Search
  • Follow NativePlanet
Share
» »ಅಮೋಘ ರಂಗನಾಯಕ ಸ್ವಾಮಿ ದೇವಾಲಯ!

ಅಮೋಘ ರಂಗನಾಯಕ ಸ್ವಾಮಿ ದೇವಾಲಯ!

By Vijay

ಭಾರತವು ಮೊದಲಿನಿಂದಲೂ ಶ್ರಿಮಂತವಾದ ಸಂಸ್ಕೃತಿ ಹಾಗೂ ಸಂಪ್ರದಾಯಗಳಿಂದ ಹೆಸರುವಾಸಿಯಾದ ದೇಶವಾಗಿದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕತೆ, ಆಧ್ಯಾತ್ಮಿಕತೆಗಳು ದೇಶದ ನರನಾಡಿಗಳಲ್ಲಿ ಸೇರಿಹೋಗಿದೆ. ಅಂತೆಯೆ ಸಾಕಷ್ಟು ಅಮೋಘವಾದ ಧಾರ್ಮಿಕ ಕ್ಷೇತ್ರಗಳನ್ನು ದೇಶಾದ್ಯಂತ ಎಲ್ಲೆಡೆ ಕಾಣಬಹುದು.

ಉತ್ತರ ಭಾರತವೆ ಇರಲಿ ಅಥವಾ ದಕ್ಷಿಣ ಭಾರತವೆ ಇರಲಿ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಇಂಬು ನೀಡುವ ಅನೇಕ ಮಹತ್ತರವಾದ ದೇವಾಲಯಗಳು, ವಾಸ್ತುಶಿಲ್ಪದಿಂದ ಕಂಗೊಳಿಸುವ ದೇವಾಲಯಗಳು, ಜಾಗೃತ ಸ್ಥಳಗಳಾಗಿ ಜನರನ್ನು ಆಕರ್ಷಿಸುವ ದೇವಾಲಯಗಳು, ಅಪರೂಪದ ದೇವರುಗಳನ್ನು ಹೊಂದಿರುವ ದೇವಾಲಯಗಳು ಸಾಕಷ್ಟು ಕಂಡುಬರುತ್ತವೆ.

ನೂತನ ತೆಲಂಗಾಣ ರಾಜ್ಯದ ಪ್ರವಾಸಿ ಸ್ಥಳಗಳು

ಪ್ರಸ್ತುತ ಲೇಖನದಲ್ಲಿ ವಿಷ್ಣು ದೇವರಿಗೆ ಮುಡಿಪಾದ ಸಾಕಷ್ಟು ಪುರಾತನವಾದ ಪ್ರಮುಖ ದೇವಾಲಯವೊಂದರ ಕುರಿತು ತಿಳಿಸಲಾಗಿದೆ. ಇದೆ ಶ್ರೀ ರಂಗನಾಯಕ ಸ್ವಾಮಿ ದೇವಾಲಯ. ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸುಂದರ ಹಾಗೂ ಅಪರೂಪದ ದೇವಾಲಯ ಇದಾಗಿದೆ.

ಮೆಹಬೂಬ್ ನಗರ

ಮೆಹಬೂಬ್ ನಗರ

ಪ್ರಸ್ತುತ ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯಲ್ಲಿರುವ ಶ್ರೀರಂಗಪುರಂ ಎಂಬ ಗ್ರಾಮದಲ್ಲಿರುವ ಶ್ರೀ ರಂಗನಾಯಕ ಸ್ವಾಮಿ ದೇವಾಲಯವು ಸಾಕಷ್ಟು ಜನಪ್ರೀಯತೆಗಳಿಸಿರುವ ಅದ್ಭುತ ಧಾರ್ಮಿಕ ತಾಣವಾಗಿದೆ.

ಚಿತ್ರಕೃಪೆ: Naidugari Jayanna

ಕೃಷ್ಣದೇವರಾಯ

ಕೃಷ್ಣದೇವರಾಯ

ಸೂಕ್ಷ್ಮವಾಗಿ ಇತಿಹಾಸ ಗಮನಿಸಿದಾಗ ಮೊದಲಿನಿಂದಲೂ ಕನ್ನಡನಾಡು ಹಾಗೂ ತೆಲುಗು ನಾಡುಗಳಿಗೆ ವಿಶೇಷವಾದ ಸಂಬಂಧವಿದೆ. ಅದರಂತೆ ಆ ಸಂಬಂಧವು ಇಲ್ಲಿಯೂ ಅನಾವರಣಗೊಳ್ಳುತ್ತದೆ, ಕಾರಣ ಈ ದೇವಾಲಯವು ವಿಜಯನಗರದ ಕೃಷ್ಣದೇವರಾಯನಿಂದ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Naidugari Jayanna

