್ಣುವಿನ ದೇವಾಲಯಗಳು ಎಲ್ಲೆ ಇರಲಿ ಸದಾ ಭಕ್ತ ಜನರಿಂದ ಭೇಟಿ ನೀಡಲ್ಪಡುತ್ತದೆ. ಹಿಂದುಗಳು ನಂಬುವಂತೆ ಪ್ರಮುಖ ಮೂರು ದೇವರುಗಳಲ್ಲಿ ಒಬ್ಬನಾದ ವಿಷ್ಣು ಸೃಷ್ಟಿ ಪಾಲಕನಿಂದೆ ಖ್ಯಾತಿ ಪಡೆದಿದ್ದು ಸಕಲ ಜನರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಾನೆಂಬ ನಂಬಿಕೆಯಿದೆ.

ಇದೆ ಪಶ್ಚಿಮದ ತಿರುಪತಿ! ಕರ್ನಾಟಕದಲ್ಲಿದೆ!

ವಿಶೇಷ ಹೆಸರು

ವಿಶೇಷ ಹೆಸರು

ಒಂದೊಂದು ಕಡೆ, ಒಂದೊಂದು ರೂಪದಲ್ಲಿ ಒಂದೊಂದು ವಿಶೇಷವಾದ ಹೆಸರಿನಲ್ಲಿ ಶೋಭಿಭೂತನಾಗಿರುವ ವಿಷ್ಣು ತಮಿಳುನಾಡಿನ ಕಂಚೀಪುರಂ ಜಿಲ್ಲೆಯ ಉತ್ತರಮೇರೂರು ಎಂಬ ಗ್ರಾಮದಲ್ಲಿ ಸುಂದರವರದ ಪೆರುಮಾಳನಾಗಿ ಭಕ್ತರನ್ನು ಹರಸುತ್ತಾನೆ. ಇನ್ನೂ ಮಡದಿಯಾದ ಲಕ್ಷ್ಮಿ ದೇವಿಯು ಆನಂದವಲ್ಲಿಯಾಗಿ ರಾರಾಜಿಸುತ್ತಾಳೆ.

ಚಿತ್ರಕೃಪೆ: Ssriram mt

ಮಹಾಭಾರತ

ಮಹಾಭಾರತ

ಈ ದೇವಾಲಯವು ಸಾಕಷ್ಟು ಅದ್ಭುತವಾಗಿದ್ದು ಮಹಾಭಾರತದ ಪಾಂಡವ ಸಹೋದರರೊಂದಿಗೂ ಸಹ ನಂಟನ್ನು ಹೊಂದಿದೆ. ದಂತಕಥೆಯೊಂದರ ಪ್ರಕಾರ, ಪಾಂಡವ ರಾಜಕುಮಾರನಾದ ಭೀಮನು ಇಲ್ಲಿರುವ ವಿಷ್ಣುವನ್ನು ಸುಂದರವರದನನ್ನಾಗಿ ಪೂಜಿಸಿದ್ದನಂತೆ. ಅಷ್ಟೆ ಅಲ್ಲ, ಇಲ್ಲಿ ಸುಂದರ ವರದನ ಜೊತೆ ಇತರೆ ಮೂರು ವರದರನ್ನೂ ಸಹ ಆರಾಧಿಸಲಾಗುತ್ತದೆ.

ಚಿತ್ರಕೃಪೆ: Ssriram mt

ಪಾಂಡವ ಸಹೋದರರು!

ಪಾಂಡವ ಸಹೋದರರು!

ಅಚ್ಯುತ ವರದ, ಅನಿರುದ್ಧ ವರದ ಹಾಗೂ ಕಲ್ಯಾಣ ವರದರು ಇಲ್ಲಿರುವ ಇತರೆ ಮೂರು ವರದರಾಜರ ಸನ್ನಿಧಿಗಳು. ಇವುಗಳನ್ನು ಕ್ರಮವಾಗಿ ಅರ್ಜುನ, ನಕುಲ ಹಾಗೂ ಸಹದೇವರು ಪೂಜಿಸಿದ್ದರೆಂಬ ಪ್ರತೀತಿಯಿದೆ. ಇವರಷ್ಟೆ ಅಲ್ಲದೆ ಪಾಂಡವರ ಮಡದಿಯಾದ, ಪಾಂಚಾಲಿ ಎಂದು ಕರೆಯಲ್ಪಡುತ್ತಿದ್ದ ದ್ರೌಪದಿಯೂ ಸಹ ಇಲ್ಲಿ ಆನಂದವಲ್ಲಿಯ ದರ್ಶನ ಪಡೆದಿದ್ದಳೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Ssriram mt

