Search
  • Follow NativePlanet
Share
» »ಕಾಲಕ್ಕೆ ಸವಾಲೆಸೆದು ಭದ್ರವಾಗಿ ನಿಂತಿರುವ ಸೋಮನಾಥ

ಕಾಲಕ್ಕೆ ಸವಾಲೆಸೆದು ಭದ್ರವಾಗಿ ನಿಂತಿರುವ ಸೋಮನಾಥ

By Vijay

ಹೌದು, ಈ ಶಿವನ ದೇವಾಲಯ ತನ್ನ ಹುಟ್ಟಿನಿಂದಲೂ ಸಾಕಷ್ಟು ಬಾರಿ ದಾಳಿಗೆ ಒಳಗಾಗಿದೆ. ಪ್ರತಿ ದಾಳಿಗಳಲ್ಲೂ ಇಲ್ಲಿನ ಐಶ್ವರ್ಯಗಳು ಲೂಟಿಗೊಳಗಾಗಿವೆ. ಆದರೂ ಈ ದೇವಾಲಯ ತನ್ನ ಸ್ಥಾನದಲ್ಲೆ ಗಟ್ಟಿಯಾಗಿ ನೆಲೆಯೂರಿ ಕಾಲಕ್ಕೆ ಸೆಡ್ಡು ಹೊಡೆದು ನಿಂತಿದೆ ಎಂದರೆ ಆಶ್ಚರ್ಯವಾದರೂ ಸತ್ಯ.

ಶಿವನ ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳು

ಪ್ರಸ್ತುತ, ದೇವಾಲಯದ ಕಟ್ಟಡವು ಸತತವಾಗಿ ಏಳನೇಯ ಬಾರಿಗೆ ನವೀಕರಿಸಲ್ಪಟ್ಟಿದೆ. ಆದರೂ ಇದರ ಪ್ರಭಾವಳಿಗೇನೂ ಕಮ್ಮಿ ಇಲ್ಲ. ತನ್ನ ಗಂಭೀರ ಸೌಂದರ್ಯದಿಂದ ಇಂದಿಗೂ ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರವಾಸಿಗರನ್ನು, ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತದೆ.

ರೋಚಕ ಹಿನ್ನಿಲೆ, ಶ್ರೀಮಂತ ಇತಿಹಾಸ ಹಾಗೂ ಜಾಗೃತ ದೇವಾಲಯ ಎಂಬ ಹೆಗ್ಗಳಿಕೆಗಳಿಗೆ ಕಾರಣವಾಗಿರುವ ಈ ದೇವಾಲಯ ಗುಜರಾತ್ ರಾಜ್ಯದಲ್ಲಿರುವ, ಪವಿತ್ರ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ಸೋಮನಾಥ ದೇವಾಲಯ. ಇದರ ಕುರಿತು ತಿಳಿಯಬೇಕೆ? ಹಾಗಿದ್ದರೆ ಒಮ್ಮೆ ಈ ಲೇಖನ ಓದಿ.

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಅರಬ್ಬಿ ಸಮುದ್ರ ತಟದಲ್ಲಿರುವ ಸೋಮನಾಥ ದೇವಾಲಯವು, ಗುಜರಾತ್ ರಾಜ್ಯದ ಸೌರಾಷ್ಟ್ರ ಭಾಗದ ಗಿರ್ ಸೋಮನಾಥ ಜಿಲ್ಲೆಯ ವೇರಾವಲ್ ಬಳಿಯಿರುವ ಪ್ರಭಾಸ ಕ್ಷೇತ್ರದಲ್ಲಿ ಸ್ಥಿತವಿದೆ. ಸೊಮನಾಥದಿಂದ ಕೇವಲ ಆರು ಕಿ.ಮೀ ಗಳಷ್ಟು ದೂರದಲ್ಲಿದೆ ಈ ದೇವಾಲಯವಿದೆ.

