Search
  • Follow NativePlanet
Share
» »ಶ್ರೀರಂಗಪಟ್ಟಣ ವೈವಿಧ್ಯಮಯ ಸೌಂದರ್ಯತೆಗಳನ್ನೊಳಗೊಂಡ ಸ್ಥಳ

ಶ್ರೀರಂಗಪಟ್ಟಣ ವೈವಿಧ್ಯಮಯ ಸೌಂದರ್ಯತೆಗಳನ್ನೊಳಗೊಂಡ ಸ್ಥಳ

By Manjula Balaraj Tantry

ಭಾರತವು ವೈವಿಧ್ಯಮಯ ಸಂಸ್ಕೃತಿಗಳು, ಸಂಪ್ರದಾಯಗಳು, ವನ್ಯಜೀವಿ ಮತ್ತು ಪ್ರಕೃತಿಗಳಿಗೆ ನೆಲೆಯಾಗಿದೆ. ಇದು ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಸ್ಥಳಗಳನ್ನು ಒಂದು ಚೌಕಟ್ಟಿನಲ್ಲಿರಿಸಿದ ದೇಶವಾಗಿದೆ.ನೀವು ಭಾರತದ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಿದ್ದರೆ, ಶ್ರೀರಂಗಪಟ್ಟಣವು ಎಲ್ಲಾ ಇತಿಹಾಸ ಪ್ರಿಯರಿಗೆ ಭೇಟಿ ನೀಡಬೇಕಾದ ಸ್ಥಳವಾಗಿದೆ .

ಸಂಗಮಕ್ಕೆ ಪ್ರಸಿದ್ಧವಾದ ಶ್ರೀರಂಗಪಟ್ಟಣವು ಕರ್ನಾಟಕದ ಮಂಡ್ಯ ಜಿಲ್ಲೆಯ ಕಾವೇರಿಯಿಂದ ರಚಿಸಲ್ಪಟ್ಟ ನದಿ ದ್ವೀಪವಾಗಿದೆ. ಇದು ಮೈಸೂರಿನ ಟಿಪ್ಪು ಸುಲ್ತಾನ್ ಆಳ್ವಿಕೆಯ ವೇಳೆ ಮೈಸೂರಿನ ರಾಜಧಾನಿಯಾಗಿತ್ತು.ಈ ಸುಂದರವಾದ ಸ್ಥಳವು ಪ್ರಕೃತಿಯ ಮೋಡಿ ಮಾತ್ರವಲ್ಲದೇ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ

ಈ ತಾಣವು ತನ್ನ ಸುತ್ತಲಿರುವ ಪ್ರತಿಷ್ಟಿತ ಆಕರ್ಷಣೆಗಳ ಸಂಪೂರ್ಣ ಉಪಸ್ಥಿತಿಯ ಕಾರಣ ಈ ಪ್ರಸಿದ್ದವಾದ ಸ್ಥಳವು ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾಗಿ ಹೆಸರಿಸಲ್ಪಟ್ಟಿದೆ. ಮೈಸೂರುನಿಂದ ಕೇವಲ 15 ಕಿ.ಮೀ ದೂರದಲ್ಲಿ ಶ್ರೀರಂಗಪಟ್ಟಣವನ್ನು ಬೆಂಗಳೂರಿನಿಂದ ಮತ್ತು ಇತರ ಪಟ್ಟಣಗಳಿಂದ ರೈಲಿನಿಂದ ಮತ್ತು ಬಸ್ ಮೂಲಕ ಸುಲಭವಾಗಿ ತಲುಪಬಹುದು.

ವರ್ಷದುದ್ದಕ್ಕೂ ಪ್ರಮುಖ ಆಕರ್ಷಣೆಗಳನ್ನೊಳಗೊಂಡ ಶ್ರೀರಂಗಪಟ್ಟಣವು ಅನೇಕ ಆಸಕ್ತಿದಾಯಕ ಸ್ಥಳಗಳು ಮಾತ್ರವಲ್ಲದೆ ದೇವಾಲಯಗಳನ್ನೊಳಗೊಂಡಿದೆ ಅಲ್ಲದೆ ಉದ್ಯಾನವನಗಳು ಮತ್ತು ಐತಿಹಾಸಿಕ ಸ್ಮಾರಕಗಳು.

