• Follow NativePlanet
Share
» »ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

Written By:

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು. ಅದಿಶೇಷನ ಮೇಲೆ ಶ್ರೀ ರಾಮನು ಶಯನಿಸುವ ಭಂಗಿಯಲ್ಲಿನ ವಿಗ್ರಹವನ್ನು ನೀವು ಎಂದಿಗೂ ಕಂಡಿರುವುದಿಲ್ಲ ಎಂದು ಭಾವಿಸುತ್ತೇನೆ. ಈ ವಿಶೇಷವನ್ನು ಕಣ್ಣುತುಂಬಿಕೊಳ್ಳಬೇಕು ಎಂದು ಅಂದುಕೊಳ್ಳುವವರು ಮಾತ್ರ ಒಮ್ಮೆ ಆಂಧ್ರ ಪ್ರದೇಶ ರಾಜ್ಯದ ಪ್ರಕಾಶ ಜಿಲ್ಲೆಯ ಚಿಮಕುರ್ತಿ ಪಟ್ಟಣದಲ್ಲಿರುವ ಶ್ರೀ ರಾಮಾಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲೇಬೇಕು. ಶ್ರೀ ರಾಮನು ಆದಿಶೇಷನ ಮೇಲೆ ಶಯನಿಸುತ್ತಿರುವ ದೇವಾಲಯ ಬಹುಶಃ ದೇಶದಲ್ಲಿ ಇದೊಂದೇ ಆಗಿರಬಹುದು.

ತಾಟಿಕುಂಡ ರಾಮಯೋಗಿಯು 1972 ರಲ್ಲಿ ಆಂಜನೇಯಸ್ವಾಮಿ ದರ್ಶನ ಭಾಗ್ಯವನ್ನು ನೀಡಿದರು. ಆನಂತರ ಆಂಜನೇಯ ಸ್ವಾಮಿಯನ್ನು ಪ್ರತಿಷ್ಟಾಪಿಸಿ ಪೂಜೆಗಳು ಪ್ರಾರಂಭಿಸಿದರು. ಆ ದೇವಾಲಯವೇ ಈ ಶ್ರೀ ರಾಮಾಂಜನೇಯಸ್ವಾಮಿ ದೇವಾಲಯ.

 ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಭೂತ ಪ್ರೇತಗಳ ಗ್ರಹ ಭಾದೆಗಳಿಂದ ಹಿಂಸೆಯನ್ನು ಪಡುತ್ತಿರುವವರು ಈ ದೇವಾಲಯದಲ್ಲಿ ಸತತ 40 ದಿನಗಳ ಕಾಲ ಪ್ರದಕ್ಷಿಣೆ ಮಾಡಿದರೆ ಅವರಿಗೆ ಎಲ್ಲಾ ಒಳ್ಳೆಯದಾಗುತ್ತದೆ ಎಂದು ಭಕ್ತರು ನಂಬಿದ್ದಾರೆ. ಅನೇಕ ಬಾಧೆಗಳಿಂದ ವಿಮುಕ್ತಿ ಪಡೆದುಕೊಂಡು ಅನೇಕ ಮಂದಿ ಉತ್ತಮ ಆರೋಗ್ಯವಂತರಾಗಿದ್ದಾರೆ ಎಂದು ಪ್ರತ್ಯಕ್ಷ ಅನುಭವಕಾರರು ಹೇಳುತ್ತಾರೆ. ದೇವಾಲಯದಲ್ಲಿ ಕಳೆದ 3 ಶತಮಾನಗಳಿಂದ ಭಕ್ತರು ನಿತ್ಯವು ಶ್ರೀ ರಾಮನ ಜಪ ಪಾರಾಯಣ ನಿರ್ವಹಿಸುತ್ತಾರೆ.

 ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಆಂಜನೇಯಸ್ವಾಮಿ ಶ್ರೀರಾಮನ ಭಕ್ತನಾದ್ದರಿಂದ 1988 ಫೆಬ್ರವರಿ 6 ರಂದು ಶೇಷಶಯನ ಶ್ರೀರಾಮನ ವಿಗ್ರಹವನ್ನು ದೇವಾಲಯದಲ್ಲಿ ಪ್ರತಿಷ್ಟಾಪಿಸಿದರು. ಶ್ರೀರಾಮನ ಪಾದಗಳ ಸಮೀಪದಲ್ಲಿ ಆಂಜನೇಯಸ್ವಾಮಿಯು ಕುಳಿತುಕೊಂಡಿರುವ ವಿಗ್ರಹವನ್ನು ಭಕ್ತರು ಇಲ್ಲಿ ದರ್ಶನ ಮಾಡಿಕೊಳ್ಳಬಹುದು.

 ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಕೇರಳದಲ್ಲಿನ ಅನಂತಪದ್ಮನಾಭಸ್ವಾಮಿಯು ಶೇಷಶಯನ ಮಾಡಿರವ ಹಾಗೆಯೇ ಈ ದೇವಾಲಯದಲ್ಲಿಯೂ ಶೇಷನಾಗನ ಮೇಲೆ ಶ್ರೀ ರಾಮನು ಶಯನಿಸಿದ್ದಾನೆ. ಯಾರಾದರೂ ಮಾನಸಿಕವಾಗಿ ಭಾದೆಯನ್ನು ಅನುಭವಿಸುತ್ತಿರುವವರು ಈ ದೇವಾಲಯಕ್ಕೆ ಭೇಟಿ ನೀಡಿದರೆ ಪರಿಹಾರವಾಗುತ್ತದೆ ಎಂದು ಕೆಲವು ಭಕ್ತರ ನಂಬಿಕೆಯಾಗಿದೆ. ಕೋರಿದ ಕೋರಿಕೆಗಳನ್ನು ತಕ್ಷಣವಾಗಿ ನೇರವೇರಿಸುವ ಈ ದೇವಾಲಯವು ಒಂದು ಸಂಜೀವಿನಿ ಎಂದೇ ಹೇಳಬಹುದು.

 ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ದಿನನಿತ್ಯ ಎಷ್ಟೊ ಮಂದಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ, ಶನಿವಾರದಂದು ಗ್ರಹಪೀಡೆಗಳಿಂದ ಬಳಲುತ್ತಿರುವವರು ಹೆಚ್ಚು ಸಂಖ್ಯೆಯಲ್ಲಿ ಬರುತ್ತಾರೆ. ಸಂಜೆ 3 ಗಂಟೆಗಳ ಕಾಲ ಭಜನೆ ಹಾಗು ಕೀರ್ತನಾ ಕಾರ್ಯಕ್ರಮಗಳು ಪ್ರತ್ಯಕ್ಷವಾಗಿ ಕಾಣಬಹುದು.

 ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ದೇವಾಲಯದ ಆವರಣದಲ್ಲಿ 21 ದೇವತಾಮೂರ್ತಿಗಳನ್ನು ಪ್ರತಿಷ್ಟಾಪಿಸಿ ಪೂಜೆಯನ್ನು ನಿರ್ವಹಿಸುತ್ತಾರೆ. ಆಂಜನೇಯ ಸ್ವಾಮಿ ಭಜನೆ ಮಾಡುತ್ತಿರುವ ವಿಗ್ರಹವನ್ನು ಸುಂದರವಾಗಿ ಕೆತ್ತನೆ ಮಾಡಿದ್ದಾರೆ. ಇಲ್ಲಿ ದುರ್ಗಾದೇವಿ, ನೃಸಿಂಹಸ್ವಾಮಿ, ಸುಬ್ರಹ್ಮಣ್ಯಶ್ವೇರ ಸ್ವಾಮಿ, ವೆಂಕಟೇಶ್ವರ ಸ್ವಾಮಿ, ಸತ್ಯನಾರಾಯಣ ಸ್ವಾಮಿ, ವಿನಾಯಕ, ಅಷ್ಟ ಲಕ್ಷ್ಮೀಯರು, ಇನ್ನು ಅನೇಕ ದೇವತಾ ಮೂರ್ತಿಗಳು ಈ ದೇವಾಲಯದಲ್ಲಿ ನಿತ್ಯ ಪೂಜೆಗಳನ್ನು ಮಾಡುತ್ತಾರೆ.

 ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಪ್ರತಿ ಶನಿವಾರ ಸಂಜೆಯ ಸಮಯದಲ್ಲಿ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಭಜನೆ- ಸಂಕೀರ್ತನೆಗಳು ನಡೆಯುತ್ತಿರುತ್ತವೆ. ಬಾಲ ಗಾಯಕರು ಕೂಡ ಈ ದೇವಾಲಯಕ್ಕೆ ಭಜನೆ ಮಾಡಲು ಭೇಟಿ ನೀಡುತ್ತಿರುತ್ತಾರೆ.

 ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಇಲ್ಲಿ ಕೇವಲ ಈ ದೇವಾಲಯವೇ ಅಲ್ಲದೇ ಹರಿಹರ ಕ್ಷೇತ್ರ, ಸಾಕ್ಷಿ ರಾಮಲಿಂಗೇಶ್ವರ ದೇವಾಲಯ, ಗಂಗಮ್ಮ ದೇವಾಲಯ, ವೆಂಕಟೇಶ್ವರಸ್ವಾಮಿ ದೇವಾಲಯ, ರಾಮತೀರ್ಥ, ಮೋಕ್ಷರಾಮಲಿಂಗೇಶ್ವರ ದೇವಾಲಯ, ರಾಮತೀರ್ಥ ಜಲಾಶಯಂ ಇಲ್ಲಿನ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ.

 ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಉತ್ತಮ ಸಮಯ
ಈ ಪ್ರದೇಶಕ್ಕೆ ವರ್ಷದಲ್ಲಿ ಯಾವ ಸಮಯದಲ್ಲಿಯಾದರೂ ಭೇಟಿ ನೀಡಬಹುದು. ಮುಖ್ಯವಾಗಿ ಜೂನ್‍ನಿಂದ ಸೆಪ್ಟೆಂಬರ್ ತಿಂಗಳು ಹಾಗು ಅಕ್ಟೋಬರ್‍ನಿಂದ ಡಿಸೆಂಬರ್ ತಿಂಗಳು ಭೇಟಿ ನೀಡಲು ಅತ್ಯುತ್ತಮ ಕಾಲಾವಧಿಯಾಗಿದೆ.

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಹೇಗೆ ತಲುಪಬೇಕು?
ಚಿಮುಕರ್ತಿ ಒಂಗೊಲು ಪಟ್ಟಣಕ್ಕೆ ಸುಮಾರು 25 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಸರ್ಕಾರಿ ಹಾಗು ಖಾಸಗಿ ಬಸ್ಸುಗಳು ದೊರೆಯುತ್ತವೆ. ಸುಲಭವಾಗಿ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ.

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಚೆನ್ನೈ-ದೆಹಲಿ ರೈಲು ಮಾರ್ಗವು, ಗುಂತಕಲ್ಲು ಗುಂಟೂರು ರೈಲು ಮಾರ್ಗಗಳು ಜಿಲ್ಲೆಯಲ್ಲಿನ ಅನೇಕ ಪ್ರದೇಶಗಳಿಗೆ ಸಂಪರ್ಕ ಸಾಧಿಸುತ್ತದೆ. ಹೀಗಾಗಿ ಸುಲಭವಾಗಿ ರೈಲಿನ ಮೂಖಾಂತರ ತಲುಪಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