Search
  • Follow NativePlanet
Share
» »ಇಲ್ಲಿದೆ ಬೇಸಿಗೆಯಲ್ಲಿ ತಂಪು, ಚಳಿಗಾಲದಲ್ಲಿ ಬೆಚ್ಚಗಿರಿಸುವ ಶಿವಲಿಂಗ

ಇಲ್ಲಿದೆ ಬೇಸಿಗೆಯಲ್ಲಿ ತಂಪು, ಚಳಿಗಾಲದಲ್ಲಿ ಬೆಚ್ಚಗಿರಿಸುವ ಶಿವಲಿಂಗ

ಇದು ಚೋಳರ ರಾಜಧಾನಿಯಾಗಿದ್ದು ಸುಮಾರು ಕ್ರಿ.ಪೂ. 1025 ರಿಂದ 250 ವರ್ಷಗಳವರೆಗೆ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಸ್ಥಳವಾಗಿದೆ.

ನೀವು ಎಲ್ಲಾದರೂ ಬೇಸಿಗೆಯಲ್ಲಿ ಗರ್ಭಗುಡಿಯನ್ನು ತಂಪಾಗಿಡುವ ಹಾಗೂ ಚಳಿಗಾಲದಲ್ಲಿ ಗರ್ಭಗುಡಿಯನ್ನು ಬೆಚ್ಚಗಿಡುವ ದೇವಸ್ಥಾನವನ್ನು ಕಂಡಿದ್ದೀರಾ? ಅಂತಹ ಒಂದು ದೇವಸ್ಥಾನ ತಮಿಳುನಾಡಿನಲ್ಲಿದೆ. ಅದು ಶಿವನ ದೇವಾಲಯ. ಈ ದೇವಾಲಯದಲ್ಲಿ ಗರ್ಭಗುಡಿಯಲ್ಲಿರುವ ಶಿವಲಿಂಗವೇ ಈ ಚಮತ್ಕಾರಕ್ಕೆ ಕಾರಣ. ಹಾಗಾದರೆ ಬನ್ನಿ ಆ ದೇವಾಲಯ ಯಾವುದು ಎಲ್ಲಿದೆ, ಅದರ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಎಲ್ಲಿದೆ ಗಂಗೈಕೊಂಡ ಚೋಳಪುರಂ, ತಲುಪುವುದು ಹೇಗೆ?

ಎಲ್ಲಿದೆ ಗಂಗೈಕೊಂಡ ಚೋಳಪುರಂ, ತಲುಪುವುದು ಹೇಗೆ?

PC: Parvathisri
42 ಕಿ.ಮೀ ದೂರದಲ್ಲಿ ಚಿದಂಬರಂ, ತಂಜಾವೂರುನಿಂದ 76 ಕಿ.ಮೀ, ಚೆನ್ನೈನಿಂದ 268 ಕಿ.ಮೀ ಮತ್ತು ತಿರುಚಿಯಿಂದ 110 ಕಿ.ಮೀ ದೂರದಲ್ಲಿರುವ ಶ್ರೀ ಬೃಹದೀಶ್ವರ ದೇವಾಲಯ ಗಂಗೈಕೊಂಡ ಚೋಳಪುರಂನಲ್ಲಿದೆ. ಗಂಗೈಕೊಂಡ ಚೋಳಪುರಂ ಚೋಳರ ರಾಜಧಾನಿಯಾಗಿತ್ತು. 11 ನೇ ಶತಮಾನದ ಆರಂಭದಲ್ಲಿ ದಕ್ಷಿಣ ಭಾರತದಲ್ಲಿ ದೊಡ್ಡ ಪ್ರದೇಶವನ್ನು ವಶಪಡಿಸಿಕೊಂಡ ರಾಜರಾಜ ಚೋಳನ ಮಗ ಮತ್ತು ಉತ್ತರಾಧಿಕಾರಿ ರಾಜೇಂದ್ರ ಚೋಳ I ಇದನ್ನು ನಿರ್ಮಿಸಿದನು.

ವಿಶ್ವ ಪರಂಪರೆಯ ತಾಣ

ವಿಶ್ವ ಪರಂಪರೆಯ ತಾಣ

PC: QiNi
ಇದು ಚೋಳರ ರಾಜಧಾನಿಯಾಗಿದ್ದು ಸುಮಾರು ಕ್ರಿ.ಪೂ. 1025 ರಿಂದ 250 ವರ್ಷಗಳವರೆಗೆ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಸ್ಥಳವಾಗಿದೆ. ಈ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣ 'ಗ್ರೇಟ್ ಲಿವಿಂಗ್ ಚೋಳ ಟೆಂಪಲ್ಸ್' ನ ಭಾಗವಾಗಿದೆ.

