Search
  • Follow NativePlanet
Share
» »ಕರ್ನಾಟಕದ ಸುಂದರವಾದ ಸ್ಥಳ ಸುಬ್ರಹ್ಮಣ್ಯ ಮತ್ತು ಅಲ್ಲಿಯ ಆಕರ್ಷಣೆಗಳು

ಕರ್ನಾಟಕದ ಸುಂದರವಾದ ಸ್ಥಳ ಸುಬ್ರಹ್ಮಣ್ಯ ಮತ್ತು ಅಲ್ಲಿಯ ಆಕರ್ಷಣೆಗಳು

ಕರ್ನಾಟಕದ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾದ ಸುಬ್ರಮಣ್ಯವು ಶ್ರೀಮಂತವಾದ ಮತ್ತು ವಿಸ್ತಾರವಾದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ನೆಲೆಸಿದೆ. ಆದುದರಿಂದ ಇದು ಅನುಕೂಲಕರ ಮತ್ತು ಆಹ್ಲಾದಕರವಾದ ಪರಿಸರವನ್ನು ವರ್ಷದುದ್ದಕ್ಕೂ ಹೊಂದಿದೆ.

ಇಲ್ಲಿ ಕುಕ್ಕೆ ಸುಬ್ರಮಣ್ಯ ದೇವಾಲಯವಿರುವ ಕಾರಣದಿಂದಾಗಿ ಇದು ಹಿಂದೂ ಯಾತ್ರಿಗಳಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿದ ಸ್ಥಳವೆನಿಸಿದ್ದು ರಾಜದಾದ್ಯಂತ ಪ್ರವಾಸಿಗರು ಇಲ್ಲಿಗೆ ನಿರಂತರವಾಗಿ ಭೇಟಿ ಕೊಡುತ್ತಿರುತ್ತಾರೆ. ಅಲ್ಲದೆ ಇದು ಆಪ್ಭೀಟ್ ಚಾರುಣಿಗರಿಗೆ ಒಂದು ಜನ್ರಪ್ರಿಯವಾದ ವಾರಾಂತ್ಯದ ತಾಣವೂ ಆಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಈ ಸ್ಥಳವು ಅನೇಕ ಸುಂದರ ಬೆಟ್ಟಗಳನ್ನು ಹೊಂದಿದೆ. ಹಿಂದೂ ಪುರಾಣಗಳ ಪ್ರಕಾರ ಗರುಡನಿಂದ ಬೆದರಿಕೆಗೊಳಗಾದ ಸರ್ಪಗಳ ರಾಜನಾದ ವಾಸುಕಿಯು ಇನ್ನಿತರ ಸರ್ಪಗಳ ಜೊತೆಗೆ ಈ ಸ್ಥಳದಲ್ಲಿ ಆಶ್ರಯ ಪಡೆದನೆಂದು ಹೇಳಲಾಗುತ್ತದೆ.

ಆದುದರಿಂದ ಈ ಹಳ್ಳಿಯು ನೈಸರ್ಗಿಕ ವಾದ, ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವುಳ್ಳದ್ದಾಗಿವೆ. ಇಂದು ಸುಬ್ರಮಣ್ಯದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಇದು ದೇವಾಲಯಗಳಿಂದ ಹಿಡಿದು ಬೆಟ್ಟಗಳು ಮತ್ತು ಕಣಿವೆಗಳಿಂದ ನದಿ ದಡಗಳವರೆಗೆ ಇದರ ಗಡಿಯೊಳಗೆ ಅನೇಕ ವಿಷಯಗಳನ್ನು ಹೊಂದಿದೆ. ಈ ಕೆಳಗಿನ ಅತ್ಯಂತ ಪ್ರಮುಖ ಸ್ಥಳಗಳು ಸುಬ್ರಮಣ್ಯದಲ್ಲಿ ಪ್ರತಿಯೊಬ್ಬ ಪ್ರವಾಸಿಗನೂ ಭೇಟಿ ಕೊಡಲು ತಪ್ಪಿಸಲೇ ಬಾರದೆನ್ನುವಂತಹವುಗಳಾಗಿವೆ.