ಹರಡಿತ್ತು

ಹರಡಿತ್ತು

ಏಕೆಂದರೆ ವಿಜಯನಗರ ಸಾಮ್ರಾಜ್ಯವು ತೆಲುಗುನಾಡಿನವರೆಗೂ ವಿಸ್ತರಿಸಲ್ಪಟ್ಟಿತ್ತು. ಒಂದೊಮ್ಮೆ ಕೃಷ್ಣದೇವರಾಯನು ರಂಗನಾಯಕನ ದೇವಾಲಯವೊಂದಕ್ಕೆ ಭೇಟಿ ನೀಡಿದ್ದಾಗ ಅದರ ಸೌಂದರ್ಯಕ್ಕೆ ಮಾರು ಹೋದನು ಹಾಗೂ ತನ್ನ ಸಾಮರಾಜ್ಯವಾದ ವಿಜಯನಗರಂ ಎಂಬಲ್ಲೂ ಒಂದು ದೇವಾಲಯವನ್ನು ನಿರ್ಮಿಸಬೇಕೆಂದು ಬಯಸಿದನು.

ಚಿತ್ರಕೃಪೆ: Naidugari Jayanna

ವಿಗ್ರಹ

ವಿಗ್ರಹ

ಹೀಗಿರುವಾಗ ಒಂದು ರಾತ್ರಿ ಅವನ ಕನಸಿನಲ್ಲಿ ವಿಷ್ಣು ಪ್ರತ್ಯಕ್ಷನಾಗಿ ಹಾರುತ್ತಿರುವ ಗರುಡವೊಂದನ್ನು ಹಿಂಬಾಲಿಸು ಹಾಗೂ ಅದು ನಿನ್ನನ್ನು ನಾನಿರುವ ವಿಗ್ರಹವೊಂದರ ಬಳಿ ಕರೆದೊಯ್ಯುತ್ತದೆ ಎಂದು ಹೇಳಿದನು.

ಚಿತ್ರಕೃಪೆ: Naidugari Jayanna

ವಿಗ್ರಹವೂ ದೊರೆಯಿತು

ವಿಗ್ರಹವೂ ದೊರೆಯಿತು

ಮರುದಿನ ಅದೆ ರೀತಿಯಾಗಿ ಕೃಷ್ಣದೇವರಾಯನು ಗರುಡವೊಂದನ್ನು ನೋಡಿ ಅದನ್ನು ಹಿಂಬಾಲಿಸಿದನು. ಪವಾಡವೆಂಬಂತೆ ಆ ಗರುಡ ಕುಳಿತ ಸ್ಥಳದಲ್ಲಿ ಹುಡುಕಾಡಿದಾಗ ಅವನಿಗೆ ರಂಗನಾಯ್ಕ ಸ್ವಾಮಿಯ ವಿಗ್ರಹ ದೊರೆಯಿತು.

ಚಿತ್ರಕೃಪೆ: Naidugari Jayanna

ದೇವಾಲಯ ನಿರ್ಮಾಣ

ದೇವಾಲಯ ನಿರ್ಮಾಣ

ಹಾಗೆ ವಿಗ್ರಹ ಸಿಕ್ಕ ಸ್ಥಳವು ಕೊತಕೋಟ ಹಾಗೂ ಕನ್ವ್ಯಾಪಲ್ಲಿ ಎಂಬ ಎರಡು ಗುಡ್ಡಗಳ ಮಧ್ಯದಲ್ಲಿತ್ತು. ಬಳಿಯಲ್ಲೆ ರತ್ನ ಪುಷ್ಕರಿಣಿ ಕೆರೆಯಿತ್ತು. ಅಲ್ಲಿಯೆ ದೇವಾಲಯವನ್ನು ರಾಜ ನಿರ್ಮಾಣ ಮಾಡಿದನು.

ಚಿತ್ರಕೃಪೆ: Naidugari Jayanna

ಕಾಣಬಹುದು

ಕಾಣಬಹುದು

ಪ್ರಸ್ತುತ ರಂಗನಾಯಕ ಸ್ವಾಮಿಯ ದೇವಾಲಯವು ವಿಜಯನಗರದ ಶ್ರೀಮಂತ ವಾಸ್ತುಶಿಲ್ಪವನ್ನು ಅನಾವರಣಗೊಳಿಸುತ್ತದೆ. ದೇವಾಲಯದ ಗೋಪುರಗಳು ಸುಂದರವಾದ ಶಿಲ್ಪಗಳಿಂದ ಕೆತ್ತಲ್ಪಟ್ಟಿದೆ.