ನಿರ್ಮಾಣಕ್ಕೆ 9 ವರ್ಷ ಬೇಕಾಯಿತು

ನಿರ್ಮಾಣಕ್ಕೆ 9 ವರ್ಷ ಬೇಕಾಯಿತು

PC:Thamizhpparithi Maari
ಇಲ್ಲಿನ ಶಿವ ದೇವಾಲಯವನ್ನು ಕಟ್ಟಲು 9 ವರ್ಷಗಳು ಬೇಕಾಯಿತಂತೆ. ಚೋಳರ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿ ಇದು ಇಂದಿಗೂ ಇದೆ. ನಾಲ್ಕು ಅಡಿ ಎತ್ತರದ ದೇವಾಲಯದ ಪೀಠದ ಮೇಲೆ ಶಿವಲಿಂಗವಿದೆ. ದೇವಾಲಯದಲ್ಲಿನ ತಾಮ್ರ ಶಾಸನಗಳು ಚೋಳರ ಕಾಲದ ಇತಿಹಾಸವನ್ನು ಹೇಳುತ್ತವೆ. 984 ವರ್ಷಗಳ ಪುರಾತನ ದೇವಾಲಯವು ತನ್ನ ಸುಂದರ ಕೆತ್ತನೆ ಮತ್ತು ವಾಸ್ತು ಶಿಲ್ಪಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ.

ರಾಜೇಂದ್ರ ಚೋಳ ನಿರ್ಮಿಸಿದನು

ರಾಜೇಂದ್ರ ಚೋಳ ನಿರ್ಮಿಸಿದನು

PC:Richard Mortel
೧ನೇ ರಾಜೇಂದ್ರ ಚೋಳ ಉತ್ತರ ಭಾರತದಲ್ಲಿನ ಮಹಾನ್ ವಿಜಯದ ನಂತರ ಈ ದೇವಾಲಯವನ್ನು ಸ್ಥಾಪಿಸಿದ್ದಾರೆ. ಅವರನ್ನು ಮೂಲತಃ ಮಧುರಾಂತಕನ್ ಎಂದು ಕರೆಯಲಾಗುತ್ತಿತ್ತು . ರಾಜೇಂದ್ರ ಚೋಳನು ತನ್ನ ತಂದೆಯೊಂದಿಗೆಳ್ವಿಕೆ ಮುಂದುವರೆಸಿದನು ಗಂಗೈ ಕೊಂಡ ಚೋಳಪುರಂ ಅನ್ನು ರಾಜೇಂದ್ರ ಚೋಳರ ತಂದೆ ರಾಜರಾಜ ಚೋಳ ನಿರ್ಮಿಸಿದ ಬೃಹದೀಶ್ವರ ದೇವಸ್ಥಾನದ ಪುನನಿರ್ಮಾಣ ಎನ್ನಲಾಗುತ್ತದೆ. ಈ ದೇವಸ್ಥಾನವು ಭಾರತದ ದಕ್ಷಿಣ ಭಾಗದ ಅತಿ ದೊಡ್ಡ ಶಿವಲಿಂಗವನ್ನು ಹೊಂದಿದೆ.

182 ಅಡಿ ಎತ್ತರದ ಗೋಪುರ

182 ಅಡಿ ಎತ್ತರದ ಗೋಪುರ

PC: Thamizhpparithi Maari
ಈ ದೇವಾಲಯವು ಗಂಗೈ ಕೊಂಡ ಚೋಳಪುರಂ ನ ಮಧ್ಯಭಾಗದಲ್ಲಿದೆ ಮತ್ತು ಸುಮಾರು 6 ಎಕರೆ ಭೂಮಿಯನ್ನು ಹೊಂದಿದೆ. ಈ ದೇವಾಲಯವು 2 ಆವರಣಗಳನ್ನು ಹೊಂದಿದೆ, ಹೆಚ್ಚಿನ ಗೋಡೆಗಳು ನಾಶವಾಗಲ್ಪಟ್ಟವು ಮತ್ತು ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಅಣೆಕಟ್ಟನ್ನು ನಿರ್ಮಿಸಲು ಗ್ರಾನೈಟ್ ಶಿಲೆಗಳನ್ನು ಬಳಸಲಾಗಿತ್ತು. ಭಾರತದ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆ ವಿಮಾನವನ್ನು ನವೀಕರಿಸಿದೆ ಮತ್ತು ಪುನಃಸ್ಥಾಪಿಸಿದೆ. ತಂಜಾವೂರು ದೇವಾಲಯದ ನಂತರ 182 ಅಡಿ ಎತ್ತರದ ಗೋಪುರವಿರುವ ಎರಡನೇ ಅತಿದೊಡ್ಡ ದೇವಾಲಯ ಇದಾಗಿದೆ.

