Search
  • Follow NativePlanet
Share
» »ಶೃಂಗೇರಿ ಶಾರದೆಯ ಸನ್ನಿಧಾನದಲ್ಲಿರುವ ಮೂಗುತ್ತಿ ಮೀನು ನೋಡಿದ್ರೆ ಅದೃಷ್ಟವಂತೆ

ಶೃಂಗೇರಿ ಶಾರದೆಯ ಸನ್ನಿಧಾನದಲ್ಲಿರುವ ಮೂಗುತ್ತಿ ಮೀನು ನೋಡಿದ್ರೆ ಅದೃಷ್ಟವಂತೆ

ಇನ್ನೇನು ದಸರಾ ಹಬ್ಬ ಶುರುವಾಗಲಿದೆ. ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ನವದುರ್ಗೇಯರನ್ನು ಪೂಜಿಸಲಾಗುವುದು. ಈ ನವರಾತ್ರಿಯಂದು ಪ್ರಸಿದ್ಧ ಕ್ಷೇತ್ರದ ದರ್ಶನ ಮಾಡಿದ್ರೆ ಸಂಕಷ್ಟಗಳು ನಿವಾರಣೆಯಾಗುತ್ತದೆ ಎನ್ನುತ್ತಾರೆ. ಇಂದು ನಾವು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನೆಲೆನಿಂತಿರುವ ಶೃಂಗೇರಿ ಶಾರದಾ ಮಾತೆಯ ಬಗ್ಗೆ ತಿಳಿಸಲಿದ್ದೇವೆ. ಶೃಂಗೇರಿಯ ಈ ಶಾರದಾ ಪೀಠವನ್ನು ಸ್ಥಾಪಿಸಿದ್ದು ಆದಿ ಶಂಕರಾಚಾರ್ಯರು.

ಪುರಾಣ ಕಥೆ

ಪುರಾಣ ಕಥೆ

PC: Raja Ravi Varma

ಒಮ್ಮೆ ಶಂಕರಾಚಾರ್ಯರು ತುಂಗಾ ನದಿ ತೀರದಲ್ಲಿ ಸಂಚರಿಸುತ್ತಿರುವಾಗ, ಒಂದು ಘಟ ಸರ್ಪ ತನ್ನ ಹೆಡೆಯನ್ನು ಬಿಚ್ಚಿ ಒಂದು ಗರ್ಭಿಣಿ ಕಪ್ಪೆಯನ್ನು ಸೂರ್ಯನ ಬಿಸಿಲಿನಿಂದ ಕಾಪಾಡುವುದನ್ನು ಕಂಡರು. ತನ್ನ ನೈಸರ್ಗಿಕ ವೈರಿ ಆದ ಕಪ್ಪೆಗೆ ಅದು ತೋರುತ್ತಿರುವ ಔದಾರ್ಯವನ್ನು ಕಂಡು ಶಂಕರಾಚಾರ್ಯರಿಗೆ ಶೃಂಗೇರಿ ನಿಜವಾಗಿಯೂ ಒಂದು ವಿಶಿಷ್ಟ ಸ್ಥಳ ಎನಿಸಿತು. ಅಲ್ಲೇ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ.

ನೀವು ಇಷ್ಟಪಟ್ಟವರನ್ನೇ ಬಾಳ ಸಂಗಾತಿಯನ್ನಾಗಿ ಕರುಣಿಸುವ ದೇವಾಲಯ ಇದು !<br /> ನೀವು ಇಷ್ಟಪಟ್ಟವರನ್ನೇ ಬಾಳ ಸಂಗಾತಿಯನ್ನಾಗಿ ಕರುಣಿಸುವ ದೇವಾಲಯ ಇದು !

