Search
  • Follow NativePlanet
Share
» »ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಆಂಧ್ರ ಪ್ರದೇಶ ರಾಜ್ಯದಲ್ಲಿ ಕೂಡ ಕೊನಾರ್ಕ್‍ನಂತಹ ಅದ್ಭುತವಾದ ದೇವಾಲಯವಿದೆ. ಅಷ್ಟೇ ಖ್ಯಾತಿ ಹೊಂದಿರುವ ಮತ್ತೊಂದು ಸೂರ್ಯ ದೇವಾಲಯವು ಇದೆ. ಇದು ಶ್ರೀಕಾಕುಳಂ ಜಿಲ್ಲೆಯಲ್ಲಿನ ಅರಸಪಲ್ಲಿ ಗ್ರಾಮದಲ್ಲಿದೆ. ಶ್ರೀಕಾಕುಳಂ ಪಟ್ಟಣನಿಂದ ಅರಸಪಲ್ಲಿ ಕೇವಲ 3 ಕಿ.ಮೀ ದೂರದಲ್ಲಿದೆ.

ನಮ್ಮ ದೇಶದಲ್ಲಿ ಸೂರ್ಯ ದೇವಾಲಯ ಅತ್ಯಂತ ಪ್ರಸಿದ್ಧವಾದುದು. ಅವುಗಳ ಕುರಿತು ಕೆಲವು ಮಂದಿಗೆ ಮಾತ್ರವೇ ತಿಳಿಯುತ್ತದೆ. ಭಾರತ ದೇಶದಲ್ಲಿರುವ ಸೂರ್ಯ ದೇವಾಲಯವು ಒರಿಸ್ಸಾ ರಾಜ್ಯದಲ್ಲಿ ಕೋನಾರ್ಕ್ ಸೂರ್ಯ ದೇವಾಲಯವಿದೆ. ಭುವನೇಶ್ವರಕ್ಕೆ ಸುಮಾರು 65 ಕಿ.ಮೀ ದೂರದಲ್ಲಿರುವ ಕೋನಾರ್ಕ್ ಸೂರ್ಯ ದೇವಾಲಯವು ಅದ್ಭುತವಾದ ಶಿಲ್ಪ ಸಂಪತ್ತನ್ನು ಹೊಂದಿದೆ. ಬೆಳಗಿನ ಸಮಯದಲ್ಲಿ ಈ ದೇವಾಲಯದ ಮೇಲೆ ಬೀಳುವ ಸೂರ್ಯ ಕಿರಣಗಳು ದೇವಾಲಯಕ್ಕೆ ಬಂಗಾರದ ಬಣ್ಣದಿಂದ ಕಂಗೋಳಿಸುವಂತೆ ಮಾಡುತ್ತದೆ.

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಶ್ರೀಕಾಕುಳಂ ಸೇರಿಕೊಂಡರೆ ಅರಸಪಲ್ಲಿ ಸೇರಿಕೊಂಡ ಹಾಗೆಯೇ..! ಏಕೆಂದರೆ ಅರಸಪಲ್ಲಿ ಗ್ರಾಮವು ಶ್ರೀಕಾಕುಳಂ ಪಟ್ಟಣಕ್ಕೆ ಕೇವಲ 3 ಕಿ.ಮೀ ದೂರದಲ್ಲಿದೆ. ಗ್ರಾಮಗಳಿಗೆ ತೆರಳುವ ಲೋಕಲ್ ಆಟೋಗಳು ಈ ದೇವಾಲಯಕ್ಕೆ ತೆರಳುತ್ತವೆ. ಇದರಿಂದಾಗಿ ಸುಲಭವಾಗಿ ದೇವಾಲಯಕ್ಕೆ ತೆರಳಬಹುದು.


PC:: s shylendhar

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ವಾಯು ಮಾರ್ಗದ ಮೂಲಕ
ವಿಶಾಖ ಪಟ್ಟಣ ವಿಮಾನ ನಿಲ್ದಾಣವು ಶ್ರೀಕಾಕುಳಂ ಪಟ್ಟಣಕ್ಕೆ ಸಮೀಪದಲ್ಲಿರುವ ಏರ್ ಪೋರ್ಟ್ ಆಗಿದೆ. ಇದು ಸುಮಾರು 115 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ದೇಶದಲ್ಲಿನ ಎಲ್ಲಾ ನಗರಗಳಿಗೆ ಸಂಪರ್ಕ ಸಾಧಿಸುತ್ತದೆ. ಹೈದ್ರಾಬಾದ್, ತಿರುಪತಿ, ವಿಜಯವಾಡ, ಬೆಂಗಳೂರಿನಂತಹ ಪ್ರದೇಶದಿಂದ ವಿಮಾನಗಳು ಸಂಪರ್ಕವನ್ನು ಹೊಂದಿದೆ. ಟ್ಯಾಕ್ಸಿ ಅಥವಾ ಕ್ಯಾಬ್‍ನ ಮೂಲಕ ಸುಲಭವಾಗಿ ಶ್ರೀಕಾಕುಳಂಗೆ ಸೇರಿಕೊಳ್ಳಬಹುದು. ಅಲ್ಲಿನಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಅರಸಪಲ್ಲಿ ಸ್ಥಳೀಯವಾಗಿ ತಿರುಗುವ ಆಟೋದ ಮೂಲಕ ಸೇರಿಕೊಳ್ಳಬಹುದು.

