Search
  • Follow NativePlanet
Share
» »ಸೋಲಾಪುರ ಪಟ್ಟಣ ಹಾಗೂ ಪ್ರಭಾವಿ ಸ್ಥಳಗಳು

ಸೋಲಾಪುರ ಪಟ್ಟಣ ಹಾಗೂ ಪ್ರಭಾವಿ ಸ್ಥಳಗಳು

By Vijay

ಕನ್ನಡ ಭಾಷೆಯ ಕಂಪನ್ನು ಇಂದಿಗೂ ಕಾಣಬಹುದಾಗಿರುವ ಸೋಲಾಪುರವು ಮಹಾರಾಷ್ಟ್ರ ರಾಜ್ಯದ ಒಂದು ಬೆಳೆಯುತ್ತಿರುವ ಜಿಲ್ಲೆಯಾಗಿದೆ. ಮರಾಠಿ ಅಧಿಕೃತ ಭಾಷೆಯಾಗಿರುವ ಈ ನಾಡಲ್ಲಿ ಕನ್ನಡ ಮಾತನಾಡುವವರನ್ನೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದು. ಜವಳಿ ಉತ್ಪನ್ನಗಳಿಗೆ (ವಸ್ತ್ರೋದ್ಯಮ) ಈ ಊರು ಪ್ರಸಿದ್ಧವಾಗಿದ್ದು "ಭಾರತದ ಮ್ಯಾಂಚೆಸ್ಟರ್" ಎಂದೂ ಸಹ ಕರೆಯಲ್ಪಡುತ್ತದೆ.

ಮೂಲತಃ ಸೋಲಾಪುರ ಜಿಲ್ಲೆಯು ಭಕ್ತಿ ಪರಾಕಾಷ್ಟೆಯಿಂದ ತುಂಬಿ ತುಳುಕಿರುವ ಕೆಲವು ವಿಶಿಷ್ಟವಾದ ಆಧ್ಯಾತ್ಮಿಕ ತಾಣಗಳಿಗೆ ಅತಿ ಹೆಚ್ಚು ಪ್ರಸಿದ್ಧವಾಗಿದೆ. ಹೆಸರಿಸಬೇಕೆಂದರೆ ನಗರದಲ್ಲಿರುವ ಸಿದ್ಧೇಶ್ವರ ದೇವಸ್ಥಾನ, ಜಿಲ್ಲೆಯಲ್ಲಿರುವ ಅಕ್ಕಲಕೋಟ್, ಹಾಗೂ ಶ್ರೀ ವಿಠೋಬ ನೆಲೆಸಿರುವ ಪಂಢರಾಪುರ.

ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದೆಲ್ಲೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ಈ ಪ್ರಭಾವಶಾಲಿ ಆಧ್ಯಾತ್ಮಿಕ ತಾಣಗಳ ಕುರಿತು ಪ್ರಸ್ತುತ ಲೇಖನದ ಮೂಲಕ ತಿಳಿಯಿರಿ.

ಸೋಲಾಪುರ:

ಸೋಲಾಪುರ:

ಪಟ್ಟಣವು ತನ್ನಲ್ಲಿ ಉತ್ಪಾದಿಸಲಾಗುವ ಚಾದರು ಹಾಗೂ ಟವೆಲ್ಲುಗಳಿಗೆ ಅತಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Coolgama

ಸಿದ್ಧೇಶ್ವರ ದೇವಸ್ಥಾನ:

ಸಿದ್ಧೇಶ್ವರ ದೇವಸ್ಥಾನ:

ಸೋಲಾಪುರ ನಗರದಲ್ಲಿರುವ ಅತಿ ಪ್ರಮುಖ ದೇವಾಲಯ ಇದಾಗಿದೆ. ವಾರ್ಷಿಕವಾಗಿ 35 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Uddhavghodake

ಸಿದ್ಧೇಶ್ವರ ದೇವಸ್ಥಾನ:

ಸಿದ್ಧೇಶ್ವರ ದೇವಸ್ಥಾನ:

ಹದಿನಾರನೇಯ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯದಲ್ಲಿ ಶಿವನನ್ನು ಸಿದ್ಧೇಶ್ವರನಾಗಿ ಪೂಜಿಸಲಾಗುತ್ತದೆ.