ಕುಕ್ಕೆ ಸುಬ್ರಮಣ್ಯ ದೇವಾಲಯ

ಕುಕ್ಕೆ ಸುಬ್ರಮಣ್ಯ ದೇವಾಲಯ

ಸುಬ್ರಮಣ್ಯದಲ್ಲಿ ಭೇಟಿ ಕೊಡಬಹುದಾದ ಸ್ಥಳಗಳ ಪಟ್ಟಿಯಲ್ಲಿ ಕುಕ್ಕೆ ಸುಬ್ರಮಣ್ಯ ದೇವಾಲಯದ ಹೊರತಾಗಿ ಪ್ರಾರಂಭಿಸಲು ಸಾಧ್ಯವೇ ಇಲ್ಲ. ಇದು ಅನೇಕ ಸಮಯಗಳಿಂದಲೂ ಹಳ್ಳಿಯ ಹೆಸರಿಗೆ ಒಂದು ಸಮನಾರ್ಥಕ ಪದೆವೆನ್ನುವಂತಿದೆ. ಈ ದೇವಾಲಯವು ಯುದ್ದದ ದೇವರು ಮತ್ತು ಸರ್ಪಗಳ ರಾಜನಾದ ಕಾರ್ತಿಕೇಯ ದೇವರಿಗೆ ಅರ್ಪಿತವಾದುದಾಗಿದೆ. ಅಲ್ಲದೆ ಈ ದೇವಾಲಯವು ಸಾವಿರಾರು ವರ್ಷಗಳ ಹಿಂದೆ ಸಾಮಾನ್ಯ ಯುಗಕ್ಕಿಂತಲೂ ಮುಂಚೆ ಸ್ಥಾಪಿತವಾದುದು ಎಂದು ನಂಬಲಾಗುತ್ತದೆ.

ಇಲ್ಲಿಯ ಸ್ಥಳೀಯ ದಂತಕಥೆಗಳ ಪ್ರಕಾರ ಗರುಡನಿಂದ ಬೆದರಿಕೆಗೊಳಪಟ್ಟ ಸರ್ಪಗಳ ರಾಜನಾದ ವಾಸುಕಿಯು ತನ್ನ ಇನ್ನಿತರ ಸಂಗಡಿಗರ ಜೊತೆಗೆ ತನ್ನ ರಕ್ಷಣೆಗಾಗಿ ಕಾರ್ತಿಕೇಯ ರೂಪದಲ್ಲಿರುವ ಸುಬ್ರಮಣ್ಯದೇವರ ಸನ್ನಿಧಿಯಲ್ಲಿ ಆಶ್ರಯ ಪಡೆಯಲು ಬಂದ ಜಾಗವೆಂದು ಹೇಳಲಾಗುತ್ತದೆ. ದೇವಾಲಯದ ಗರ್ಭಗುಡಿ ತಲುಪುವ ಮುನ್ನ ಈ ನದಿಯು ಗ್ರಾಮದಾದ್ಯಂತ ಹರಿಯುತ್ತದೆ. ಅಲ್ಲದೆ ಈ ದೇವಾಲಯಕ್ಕೆ ಬರುವ ಜನರು ಕುಮಾರಧಾರ ನದಿಯ ನೀರಿನಲ್ಲಿ ಸ್ನಾನ ಮಾಡಬೇಕೆಂಬ ವಾಡಿಕೆ ಇಲ್ಲಿದೆ.

ಕುಮಾರ ಪರ್ವತ

ಕುಮಾರ ಪರ್ವತ

ಕರ್ನಾಟಕದ ಅತ್ಯಂತ ಎತ್ತರದ ಶಿಖರಗಳಲ್ಲೊಂದಾದ ಕುಮಾರ ಪರ್ವತವು ಪಶ್ಚಿಮ ಘಟ್ಟದಲ್ಲಿಯ ಒಂದು ಸುಂದರವಾದ ಪರ್ವತವಾಗಿದೆ ಮತ್ತು ಇದು ಸುಬ್ರಮಣ್ಯದ ಸುತ್ತಲೂ ಆವರಿಸಿ ನಿಂತಿದೆ. ಅನೇಕ ವರ್ಷಗಳಿಂದ ಈ ತಾಣವು ಸ್ಥಳೀಯ ಪ್ರವಾಸಿಗರಿಗೆ ಜನಪ್ರಿಯ ಟ್ರಕ್ಕಿಂಗ್ ಮತ್ತು ಕ್ಯಾಂಪಿಂಗ್ ತಾಣವೆನಿಸಿದೆ.