PC:: Krystin Spellman

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ರೈಲ್ವೆ ಮಾರ್ಗದ ಮೂಲಕ
ಅರಸಪಲ್ಲಿಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವೆಂದರೆ ಅದು ಶ್ರೀಕಾಕುಳಂ ಪಟ್ಟಣದಲ್ಲಿನ "ಶ್ರೀಕಾಕುಳಂ ರೋಡ್" ರೈಲ್ವೆ ನಿಲ್ದಾಣ. ಇದು ಅರಸಪಲ್ಲಿಗೆ ಸುಮಾರು 11 ಕಿ.ಮೀ ದೂರದಲ್ಲಿದೆ. ಸ್ಥಳೀಯ ಆಟೋಗಳಿಂದ ಪ್ರಯಾಣಿಸಿ ಅರಸಪಲ್ಲಿ ದೇವಾಲಯಕ್ಕೆ ಸೇರಿಕೊಳ್ಳಬಹುದು. ಈ ರೈಲ್ವೆ ನಿಲ್ದಾಣವು ಹೈದ್ರಾಬಾದ್, ಗುಂತಕಲ್, ವೈಜಾಗ್, ಭುವನೇಶ್ವರ, ಚೆನ್ನೈ, ವಿಜಯವಾಡ, ಗುಂಟೂರುನಂತಹ ನಗರಗಳಿಂದ ರೈಲುಗಳು ಸಂಪರ್ಕ ಸಾಧಿಸುತ್ತವೆ.

PC:: indiarailinfo

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಆಗ್ರಾಗೆ ತಾಜ್‍ಮಹಲ್, ಹೈದ್ರಾಬಾದ್‍ನಿಂದ ಚಾರ್ಮಿನಾರ್ ಹೇಗೆಯೋ ಹಾಗೆಯೇ ಶ್ರೀಕಾಕುಳಂಗೆ ಅರಸಪಲ್ಲಿ ಹಾಗೆಯೇ..! ದೇಶದಲ್ಲಿ ಪ್ರಸಿದ್ಧಿ ಹೊಂದಿರುವ ಅರಸಪಲ್ಲಿ ಸೂರ್ಯನಾರಾಯಣ ದೇವಾಲಯವು ಪುರಾತನವಾದುದು. ಪುರಾಣಗಳ ಪ್ರಕಾರ, ಪ್ರಜೆಗಳ ಕ್ಷೇಮಕ್ಕಾಗಿ ಕಶ್ಯಪ ಮಹರ್ಷಿ ಸೂರ್ಯ ದೇವನ ವಿಗ್ರಹವನ್ನು ಪ್ರತಿಷ್ಟಾಪಿಸಿದ್ದಾರೆ ಎಂದೇ ಪ್ರತೀತಿ.

PC:: Seshagirirao

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಪ್ರತಿ ವರ್ಷ ಮಾರ್ಚ್ ತಿಂಗಳು ಮತ್ತು ಸೆಪ್ಟೆಂಬರ್‍ನಿಂದ ಅಕ್ಟೋಬರ್ ತಿಂಗಳಿನಲ್ಲಿ 9 ರಿಂದ 12 ದಿನಾಂಕದವರೆಗೆ, ಬೆಳಗ್ಗೆ ಸುಮಾರು 6 ಗಂಟೆಯಿಂದ 6:30 ಗಂಟೆಯವರೆಗೆ ಸೂರ್ಯ ಕಿರಣಗಳು ಗರ್ಭಗುಡಿಯಲ್ಲಿರುವ ಮೂಲವಿರಾಟನ ಪಾದಗಳನ್ನು ಮುಟ್ಟುತ್ತಾ ಇರುತ್ತದೆ. ಈ ಅದ್ಬುತವನ್ನು ಕಾಣಲು ರಾಜ್ಯದ ಮೂಲೆ ಮೂಲೆಗಳಿಂದ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

PC:: Seshagirirao

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ದೇವಾಲಯದ ದರ್ಶನದ ವೇಳಾಪಟ್ಟಿ
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12:30 ಗಂಟೆಯವರೆಗೆ ಮತ್ತು ಸಂಜೆ 3:30 ರಿಂದ ರಾತ್ರಿ 8 ಗಂಟೆಯವರೆಗೆ. ದೇವಾಲಯಕ್ಕೆ ಪ್ರವೇಶವನ್ನು ಪಡೆಯಬಹುದಾಗಿದೆ.

PC:: Palagiri


ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಇಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಇಲ್ಲಿ ವೀರಬ್ರಹ್ಮೇಂದ್ರ ಸ್ವಾಮಿ ದೇವಾಲಯ, ಶ್ರೀ ಕನ್ನಿಕಾಪರಮೇಶ್ವರಿ ದೇವಿ ದೇವಾಲಯ, ಆಂಜನೇಯಸ್ವಾಮಿ ದೇವಾಲಯ, ಚೌಡೇಶ್ವರಿ ದೇವಿ ದೇವಾಲಯ, ಶಿವನ ದೇವಾಲಯ ಇನ್ನು ಹಲವಾರು ದೇವಾಲಯಗಳಿಗೆ ಇಲ್ಲಿಗೆ ಭೇಟಿ ನೀಡಬಹುದಾಗಿದೆ.

PC:: I J venkateshwerlu

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more