ಚಿತ್ರಕೃಪೆ: Vibhijain

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯವು ಇಂದು ಪ್ರವಾಸಿ ಆಕರ್ಷಣೆಯಾಗಿಯೂ, ತೀರ್ಥ ಕ್ಷೇತ್ರವಾಗಿಯೂ ಸಾಕಷ್ಟು ಪ್ರಸಿದ್ಧಿಗಳಿಸಿದೆ. ಕಾರಣ, ಇಲ್ಲಿರುವ ಸ್ಪರ್ಶ ಶಿವಲಿಂಗವು ಸೋಮ ಅಂದರೆ ಚಂದ್ರನಿಂದ ಪೂಜಿಸಲ್ಪಟ್ಟು ಹಾಗೂ ಆತನಿಗೆ ವರದಾನ ನೀಡಿದಂತಹ ಪುಣ್ಯ ಶಿವಲಿಂಗವಾಗಿದೆ.

ಚಿತ್ರಕೃಪೆ: Axel Drainville

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಅಲ್ಲದೆ, ಸಾಕಷ್ಟು ಜನರು ಹೇಳುವಂತೆ ಭಾರತದಲ್ಲಿ ಕಂಡುಬರುವ ಪವಿತ್ರ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಸೋಮನಾಥ ದೇವಾಲಯದಲ್ಲಿರುವ ಶಿವಲಿಂಗವು ಮೊಟ್ಟ ಮೊದಲ ಶಿವಲಿಂಗವಾಗಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಶಿವನ ಈ ದೇವಾಲಯಕ್ಕೆ ಸಾಕಷ್ಟು ಮಹತ್ವವಿದೆ.

ಚಿತ್ರಕೃಪೆ: Axel Drainville

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಇಂದು ಈ ಸೋಮನಾಥ ದೇವಾಲಯವನ್ನು ಮಾರ್ಮಿಕವಾಗಿ "ಶಾಶ್ವತ ದೇವಾಲಯ" ಎಂದು ಕರೆಯಲಾಗುತ್ತದೆ, ಕಾರಣ ಈ ಹಿಂದೆ ಸಾಕಷ್ಟು ಬಾರಿ ಮುಸ್ಲಿಮ್ ದಾಳಿಕೊರರಿಂದ ಈ ಆಕ್ರಮಣಕ್ಕೊಳಗಾದರೂ ಪ್ರತಿ ಬಾರಿ ಹಿಂದು ರಾಜರುಗಳಿಂದ ಮತ್ತೆ ಮತ್ತೆ ಪುನರ್ನಿರ್ಮಿಸಲ್ಪಟ್ಟಿದೆ. ಕಳೆದ ಬಾರಿ ಈ ದೇವಾಲಯ ನವೀಕರಣಗೊಂಡಿದ್ದು ನವಂಬರ್ 1947 ರಲ್ಲಿ.

ಚಿತ್ರಕೃಪೆ: Nagarjun Kandukuru

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ ಕ್ಷೇತ್ರವು ತ್ರಿವೇಣಿ ಸಂಗಮದ (ಕಪಿಲಾ, ಹೀರನ್ ಹಾಗೂ ಗುಪ್ತ ಸರಸ್ವತಿ) ಬಳಿ ಇರುವುದರಿಂದ ಪುರಾತನ ಕಾಲದಿಂದಲೂ ಹಿಂದುಗಳ ಪಾಲಿಗೆ ಪವಿತ್ರ ತೀರ್ಥ ಯಾತ್ರಾಕ್ಷೇತ್ರವಾಗಿ ಜನಪ್ರೀಯವಾಗಿದೆ.