ದರಿಯಾ ದೌಲತ್ ಅರಮನೆ

ದರಿಯಾ ದೌಲತ್ ಅರಮನೆ

ಅದ್ಭುತವಾದ ತೋಟಗಳು ಮತ್ತು ಪ್ರಶಾಂತ ಪ್ರಕೃತಿಗಳ ಮಧ್ಯೆ ಇದನ್ನು ನಿರ್ಮಿಸಲಾಗಿದೆ. ಇದು ಇಂಡೋ ಸೆರಾಸೆನಿಕ್ ಶೈಲಿಯಲ್ಲಿದ್ದು ಈ ಅರಮನೆಯನ್ನು 1784 ರಲ್ಲಿ ಎತ್ತರದ ಆಯತಾಕಾರದ ವೇದಿಕೆಯಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದರು. ಈ ಅರಮನೆಯ ಒಂದು ಅನುಕರಣೀಯ ಪ್ರತಿಕೃತಿಯಾಗಿದ್ದು, ಬೇಸಿಗೆಯ ಸ್ಥಳವೆಂದೂ ಕೂಡಾ ಕರೆಯಲ್ಪಡುತ್ತದೆ. ಬೆಂಗಳೂರಿನಲ್ಲಿಯೂ ಕೂಡಾ ಕಾಣಬಹುದಾಗಿದೆ ಇದನ್ನು 1791ರಲ್ಲಿ ಟಿಪ್ಪು ಸುಲ್ತಾನನಿಂದ ನಿರ್ಮಿಸಲಾಯಿತು.


PC: Akash

2) ಶ್ರೀರಂಗನಾಥ ಸ್ವಾಮಿ ದೇವಾಲಯ

2) ಶ್ರೀರಂಗನಾಥ ಸ್ವಾಮಿ ದೇವಾಲಯ

ಇದು ದಕ್ಷಿಣ ಭಾರತದ ಒಂದು ಪ್ರಾಚೀನ ದೇವಾಲಯವಾಗಿದ್ದು ರಂಗನಾಥ ದೇವರಿಗೆ ಅರ್ಪಿತವಾಗಿದೆ. ವಿಷ್ಣುವಿನ ಒಂದು ರೂಪ ಮತ್ತು 9ನೇ ಶತಮಾನದಲ್ಲಿ ಗಂಗಾ ರಾಜವಂಶದ ಆಡಳಿತಗಾರರಿಂದ ನಿರ್ಮಿಸಲ್ಪಟ್ಟಿತು. ಈ ಇತಿಹಾಸ ಪೂರ್ವ ದೇವಾಲಯವು ಕಾವೇರಿ ನದಿಯುದ್ದಕ್ಕೂ ಇರುವ ಪ್ರಮುಖ ಐದು ಯಾತ್ರಾ ಸ್ಥಳಗಳಲ್ಲೊಂದಾಗಿದೆ. ಇದನ್ನು ಒಟ್ಟಾಗಿ ಪಂಚರಂಗ ಕ್ಷೇತ್ರವೆಂದು ಕರೆಯಲಾಗುತ್ತದೆ.


PC: K R Ramesh

3)ಸಂಗಮ್

3)ಸಂಗಮ್

ಇದು ಮೂರು ಪವಿತ್ರ ನದಿಗಳಾದ, ಕಾವೇರಿ, ಲೋಕಪಾವನಿ ಮತ್ತು ಹೇಮಾವತಿಗಳ ಸಂಗಮವಾಗಿದೆ. ಈ ಪವಿತ್ರ ನದಿಗಳ ಸಂಗಮದಲ್ಲಿ ಪ್ರಚೋದಿಸುವಂತಹ ಪ್ರಶಾಂತತೆ ಮತ್ತು ಶಾಂತಿಯಿದೆ ಮತ್ತು ಇಲ್ಲಿಯ ಟಿಪ್ಪು ಸಾಮ್ರಾಜ್ಯದ ಕಾಲಾ ಕ್ರಮಣಿಕೆಗಳು ಸಂದರ್ಶಕರ ಗಮನ ಸೆರೆಹಿಡಿಯುವಂತಿದೆ.

PC: Ashwin Kumar

4) ಟಿಪ್ಪು ಸುಲ್ತಾನ್ ಗುಂಬಜ್

4) ಟಿಪ್ಪು ಸುಲ್ತಾನ್ ಗುಂಬಜ್

ದೋಷರಹಿತವಾಗಿ ನಿರ್ಮಿಸಲಾದ ಈ ಭವ್ಯ ಸಮಾಧಿಯು ಅದರ ಮೋಡಿ ಮತ್ತು ಕಲಾತ್ಮಕತೆಗೆ ಸೊಬಗು ಕೊಡುವಂತಹ ಭವ್ಯ ಉದ್ಯಾನಗಳಿಂದ ಆವೃತವಾಗಿದೆ.ಇದು ಟಿಪ್ಪು ಸುಲ್ತಾನ್ ಅವನ ತಂದೆ, ಹೈದರ್ ಅಲಿ, ಮತ್ತು ಅವನ ತಾಯಿ ಫಾತಿಮಾ ಬೇಗಮ್ ಅವರ ಇರುವಿಕೆಯ ಅವಶೇಷಗಳನ್ನು ಹೊಂದಿದೆ. ಕರಕುಶಲ ಬಾಗಿಲು ಚೌಕಟ್ಟುಗಳು ಮತ್ತು ಸಮಾಧಿಯ ಸ್ತಂಭಗಳು ಸುತ್ತಮುತ್ತಲಿನ ಸೌಂದರ್ಯತೆಯನ್ನು ಇನ್ನೂ ಹೆಚ್ಚಿಸುತ್ತವೆ.