ಪ್ರಮುಖ ದಿಕ್ಕುಗಳು

ಪ್ರಮುಖ ದಿಕ್ಕುಗಳು

ಈ ಮೂರು ವರದರಿಗೂ ಸಹ ಪ್ರತ್ಯೇಕವಾದ ಗರ್ಭಗೃಹಗಳಿದ್ದು ಸುಂದರವರದನಿರುವ ಗರ್ಭಗೃಹದ ಸುತ್ತಮುತ್ತಲಿನ ಪ್ರಮುಖ ದಿಕ್ಕುಗಳಲ್ಲಿ ನಿರ್ಮಿಸಲ್ಪಟ್ಟಿವೆ. ಸುಮಾರು 1200 ಕ್ಕೂ ಅಧಿಕ ವರ್ಷಗಳಷ್ಟು ಪುರಾತನವಾದ ಈ ದೇವಾಲಯವು ಮುಲತಃ ಪಲ್ಲವ ರಾಜರುಗಳಿಂದ ಅದ್ಭುತವಾಗಿ ನಿರ್ಮಿಸಲ್ಪಟ್ಟ ರಚನೆಯಾಗಿದೆ.

ಚಿತ್ರಕೃಪೆ: Ssriram mt

ಅಸಾಧಾರಣ ಶಿಲ್ಪಿ

ಅಸಾಧಾರಣ ಶಿಲ್ಪಿ

ಪಲ್ಲವರ ಕಾಲದ ಅಸಾಧಾರಣ ಶಿಲ್ಪಿ ಹಾಗೂ ವಾಸ್ತು ತಜ್ಞನಾಗಿದ್ದ ಪರಮೇಶ ವತನ್ ಈ ದೇವಾಲಯದ ನಿರ್ಮಾತೃ ಎಂದು ಹೇಳಲಾಗಿದೆ. ಇಲ್ಲಿನ ವಾಸ್ತುಶಿಲ್ಪಕಲೆಯು ಬಲು ಸೊಗಸಾಗಿದ್ದು ಮೈಮನವೆಲ್ಲ ಪುಳಕಿತಗೊಳ್ಳುವಂತೆ ನಮ್ಮ ಹಿಂದಿನ ಶಿಲ್ಪಿಗಳ ಮೇಲೆ ಗೌರವಾದರ ಮೂಡುವಂತೆ ಮಾಡುವುದರಲ್ಲಿ ಸಂಶಯವಿಲ್ಲ.

ಚಿತ್ರಕೃಪೆ: Ssriram mt

ಅಚ್ಚರಿ ಪಡಿಸುತ್ತವೆ

ಅಚ್ಚರಿ ಪಡಿಸುತ್ತವೆ

ಇನ್ನೂ ಈ ದೇವಾಲಯದ ರಚನೆಗೆ ಸಂಬಂಧಿಸಿದಂತೆ ಕೆಲವು ಸತ್ಯಗಳಿದ್ದು ಅವು ನಿಮ್ಮನ್ನು ಚಕಿತಗೊಳಿಸದೆ ಇರಲಾರದು. ಇಲ್ಲಿನ ಗರ್ಭಗೃಹದಲ್ಲಿ ಹಾಗೂ ದ್ವಾರಕಪಾಲಕ ಶಿಲ್ಪಗಳನ್ನು ನೋಡಿದಾಗ ಶಿಲೆಯಲ್ಲಿ ಎಷ್ಟು ಸೊಗಸಾಗಿ ಕೆತ್ತಿರಬಹುದೆಂದು ನೀವು ಅಂದು ಕೊಂಡಿದ್ದರೆ ತಪ್ಪು. ಏಕೆಂದರೆ ಈ ಶಿಲ್ಪಗಳನ್ನು ಕಟ್ಟಿಗೆಯಲ್ಲಿ ನಿರ್ಮಿಸಲಾಗಿದೆ!

ಚಿತ್ರಕೃಪೆ: Ssriram mt

ಫ್ರೆಸ್ಕೋ ಬಣ್ಣ!

