Search
  • Follow NativePlanet
Share
» »ಶ್ರೀಕೃಷ್ಣನ ಮರಣದ ನಂತರ ಏನಾಯಿತು? ಆ ಶಿಲೆ ಪ್ರಸ್ತುತ ಎಲ್ಲಿದೆ?

ಶ್ರೀಕೃಷ್ಣನ ಮರಣದ ನಂತರ ಏನಾಯಿತು? ಆ ಶಿಲೆ ಪ್ರಸ್ತುತ ಎಲ್ಲಿದೆ?

ಶ್ರೀಕೃಷ್ಣನು ಹಿಂದೂ ಧರ್ಮದಲ್ಲಿ ಆರಾಧಿಸಿಕೊಳ್ಳುತ್ತಿರುವ ದೇವರು.ಇತನು ವಿಷ್ಣುಮೂರ್ತಿಯ ದಶ ಅವತಾರಗಳಲ್ಲಿ ಒಂಬತ್ತನೇಯ ಅವತಾರ. ತುಂಟ ಬಾಲಕನಾಗಿ,ಗೋಪಿಕೆಯರ ಮನಸ್ಸು ದೋಚಿಕೊಳ್ಳುವವನಾಗಿ, ಯಾದವ ರಾಜನಾಗಿ, ರುಕ್ಷ್ಮಿಣಿ ಸತ್ಯಭಾಮೆಯರಪ್ರಭುಗಳಾ

By Sowmyabhai

ಶ್ರೀಕೃಷ್ಣನು ಹಿಂದೂ ಧರ್ಮದಲ್ಲಿ ಆರಾಧಿಸಿಕೊಳ್ಳುತ್ತಿರುವ ದೇವರು. ಇತನು ವಿಷ್ಣುಮೂರ್ತಿಯ ದಶ ಅವತಾರಗಳಲ್ಲಿ ಒಂಬತ್ತನೇಯ ಅವತಾರ. ತುಂಟ ಬಾಲಕನಾಗಿ, ಗೋಪಿಕೆಯರ ಮನಸ್ಸು ದೋಚಿಕೊಳ್ಳುವವನಾಗಿ, ಯಾದವ ರಾಜನಾಗಿ, ರುಕ್ಷ್ಮಿಣಿ ಸತ್ಯಭಾಮೆಯರ ಪ್ರಭುಗಳಾಗಿ, ಅರ್ಜುನನ ರಥದ ಸಾರಥಿಯಾಗಿ, ದೇವದೇವನಾಗಿ .... ಹೀಗೆ ಬಹು ವಿಧಗಳಾಗಿ ಶ್ರೀ ಕೃಷ್ಣನ ರೂಪವನ್ನು ಇತಿಹಾಸದಲ್ಲಿ ಕೇಳಬಹುದು.

ಭಾರತದೇಶದಲ್ಲಿನ ವೈಷ್ಣವ ಹಿಂದೂ ಧರ್ಮದಲ್ಲಿ ಶ್ರೀ ಕೃಷ್ಣನಿಗೆ ಪ್ರತ್ಯೇಕವಾದ ಪೂಜೆಗಳನ್ನು ಮಾಡುತ್ತಾರೆ. ನಮ್ಮ ದೇಶದಲ್ಲಿ ಅನೇಕ ಶ್ರೀ ಕೃಷ್ಣನ ದೇವಾಲಯಗಳಿವೆ. ಇವುಗಳಲ್ಲಿ ಕೆಲವು ಚಾರಿತ್ರಿಕವಾಗಿ ಪ್ರಸಿದ್ಧಿಯನ್ನು ಹೊಂದಿದ್ದ ದೇವಾಲಯಗಳು ಕೂಡ ಇವೆ. ಉದಾಹರಣೆಯಾಗಿ ಮಥುರದಲ್ಲಿನ ಬಾಲಕೃಷ್ಣನಾಗಿ, ತಿರುಪತಿಯಲ್ಲಿ ವೆಂಕಟೇಶ್ವರ ಸ್ವಾಮಿಯಾಗಿ, ಪೂರಿಯಲ್ಲಿ ಜಗನ್ನಾಥನಾಗಿ, ಗುರುವಾಯೂರ್‍ನಲ್ಲಿ ಗುರುವಾಯರಪ್ಪನಾಗಿ, ಉಡುಪಿಯಲ್ಲಿ ಶ್ರೀ ಕೃಷ್ಣನಾಗಿ ದರ್ಶನವನ್ನು ನೀಡುತ್ತಾನೆ.

