Search
  • Follow NativePlanet
Share
» »ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಜೀವನದಲ್ಲಿ ಹಲವಾರು ಅಡೆ ತಡೆಗಳು ಪ್ರಾರಂಭವಾಗುವ ದೇವಾಲಯಕ್ಕೆ ತೆರಳಿ ಹಲವಾರು ಪೂಜೆ, ಹರಕೆಗಳನ್ನು ಮಾಡಿಕೊಳ್ಳುತೇವೆ. ಹೀಗಿರುವಾಗ ಅತ್ಯಂತ ಶಕ್ತಿವಂತ ದೇವತೆಗಳಿಗೆ ಹರಕೆಗಳನ್ನು ಕಟ್ಟುವುದರ ಮೂಲಕ ಪರಿಹಾರ ಸಿಗಬಹುದು ಎಂದು ಕೆಲವರು ಹೇಳುವುದುಂಟು

ಜೀವನದಲ್ಲಿ ಹಲವಾರು ಅಡೆ ತಡೆಗಳು ಪ್ರಾರಂಭವಾಗುವ ದೇವಾಲಯಕ್ಕೆ ತೆರಳಿ ಹಲವಾರು ಪೂಜೆ, ಹರಕೆಗಳನ್ನು ಮಾಡಿಕೊಳ್ಳುತೇವೆ. ಹೀಗಿರುವಾಗ ಅತ್ಯಂತ ಶಕ್ತಿವಂತ ದೇವತೆಗಳಿಗೆ ಹರಕೆಗಳನ್ನು ಕಟ್ಟುವುದರ ಮೂಲಕ ಪರಿಹಾರ ಸಿಗಬಹುದು ಎಂದು ಕೆಲವರು ಹೇಳುವುದುಂಟು. ರೌದ್ರ ಸ್ವರೂಪಿಯ ದೇವತೆಗಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯ ಎಂದೇ ಹೇಳಬಹುದು. ಆ ದೇವತೆಗಳಿಗೆ ಅತ್ಯಂತ ನೇಮ-ನಿಷ್ಠೆಯಿಂದ ಪೂಜೆ ಮಾಡುವುದು ಅತ್ಯವಶ್ಯಕ. ಆ ಸಾಲಿನಲ್ಲಿ ಕಾಳಿ ಮಾತೆ ಕೂಡ ಒಬ್ಬಳು.

ಇಲ್ಲೊಂದು ವಿಶೇಷವಾದ ದೇವಾಲಯವಿದೆ. ಆ ದೇವತೆಯು ಕಾನೂನು ಸಮಸ್ಯೆ, ವ್ಯವಹಾರ ಸಮಸ್ಯೆ ಅಥವಾ ಯಾವುದೇ ಕೌಟುಂಬಿಕ ಸಮಸ್ಯೆಯಿರಲಿ ಈ ಕಾಳಿ ಮಾತೆಯನ್ನು ಭಕ್ತಿಯಿಂದ ಪೂಜಿಸದರೆ ಪರಿಹಾರವನ್ನು ನೀಡುತ್ತಾಳೆ ಎಂಬುದು ಅಲ್ಲಿನ ಸ್ಥಳೀಯರ ನಂಬಿಕೆಯಾಗಿದೆ. ಹಾಗಾದರೆ ಆ ದೇವಿಯ ದೇವಾಲಯ ಎಲ್ಲಿದೆ ಎಂಬುದನ್ನು ತಿಳಿಯೋಣ.

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು..

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು..

ಈ ಕಾಳಿ ಮಾತೆಯನ್ನು ಮಧುರ ಕಾಳಿ ಅಮ್ಮ ಎಂದೇ ಕರೆಯುತ್ತಾರೆ. ಈ ತಾಯಿಯ ಹೆಸರಿನ ಮೇರೆಗೆ ಮಧುರ ಕಾಳಿ ಅಮ್ಮನವರ ದೇವಾಲಯ ಎಂದು ಕರೆಯುತ್ತಾರೆ. ಈ ತಾಯಿಯ ದೇವಾಲಯವು ಅತ್ಯಂತ ಪುರಾತನವಾದುದು. ಸುಮಾರು 1000 ವರ್ಷಗಳ ಇತಿಹಾಸವಿರುವ ಈ ಮಧುರ ಕಾಳಿ ಅಮ್ಮನವರ ದೇವಾಲಯವು ತಮಿಳುನಾಡು ರಾಜ್ಯದ ಪೆರುಂಬಲೂರು ಜಿಲ್ಲೆಯ ಸಿರುವಚೂರಿನಲ್ಲಿದೆ.