ಸುಮಾರು 5500ಅಡಿ ಎತ್ತರವಿರುವ ಕುಮಾರ ಪರ್ವತವು ಪ್ರತಿಯೊಬ್ಬ ಪ್ರಕೃತಿ ಪ್ರೇಮಿಯೂ ತನ್ನ ವಾರಾಂತ್ಯವನ್ನು ನಿಶ್ಯಬ್ದತೆ ಮತ್ತು ಪ್ರಶಾಂತತೆಯ ಮಧ್ಯದಲ್ಲಿ ಕಳೆಯ ಬಯಸಿದಲ್ಲಿ ಈ ಸ್ಥಳವು ಭೇಟಿ ಕೊಡಲೇ ಬೇಕಾದಂತಹ ಸ್ಥಳವೆನಿಸಿದೆ. ಇಲ್ಲಿ ಟ್ರಕ್ಕಿಂಗ್ ಕ್ಯಾಂಪಿಂಗ್ ಮತ್ತು ಇಲ್ಲಿಯ ಸುಂದರವಾದ ಹುಲ್ಲುಗಾವಲಿನಲ್ಲಿ ಸಮಯ ಕಳೆಯುವುದು ಮಾತ್ರವಲ್ಲದೆ ನೀವು ಇಲ್ಲಿ ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಸುಂದರವಾದ ಪಶ್ಚಿಮ ಘಟ್ಟಗಳ ಮನಮೋಹಕ ನೋಟವನ್ನೂ ನೋಡಬಹುದಾಗಿದೆ.

ಹಸಿರು ಮಾರ್ಗ (ಗ್ರೀನ್ ರೂಟ್)

ಹಸಿರು ಮಾರ್ಗ (ಗ್ರೀನ್ ರೂಟ್)

ಪಶ್ಚಿಮ ಘಟ್ಟಗಳ ಇನ್ನೊಂದು ಸೌಂದರ್ಯತೆಯೆಂದರೆ ಅದು ಹಸಿರು ದಾರಿ ಇದು ಇಲ್ಲಿಯ ಸುಂದರವಾದ ಭಾಗವಾಗಿದ್ದು ಈ ಸೊಂಪಾದ ಹಸಿರು ವಿಸ್ತಾರಗಳ ಮಧ್ಯೆ ಸುಮಾರು 50 ಕಿ.ಮೀ ವರೆಗೆ ರೈಲು ಮಾರ್ಗವನ್ನೂ ಹೊಂದಿದೆ. ಅದರ ಜೊತೆಗೆ ಸುರಂಗಗಳು, ಅಣೆಕಟ್ಟುಗಳು ಮತ್ತು ಕಲ್ಲಿನ ಕಾಲುದಾರಿಗಳು ಇತ್ಯಾದಿಗಳನ್ನು ಹೊಂದಿರುವ ಈ ಸುಂದರವಾದ ಮಾರ್ಗವು ಟ್ರಕ್ಕಿಂಗ್ ಮಾಡುವವರಿಗೆ ಸ್ವರ್ಗದ ಅನುಭವವನ್ನು ನೀಡುತ್ತದೆ.

