Search
  • Follow NativePlanet
Share
» »ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಕೆಲವೊಮ್ಮೆ ಜಾತಕದಲ್ಲಿನ ದೋಷದಿಂದಾಗಿ ಜೀವನದಲ್ಲಿ ಆಗುವ ಹಲವಾರು ಕಾರ್ಯಕ್ರಮಗಳಿಗೆ ತೊಡಕು ಆಗುವುದುಂಟು. ವಿವಾಹವಾಗದೇ ಇರುವುದು, ನಿರುದ್ಯೋಗ, ಸಂತಾನ ಇಲ್ಲದೇ ಇರುವುದು ಇನ್ನು ಅನೇಕ ತೊಂದರೆಗಳು ಆಗುವುದು ಈ ಜಾತಕದ ದೋಷಗಳಿಂದಲೇ. ಹೀಗಾಗಿ ಅನೇಕ

ಕೆಲವೊಮ್ಮೆ ಜಾತಕದಲ್ಲಿನ ದೋಷದಿಂದಾಗಿ ಜೀವನದಲ್ಲಿ ಆಗುವ ಹಲವಾರು ಕಾರ್ಯಕ್ರಮಗಳಿಗೆ ತೊಡಕು ಆಗುವುದುಂಟು. ವಿವಾಹವಾಗದೇ ಇರುವುದು, ನಿರುದ್ಯೋಗ, ಸಂತಾನ ಇಲ್ಲದೇ ಇರುವುದು ಇನ್ನು ಅನೇಕ ತೊಂದರೆಗಳು ಆಗುವುದು ಈ ಜಾತಕದ ದೋಷಗಳಿಂದಲೇ. ಹೀಗಾಗಿ ಅನೇಕ ಮಂದಿ ಇದಕ್ಕೆ ಪರಿಹಾರವಾಗಿ ಜ್ಯೋತಿಷ್ಯಿಗಳ, ದೇವಾಲಯಗಳ ಮೊರೆ ಹೋಗುವುದು ಸಾಮಾನ್ಯವಾದ ಸಂಗತಿಯೇ ಆಗಿದೆ.

ಕೆಲವೊಮ್ಮೆ, ರಾಹು, ಕೇತು ಹಾಗು ಶನಿ ದೋಷದಿಂದಾಗಿ ಶುಭಕಾರ್ಯಗಳಿಗೆ ಅಡೆ-ತಡೆ ಉಂಟಾಗುವುದು ಸಹಜ. ಹಾಗಾದರೆ ಆ ದೋಷಗಳೆಲ್ಲಾ ಹೇಗೆ ಪರಿಹಾರ ಮಾಡಿಕೊಳ್ಳಬೇಕು? ಎಂಬ ಪ್ರಶ್ನೆ ಮೂಡುವುದು ಸಾಮಾನ್ಯ. ಇದಕ್ಕೆ ಅದೃಷ್ಟವೆಂಬಂತೆ ಇಂತಹ ಪರಿಹಾರಕ್ಕೆಂದು ಕೆಲವು ಕ್ಷೇತ್ರಗಳು ಹಾಗು ದೇವಾಲಯಗಳು ನಮ್ಮ ಭಾರತದಾದ್ಯಂತ ಪ್ರಸಿದ್ಧಿ ಪಡೆದಿದ್ದು, ಧಾರ್ಮಿಕವಾದ ಪ್ರವಾಸ ಕೂಡ ಇದಾಗಿದೆ. ನಮ್ಮ ದಕ್ಷಿಣ ಭಾರತದಲ್ಲಿಯೇ ಅನೇಕ ಮಹಿಮಾನ್ವಿತವಾದ ದೇವಾಲಯಗಳಿವೆ. ಹಾಗಾದರೆ ಆ ದೇವಾಲಯಗಳು ಯಾವುವು? ಎಂಬುದರ ಬಗ್ಗೆ ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿದುಕೊಳ್ಳೋಣ.

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ
ಕೆಲವು ಜ್ಯೋತಿಷಿಗಳ ಪ್ರಕಾರ ಸರ್ಪ ದೋಷವು ಸಾಮಾನ್ಯವಾಗಿ ಬಹುತೇಕರ ಜಾತಕದಲ್ಲಿ ಕಂಡುಬರುತ್ತದೆ. ಇದನ್ನು ಪರಿಹಾರ ಮಾಡಿಕೊಳ್ಳಬೇಕಾದರೆ ನಮ್ಮ ಕರ್ನಾಟಕದಲ್ಲಿಯೇ ಇರುವ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ತೆರಳಿ. ಈ ಮಹಿಮಾನ್ವಿತವಾದ ದೇವಾಲಯದಲ್ಲಿ ಸುಬ್ರಹ್ಮಣ್ಯ ಸ್ವಾಮಿಯು ನೆಲೆಸಿದ್ದಾನೆ. ಜಾತಕದಲ್ಲಿ ಮುಖ್ಯವಾಗಿ ಸರ್ಪ ದೋಷದ ನಿವಾರಣೆಗಾಗಿ ಅತಿ ಪ್ರಮುಖವಾದ ಸ್ಥಳಗಳಲ್ಲಿ ಇದು ಕೂಡ ಒಂದು. ಈ ಕ್ಷೇತ್ರವು ದೇಶದಲ್ಲಿಯೇ ಅತ್ಯಂತ ಜನಪ್ರಿಯವಾದ ಹಾಗು ಹೆಸರುವಾಸಿಯಾದ ಸರ್ಪದೋಷ ನಿವಾರಣಾ ಕ್ಷೇತ್ರವಾಗಿದೆ.