PC: Cchandranath84


5) ಶ್ರೀರಂಗಪಟ್ಟಣ ಕೋಟೆ

5) ಶ್ರೀರಂಗಪಟ್ಟಣ ಕೋಟೆ

ಈ ಪಟ್ಟಣದ ಪಶ್ಚಿಮ ಭಾಗದಲ್ಲಿ ಕಂಡುಬರುವ ಈ ಸಣ್ಣ ಕೋಟೆಯು ಭದ್ರತೆ ಮತ್ತು ಎಚ್ಚರಿಕೆಯನ್ನು ಪರಿಗಣಿಸಿ ನಿರ್ಮಿಸಲಾದ ಮೇರು ಕಲಾಕೃತಿಯನ್ನು ಪ್ರತಿಬಿಂಬಿಸುತ್ತದೆ. ಈ ಕೋಟೆಯನ್ನು ದ್ವಿ ಗೋಡೆಗಳಿಂದ ಸುತ್ತುವರಿದಿದೆ, ಅದರ ಮೂಲಕ ಬಂದೂಕಿನ ಹಿಂಬಾಗವನ್ನು (breach ) ಕಾಣಬಹುದಾಗಿದೆ, ಇದನ್ನು ಬ್ರಿಟಿಷ್ ಸೈನಿಕರು ಮಾಡಿದರು.

ಈ ಕೋಟೆಯಲ್ಲಿ ಮರಣ ದಂಡನೆ ಮತ್ತು ಬ್ರಿಟಿಷ್ ಸೈನಿಕರನ್ನು ಬಂದಿಸಲ್ಪಡಲಾಗಿದ್ದ ಕತ್ತಲೆ ಕೋಣೆಯೂ ಕೂಡಾ ಇಲ್ಲಿದೆ. ಇತಿಹಾಸದ ಪುಟಗಳನ್ನು ತಿರುಗಿಸಿದರೆ ಈ ಜಾಗವು ತನ್ನ ಪ್ರಾಮುಖ್ಯತೆ ಮತ್ತು ಶೌರ್ಯಗಳನ್ನು ಪ್ರತಿಬಿಂಬಿಸುತ್ತದೆ.

PC: Chitra sivakumar

6.ಬೈಲೆಯ್ಸ್ ಡಂಜಿಯನ್

6.ಬೈಲೆಯ್ಸ್ ಡಂಜಿಯನ್

ಹಾಗಾದರೆ ಇವೆಲ್ಲ ಶ್ರೀರಂಗಪಟ್ಟಣದ ಪ್ರಮುಖ ಆಕರ್ಷಣೀಯ ಸ್ಥಳಗಳಾದರೆ ಡಂಜಿಯನ್, ಲಾರ್ಡ್ ಹ್ಯಾರಿಸ್ ಮನೆ, ಸ್ಕಾಟ್ ನ ಬಂಗಲೆ, ಗ್ಯಾರಿಸನ್ ಸ್ಮಶಾನ ಇತ್ಯಾದಿ. ಇವು ತಿಳಿಯಬಹುದಾದ ಇನ್ನಿತರ ಆಸಕ್ತಿದಾಯಕ ಐತಿಹಾಸಿಕ ಸ್ಥಳಗಳಾಗಿವೆ. ಇತಿಹಾಸದ ನಡುವೆ ಸ್ವಲ್ಪ ಹೆಚ್ಚು ಪ್ರಕೃತಿ ಮತ್ತು ವನ್ಯಜೀವಿಗಳೊಂದಿಗೆ ಆನಂದಿಸಲು ನೀವು ಬಯಸುತ್ತಿದ್ದರೆ, ರಂಗನತಿಟ್ಟು ಪಕ್ಷಿ ಧಾಮವು ಶ್ರೀರಂಗಪಟ್ಟಣದಿಂದ ಕೇವಲ 3 ಕಿ.ಮೀ ದೂರದಲ್ಲಿದೆ.

ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ವರೆಗೆ, ತಾಪಮಾನವು ಗರಿಷ್ಟ ಮತ್ತು ಹವಾಮಾನವು ಆಹ್ಲಾದಕರ ಮತ್ತು ಅನುಕೂಲಕರವಾಗಿರುತ್ತದೆ. ಉಷ್ಣಾಂಶ ಮತ್ತು ಮಳೆಯ ಹೆಚ್ಚಳದಿಂದಾಗಿ ವಾತಾವರಣವು ಸೂಕ್ತವಲ್ಲವಾದುದರಿಂದ ಏಪ್ರಿಲ್ ನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡಬಾರದು.

PC: Vinayaraj

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more