ನೀವು ಈವಾಗಲೇ ಇಲ್ಲಿಯ ಸುಂದರವಾದ ಘನವಾದ ಕಾಡುಗಳು ಮತ್ತು ಶ್ರೀಮಂತವಾದ ಹಸಿರುಗಳಲ್ಲಿ ಒಮ್ಮೆ ಅಡ್ಡಾಡುವ ಕನಸು ಕಾಣುತ್ತಿರಬೇಕಲ್ಲವೆ ? ನೀವು ನಿಮ್ಮನ್ನು ಇಂತಹ ಒಂದು ಸುಂದರವಾದ ಸ್ಥಳದಲ್ಲಿ ಅದೂ ಸೊಂಪಾದ ನಿಷ್ಕಲ್ಮಶ ಹಸಿರುಮಯ ವಾತಾವರಣದಲ್ಲಿ ತೊಡಗಿಸಿಕೊಳ್ಳಬಯಸುವುದಿಲ್ಲವೆ ? ಹಾಗಿದಲ್ಲಿ ನೀವು ಸುಬ್ರಮಣ್ಯದಲ್ಲಿ ಅಥವಾ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿರುವಾಗ ಗ್ರೀನ್ ರೂಟ್ (ಹಸಿರು ಮಾರ್ಗ) ಗೆ ಹೋಗಲು ಯೋಜನೆಯನ್ನು ಹಾಕುವುದು ಸೂಕ್ತವಾದುದು. ಈ ಸ್ವರ್ಗ ಸದೃಶವಾದ ಸ್ಥಳವು ನಿಮ್ಮ ನರ ನರಗಳನ್ನು ಪುನಶ್ಚೇತನಗೊಳಿಸುವುದರಲ್ಲಿ ಎರಡು ಮಾತಿಲ್ಲ.

ಬಿಲದ್ವಾರ ಗುಹೆ

ಬಿಲದ್ವಾರ ಗುಹೆ

ಮುಖ್ಯ ದೇವಾಲಯದ ಹತ್ತಿರದಲ್ಲಿಯೇ ನೆಲೆಸಿರುವ ಬಿಲದ್ವಾರ ಗುಹೆಯು ಸರ್ಪಗಳ ರಾಜನಾದ ವಾಸುಕಿಯು ತನ್ನ ಸಂಗಡಿಗರೊಂದಿಗೆ ಈ ಸ್ಥಳದಲ್ಲಿಯೇ ಆಶ್ರಯ ಪಡೆದು ಇಲ್ಲಿ ಗರುಡನಿಂದ ತಮ್ಮನ್ನು ರಕ್ಷಿಸುವ ಸಲುವಾಗಿ ತಪಸ್ಸು ಮಾಡಿದನು ಎನ್ನಲಾಗುತ್ತದೆ. ಆದ್ದರಿಂದ ಈ ಸ್ಥಳಕ್ಕೆ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವವಿದೆ. ನೀವೇನಾದರೂ ಇತಿಹಾಸ ಪ್ರಿಯರಾಗಿದ್ದಲ್ಲಿ, ನಿವು ಈ ಸುಂದರ ಸ್ಥಳಕ್ಕೆ ಭೇಟಿ ಕೊಡಲೇ ಬೇಕು. ಸುತ್ತಲೂ ಜೀವಂತಿಕೆ ಇರುವ ಹಚ್ಚ ಹಸಿರಾಗಿರುವ ಪ್ರದೇಶಗಳನ್ನು ಹೊಂದಿರುವ ಈ ಸ್ಥಳವು ಒಂದು ಸುಂದರವಾದ ಪಿಕ್ನಿಕ್ ತಾಣವನ್ನಾಗಿಸಿದೆ.

ಇನ್ನಿತರ ಮಹತ್ವವುಳ್ಳ ದೇವಾಲಯಗಳು

ನೀವು ಸುಬ್ರಮಣ್ಯದ ಗಡಿಯೊಳಗೆ ದೇವಾಲಯಗಳಲ್ಲಿ ಕೇವಲ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಮಾತ್ರ ಸೀಮಿತವಾದುದು ಎಂದುಕೊಂಡಿದ್ದಲ್ಲಿ ನೀವು ನಿಜವಾಗಿಯೂ ಇಲ್ಲಿಯ ಇನ್ನಿತರ ಧಾರ್ಮಿಕ ತಾಣಗಳಿಗೆ ಭೇಟಿ ಕೊಡುವ ಅವಶ್ಯಕತೆ ಇದೆ. ಈ ಸ್ಥಳಗಳು ನಿಮಗೆ ದೈವತ್ವದ ಸಾರದ ಮೂಲ ರೂಪವನ್ನು ಒದಗಿಸಿಕೊಡುತ್ತದೆ.