PC:karthick siva

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಶ್ರೀ ಕಾಳಹಸ್ತಿ
ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಶ್ರೀಕಾಳಹಸ್ತಿ ಪಟ್ಟಣದಲ್ಲಿರುವ ಶ್ರೀಕಾಳಸ್ತೀಶ್ವರ ದೇವಾಲಯವು ರಾಹು-ಕೇತುಗಳ ದೋಷಗಳ ಪರಿಹಾರಕ್ಕಾಗಿ ಇಲ್ಲಿ ವಿಶೇಷವಾಗಿ ಪೂಜೆಯನ್ನು ಮಾಡಲಾಗುತ್ತದೆ. ಇದು ಮುಖ್ಯವಾಗಿ ಕಾಳಸರ್ಪದೋಷವನ್ನು ನಿವಾರಿಸುವ ಕ್ಷೇತ್ರ ಎಂದೇ ಪ್ರಸಿದ್ಧವಾಗಿದೆ. ಇದೊಂದು ವಿಶೇಷವಾದ ಕ್ಷೇತ್ರವಾಗಿದ್ದು, ಪಂಚಭೂತ ಲಿಂಗಗಳಲ್ಲಿ ವಾಯುವನ್ನು ಪ್ರತಿನಿಧಿಸುತ್ತದೆ ಈ ಕ್ಷೇತ್ರ. ಇಷ್ಟೇ ಅಲ್ಲದೇ ರಾಹು-ಕೇತು ಕ್ಷೇತ್ರವೆಂದೇ ಪ್ರಸಿದ್ಧಿಯನ್ನು ಪಡೆದಿದೆ. ರಾಹು, ಕೇತು ದೋಷವಿರುವವರು ಇಲ್ಲಿ ವರ್ಷದಲ್ಲಿ 2 ಬಾರಿ ಅಂದರೆ ಉತ್ತರಾಯಣ (ಜನವರಿ 15 ರಿಂದ ಜುಲೈ 15 ರವರೆಗೆ) ಹಾಗು ದಕ್ಷಿಣಾಯಣ (ಜುಲೈ 15 ರಿಂದ ಜನವರಿ 15 ರವರೆಗೆ) ಸಂದರ್ಭದಲ್ಲಿ ಈ ದೋಷ ನಿವಾರಣೆಯ ಪೂಜೆ ಮಾಡಿಕೊಳ್ಳಬಹುದಾಗಿದೆ.

PC:Krishna Kumar Subramanian

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಮನ್ನಾರಶಾಲಾ ದೇವಾಲಯ
ಮನ್ನಾರಶಾಲಾದಲ್ಲಿರುವ ನಾಗರಾಜನ ದೇವಾಲಯವು ಕೇರಳದಲ್ಲಿ ಸರ್ಪ ದೇವರ ಅತಿ ದೊಡ್ಡದಾದ ದೇವಾಲಯವಾಗಿದೆ. ಕೇರಳದ ಅಲಪುಳಾದಿಂದ ಸುಮಾರು 30 ಕಿ.ಮೀಗಳಷ್ಟು ದೂರದಲ್ಲಿ ಈ ದೇವಾಸ್ಥಾನವಿದೆ. ಈ ಕ್ಷೇತ್ರಕ್ಕೆ ಪರಶುರಾಮನ ಸ್ಥಳ ಪುರಾಣವು ಕೂಡ ಇದೆ. ನಾಗಪೂಜೆಗೆ ಇದೊಂದು ಪ್ರಖ್ಯಾತವಾದ ಕ್ಷೇತ್ರವಾಗಿದೆ. ಇನ್ನೊಂದು ವಿಶೇಷತೆ ಏನೆಂದರೆ ಈ ದೇವಾಲಯದಲ್ಲಿ ಎಲ್ಲಾ ಪೂಜೆಗಳನ್ನು ಸ್ತ್ರೀಯರಿಂದಲೇ ಮಾಡಲ್ಪಡುವುದು. ಅಂದರೆ ಇಲ್ಲಿ ಸ್ತ್ರೀಯರೇ ಅರ್ಚಕರು. ಈ ಒಂದು ಕ್ಷೇತ್ರದಲ್ಲಿ 30.000 ಕ್ಕೂ ಅಧಿಕ ಸರ್ಪಗಳ ಚಿತ್ರಗಳನ್ನು, ಪ್ರತಿಮೆಗಳನ್ನು ಕಾಣಬಹುದು.