1.ಜನನ

1.ಜನನ

pc: Abhi Sharma

ಮಧುರವನ್ನು ಯಾದವ ರಾಜ್ಯಕ್ಕೆ ಸೇರಿದ ಶೂರಸೇನಾ ಮಹಾರಾಜ ಆಳ್ವಿಕೆ ಮಾಡುತ್ತಿದ್ದನು. ಇತನಿಗೆ ವಸುದೇವ ಕುಮಾರನು. ಇತನಿಗೆ ಉಗ್ರಸೇನ ಮಹಾರಾಜ ಕುಮಾರಿಯಾದ ದೇವಕಿಯನ್ನು ನೀಡಿ ವಿವಾಹವನ್ನು ಮಾಡಿದರು. ತಂಗಿ ಎಂದರೆ ಎಷ್ಟೋ ಪ್ರೇಮವನ್ನು ಹೊಂದಿದ್ದ ಕಂಸನು ಅತ್ತೆಯ ಮನೆಗೆ ಕಳುಹಿಸುವ ಸಮಯದಲ್ಲಿ ಒಂದು ಅಶರೀರವಾಣಿ ದೇವಕಿ ಗರ್ಭದಲ್ಲಿ ದೇವಕಿಯ ಸಂತಾನದಲ್ಲಿ ಹುಟ್ಟುವ ಮಗು ಕಂಸನನ್ನು ಸಂಹಾರ ಮಾಡುತ್ತದೆ ಎಂದು ಹೇಳುತ್ತದೆ. ತಕ್ಷಣವೇ ದೇವಕಿ ವಾಸುದೇವ ಮತ್ತು ತಂದೆ ಉಗ್ರಸೇನನ್ನು ಸೆರೆವಾಸದಲ್ಲಿ ಬಂದಿಸುತ್ತಾನೆ.

2.ಬಲರಾಮ

2.ಬಲರಾಮ

pc: Praveenp

ದೇವಕಿಯ 7 ನೇ ಗರ್ಭದಲ್ಲಿ ಬಲರಾಮನು. ಆದರೆ ಈ ಗರ್ಭವು ನಂದನವನದಲ್ಲಿ ನಂದನನ ಪತ್ನಿ ರೋಹಿಣಿ ಗರ್ಭದಲ್ಲಿ ವಿಷ್ಣುವು ತನ್ನ ಮಾಯೆಯಿಂದ ಪ್ರವೇಶ ಮಾಡುತ್ತಾನೆ. ಕೆಲವು ದಿನಗಳಿಗೆ ದೇವಕಿ ವಸುದೇವನಿಗೆ 7ನೇ ಸಂತಾನವು ಆಗುತ್ತದೆ. ಇಲ್ಲಿ ತನ್ನ ಕುಮಾರನನ್ನು ಸಾಯಿಸುತ್ತಾರೆ ಎಂದು ವಸುದೇವನು ಸೆರೆವಾಸದಿಂದ ತಪ್ಪಿಸಿಕೊಂಡು ಸ್ನೇಹಿತನಾದ ನಂದನನ ಮನೆಗೆ ಹೋಗಿ ಯಶೋದೆಯ ಪಕ್ಕದಲ್ಲಿದ್ದ ಶಿಶುವಿನ ಸ್ಥಳದಲ್ಲಿ ಇಟ್ಟು, ಅಲ್ಲಿನ ಶಿಶುವನ್ನು ತೆಗೆದುಕೊಂಡು ಬರುತ್ತಾನೆ.

3.ಯೋಗ ಮಾಯ

3.ಯೋಗ ಮಾಯ

pc: Praveenp

ಸೆರೆವಾಸಕ್ಕೆ ತೆಗೆದುಕೊಂಡು ಬಂದ ತಕ್ಷಣವೇ ಶಿಶುವು ಅಳುತ್ತದೆ. ಅದನ್ನು ಕೇಳಿಸಿಕೊಂಡ ಕಂಸನು, ಆ ಶಿಶುವನ್ನು ಮೇಲೆ ಬಿಸಾಡುತ್ತಾನೆ. ಆಗ ಒಂದು ಅಶರೀರವಾಣಿಯು "ತಾನು ಯೋಗ ಮಾಯೆ ಎಂದೂ, ನಿನ್ನನ್ನು ಕೊಲ್ಲುವವನು ಬೇರೆ ಸ್ಥಳದಲ್ಲಿ ಬೆಳೆಯುತ್ತಿದ್ದಾನೆ ಎಂದು ಹೇಳಿ ಮಾಯವಾಗುತ್ತದೆ".

