Search
  • Follow NativePlanet
Share
» »ಪಂಢರಾಪುರದ ಪುಂಡಲೀಕನ ಪುಣ್ಯಕ್ಷೇತ್ರಕೊಮ್ಮೆ ದರ್ಶನ ಭಾಗ್ಯ ಪಡೆಯರಿ

ಪಂಢರಾಪುರದ ಪುಂಡಲೀಕನ ಪುಣ್ಯಕ್ಷೇತ್ರಕೊಮ್ಮೆ ದರ್ಶನ ಭಾಗ್ಯ ಪಡೆಯರಿ

By Sowmyabhai

ದಕ್ಷಿಣ ಭಾರತದ ಸುಪ್ರಸಿದ್ದ ತೀರ್ಥಕ್ಷೇತ್ರಗಳಲ್ಲಿ ಪಂಢರಾಪುರವು ಒಂದು. ಈ ದೇವಾಲಯವು ಮಹರಾಷ್ಟ್ರದ ಪಂಢಾರಪುರದಲ್ಲಿ ಇದ್ದು, ಅತಿ ಹೆಚ್ಚು ಭಕ್ತಾದಿಗಳು ಭೇಟಿ ನೀಡುವ ಸುಪ್ರಸಿದ್ದ ದೇವಾಲಯವಾಗಿದೆ. ಈ ಪುಣ್ಯ ಕ್ಷೇತ್ರದಲ್ಲಿ ವಿಷ್ಣು ಸ್ವರೂಪಿಯಾದ ಪಾಂಡುರಂಗ ಸ್ವಾಮಿಯು ತನ್ನ ಪತ್ನಿ ರುಕ್ಮಿಣಿಯೊಂದಿಗೆ ನೆಲೆಸಿದ್ದಾನೆ. ಈ ದೇವಾಲಯದ ಸಮೀಪದಲ್ಲಿ ಚಂದ್ರಭಾಗನದಿ ಇದೆ. ಈ ಪಾವನ ನದಿಯಲ್ಲಿ ಸ್ನಾನ ಮಾಡಿದವರಿಗೆ ಸಕಲ ಪಾಪ ಕರ್ಮಗಳು ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ. ವಿಶೇಷವೇನೆಂದರೆ ಸಕ್ಷಾತ್ ಭಗವಂತ ಪುಂಡಲೀಕನ ಕಮಲದಂತಹ ಪಾದ ಚರಣವನ್ನು ಮುಟ್ಟಿ ಭಕ್ತಿಯಿಂದ ನಮಸ್ಕರಿಸಬಹುದು. ಈ ದೇವಾಲಯವನ್ನು 12ನೇ ಶತಮಾನದ ಮುಂಚೆ ಹೊಯ್ಸಳದ ರಾಜ ವಿಷ್ಣುವರ್ಧನ ಹೆಮದ್ಬನ್ತಿ ವಾಸ್ತು ಶಿಲ್ಪದಲ್ಲಿ ಸ್ಥಾಪಿಸಿದನು. ಭವ್ಯವಾದ ಗೋಪುರ, ಮನೋಹರ ವಿನ್ಯಾಸ, ದೇವಾಲಯದ ಒಳಗೆ ಹಲವು ದೇವತಾ ಮೂರ್ತಿಗಳನ್ನು ಇಲ್ಲಿ ಕಾಣಬಹುದು.