ಚಿತ್ರಕೃಪೆ: Anhilwara

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಪ್ರಖ್ಯಾತ ಧಾರ್ಮಿಕ ವಿದ್ವಾಂಸ ಜೆ. ಗೊರ್ಡೋನ್ ಮೆಲ್ಟಾನ್ ಅವರು ದಾಖಲಿಸಿರುವಂತೆ, ಪ್ರಪ್ರಥಮವಾಗಿ ಈ ದೇವಾಲಯದ ನಿರ್ಮಾಣದ ಕುರಿತು ನಿಖರವಾದ ಮಾಹಿತಿಯಿಲ್ಲವಾದರೂ ಎರಡನೇಯ ಬಾರಿಗೆ ಈ ದೇವಾಲಯದ ಮರುನಿರ್ಮಾಣ ಕ್ರಿ.ಶ. 649 ರಲ್ಲಿ ವಲ್ಲಾಭಿಯ ಯಾದವ ದೊರೆಗಳಿಂದಾಯಿತೆನ್ನಲಾಗಿದೆ.

ಚಿತ್ರಕೃಪೆ: Samadolfo

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ನಂತರ ಕಾಲ ಉರುಳಿದಂತೆ ಅರಬ್ ಹಾಗೂ ಮುಸ್ಲಿಮ್ ಆಕ್ರಮಣಕಾರರಿಂದ ಸಾಕಷ್ಟು ಬಾರಿ ಈ ದೇವಾಲಯ ನಾಶ ಹೊಂದಿದರೂ ಆಯಾ ಕಾಲಗಳಲ್ಲಿ ಆಳುತ್ತಿದ್ದ ಪ್ರದೇಶದ ಹಿಂದು ರಾಜರುಗಳಿಂದ ಮತ್ತೆ ಮತ್ತೆ ನಿರ್ಮಿಸಲ್ಪಟ್ಟಿದೆ ಈ ದೇವಾಲಯ. ಸೋಮನಾಥ ಮಂದಿರ 1869 ರ ಸಮಯದಲ್ಲಿ.

ಚಿತ್ರಕೃಪೆ: wikipedia

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಇನ್ನೂ ಈ ದೇವಾಲಯಕ್ಕೆ ಸಂಬಂಧಿಸಿದಂತೆ ಸ್ಕಂದ ಪುರಾಣದಲ್ಲಿ ಇದರ ಕುರಿತು ಉಲ್ಲೇಖವಿರುವುದನ್ನು ಗಮನಿಸಬಹುದು. ಅದರ ಪ್ರಕಾರ, ಚಂದ್ರ ದೇವನು ದಕ್ಷ ಪ್ರಜಾಪತಿಯ 27 ಪುತ್ರಿಯರನ್ನು ವಿವಾಹವಾಗಿದ್ದನಾದರೂ ರೋಹಿಣಿಯೊಂದಿಗೆ ಮಾತ್ರ ಸಾಕಷ್ಟು ಹತ್ತಿರವಾಗಿದ್ದನು.

ಚಿತ್ರಕೃಪೆ: Kaushik Patel

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಈ ರೀತಿಯಾಗಿ ತನ್ನ ಇತರೆ ಪುತ್ರಿಯರಿಗೆ ನ್ಯಾಯ ಒದಗಿಸುತ್ತಿಲ್ಲವೆಂಬ ಕಾರಣದಿಂದ ದಕ್ಷನು ಚಂದ್ರನು ತನ್ನೆಲ್ಲ ಪ್ರಭಾವಳಿ/ಹೊಳಪನ್ನು ಕಳೆದುಕೊಳ್ಳುವಂತೆ ಶಪಿಸಿದನು ಹಾಗೂ ಇದರ ಪರಿಣಾಮವಾಗಿ ಚಂದ್ರ ತನ್ನ ಕಳೆಯನ್ನು ಕಳೆದುಕೊಂಡು ನಿರುತ್ಸಾಹನಾದನು.