PC:official Site

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಈ ತಾಯಿಯು ಅತ್ಯಂತ ಮಹಿಮಾನ್ವಿತ ತಾಯಿ ಎಂದು ಕರೆಯುತ್ತಾರೆ. ಈ ತಾಯಿಯು ಕಾನೂನು ಸಮಸ್ಯೆ, ವ್ಯವಹಾರ ಸಮಸ್ಯೆ ಅಥವಾ ಯಾವುದೇ ಕೌಟುಂಬಿಕ ಸಮಸ್ಯೆಯಿರಲಿ ಪರಿಹಾರ ಮಾಡುತ್ತಾಳೆ. ಕಂಕಣ ಹಾಗು ಸಂತಾನ ಭಾಗ್ಯಗಳನ್ನು ಕರುಣಿಸುತ್ತಾಳೆಂದು ಹಲವಾರು ಮಂದಿ ಒಳಿತು ಕಂಡವರ ಅಭಿಪ್ರಾಯವಾಗಿದೆ. ಈ ಮಹಿಮಾನ್ವಿತವಾದ ದೇವಾಲಯವು ತಮಿಳುನಾಡಿನಲ್ಲಿದ್ದು, ಸಿರುವಚೂರು ಸೇಲಂನಿಂದ 145 ಕಿ.ಮೀ ಗಳಷ್ಟು ದೂರದಲ್ಲಿದೆ.

PC:Dinesh Kumar (DK)

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಕರ್ನಾಟಕದಿಂದ ಈ ದೇವಾಲಯಕ್ಕೆ ತೆರಳಲು ಬಯಸುವ ಕಾಳಿ ಮಾತೆಯ ಭಕ್ತಾಧಿಗಳು ಬೆಂಗಳೂರಿನಿಂದ ಇಲ್ಲಿಗೆ ತಲುಪುವುದು ಸುಲಭವಾಗುತ್ತದೆ. ಬೆಂಗಳೂರಿನಿಂದ ಸೇಲಂಗೆ ತೆರಳಿ ಅಲ್ಲಿಂದ 125 ಕಿ,ಮೀ ದೂರವಿರುವ ಪೆರಂಬಲೂರಿಗೆ ತೆರಳಿ ಅಲ್ಲಿಂದ 9 ಕಿ.ಮೀ ದೂರದ ಸಿರುವಚೂರಿಗೆ ತಲುಪಬಹುದು.

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ವಿಶೇಷವೆನೆಂದರೆ, ಈ ದೇವಾಲಯ ಮೂಲತಃ ಚೆಲ್ಲಿಯಮ್ಮನವರ ಸ್ಥಾನವಾಗಿದೆಯಾದರೂ ಕೂಡ ಇಂದು ಕಾಳಿ ಅಮ್ಮನ್ ದೇವಾಲಯ ಎಂದು ಪ್ರಸಿದ್ಧವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಹಿನ್ನೆಲೆ ಕೂಡ ಇದೆ. ಅದರ ಪ್ರಕಾರ, ಹಿಂದೆಮ್ಮೆ ಈ ಪ್ರದೇಶದ ಮುಖ್ಯ ದೇವಿಯಾಗಿ ಚೆಲ್ಲಿ ಅಮ್ಮ ನೆಲೆಸಿದ್ದಳು.

PC:official Site

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಆದರೆ ದುರದೃಷ್ಟವಶಾತ್ ಆ ಪ್ರದೇಶಕ್ಕೆ ಅತಿ ಘೋರವಾದ ಕ್ರೂರ ಮಾಂತ್ರಿಕನೊಬ್ಬನ ಆಗಮನವಾಯಿತು. ಆತ ತುಂಬ ಬಲಶಾಲಿಯಾಗಿದ್ದನು. ತನ್ನ ಮಾಟ-ಮಂತ್ರ ಶಕ್ತಿಗಳ ಪ್ರಭಾವದಿಂದ ಚೆಲ್ಲಿ ಅಮ್ಮನ್‍ನನ್ನು ತನ್ನ ಗುಲಾಮ ಮಾಡಿಕೊಂಡು ತನ್ನ ಕ್ರೂರತನವನ್ನು ತೋರುತ್ತಾ ಅಟ್ಟಹಾಸದಿಂದ ಮೆರೆಯುತ್ತಿದ್ದ.

PC:official Site

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಹೀಗಾಗಿ ಚೆಲ್ಲಿ ಅಮ್ಮನ್ ನಿಂದ ಜನರಿಗೆ ಕಷ್ಟ-ಕಾರ್ಪಣ್ಯಗಳನ್ನು ನೀಡುತ್ತಿದ್ದ. ಇದರಿಂದ ಬೇಸರ ಹೊಂದಿದ್ದ ಚೆಲ್ಲಿ ಅಮ್ಮ ಏನೂ ಮಾಡಲಾರದೆ ಅಸಹಾಯಕಳಾಗಿದ್ದಳು. ಹೀಗಿರುವಾಗ ಒಮ್ಮೆ ಕಾಳಿ ಮಾತೆಯ ಅವತಾರವಾದ ಮಧುರ ಕಾಳಿ ಅಮ್ಮ ಒಂದೊಮ್ಮೆ ಈ ಪ್ರದೇಶದ ಮೂಲಕ ಸಾಗುವಾಗ ಅಲ್ಲಿನ ದೇವಿಯಾದ ಚೆಲ್ಲಿ ಅಮ್ಮನ ಕುರಿತು ಒಂದು ದಿನ ತಂಗಲು ಕೋರಿದಳು.