PC:Vibitha vijay

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ತ್ರ್ಯಂಬಕೇಶ್ವರ ದೇವಾಲಯ
ಪವಿತ್ರವಾದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಈ ತ್ರಿಂಬಕೇಶ್ವರ ದೇವಾಲಯದಲ್ಲಿ ನಾಗಬಲಿ ಅಥವಾ ಕಾಳಸರ್ಪ ದೋಷಗಳನ್ನು ನಿವಾರಣೆ ಮಾಡುವ ಅನೇಕ ಪೂಜೆಗಳನ್ನು ಇಲ್ಲಿ ಮಾಡಲಾಗುತ್ತದೆ. ಇದು ಜ್ಯೋತಿರ್‍ಲಿಂಗಗಳಲ್ಲಿ ಅತ್ಯಂತ ಪವಿತ್ರವಾದ ಸ್ಥಳವಾದ್ದರಿಂದ ಭಕ್ತಿಯಿಂದ ಇಲ್ಲಿ ಪೂಜೆಗಳನ್ನು ನೇರವೇರಿಸುತ್ತಾರೆ. ಅಷ್ಟಕ್ಕೂ ಈ ಪುಣ್ಯಕ್ಷೇತ್ರವು ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿದ್ದು, ನಾಸಿಕ್ ಪಟ್ಟಣದಿಂದ ಕೇವಲ 30 ಕಿ.ಮೀ ದೂರದಲ್ಲಿದೆ.

PC:Niraj Suryawanshi

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಮಹಾಕಾಳೇಶ್ವರ ದೇವಾಲಯ
ಮಧ್ಯ ಪ್ರದೇಶ ರಾಜ್ಯದಲ್ಲಿರುವ ಮಹಾಕಾಳೇಶ್ವರ ದೇವಾಲಯವು ಸಹ ಕಾಳಸರ್ಪ ದೋಷ ನಿವಾರಣೆಗೆ ಭೇಟಿ ನೀಡಲ್ಪಡುವ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಕೂಡ ಪವಿತ್ರವಾದ 12 ಜ್ಯೋತಿರ್ಲಿಂಗ ತಾಣಗಳ ಪೈಕಿ ಒಂದಾಗಿದೆ.

PC:Ssriram mt

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ
ಸರ್ಪ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಪ್ರಖ್ಯಾತವಾದ ಸರ್ಪ ಕ್ಷೇತ್ರವಾದರೆ, ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಬೆಂಗಳೂರಿಗೆ ಬಲು ಹತ್ತಿರವಿರುವ ಸರ್ಪ ಕ್ಷೇತ್ರವಾಗಿದೆ. ಈ ದಿವ್ಯವಾದ ಕ್ಷೇತ್ರವು ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ದಕ್ಷಿಣ ಭಾರತದ ಪ್ರಸಿದ್ಧವಾದ ನಾಗಾರಾಧನೆಗೆ ಹಾಗು ದೋಷಗಳ ಪರಿಹಾರಕ್ಕೆ ಸೂಕ್ತವಾದ ಸ್ಥಳ ಎಂದೇ ಹೇಳಬಹುದು. ಭಾನುವಾರ ಹಾಗು ಮಂಗಳವಾರದಂದು ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ದೋಷಗಳನ್ನು ಪರಿಹಾರ ಮಾಡಿಕೊಳ್ಳುತ್ತಿರುತ್ತಾರೆ.

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಜಾತಕದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಖ್ಯಾತಿ ಪಡೆದ ಕ್ಷೇತ್ರಗಳು ಇವು...

ಮೋಪಿದೇವಿ
ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಚಲ್ಲಪಲ್ಲಿಯಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಮೋಪಿದೇವಿಯ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ನಾಗ ದೋಷ ಪರಿಹಾರ ಪೂಜೆಗಳಿಗೆ ಹೆಸರುವಾಸಿಯಾದ ತಾಣವಾಗಿದೆ. ಇಲ್ಲಿ ಸುಬ್ರಹ್ಮಣ್ಯ ಸ್ವಾಮಿಯು ಶಿವಲಿಂಗ ರೂಪದಲ್ಲಿ ನೆಲೆಸಿದ್ದು, ಭಕ್ತರ ಸಕಲ ಇಷ್ಟಾರ್ಥಗಳನ್ನು ಸ್ವಾಮಿಯು ನೆರವೇರಿಸುತ್ತಾರೆ ಎಂದೇ ನಂಬಲಾಗಿದೆ.

PC:Rsmn

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X