ಚಿತ್ರಕೃಪೆ: Bharath12345

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಇದರಿಂದ ಪಾಶ್ಚಾತಾಪ ಪಟ್ಟ ಚಂದ್ರನು ತಾನು ಕಳೆದುಕೊಂಡ ಹೊಳಪನ್ನು ಮತ್ತೆ ಪುನಃ ಪಡೆಯಲು ಇಂದು ದೇವಸ್ಥಾನವಿರುವ ಸ್ಥಳಕ್ಕೆ ಬಂದು ಸ್ಪರ್ಶಲಿಂಗವನ್ನು ಅತಿ ಭಕ್ತಿ ಹಾಗೂ ಶೃದ್ಧೆಗಳಿಂದ ಪೂಜಿಸಿದನು. ಇದರಿಂದ ಪ್ರಸನ್ನನಾದ ಶಿವನು ಅವನ ಭಕ್ತಿಗೆ ಮೆಚ್ಚಿ ಆತನ ಪ್ರಭಾವಳಿಯನ್ನು ಮತ್ತೆ ಹಿಂತಿರುಗುವ ವರದಾನ ನೀಡಿ ಹರಸಿದನು.

ಚಿತ್ರಕೃಪೆ: Amogh123000

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಹೀಗಾಗಿ ಇಂದು ದೇವಸ್ಥಾನವಿರುವ ಕ್ಷೇತ್ರವು ಪ್ರಭಾಸ ಕ್ಷೇತ್ರ ಎಂಬ ಹೆಸರಿಂದಲೇ ಇಂದಿಗೂ ಗುರುತಿಸಲ್ಪಡುತ್ತದೆ. ಅಲ್ಲದೆ ಸ್ಕಂದ ಪುರಾಣದಲ್ಲಿ ಹೇಳಿರುವಂತೆ ಈ ದೇವಾಲಯವಿರುವ ಸ್ಥಳದ ಭೂಗರ್ಭದಲ್ಲಿ ಸೂರ್ಯನಷ್ಟ ತೆಜಸ್ಸಿನಿಂದ ಕೂಡಿದ ಕೋಳಿ ಮೊಟ್ಟೆಯಷ್ಟು ಗಾತ್ರದ ಸ್ಪರ್ಶಲಿಂಗವಿದೆ ಎನ್ನಲಾಗಿದೆ.

ಚಿತ್ರಕೃಪೆ: Aditya Mahar

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಸೋಮನು ಅರ್ಥಾತ್ ಚಂದ್ರನು ಇಲ್ಲಿ ಶಿವನನ್ನು ಪೂಜಿಸಿದ್ದರಿಂದ ಈ ಸ್ಥಳವು ಮುಂದೆ ಸೋಮನಾಥನೆಂಬ ಹೆಸರಿನಿಂದಲೆ ಜನಪ್ರೀಯವಾಯಿತು. ಪ್ರತೀತಿಯಂತೆ ಚಂದ್ರ ಹಾಗೂ ಇತರೆ ದೇವತೆಗಳ ಕೋರಿಕೆಯಂತೆ ಶಿವನು ಇಲ್ಲಿ ಸೋಮನಾಥನಾಗಿ ಇಂದಿಗೂ ನೆಲೆಸಿದ್ದು ಜನರನ್ನು ಹರಸುತ್ತಿದ್ದಾನೆ.

ಚಿತ್ರಕೃಪೆ: Rahul kaushik

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಪ್ರಸ್ತುತ ದೇವಾಲಯ ವಾಸ್ತುಶಿಲ್ಪವು ಚಾಲುಕ್ಯ ಅಥವಾ ಗುಜರಾತಿನ ಪ್ರಸಿದ್ಧ ಸೋಮಪುರ ಸಾಲತರ ನಿಪುಣಗಾರಿಕೆಯ ಕೈಲಾಸ ಮಹಾಮೇರು ಪ್ರಸಾದ ಶಿಲಿಯ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಇದು ಗುಜರಾತಿನ ಶ್ರೀಮಂತ ವಾಸ್ತು ಶೈಲಿಯನ್ನು ತೋರಿಸುತ್ತದೆ.