ಚಿತ್ರಕೃಪೆ: Naidugari Jayanna

ಜನದಟ್ಟಣೆ

ಜನದಟ್ಟಣೆ

ಪ್ರಸ್ತುತ ದೇವಾಲಯವು ಮೂರು ವಿಶೇಷವಾದ ಸಂದರ್ಭಗಳಲ್ಲಿ ಹೆಚ್ಚಿನ ಜನದಟ್ಟನೆಯನ್ನು ಕಾಣುತ್ತದೆ. ಸಂಕ್ರಾಂತಿಯಲ್ಲಿ ಆಚರಿಸಲಾಗುವ ಕೊಟೈ ಉತ್ಸವಲು ಸಾಕಷ್ಟು ಗಮನಸೆಳೆವ ಉತ್ಸವವಾಗಿದೆ. ಸುಮಾರು ಒಂದು ತಿಂಗಳದವರೆಗೆ ಇದನ್ನು ಆಚರಿಸಲಾಗುತ್ತದೆ.

ಚಿತ್ರಕೃಪೆ: Naidugari Jayanna

ಎಲ್ಲೆಡೆಯಿಂದ ಆಗಮನ

ಎಲ್ಲೆಡೆಯಿಂದ ಆಗಮನ

ಇದನ್ನು ಹೊರತುಪಡಿಸಿದರೆ ಮಾರ್ಚ್ ಸಮಯದಲ್ಲಿ ಜರುಗುವ ರಥೋತ್ಸವ ಹಾಗೂ ಶ್ರಾವಣ ಮಾಸಗಳನ್ನು ಬಲು ಅದ್ದೂರಿಯಾಗಿ ಇಲ್ಲಿ ಆಚರಿಸಲಾಗುತ್ತದೆ. ತೆಲಂಗಾಣದ ಮೂಲೆ ಮೂಲೆಗಳಿಂದ ಜನರು ಈ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸುತ್ತಾರೆ.

ಚಿತ್ರಕೃಪೆ: Naidugari Jayanna

ಬಲು ಹತ್ತಿರ

ಬಲು ಹತ್ತಿರ

ರಂಗನಾಯಕ ಸ್ವಾಮಿಯ ದೇವಾಲಯವಿರುವ ಸ್ಥಳದ ಸುತ್ತಮುತ್ತಲಿನಲ್ಲಿ ಕೆಲವು ವಿಶೇಷವಾದ ಸ್ಥಳಗಳು ಇರುವುದರಿಂದ ಈ ದೇವಾಲಯಕ್ಕೊಂದು ಪ್ರವಾಸ ಸದಾ ನೆನಪಿನಲ್ಲುಳಿಯುವಂಥದ್ದು. ಸುಮಾರು 20 ರಿಂದ 25 ಕಿ.ಮೀ ಸರಹದ್ದಿನಲ್ಲಿ ತಿರುಮಲಯ ಗುಟ್ಟ, ವನಪರ್ತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯ, ಬೀಚುಅಪಲ್ಲಿಯ ಆಂಜನೇಯ ಸ್ವಾಮಿ ದೇವಾಲಯ ಮುಂತಾದವುಗಳನ್ನು ನೋಡಬಹುದು.

ಚಿತ್ರಕೃಪೆ: Naidugari Jayanna

ಎಷ್ಟು ದೂರ?

ಎಷ್ಟು ದೂರ?

ರಂಗನಾಯಕಕ ಸ್ವಾಮಿ ದೇವಾಲಯವು ಪೆಬ್ಬೇರು ಪಟ್ಟಣದಿಂದ ಹತ್ತು ಕಿ.ಮೀ, ವನಪರ್ತಿಯಿಂದ 25 ಕಿ.ಮೀ, ಮೆಹಬೂಬ್ ನಗರದಿಂದ ನೂರು ಕಿ.ಮೀ ಹಾಗೂ ಹೈದರಾಬಾದ್ ನಗರದಿಂದ 160 ಕಿ.ಮೀ ಗಳಷ್ಟು ದೂರದಲ್ಲಿದ್ದು ಬಸ್ಸುಗಳು ತೆರಳಲು ಲಭ್ಯವಿದೆ.

ಚಿತ್ರಕೃಪೆ: Naidugari Jayanna

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more