Search
  • Follow NativePlanet
Share
» »ಮಹಾಭಾರತ ಯುದ್ಧದ ಜಯಕ್ಕಾಗಿ ಶ್ರೀಕೃಷ್ಣ ಹಾಗು ಪಾಂಡವರು ಯಾವ ದೇವಾಲಯಕ್ಕೆ ಭೇಟಿ ನೀಡಿದರು ಗೊತ್ತ?

ಮಹಾಭಾರತ ಯುದ್ಧದ ಜಯಕ್ಕಾಗಿ ಶ್ರೀಕೃಷ್ಣ ಹಾಗು ಪಾಂಡವರು ಯಾವ ದೇವಾಲಯಕ್ಕೆ ಭೇಟಿ ನೀಡಿದರು ಗೊತ್ತ?

By Sowmyabhai

ಮಹಾಭಾರತವು ಭಾರತದ ಧಾರ್ಮಿಕ, ತಾತ್ವಿಕವಾದ ಹಾಗು ಪೌರಾಣಿಕವಾದ ಮಹಾಕಾವ್ಯಗಳಲ್ಲಿ ಒಂದಾಗಿದೆ. ಇಲ್ಲಿ ಬರುವ ಪ್ರತಿಯೊಂದು ಪಾತ್ರವು ಅತಿ ಮುಖ್ಯವಾದುದು. ಹಸ್ತಿನಾಪುರದ ಸಿಂಹಾಸನಕ್ಕಾಗಿ ಪಾಂಡವರ ಹಾಗು ಕುರುವಂಶದ ಸದಸ್ಯರ ನಡುವೆ ನಡೆಯುವ ಹೋರಾಟವೇ ಕುರುಕ್ಷೇತ್ರ. ಈ ಕುರುಕ್ಷೇತ್ರ ಯುದ್ಧವು ಸತತವಾಗಿ 18 ದಿನಗಳ ಕಾಲ ನಡೆಯಿತು ಎಂದು ಪುರಾಣಗಳು ತಿಳಿಸುತ್ತವೆ. ಯುದ್ಧದಲ್ಲಿ ಪಾಂಡವರಿಗೆ ಜಯ ದೊರೆಯುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದೇ. ಯುದ್ಧದ ತದನಂತರ ಶ್ರೀ ಕೃಷ್ಣನ ಅವಸಾನ, ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ.

ಪಾಶ್ಚಿಮಾತ್ಯ ದೇಶಗಳು ಮಹಾಭಾರತ ಹಾಗು ರಾಮಾಯಣ ಎಲ್ಲಾ ಸುಳ್ಳು ಎಂದು ವಾದಿಸಿದರು, ವಾದಿಸುತ್ತಲೇ ಇದ್ದಾರೆ ಕೂಡ. ಅದಕ್ಕೆ ಉತ್ತರವಾಗಿ ನಮ್ಮ ದೇಶದಲ್ಲಿ ರಾಮಾಯಣ, ಮಹಾಭಾರತ, ದ್ವಾರಕಕ್ಕೆ ಸಂಬಂಧಿಸಿದಂತೆ ಅನೇಕ ಪುರಾವೆಗಳು ದೊರೆತಿವೆ. ಅದಕ್ಕೆ ಉದಾಹರಣೆಯಾಗಿ, ಒಂದು ದೇವಾಲಯವಿದೆ. ಆ ದೇವಾಲಯವು ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಶ್ರೀ ಕೃಷ್ಣ ಹಾಗು ಪಾಂಡವರು ಯುದ್ಧದಲ್ಲಿ ಜಯ ಹೊಂದುವ ಸಲುವಾಗಿ ತೆರಳಿದ ದೇವಾಲಯ ಎಂದೇ ಹೆಸರುವಾಸಿಯಾಗಿದೆ.

ಹಾಗಾದರೆ ಆ ದೇವಾಲಯ ಎಲ್ಲಿದೆ? ಆ ದೇವಾಲಯದ ಮಹಿಮೆ ಏನು? ಅಲ್ಲಿರುವ ದೈವವಾದರು ಯಾರು ಎಂಬುದಕ್ಕೆ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯೋಣ.

1.ಯಾವುದು ಆ ದೇವಾಲಯ?

1.ಯಾವುದು ಆ ದೇವಾಲಯ?

PC:OjAg

ಆ ದೇವಾಲಯವೇ ಸ್ತನೇಶ್ವರ ಮಹಾದೇವ ದೇವಾಲಯ. ಈ ದೇವಾಲಯವು ಭಗವಾನ್ ಶಿವನಿಗೆ ಸಮರ್ಪಿಯವಾದ ಪ್ರಾಚೀನವಾದ ದೇವಾಲಯವಾಗಿದೆ. ಇದು ಹರಿಯಾಣ ರಾಜ್ಯದ ಕುರುಕ್ಷೇತ್ರ ಎಂಬ ಜಿಲ್ಲೆಯಾದ ಥಾನೇಶ್ವರ ಎಂಬ ಪಟ್ಟಣದಲ್ಲಿದೆ. ಇಲ್ಲಿಯೇ ಕೃಷ್ಣನೊಂದಿಗೆ ಪಾಂಡವರು ಶಿವನಿಗೆ ಪ್ರಾರ್ಥಿಸಿದರು ಎಂದೂ ಹಾಗು ಯುದ್ಧದಲ್ಲಿ ಜಯವನ್ನು ನೀಡು ಎಂದು ಮಹಾದೇವನಲ್ಲಿ ಆಶೀರ್ವಾದವನ್ನು ಪಡೆದರು ಎಂದು ಪುರಾಣಗಳು ತಿಳಿಸುತ್ತವೆ.