ಈ ಪಟ್ಟಿಯಲ್ಲಿ ಕಾಲ ಭೈರವ ದೇವಾಲಯ, ಹರಿಹರೇಶ್ವರ ದೇವಾಲಯ, ಶೃಂಗೇರಿ ಮಠ ಮತ್ತು ಉಮಾಮಹೇಶ್ವರ ದೇವಾಲಯಗಳು ಸೇರಿವೆ. ಈ ಸ್ಥಳಗಳು ಕುಕ್ಕೆ ಸುಬ್ರಮಣ್ಯದಷ್ಟು ಜನಪ್ರಿಯತೆಯನ್ನು ಗಳಿಸಿಲ್ಲವಾದರೂ ಇಲ್ಲಿ ಶಾಂತಿಯುತವಾದ , ಪ್ರಶಾಂತವಾದ ಮತ್ತು ಸಂಯೋಜಿತ ವಾತಾವರಣವು ನಿಮ್ಮನ್ನು ಬೆರಗುಗೊಳಿಸುವುದರಲ್ಲಿ ಸಂಶಯವೇ ಇಲ್ಲ. ಈ ದೇವಾಲಯಗಳಿಗೆ ಪ್ರವಾಸ ಹೂಡುವುದು ಒಂದು ಆಸಕ್ತಿದಾಯಕ ವಿಷಯವೆಂದು ನಿಮಗನಿಸುವುದಿಲ್ಲವೆ ?

ಕುಮಾರಾಧಾರಾ ನದಿಯ ಘಟ್ಟಗಳು

ಕುಮಾರಾಧಾರಾ ನದಿಯ ಘಟ್ಟಗಳು

ನದಿ ದಡದಲ್ಲಿ ವಿಶ್ರಾಂತಿ ಪಡೆಯಲು ಮತ್ತು ಅಗಾಧವಾದ ಅಟರಾಕ್ಸಿ ಕಣಿವೆಯಲ್ಲಿ ಕಳೆದುಹೋಗಲು ಯಾರು ತಾನೆ ಬಯಸದೆ ಇರಲು ಸಾಧ್ಯ? ನೀವು ಇಂತಹ ಅನುಭವ ಹೊಂದಲು ಇಷ್ಟ ಪಡುವಿರಾದಲ್ಲಿ ಸುಬ್ರಮಣ್ಯದ ಸುತ್ತಲೂ ಹರಿಯುವ ಮೂಲ ಸೌಂದರ್ಯವನ್ನು ಹೊಂದಿರುವ ಕುಮಾರಧಾರ ನದಿಗೆ ಭೇಟಿ ಕೊಡಲೇ ಬೇಕು. ನೀವು ಇದರ ಪುನಶ್ಚೇತನಗೊಳಿಸುವಂತಹ ನೀರಿನಲ್ಲಿ ಸ್ನಾನ ಮಾಡಿ ಪ್ರಸನ್ನರಾಗಬಹುದು.

ಆದ್ದರಿಂದ ಸುಬ್ರಮಣ್ಯದ ಈ ಪ್ರಮುಖ ಸ್ಥಳಗಳನ್ನು ಯಾವುದೇ ಪ್ರವಾಸಿಗನೂ ಭೇಟಿ ಕೊಡಲು ತಪ್ಪಿಸಲೇ ಬಾರದೆನ್ನುವಂತಹುದಾಗಿದೆ. ಇವುಗಳ ಹೊರತಾಗಿ, ನೀವು ಮತ್ಸ್ಯ ಗುಂಡು, ಆದಿ ಸುಬ್ರಮಣ್ಯ ದೇವಾಲಯ, ದರ್ಪಣ ತೀರ್ಥ ಮತ್ತು ಸೋಮನಾಥ ದೇವಾಲಯಗಳಿಗೂ ಭೇಟಿ ಕೊಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X