pandharpur temple history

PC : Parag Mahalley

ಪುಂಢಲೀಕನ ದಂತ ಕಥೆ

ಈ ದೇವಾಲಯಕ್ಕೊಂದು ದಂತಕಥೆ ಇದೆ ಅದೆನೆಂದರೆ ಪುಂಡಲೀಕನೆಂಬುವವನು ತನ್ನ ತಂದೆ ಜನುದೇವ ಹಾಗೂ ತಾಯಿ ಸತ್ಯವತಿಯವರೊಂದಿಗೆ ನೆಲೆಸಿರುತ್ತಾನೆ. ಪುಂಡಲೀಕನು ವಿವಾಹದ ನಂತರ ತನ್ನ ಮಾತ ಪಿತೃಗಳನ್ನು ತುಚ್ಛವಾಗಿ ಕಾಣಲು ಆರಂಭಿಸುತ್ತಾನೆ. ತನ್ನ ಮಗನ ದುರ್ವರ್ತನೆಯಿಂದ ಬೇಸೆತ್ತ ವೃದ್ದ ದಂಪತಿಗಳು ಮನನೊಂದು ಕಾಶಿ ಯಾತ್ರೆ ಕೈಗೊಳ್ಳುತ್ತಾರೆ. ಇದನ್ನು ಅರಿತ ಪುಂಡಲೀಕ ತನ್ನ ಪತ್ನಿಯೊಂದಿಗೆ ತಾನು ಕಾಶಿ ಯಾತ್ರೆ ಮಾಡಲು ನಿರ್ಧರಿಸುತ್ತಾನೆ. ಕಾಶಿಯಾತ್ರೆಗೆ ತೆರಳುವಾಗ ತನ್ನ ಮತಾ,ಪಿತೃವನ್ನು ನಿಷ್ಕುರುಣವಾಗಿ ಬರಿಗಾಲಿನಿಂದ ನಡೆಸಿ ಅತನು ತನ್ನ ಪತ್ನಿಯೊಂದಿಗೆ ಕುದುರೆಯಲ್ಲಿ ಹೋಗುತ್ತಾನೆ. ಹೀಗೆ ಸ್ವಲ್ಪದಿನದ ಬಳಿಕ ತನ್ನ ಕನಸಿನಿಂದ ಮನಃ ಪರಿವರ್ತನೆಗೊಂಡು ತನ್ನ ತಪ್ಪಿನ ಅರಿವಾಗಿ ನಿಷ್ಟೆಯಿಂದ ಮತಾ,ಪಿತೃಗಳ ಸೇವೆಯಲ್ಲಿ ತೊಡಗುತ್ತಾನೆ. ಪುಂಢಲೀಕನ ಭಕ್ತಿ,ಶ್ರಧ್ದೆಗೆ ಮೆಚ್ಚಿ ಸಾಕ್ಷತ್ ವಿಷ್ಣುವೇ ಧರೆಗೆ ಇಳಿದು ಪುಂಡಲೀಕನಿಗೆ ಆರ್ಶಿವದಿಸಲು ಮನೆ ಬಾಗಿಲು ತಟ್ಟುತ್ತಾನೆ. ಈ ಸಮಯದಲ್ಲಿ ಪುಂಢಲೀಕನು ತನ್ನ ಮಾತ,ಪಿತೃಗೆ ಊಟ ಬಡಿಸುತ್ತಿದ್ದ ಕಾರಣ ಒಂದು ಕಲ್ಲನ್ನು ಎಸೆದು ಸೇವೆ ಮಾಡಿಬರುವವರೆಗೂ ನೀನು ಆ ಕಲ್ಲಿನ ಮೇಲೆ ನಿಂತಿರು ಎಂದು ಹೇಳುತ್ತಾನೆ. ಅತನ ಮಾತ,ಪಿತೃರ ಸೇವೆಯನ್ನು ಕಂಡು ಸಂತುಷ್ಟನಾದ ವಿಷ್ಣುವು ಆ ಕಲ್ಲಿನ ಮೇಲೆಯೇ ನೆಲೆಸುತ್ತಾನೆ.

pandharpur temple history

PC : Malathi Manjunath

ದೇವಾಲಯದ ಒಳಭಾಗದಲ್ಲಿರುವ ಮುಖ್ಯ ದೇವರುಗಳ ಮೂರ್ತಿಗಳು

ಈ ದೇವಾಲಯದ ಒಳಭಾಗದಲ್ಲಿ ಹಲವಾರು ದೇವರ ಮೂರ್ತಿಗಳಿವೆ ಇದರಲ್ಲಿ ಪ್ರಮುಖವಾದುವು ಎಂದರೆ ನಾಮದೇವನ ಮೆಟ್ಟಿಲು. ಇದನ್ನು ಮರಾಠಿಯಲ್ಲಿ ನಾಮ್‍ದೇವ್ ಚಿ ಪಯರಿ ಎಂದು ಕರೆಯುತ್ತಾರೆ. ಇದು ಪಂಢರಾಪುರ ದೇವಾಲಯದ ಮೊದಲ ಮೆಟ್ಟಿಲು ಆಗಿದೆ. ನಂತರ ನಾಮದೇವನ ಸಮಾಧಿ ಹಾಗೂ ಚೌಕ ಮೇಳವನ್ನು ಕಾಣಬಹುದು. ರುಕ್ಮಣಿ ದೇವಿ,ಲಕ್ಷ್ಮಿ,ಸತ್ಯಭಾಮ,ನರಸಿಂಹ,ವೆಂಕಟೇಶ್ವರ,ಅನ್ನಪೂರ್ಣದೇವಿ,ಗಣೇಶ, ಗರುಡ ಹಾಗೂ ಹನುಮನ ಹಲವಾರು ದೇವಾಲಯಗಳಿವೆ.