ಚಿತ್ರಕೃಪೆ: Amogh123000

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಬಾಣಸ್ತಂಭ ಇಲ್ಲಿನ ಮತ್ತೊಂದು ವಿಶೇಷವಾಗಿದೆ. ಇಲ್ಲಿ ದಾಖಲಿಸಿರುವ ಶಾಸನದಂತೆ ಈ ದೇವಾಲಯದ ಬಳಿಯಿರುವ ಸಮುದ್ರ ತಟದಿಂದ ಅಂಟಾರ್ಟಿಕಾ ಖಂಡದವರೆಗೂ ಸರಳ ರೇಖೆಯಲ್ಲಿ ನೋಡಿದಾಗ ಮಧ್ಯದಲ್ಲಿ ಯಾವೊಂದು ಭೂಪ್ರದೇಶ ಬರುವುದಿಲ್ಲವಂತೆ. ಅಲ್ಲದೆ, ದಕ್ಷಿಣ ಧ್ರುವದಿಂದ ಉತ್ತರಕ್ಕೆ ನಿರ್ದಿಷ್ಟ ರೇಖಾಂಶದಲ್ಲಿ ಭಾರತದ ಮೊದಲ ಭೂಪ್ರದೇಶವಾಗಿ ಇದು ಕಂಡುಬರುತ್ತದೆ ಎನ್ನಲಾಗಿದೆ.

ಚಿತ್ರಕೃಪೆ: Admishra

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಭಾಲಕಾ ಇದು ಸೋಮನಾಥ ದೇವಾಲಯದ ಬಳಿಯಿರುವ ಮತ್ತೊಂದು ಪುಣ್ಯ ಕ್ಷೇತ್ರ. ಇದರ ವಿಶೇಷತೆ ಎಂದರೆ ಭಗವಾನ್ ಶ್ರೀ ಕೃಷ್ಣನು ತನ್ನ ಪವಾಡಗಳನ್ನು ಇಲ್ಲಿಯೆ ಅಂತ್ಯಗೊಳಿಸಿ ಸ್ವರ್ಗಕ್ಕೆ ತೆರಳಿದನೆನ್ನಲಾಗುತ್ತದೆ. ಹೀಗಾಗಿ ಶ್ರೀಕೃಷ್ಣನು ಭೂಮಿಯ ಮೇಲಿದ್ದ ಕೊನೆಯ ಸ್ಥಳವಾಗಿ ಇದು ಪ್ರವಾಸಿಗರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Manoj Khurana

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯದ ಬಳಿಯಿರುವ ಗೀತಾ ಮಂದಿರ. ಈ ಮಂದಿರವು ತ್ರಿವೇಣಿ ಸಂಗಮ ಸ್ಥಳದಲ್ಲಿದ್ದು ಸಾಕಷ್ಟು ಭಕ್ತಾದಿಗಳನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Sangita Pujara

ಸೋಮನಾಥ ದೇವಾಲಯ, ಗುಜರಾತ್:

ಸೋಮನಾಥ ದೇವಾಲಯ, ಗುಜರಾತ್:

ಭಾರತೀಯ ರೈಲ್ವೇಯ ಪಶ್ಚಿಮ ಉಪವಿಭಾಗದ ಭಾವನಗರ ವಿಭಾಗಕ್ಕೆ ಸೇರಿದ ಸೋಮನಾಥಪುರ ರೈಲು ನಿಲ್ದಾಣವಿದ್ದು ಇದು ಸೋಮನಾಥ ಮಂದಿರದಿಂದ ಸುಮಾರು ಏಳು ಕಿ.ಮೀ ಗಳಷ್ಟು ಮಾತ್ರವೆ ದೂರದಲ್ಲಿದೆ. ಪ್ರತಿನಿತ್ಯ ಅಹ್ಮದಾಬಾದ್ ಹಾಗೂ ಜಬಲ್ಪೂರ್ ದ ರೈಲುಗಳು ಇಲ್ಲಿ ಸಂಚರಿಸುತ್ತವೆ.

ಚಿತ್ರಕೃಪೆ: Sbilogic

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X