ಯಜುರ್ವೇದ ಪೀಠ

ಯಜುರ್ವೇದ ಪೀಠ

PC: Naveenbm

ಆದಿ ಶಂಕರಾಚಾರ್ಯರು ಸ್ಥಾಪಿಸಿದಂತಹ ಈ ಪುಣ್ಯಕ್ಷೇತ್ರವು ಯಜುರ್ವೇದ ಪೀಠವಾಗಿದೆ. 12ವರ್ಷಗಳನ್ನು ಶಂಕರಾಚಾರ್ಯರು ಇಲ್ಲೇ ಕಳೆದಿದ್ದರು. ಮಕ್ಕಳನ್ನು ಅಕ್ಷರಾಭ್ಯಾಸ ಮಾಡಿದ್ರೆ ಜ್ಞಾನಾರ್ಜನೆ ಹೆಚ್ಚುತ್ತದೆ ಎನ್ನಲಾಗುತ್ತದೆ. ಹಾಗಾಗಿ ಹೆಚ್ಚಿನ ಜನರು ತಮ್ಮ ಮಕ್ಕಳನ್ನು ಅಕ್ಷರಾಭ್ಯಾಸಕ್ಕಾಗಿ ಇಲ್ಲಿಗೆ ಕರೆತರುತ್ತಾರೆ.

ಮೂಗುತ್ತಿ ಮೀನು

ಮೂಗುತ್ತಿ ಮೀನು

PC:Ashok Prabhakaran

ಇಲ್ಲಿನ ತುಂಗಾ ನದಿಯ ನೀರಿನಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತದಂತೆ. ಶಂಕರಾಚಾರ್ಯರು ಒಂದು ಮೀನನ್ನು ತಂದು ಆ ಮೀನಿಗೆ ಮೂಗುತ್ತಿ ಹಾಕಿದ್ದರಂತೆ. ಆ ಮೀನನ್ನು ಯಾರೂ ಹಿಡಿಯುವುದಿಲ್ಲ. ಇಲ್ಲಿನ ಸಾವಿರಾರು ಮೀನುಗಳ ನಡುವೆ ಇರುವ ಆ ಮೂಗುತ್ತಿ ಮೀನನ್ನು ನೋಡಿದರೆ ಒಳ್ಳೆಯದು ಎನ್ನಲಾಗುತ್ತದೆ.

ಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರುಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರು

ನವರಾತ್ರಿ ಉತ್ಸವ

ನವರಾತ್ರಿ ಉತ್ಸವ

PC:Vivek Urs

ನವರಾತ್ರಿ ಉತ್ಸವವನ್ನು ಇಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶಾರದೆಗೆ ವಿಶೇಷ ಶೃಂಗಾರ, ಆಭರಣಗಳನ್ನು ತೊಡಿಸಲಾಗುತ್ತದೆ. ವಿಶೇಷ ಪೂಜೆ ನಡೆಯುತ್ತದೆ. ಆಭರಣಗಳಿಂದಾಲಂಕೃತವಾದ ದೇವಿಯನ್ನು ಮೆರವಣಿಗೆ ಕೊಂಡೊಯ್ಯಲಾಗುತ್ತದೆ.

ದೇವಾಲಯ ಆನೆಗಳು

ದೇವಾಲಯ ಆನೆಗಳು

ಈ ದೇವಾಲಯದಲ್ಲಿ ಆನೆಗಳಿವೆ. ಇವು ಭಕ್ತರನ್ನು ತನ್ನತ್ತ ಆಕರ್ಷಿಸುತ್ತದೆ. ಈ ಆನೆಗಳಿಂದ ಆಶೀರ್ವಾದ ಪಡೆದರೆ ಒಳ್ಳೆಯದು ಎನ್ನಲಾಗುತ್ತದೆ. ಹಾಗಾಗಿ ಭಕ್ತರು ಇಲ್ಲಿನ ಆನೆಗಳನ್ನು ಮುಟ್ಟಿ ಆಶಿರ್ವಾದ ಪಡೆಯುತ್ತಾರೆ, ಹಾಗಾಗಿ ದಿನಕ್ಕೆರಡು ಬಾರಿ ಈ ಆನೆಗಳನ್ನು ದೇವಾಲಯದ ಪ್ರಾಂಗಣದಲ್ಲಿ ತರಲಾಗುತ್ತದೆ.