4.ಕೃಷ್ಣನ ಬಾಲ್ಯ

4.ಕೃಷ್ಣನ ಬಾಲ್ಯ

pc: Abhi Sharma

ಕಾಳಿಂದಿ ನದಿಯಲ್ಲಿರುವ ಕಾಳಿಂಗನ ತಲೆಯ ಮೇಲೆ ನೃತ್ಯ ತಾಂಡವ ಮಾಡುತ್ತಾನೆ ಶ್ರೀ ಕೃಷ್ಣನು. ಪ್ರಳಯಕಾಲದಲ್ಲಿ ಗೋವರ್ಧನಗಿರಿಯನ್ನು ತನ್ನ ಬೆರೆಳಿನಲ್ಲಿ ಮೇಲೆಕ್ಕೆ ಎತ್ತಿ ಎಲ್ಲರಿಗೂ ಭಗವಂತನಾಗುತ್ತಾನೆ. ತನ್ನ ಚೇಷ್ಟೆಯಿಂದ ಎಲ್ಲರನ್ನು ಹಿಂಸಿಸುತ್ತಿದ್ದು, ಬೆಣ್ಣೆಯನ್ನು ಕದಿಯುತ್ತಾನೆ. ಅಪತ್ಕಾಲದಲ್ಲಿ ಪ್ರಜೆಗಳನ್ನು ಕಾಪಾಡಿ ತನ್ನ ಧೈರ್ಯವನ್ನು ಪ್ರದರ್ಶನವನ್ನು ಮಾಡುತ್ತಾನೆ.

5.ದ್ವಾರಕಕ್ಕೆ ಪ್ರಯಾಣ

5.ದ್ವಾರಕಕ್ಕೆ ಪ್ರಯಾಣ

pc: Redtigerxyz

ಕೃಷ್ಣನು ಭಗವಂತನು. ಆತನಿಗೆ ಎಲ್ಲಾ ತಿಳಿದಿತ್ತು. ತಾನು ಏಕೆ ಹುಟ್ಟಿದೆ ಎಂದು, ಏನು ಮಾಡಬೇಕು ಎಂದೆಲ್ಲಾ ತಿಳಿದ್ದಿದ್ದನು. ಕಂಸನು ಶ್ರೀಕೃಷ್ಣನನ್ನು ಕೊಲ್ಲುವುದಕ್ಕೆ ಸಂಚು ಹಾಕಿ, ಶ್ರೀ ಕೃಷ್ಣ ಬಲರಾಮರಿಗೆ ಮಧುರಕ್ಕೆ ಕರೆಸುತ್ತಾನೆ. ಕೃಷ್ಣನು ಕಂಸನನ್ನು ವಧಿಸಿ ತಾತನನ್ನು ಸೆರೆವಾಸದಿಂದ ಬಿಡಿಸಿ ರಾಜನನ್ನಾಗಿ ಮಾಡುತ್ತಾನೆ. ಸೆರೆಯಲ್ಲಿದ್ದ ತನ್ನ ತಂದೆ-ತಾಯಿಯನ್ನು ಕೂಡ ಬಂಧನದಿಂದ ವಿಮುಕ್ತಿಗೊಳಿಸಿ ದ್ವಾರಕಕ್ಕೆ ಕರೆದುಕೊಂಡು ಹೋಗುತ್ತಾನೆ ಶ್ರೀ ಕೃಷ್ಣನು.

6.ದ್ವಾರಕದಲ್ಲಿ

6.ದ್ವಾರಕದಲ್ಲಿ

pc: Seetarambabu

ಶ್ರೀಕೃಷ್ಣನು ದ್ವಾರಕದ ರಾಜ. ಇತನ ಕಾಲದಲ್ಲಿ ರಾಜ್ಯವೆಲ್ಲಾ ಅಷ್ಟೈಶ್ವರ್ಯದಿಂದ, ಆಯುರಾರೋಗ್ಯದಿಂದ ತುಂಬಿತುಳುಕುತ್ತಿತ್ತು. ಇದು ಕ್ರಿ.ಪೂ 5000 ವರ್ಷಗಳ ಹಿಂದಿನ ಮಾತು. ಇಂದು ಆ ರಾಜ್ಯವು ಕಣ್ಮರೆಯಾಗಿದೆ. ಅರೇಬಿಯಾ ಸಮುದ್ರಗರ್ಭದಲ್ಲಿ ಹೆಜ್ಜೆ-ಹೆಜ್ಜೆಗು ದ್ವಾರಕಾ ರಾಜ್ಯದ ಅವಶೇಷಗಳು ಕಾಣಿಸುತ್ತದೆ.

7.ಸಂಹಾರ

7.ಸಂಹಾರ

pc: Abhi Sharma

ಶ್ರೀಕೃಷ್ಣನು ಲೋಕವನ್ನೆಲ್ಲಾ ಭಾದಿಸುತ್ತಿದ್ದ ನರಕಾಸುರನನ್ನು ವಧಿಸಿ ಆತನಿ ಪುತ್ರನಾದ ಭಗದತ್ತುವಿಗೆ ಪಟ್ಟಾಭಿಶೇಷಕ ಮಾಡುತ್ತಾನೆ. ನಂತರ ಕಾಲಯವನುಡು, ಜರಾಸಂಧನು, ಸಾಳ್ವನು ಮೊದಲಾದವರಿಗೆ ಓಡಿಸಿದನು.