ಫ್ರೆಸ್ಕೋ ಬಣ್ಣ!

ಇನ್ನೊಂದು ಸೊಗಸಾದ ಅಂಶವೆಂದರೆ ಫ್ರೆಸ್ಕೋ ಬಣ್ಣ ಹಚ್ಚುವಿಕೆ. ಗರ್ಭಗೃಹಗಳ ಹಿಂದಿರುವ ಗೋಡೆಗಳ ಮೇಲೆ ಈ ಬಣ್ಣಗಳ ವಿನ್ಯಾಸವನ್ನು ಕಾಣಬಹುದು. ಫ್ರೆಸ್ಕೊ ಅಂದರೆ ಆಗತಾನೆ ಪ್ಲಾಸ್ಟರ್ ಬಳಿದ ರಚನೆಗಳ ಮೇಲೆ ನೀರಿನ ಬಣ್ಣಗಳಿಂದ ಅಲಂಕರಿಸುವುದು. ಇದು ಒಣಗುತ್ತಿದ್ದಂತೆ ಬಣ್ಣದೊಂದಿಗೆ ಬಲು ಗಟ್ಟಿಯಾಗಿ ನಿಂತುಬಿಡುತ್ತದೆ.

ಚಿತ್ರಕೃಪೆ: Ssriram mt

ಒಂದೆ ಕಡೆ

ಒಂದೆ ಕಡೆ

ಇಲ್ಲಿ ಒಟ್ಟಾರೆಯಾಗಿ ಹೇಳಬೇಕೆಂದರೆ ವಿಷ್ಣುವಿನ ಹಲವು ರೂಪಗಳನ್ನು ಒಂದೆಡೆ ಕಾಣಬಹುದು. ಒಂದು ಕಡೆ ಶ್ರೀದೇವಿ, ಭುದೇವಿ ಸಮೇತನಾಗಿ ವೈಕುಂಠ ಪೆರುಮಾಳನಾಗಿ ದರ್ಶನವಿತ್ತರೆ ಇನ್ನೊಂದು ಕಡೆ ವರಾಹಸ್ವಾಮಿಯಾಗಿ ದರ್ಶನ ನೀಡುತ್ತಾನೆ. ಮುಖ್ಯವಾಗಿ ಸುಂದರವರದನಾಗಿ ಭಕ್ತರನ್ನು ಹರಸುತ್ತಾನೆ.

ಚಿತ್ರಕೃಪೆ: Ssriram mt

ವಾರ್ಷಿಕೋತ್ಸವ

ವಾರ್ಷಿಕೋತ್ಸವ

ದೇವಾಲಯದಲ್ಲಿ ನಿತ್ಯವೂ ಆರು ಬಾರಿ ಪೂಜೆಗಳಿರುತ್ತವೆ. ಅಲ್ಲದೆ ವಾರ್ಷಿಕವಾಗಿ ಹಲವಾರು ಉತ್ಸವಗಳನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಎಪ್ರಿಲ್-ಮೇ ನಲ್ಲಿ ನಡೆಯುವ ಬ್ರಹ್ಮೋತ್ಸವ, ಜುಲೈ-ಅಗಸ್ಟ್ ನಲ್ಲಿ ನಡೆಯುವ ಪವಿತ್ರೋತ್ಸವ ಹಾಗೂ ಅಗಸ್ಟ್-ಸೆಪ್ಟಂಬರ್ ನಲ್ಲಿ ನಡೆಯುವ ಶ್ರೀ ಜಯಂತಿ ಉತ್ಸವಗಳು ಬಲು ಪ್ರಮುಖವಾಗಿವೆ.

ಚಿತ್ರಕೃಪೆ: Ssriram mt

ತಲುಪುವ ಬಗೆ

ತಲುಪುವ ಬಗೆ

ಉತಿರಮೇರೂರು ಅಥವಾ ಉತ್ತರಮೇರೂರು ಪಟ್ಟಣವು ಚೆನ್ನೈನಿಂದ 78 ಕಿ.ಮೀ ಹಾಗೂ ಕಂಚೀಪುರಂನಿಂದ 28 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಎರಡೂ ಸ್ಥಳಗಲಿಂದ ಬಸ್ಸುಗಲು ಸುಲಭವಾಗಿ ದೊರೆಯುತ್ತವೆ.

ಚಿತ್ರಕೃಪೆ: Ssriram mt

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more