2.ಕುಷ್ಠರೋಗವನ್ನು ನಿವಾರಣೆ ಮಾಡುವ ಜಲ

2.ಕುಷ್ಠರೋಗವನ್ನು ನಿವಾರಣೆ ಮಾಡುವ ಜಲ

PC:YOUTUBE

ಪುರಾಣಗಳ ಪ್ರಕಾರ ಈ ಸ್ತನೇಶ್ವರ ದೇವಾಲಯದ ಸಮೀಪದಲ್ಲಿ ಒಂದು ಪವಿತ್ರವಾದ ಕೊಳವಿದೆ. ಆ ಪವಿತ್ರವಾದ ಕೊಳದ ಜಲವು ಅನೇಕ ರೋಗಗಳನ್ನು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಅತ್ಯಂತ ಭಯಾನಕವಾದ ಕುಷ್ಠರೋಗವನ್ನು ಈ ಜಲವು ಗುಣಪಡಿಸುತ್ತದೆ. ಹರಿಯಾಣದ ಕುರುಕ್ಷೇತ್ರದಲ್ಲಿನ ಈ ಕ್ಷೇತ್ರಕ್ಕೆ ದರ್ಶನವನ್ನು ಪಡೆಯದೇ ಹೋದರೆ ತೀರ್ಥಕ್ಷೇತ್ರ ಪೂರ್ಣಗೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ಹೀಗಾಗಿಯೇ ಅನೇಕ ರಾಜ್ಯಗಳಿಂದ ಈ ಪವಿತ್ರವಾದ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

3. ಸ್ಥಳ ಪುರಾಣ

3. ಸ್ಥಳ ಪುರಾಣ

PC:SOURCE

ಈ ಪುಣ್ಯ ಪವಿತ್ರವಾದ ದೇವಾಲಯವು ಥಾನೇಶ್ವರ ಪಟ್ಟಣದಿಂದ ಸಮೀಪದಲ್ಲಿಯೇ ಇದೆ. ಇಲ್ಲಿ ಮಹಾಶಿವನು ಪೂರ್ವದಲ್ಲಿ ಸ್ತನೇಶ್ವರನಾಗಿ ಲಿಂಗ ಸ್ವರೂಪದಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದನಂತೆ. ಮಹಾಭಾರತದ ವೀರರು ಕುರು, ಯಮುನಾ ಮತ್ತು ಪರಶುರಾಮ ದಂಡೆಯಲ್ಲಿ ತಪಸ್ಸು ಮಾಡುತ್ತಿದ್ದರಂತೆ. ಅನೇಕ ಕ್ಷತ್ರೀಯರ ಮರಣವನ್ನು ಇಲ್ಲಿ ನಡೆದಿತ್ತು ಎಂದು ಪುರಾಣಗಳು ಹೇಳುತ್ತವೆ.

4.ಚಕ್ರವರ್ತಿ ಹರ್ಷವರ್ಧನನ ರಾಜಧಾನಿ

4.ಚಕ್ರವರ್ತಿ ಹರ್ಷವರ್ಧನನ ರಾಜಧಾನಿ

PC:SOURCE

ಸ್ತನೇಶ್ವರ ದೇವಾಲಯವು ಭಗವಾನ್ ಶಿವನ ನಿವಾಸವಾಗಿದ್ದು, ಈ ಪಟ್ಟಣವು ಚಕ್ರವರ್ತಿ ಹರ್ಷವರ್ಧನನ ರಾಜಧಾನಿಯಾಗಿ ಸೇವೆ ಸಲ್ಲಿಸಿದೆ. ಗುಮ್ಮಟದ ಆಕಾರದ ಛಾವಣಿಯೊಂದಿಗೆ ಪ್ರಾದೇಶಿಕ ವಾಸ್ತುಶಿಲ್ಪವನ್ನು ಹೊಂದಿದೆ. ಅನೇಕ ಸ್ಥಳೀಯ ಜನರಿಂದ ಮಹಾಶಿವನು ಇಲ್ಲಿ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿದ್ದಾನೆ.

5.ತಲುಪುವ ಬಗೆ ಹೇಗೆ?

5.ತಲುಪುವ ಬಗೆ ಹೇಗೆ?

PC:YOUTUBE

ಹರಿಯಾಣದ ಹಲವಾರು ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಂಡು ಇಲ್ಲಿನ ಸ್ತನೇಶ್ವರ ದೇವಾಲಯಕ್ಕೆ ತೆರಳಬಹುದು. ಸಮೀಪದ ವಿಮಾನ ನಿಲ್ದಾಣ ಚಂಡೀಘಡ್ ವಿಮಾನ ನಿಲ್ದಾಣ. ಸಮೀಪದ ರೈಲ್ವೆ ನಿಲ್ದಾಣವೆಂದರೆ ಥಾನೇಶ್ವರ ಪಟ್ಟಣದಿಂದ ಕೇವಲ 1 ಕಿ.ಮೀ, ಕುರುಕ್ಷೇತ್ರ ಜೂನಿಯರ್ ರೈಲ್ವೆ ನಿಲ್ದಾಣ 3 ಕಿ.ಮೀ ಮತ್ತು ಧೋಡಾ ರೈಲ್ವೆ ನಿಲ್ದಾಣವು ಸ್ತನೇಶ್ವರ ಮಹಾದೇವ್ ದೇವಾಲಯದಿಂದ 4 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಅಥವಾ ಭಕ್ತರು ಸುಲಭವಾಗಿ ರಸ್ತೆ ಸಾರಿಗೆಯಂತಹ ಬಸ್ಸುಗಳು, ಕ್ಯಾಬ್‍ಗಳು ಮತ್ತು ಟ್ಯಾಕ್ಸಿಗಳ ಮೂಲಕ ರಾಜ್ಯದಾದ್ಯಂತ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more