8.ಅರ್ಜುನನ ರಥ ಸಾರತಿ

8.ಅರ್ಜುನನ ರಥ ಸಾರತಿ

pc: Abhi Sharma

ಶ್ರೀಕೃಷ್ಣನಿಗೆ ಪಾಂಡವರ ಜೊತೆ ಇದ್ದ ಸಂಬಂಧ ಮರೆಯಲಾಗದ ಅನುಭಂದ. ಪಾಂಡವರ ಪ್ರತಿ ಸಂಘಟನೆಯಲ್ಲಿ ಶ್ರೀ ಕೃಷ್ಣನ ಪಾತ್ರ ಮಹತ್ವವಾದುದು. ದ್ರೌಪತಿಯನ್ನು ಸ್ವಂತ ತಂಗಿ ಸುಭದ್ರೆಗಿಂತ ಚೆನ್ನಾಗಿ ನೋಡಿಕೊಂಡನು. ಅರ್ಜುನನ ರಥ ಸಾರಥಿಯಾಗಿ ಕುರುಕ್ಷೇತ್ರ ಯುದ್ಧ ಮುಗಿಯುವವರೆವಿಗೂ ಪಾಂಡವರ ರಕ್ಷಣೆಯಾಗಿ ಇರುತ್ತಾನೆ.

9.ಶ್ರೀ ಕೃಷ್ಣನ ಮರಣದ ರಹಸ್ಯ

9.ಶ್ರೀ ಕೃಷ್ಣನ ಮರಣದ ರಹಸ್ಯ

pc: Sridhar1000

ಮಹಾಭಾರತ ಯುದ್ಧದ ನಂತರ ಯಾದವಕುಲ ಕೂಡ ಅಂತ್ಯವನ್ನು ಹಾಡುತ್ತಾ ನಾಶವಾಗಲಿ ಎಂದು ಗಾಂಧಾರಿ ಶಪಿಸಿದಳು. ಹೀಗೆ ಶಾಪವನ್ನು ನೀಡಿದ ಗಾಂಧಾರಿಯ ಕಾರಣವಾಗಿ ಯಾದವರೆಲ್ಲಾ ಮರಣ ಹೊಂದಿದರು. ಬಲರಾಮನು ಯೋಗದಿಂದ ತನ್ನ ದೇಹವನ್ನು ಬಿಟ್ಟನು. ಕೃಷ್ಣನು ಅರಣ್ಯಕ್ಕೆ ಹೋಗುತ್ತಾನೆ. ಅಲಿಂದ ಕೃಷ್ಣನು ನೇರವಾಗಿ ಸ್ವರ್ಗಕ್ಕೆ ಹೋದನು ಎಂದು ವ್ಯಾಸಭಾರತದಲ್ಲಿ ಇದೆ. ಆದರೆ ಶ್ರೀಕೃಷ್ಣನಿಗೆ ಒಂದು ಬಾಣ ತಗುಲಿ ದೇಹವನ್ನು ತ್ಯಜಿಸಿದನು ಎಂದು ಇನ್ನು ಉಳಿದ ಪುರಾಣದಲ್ಲಿದೆ.

10.ಗೋಮತಿ ನದಿ

10.ಗೋಮತಿ ನದಿ

pc: Manoj Khurana

ಕೃಷ್ಣನು ತನ್ನ ದೇಹವನ್ನು ತ್ಯಜಿಸಿದ ಪ್ರದೇಶವೆಂದರೆ ಅದು ಭಲಕ ತೀರ್ಥ (ಪ್ರಭಾಸ್ ಪತನ್). ಇದು ಗುಜರಾತ್‍ನ ನೈಋತ್ಯ ಭಾಗದಲ್ಲಿ ಗೋಮತಿ ನದಿ ಧನವಂತರಿ ಸಮುದ್ರದಲ್ಲಿ (ಅರೆಬೀಯಾ ಸಾಗರ) ಒಂದಾಗುವ ಸ್ಥಳದಲ್ಲಿ ಇದೆ. ಆಶ್ಚರ್ಯ ಏನಪ್ಪ ಎಂದರೆ ಶ್ರೀ ಕೃಷ್ಣನ ದೇಹವನ್ನು ಎಷ್ಟೇ ದಹನ ಮಾಡಿದರು ಕೂಡ ನಾಭಿ ಮಾತ್ರ ಸುಡುವುದಿಲ್ಲ. ಅದನ್ನು ಒಂದು ಸಮುದ್ರದಲ್ಲಿ ಲೀನ ಮಾಡುತ್ತಾರೆ. ಆ ನಾಭಿಯೇ ಒಂದು ಶಿಲೆಯಾಗಿ ಪೂರಿಯಲ್ಲಿ ದೊರೆಯುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X