ಗುಲ್ಬರ್ಗಾದಲ್ಲಿದ್ದಾಳಂತೆ ಜಮ್ಮುವಿನ ವೈಷ್ಣೋದೇವಿಗುಲ್ಬರ್ಗಾದಲ್ಲಿದ್ದಾಳಂತೆ ಜಮ್ಮುವಿನ ವೈಷ್ಣೋದೇವಿ

ವಿದ್ಯಾ ಶಂಕರ ದೇವಸ್ಥಾನ

ವಿದ್ಯಾ ಶಂಕರ ದೇವಸ್ಥಾನ

PC:Vijayakumarblathur

ಈ ಪುಣ್ಯ ಸ್ಥಳವನ್ನು ಕ್ರಿ.ಶ 1338ರಲ್ಲಿ ಇಲ್ಲೇ ಸುಮಾರು 14ನೆ ಶತಮಾನದಲ್ಲಿ ವಾಸವಾಗಿದ್ದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರ ಗುರುಗಳಾದ ಸಂತ ವಿದ್ಯಾರಣ್ಯರು ಕಟ್ಟಿಸಿದರು. ಈ ದೇವಸ್ಥಾನವು ದ್ರಾವಿಡ, ಚಾಲುಕ್ಯ, ದಕ್ಷಿಣ ಭಾರತ ಮತ್ತು ವಿಜಯನಗರದ ವಾಸ್ತು ಶಿಲ್ಪ ಶೈಲಿಯನ್ನು ಹೋಲುತ್ತದೆ.

ಚತುಷ್ಕೋನ ದೇವಾಲಯ

ಚತುಷ್ಕೋನ ದೇವಾಲಯ

PC:Paneer06

ವಿಜಯನಗರ ಸಾಮ್ರಾಜ್ಯದ ಕೊಡುಗೆಯನ್ನು ವರ್ಣಿಸುವ ಹಲವಾರು ಕೆತ್ತನೆಯೆನ್ನು ಇಲ್ಲಿ ಕಾಣಬಹುದು. ಈ ಚತುಷ್ಕೋನ ದೇವಾಲಯ ರಾಶಿ ಕಂಬಗಳು ಎಂದೇ ಖ್ಯಾತವಾಗಿರುವ 12ಕಂಬಗಳನ್ನು ಹೊಂದಿದೆ. ಎಲ್ಲ ಕಂಬಗಳು ಕಗೋಳ ಶಾಸ್ತ್ರಕ್ಕನುಗುಣವಾಗಿ ಕೆತ್ತಲ್ಪಟ್ಟ 12ರಾಶಿ ಚಕ್ರ ಚಿನ್ಹೆಗಳನ್ನು ಪ್ರದರ್ಶಿಸುತ್ತವೆ.

ಇಲ್ಲಿಗೆ ಹೋದರೆ ಖಂಡಿತಾ ನಿಮ್ಮ ಗುರುಬಲ ಬದಲಾಗುತ್ತಂತೆ !ಇಲ್ಲಿಗೆ ಹೋದರೆ ಖಂಡಿತಾ ನಿಮ್ಮ ಗುರುಬಲ ಬದಲಾಗುತ್ತಂತೆ !

ಅನ್ನದಾಸೋಹ

ಅನ್ನದಾಸೋಹ

ಇಲ್ಲಿ ಪ್ರತಿದಿನವು ಅನ್ನದಾಸೋಹ ನಡೆಯುತ್ತದೆ. ಸಮೀಪದ ಶಾಲೆಯ ಮಕ್ಕಳಿಗೂ ಶ್ರೀ ಕ್ಷೇತ್ರದಿಂದ ಅನ್ನದಾಸೋಹ ನಡೆಯುತ್ತದೆ. ಇಡೀ ದೇಶಾದ್ಯಂತದ ಭಕ್ತರು ಇಲ್ಲಿ ಬಂದು ಶಾರದೆಯ ದರ್ಶನ ಪಡೆಯುತ್ತಾರೆ. ಭಕ್ತರು ಶಾರದೆಯ ಅನ್ನಪ್ರಸಾದವನ್ನು ಸ್ವೀಕರಿಸಿ ಶಾರದೆಯ ಕೃಪಕಟಾಕ್ಷಕ್ಕೆ ಪಾತ್ರರಾಗುತ್ತಾರೆ,

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Ashwin06k


ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಶೃಂಗೇರಿ ಬೆಂಗಳೂರಿನಿಂದ ಸುಮಾರು 340 ಕಿಲೋಮೀಟರು ದೂರದಲ್ಲಿದೆ ಮತ್ತು ಉತ್ತಮ ಸಾರಿಗೆ ಸಂಪರ್ಕವಿದೆ. ಮಂಗಳೂರು, ಶಿವಮೊಗ್ಗ ಮತ್ತು ಕಡೂರು ಹತ್ತಿರದ ರೈಲ್ವೆ ನಿಲ್ದಾಣಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X