ಚಿತ್ರಕೃಪೆ: Uddhavghodake

ಸಿದ್ಧೇಶ್ವರ ದೇವಸ್ಥಾನ:

ಸಿದ್ಧೇಶ್ವರ ದೇವಸ್ಥಾನ:

ಸಿದ್ಧೇಶ್ವರ ದೇವಸ್ಥಾನದ ಮೂಲ ವಿಗ್ರಹದ ಮತ್ತೊಂದು ನೋಟ.

ಚಿತ್ರಕೃಪೆ: Ameyaket

ಸಿದ್ಧೇಶ್ವರ ದೇವಸ್ಥಾನ:

ಸಿದ್ಧೇಶ್ವರ ದೇವಸ್ಥಾನ:

ಉತ್ಸವದ ಸಂದರ್ಭದಲ್ಲಿ ದೀಪಾಲಂಕಾರದಿಂದ ಝಗಮಗಿಸುತ್ತಿರುವ ಸಿದ್ಧೇಶ್ವರ ದೇವಾಲಯ.

ಚಿತ್ರಕೃಪೆ: Ameyaket

ಅಕ್ಕಲಕೋಟೆ:

ಅಕ್ಕಲಕೋಟೆ:

19 ನೇಯ ಶತಮಾನದ ಸಂತರಾದ ಶ್ರೀ ಸಮರ್ಥ ಮಹಾರಾಜರು ನೆಲೆಸಿದ್ದ ಈ ತಾಣವು ಇಂದು ಅತಿ ಜನಪ್ರಿಯ ಆಧ್ಯಾತ್ಮಿಕ ಕೇಂದ್ರವಾಗಿದೆ. ಸಮರ್ಥ ಮಹಾರಾಜರು ದತ್ತಾತ್ರೇಯ ಸ್ವಾಮಿಗಳ ಮರು ಅವತಾರ ಎಂದು ನಂಬಲಾಗಿದೆ. ಈ ತಾಣವು ಸೋಲಾಪುರ ಪಟ್ಟಣದ ಆಗ್ನೇಯ ದಿಕ್ಕಿಗೆ 40 ಕಿ.ಮೀ ದೂರವಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Vishwasrao

ಪಂಢರಪುರ:

ಪಂಢರಪುರ:

ಶ್ರೀ ವಿಠೋಬ ನೆಲೆಸಿರುವ ತಾಣವೆ ಸೋಲಾಪುರ ಜಿಲ್ಲೆಯ ಪಂಢರಪುರ ಕ್ಷೇತ್ರ. ಭೀಮಾ ನದಿ ತೀರದಲ್ಲಿ ನೆಲೆಸಿರುವ ಈ ಶ್ರೀ ಕ್ಷೇತ್ರವು ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Parag Mahalley

ಪಂಢರಪುರ:

ಪಂಢರಪುರ:

ಆಶಾಡ ಮಾಸ (ಜೂನ್,ಜುಲೈ) ದ ಸಮಯದಲ್ಲಿ ಭಕ್ತ ಜನರ ಮಹಾಪೂರವೆ ಈ ಶ್ರೀ ಕ್ಷೇತ್ರಕ್ಕೆ ವಿಠಲನ ದರುಶನ ಕೋರಿ ಹರಿದು ಬರುತ್ತದೆ. ಸೋಲಾಪುರ ಪಟ್ಟಣದಿಂದ ಈ ಕ್ಷೇತ್ರ್ವು ಕೇವಲ 25 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Shmilyshy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X