ಮುಖ್ಯ ದೇವತೆ ಶಿವ

ಮುಖ್ಯ ದೇವತೆ ಶಿವ

PC:Ssriram mt
ದೇವಾಲಯದ ಮುಖ್ಯ ದೇವತೆ ಶಿವ. ರಾಜಮನೆತನದವರಿಗೆ ಖಾಸಗಿ ಪೂಜಾ ಸ್ಥಳವನ್ನು ಒದಗಿಸಲು, ಗರ್ಭಗುಡಿಯು ಎರಡು ಗೋಡೆಗಳಿಂದ ಆವೃತವಾಗಿದೆ. ಗರ್ಭಗುಡಿಯ ಪ್ರವೇಶದ್ವಾರವು ಸರಸ್ವತಿಯ ದೇವತೆಯ ಸುಂದರವಾದ ಚಿತ್ರಣದಿಂದ ಅಲಂಕರಿಸಿದೆ. ಸೂರ್ಯ ಪೂಜೆ ಮತ್ತು ನವಗ್ರಹಗಳ ಉಪಸ್ಥಿತಿಯನ್ನು ಸೂಚಿಸುವ ಸೂರ್ಯ ಪೀಠವು ಚಾಲುಕ್ಯರ ಪ್ರಭಾವವನ್ನು ತಿಳಿಸುತ್ತದೆ.

13.5 ಅಡಿ ಎತ್ತರದ ಶಿವಲಿಂಗ

13.5 ಅಡಿ ಎತ್ತರದ ಶಿವಲಿಂಗ

PC:Richard Mortel
ಗಂಗೈ ಕೊಂಡ ಚೋಳಪುರಂ ದೇವಸ್ಥಾನದಲ್ಲಿರುವ ಲಿಂಗವು 13.5 ಅಡಿ ಎತ್ತರದಲ್ಲಿದೆ. ಶಿವನ ವಾಹಕ ನಂದಿಯು ತಂಜಾವೂರುಗಿಂತ ದೊಡ್ಡದಾಗಿದೆ. ಈ ದೇವಾಲಯದಲ್ಲಿ ನಂದಿ ಸುಣ್ಣದ ಕಲ್ಲಿನಿಂದ ಮಾಡಲ್ಪಟ್ಟಿದೆ ಮತ್ತು ಈ ದೇವಾಲಯದಲ್ಲಿ 200 ಮೀಟರ್ ದೂರ ಗರ್ಭಗುಡಿಯಿಂದ ನೆಲಕ್ಕೆ ಇಡಲಾಗಿದೆ. ಸೂರ್ಯನ ಬೆಳಕು ನಂದಿಗೆ ಪ್ರತಿ ದಿನ ಬೀಳುತ್ತದೆ ಮತ್ತು ಗರ್ಭಗುಡಿನಲ್ಲಿ ಶಿವನ ಮೇಲೆ ಪ್ರತಿಬಿಂಬಿಸುತ್ತದೆ.

ಚಂದ್ರಕಾಂತ ಕಲ್ಲು

ಚಂದ್ರಕಾಂತ ಕಲ್ಲು

PC: Simbubemba
ಚಂದ್ರಕಾಂತ ಕಲ್ಲು ಎನ್ನುವ ಅಪರೂಪದ ಕಲ್ಲನ್ನು ಲಿಂಗದ ಅಡಿಯಲ್ಲಿ ಅಳವಡಿಸಲಾಗಿದೆ. ಇದು ಬೇಸಿಗೆಯಲ್ಲಿ ಗರ್ಭಗುಡಿಗಳನ್ನು ತಂಪುಗೊಳಿಸುತ್ತದೆ ಹಾಗೆಯೇ ಚಳಿಗಾಲದಲ್ಲಿ ಬೆಚ್ಚಗಾಗುವ ವಿಲಕ್ಷಣ ಗುಣವನ್ನು ಹೊಂದಿದೆ. ದುರ್ಗಾ ದೇವಿಯು ರಾಜ ರಾಜೇಂದ್ರ ಚೋಳರ ಕುಟುಂಬದ ದೇವತೆಯಾಗಿದ್ದಾಳೆ. ಈಗ, ನಗರದ ಬಹುಪಾಲು ಭಾಗ ನಾಶವಾಗಿದೆ. ಗಂಗೈಕೊಂಡ ಚೋಳಪುರಂ ದೇವಾಲಯವು ಮಾತ್ರ ಉಳಿದಿದೆ.

ದೇವಸ್ಥಾನದ ಉತ್ಸವಗಳು

ದೇವಸ್ಥಾನದ ಉತ್ಸವಗಳು

PC: Kishore1610
ಫೆಬ್ರವರಿ-ಮಾರ್ಚ್‌ನಲ್ಲಿ ಮಹಾ ಶಿವರಾತ್ರಿ, ಅಕ್ಟೋಬರ್-ನವೆಂಬರ್‌ನಲ್ಲಿ ಹುಣ್ಣಿಮೆಯ ದಿನ, ಮಾರ್ಚ್-ಏಪ್ರಿಲ್‌ನಲ್ಲಿ ಪಂಗುನಿ ಉತ್ಸವ ಮತ್ತು ಡಿಸೆಂಬರ್-ಜನವರಿನಲ್ಲಿ ಮಾರ್ಗಜಿ ತಿರುವತಿರೈ ಈ ದೇವಾಲಯದಲ್ಲಿ ಆಚರಿಸಲಾಗುವ ಉತ್ಸವಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X