pandharpur temple history

PC: Balkrishna Kulkarni

ಭೇಟಿ ನೀಡಲು ಅತ್ಯಂತ ಪ್ರಶಸ್ತ ಕಾಲಾವಧಿ

ಪಂಢರಾಪುರಕ್ಕೆ ಭೇಟಿ ನೀಡಲು ಅತ್ಯಂತ ಉತ್ತಮ ಕಲಾವಧಿ ಎಂದರೆ ಜುನ್ ಮತ್ತು ಜುಲೈ . ಈ ತಿಂಗಳು ಅಷಾಡ ಮಾಸವಿರುವುದರಿಂದ ವಿಠಲನಿಗೆ ವಿಶೇಷ ದಿಂಡಿ ಉತ್ಸವ ನಡೆಸಲಾಗುತ್ತದೆ. ಅಷಾಢ ಏಕಾದಶಿ ಹಾಗೂ ಕಾರ್ತೀಕ ಏಕಾದಶಿ ಯಂದು ವಿಷೇಶ ದಿಂಡಿ ಉತ್ಸವ ನಡೆಸುತ್ತಾರೆ. ಈ ದೇಗುಲವು ಭಕ್ತರ ದರ್ಶನಕ್ಕಾಗಿ ಮುಂಜಾನೆ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ತೆರೆದಿರಲಾಗಿರುತ್ತದೆ.

pandharpur temple history

Pc : Shutterstock

ಪಂಢಾರಪುರಕ್ಕೆ ತಲುಪುವ ಬಗೆ ಹೇಗೆ?

ವಾಯುಮಾರ್ಗದ ಮೂಲಕ: ಅತ್ಯಂತ ಹತ್ತಿರದ ವಿಮಾನ ನಿಲ್ದಾಣವೆಂದರೆ ಪುಣೆ ವಿಮಾಣ ನಿಲ್ದಾಣ. ಬೆಂಗಳೂರಿನಿಂದ ಮಹರಾಷ್ಟ್ರದ ಪುಣೆಗೆ ನೇರ ವಿಮಾನ ಮರ್ಗವಿದ್ದು 574ಕಿ,ಮಿ ಯಷ್ಟು ದೂರದಲ್ಲಿದ್ದು 6ಗಂಟೆ 30 ನಿಮಿಷದಲ್ಲಿ ತೆರಳಬಹುದು. ಪುಣೆಯಿಂದ ಹಲವಾರು ರೈಲುಗಳ ವ್ಯವಸ್ಥೆಗಳಿವೆ.

ರೈಲು ಮಾರ್ಗದ ಮೂಲಕ: ಬೆಂಗಳೂರಿನಿಂದ ಪಂಢಾರಪುರಕ್ಕೆ ನೇರ ರೈಲ್ವೆ ವ್ಯವಸ್ಥೆ ಇದ್ದು ಸುಮಾರು 880ಕಿ.ಮಿ ಯಷ್ಟು ಅಂತರವಿದೆ.

ರಸ್ತೆ ಮಾರ್ಗದ ಮೂಲಕ: ನೇರ ಪಂಢಾರಪುರಕ್ಕೆ ಬೆಂಗಳೂರಿನಿಂದ ನೇರ ಬಸ್ ವ್ಯವಸ್ಥೆಗಳಿಲ್ಲ ಆದರೆ ರಸ್ತೆ ಮಾರ್ಗದ ಮೂಲಕ ತೆರಳಲು ಸುಮಾರು 645 ಕಿ.ಮಿ ದೂರವಿದೆ.

Read more about: pandharpur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more