Search
  • Follow NativePlanet
Share
» »ಇನ್ನು ನೀವು ಕೂಡಾ ಮೆಟ್ರೋ ರೈಲಿನಲ್ಲಿ ತಿನ್ನಬಹುದು

ಇನ್ನು ನೀವು ಕೂಡಾ ಮೆಟ್ರೋ ರೈಲಿನಲ್ಲಿ ತಿನ್ನಬಹುದು

ಈಗಂತೂ ಮೆಟ್ರೋ ರೈಲಿನಲ್ಲೇ ಓಡಾಡುವವರು ಹೆಚ್ಚು. ಯಾವುದೇ ಟ್ರಾಫಿಕ್ ಜಂಜಾಟವಿಲ್ಲದೆ ಕೆಲವೇ ಕೆಲವು ನಿಮಿಷಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬಹುದಾಗಿದೆ. ಮೆಟ್ರೋದಲ್ಲಿ ಓಡಾಡುವವರಿಗೆ ಗೊತ್ತೇ ಇದೆ. ಅದರೊಳಗೆ ಯಾವುದೇ ತಿಂಡಿ ತಿನಿಸು ತಿನ್ನಬಾರದು, ಕುಡಿಯಬಾರದು. ಏನಾದರೂ ತಿಂದರೆ ಮೆಟ್ರೋದ ನಿಯಮವನ್ನು ಉಲ್ಲಂಘಿಸಿದಂತಾಗುತ್ತದೆ ಎನ್ನುವ ನಾಚಿಕೆಯಿಂದ ಯಾರೂ ಮೆಟ್ರೋ ರೈಲಿನೊಳಗೆ ತಿನ್ನೋದಿಲ್ಲ.

ಮೆಟ್ರೋ ರೆಸ್ಟೋರೆಂಟ್

ಮೆಟ್ರೋ ರೆಸ್ಟೋರೆಂಟ್

ಆದ್ರೆ ನಿಮಗೆ ಮೆಟ್ರೋ ರೈಲಿನಲ್ಲಿ ತಿನ್ನಬೇಕೆಂಬ ಆಸೆ ಇದ್ದರೆ ಅದನ್ನು ಸಿಲ್ವರ್ ಮೈಟ್ರೋ ಪೂರೈಸುತ್ತದೆ. ಇದು ಬೆಂಗಳೂರು ಮೆಟ್ರೋದ ಅಧಿಕಾರಿಗಳು ಬಿಡುಗಡೆ ಮಾಡಿರುವ ರೈಲಲ್ಲ. ಬದಲಾಗಿದೆ ಮೆಟ್ರೋ ರೈಲಿನ ಮಾದರಿಯ ರೆಸ್ಟೋರೆಂಟ್.

 ಎಲ್ಲಿದೆ ಈ ಮೆಟ್ರೋ ರೆಸ್ಟೋರೆಂಟ್?

ಎಲ್ಲಿದೆ ಈ ಮೆಟ್ರೋ ರೆಸ್ಟೋರೆಂಟ್?

ಹೌದು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮೆಟ್ರೋ ಚಾಲನೆಯಾಗುವ ಮೊದಲೇ ಇಲ್ಲಿ ಮೆಟ್ರೋ ರೀತಿಯ ರೆಸ್ಟೋರೆಂಟ್ ಓಪನ್ ಆಗಿದೆ. ಸಿಲ್ವರ್ ಮೆಟ್ರೋ ರೆಸ್ಟೋರೆಂಟ್ ಬೆಂಗಳೂರಿನ ಮಡಿವಾಳದಲ್ಲಿರುವ ಟೋಟಲ್ ಮಾಲ್‌ನಲ್ಲಿದೆ. ಇಲ್ಲಿ ನೀವು ಮೆಟ್ರೋದಲ್ಲಿ ಕೂತು ತಿನ್ನುವ ಅನುಭವವನ್ನೇ ಪಡೆಯಬಹುದು.

ಏನೆಲ್ಲಾ ಸಿಗುತ್ತದೆ

ಏನೆಲ್ಲಾ ಸಿಗುತ್ತದೆ

ಸಿಲ್ವರ್ ಮೆಟ್ರೋ ಉತ್ತರ ಭಾರತ, ಮೊಘಲೈ ಹಾಗೂ ಕಾಂಟಿನೆಂಟಲ್ ಆಹಾರವನ್ನು ಒಳಗೊಂಡಿದೆ. ಇಲ್ಲಿ ಸೂಪ್‌, ಸ್ಟಾಟರ್ಸ್‌ ಹಾಗೂ ಡೆಸರ್ಟ್‌ಗಳೂ ಲಭ್ಯವಿದ್ದು, ಇಲ್ಲಿ ಪೂರ್ಣ ಪ್ರಮಾಣದ ಬಾರ್, ವಿಭಿನ್ನ ಆಹಾರ, ರುಚಿಕರ ಬಾಯಲ್ಲಿ ನೀರೂರಿಸುವಂತಹ ಫುಡ್ ಕೈಗಟಕುವ ಬೆಲೆಗೆ ಲಭ್ಯವಿದೆ. ವೆಲ್‌ಕಮ್ ಡ್ರಿಂಕ್ ಫ್ರೀ ಆಗಿಯೇ ನೀಡುತ್ತಾರೆ.

ಸಿಲ್ವರ್ ಮೈಟ್ರೋ

ಸಿಲ್ವರ್ ಮೈಟ್ರೋ

PC: Ramnath Bhat

ಸಿಲ್ವರ್ ಮೈಟ್ರೋದಲ್ಲಿ ಮೆಟ್ರೋ ರೀತಿಯ ಕುಳಿತುಕೊಳ್ಳುವ ಆಸನಗಳು ಇವೆ. ಚಾಲಕನ ಆಕೃತಿ ಕೂಡಾ ಇದೆ. ಬೆಂಗಳೂರಿನಲ್ಲಿರುವ ವಿಭಿನ್ನ ಶೈಲಿಯ ರೆಸ್ಟೋರೆಂಟ್‌ಗಳಲ್ಲಿ ಇದೂ ಒಂದು. ಇದರಲ್ಲಿ ಮೆಟ್ರೋದಲ್ಲಿ ಕೂತು ತಿನ್ನುವ ಅನುಭೂತಿಯನ್ನು ಪಡೆಯಬಹುದು.

ಇಬ್ಬರಿಗೆ 900 ರೂ.

ಇಬ್ಬರಿಗೆ 900 ರೂ.

ಸಿಲ್ವರ್ ಮೆಟ್ರೋವು ಪ್ಯಾಸೆಂಜರ್ ರೈಲಿಗಿಂತ ಭಿನ್ನವಾಗಿದೆ. ಅಲ್ಲಿ ಟ್ರೈನ್‌ನ ಒಳಗಡೆ ಹಾಗು ಕಂಪಾರ್ಟ್‌ಮೆಂಟ್‌ ಹೊರಗಡೆ ಕೂಡಾ ಕುಳಿತುಕೊಂಡು ತಿನ್ನಲು ಸಾಕಷ್ಟು ಸ್ಥಳಾವಕಾಶವಿದೆ. ಇಬ್ಬರಿಗೆ ಊಟಕ್ಕೆ 900ರೂ. ಆಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X