PC:Dinesh Kumar (DK)

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಇದಕ್ಕೆ ಪ್ರಸನ್ನಳಾದ ಚೆಲ್ಲಿ ಅಮ್ಮ ಕಾಳಿ ಮಾತೆಗೆ ಅನುಮತಿಯನ್ನು ನೀಡಿ ತನ್ನ ಅಸಹಾಯಕ ಸ್ಥಿತಿಯ ಕುರಿತು ಹಾಗು ಮಾಂತ್ರಿಕನ ಕುರಿತು ಎಲ್ಲವನ್ನು ಹೇಳಿದಳು. ಮಾಂತ್ರಿಕನ ಮೇಲೆ ಕೋಪಗೊಂಡ ಮಧುರ ಕಾಳಿ ಮಾತೆಯು ಆ ಮಾಂತ್ರಿಕನನ್ನು ಸಂಹಾರ ಮಾಡಿ ಚೆಲ್ಲಿ ಅಮ್ಮನನ್ನು ಮಾಂತ್ರಿಕನ ದಾಸ್ಯದಿಂದ ಮುಕ್ತಿಗೊಳಿಸುತ್ತಾಳೆ.

PC:official Site

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಇದರಿಂದ ಸಂತಸಗೊಂಡ ಚೆಲ್ಲಿ ಅಮ್ಮ ತಾಯಿಯು ತಾನು ನೆಲೆಸಿರುವ ಸ್ಥಳದಲ್ಲಿಯೇ ಮಧುರ ಕಾಳಿ ಅಮ್ಮ ನೆಲೆಸಬೇಕು ಎಂದು ಪ್ರಾರ್ಥಿಸುತ್ತಾಳೆ. ಹೀಗಾಗಿ ಕಾಳಿಯು ಒಪ್ಪಿ ಚೆಲ್ಲಿ ಅಮ್ಮನ್ ದೇವಾಲಯದ ಸಮೀಪದಲ್ಲಿಯೇ ಪೆರಿಯಾಸ್ವಾಮಿಮಲಿ ಎಂಬ ಗುಡ್ಡದಲ್ಲಿ ನೆಲೆಸುತ್ತಾಳೆ. ಆದರೆ ಈ ರೀತಿ ನೆಲೆಸುವುದಕ್ಕೂ ಮುಂಚೆ ತನ್ನ ಒಂದು ಕೋರಿಕೆಯನ್ನು ಕಾಳಿ ಮಾತೆಯ ಮುಂದಿಟ್ಟಳು ಚೆಲ್ಲಿ ಅಮ್ಮನ್. ಅದೆನೆಂದರೆ..

PC:Dinesh Kumar (DK)

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....

ಮೊದಲು (ಚೆಲ್ಲಿ ಅಮ್ಮನ್) ನನಗೆ ಪೂಜೆಯಾದ ನಂತರವೇ ನಿನ್ನ ಪೂಜೆಯನ್ನು ಪ್ರಜೆಗಳು ಮಾಡಬೇಕು ಎಂದು ಕೇಳಿಕೊಂಡಳು. ಇದೇ ಪದ್ಧತಿಯು ಕೂಡ ಇಂದಿಗೂ ಈ ದೇವಾಲಯದಲ್ಲಿ ನಡೆಯುತ್ತಿದೆ. ಮಧುರ ಕಾಳಿ ಅಮ್ಮನವರಿಗೆ ಆರತಿ ಬೆಳಗುವುದಕ್ಕೂ ಮುಂಚೆ ಅರ್ಚಕರು ಎದುರು ಬದಿಯ ಗುಡ್ಡದಲ್ಲಿ ನೆಲೆಸಿರುವ ಚೆಲ್ಲಿ ಅಮ್ಮನವರಿಗೆ ಮೊದಲು ಆರತಿ ಬೆಳಗಿ ತದನಂತರವೇ ಕಾಳಿ ಅಮ್ಮನವರನ್ನು ಪೂಜಿಸುತ್ತಾರೆ. ಇಷ್ಟೇ ಅಲ್ಲ ಫಂಗುಣಿ ಹಾಗು ರಥೋತ್ಸವ ಇಲ್ಲಿ ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಇದು ಇಲ್ಲಿನ ಮುಖ್ಯ ಉತ್ಸವ ಕೂಡ ಆಗಿದೆ.

PC:official Site

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X