Search
  • Follow NativePlanet
Share
» »ಗಿನ್ನೆಸ್ ದಾಖಾಲೆಗೆ ಸೇರಿದೆ ನಮ್ಮ ಮೈಸೂರಿನ ಶುಕ ವನ

ಗಿನ್ನೆಸ್ ದಾಖಾಲೆಗೆ ಸೇರಿದೆ ನಮ್ಮ ಮೈಸೂರಿನ ಶುಕ ವನ

ಗಿಳಿಗಳು ಎಂದರೆ ಯಾರಿಗೆ ಇಷ್ಟ ಆಗಲ್ಲ. ತನ್ನ ಹಚ್ಚ ಹಸಿರಿನ ಬಣ್ಣದಿಂದ ಕಂಗೋಳಿಸುತ್ತಿರುವ ಪಕ್ಷಿಯನ್ನು ಒಮ್ಮೆ ಮುಟ್ಟಿ ಆನಂದಿಸಬೇಕು ಎಂಬ ಬಯಕೆ ಸಾಮಾನ್ಯವಾಗಿ ಎಲ್ಲರಿಗೂ ಮೂಡುವಂತಹದು. ಪಕ್ಷಿಗಳ ಸಂತತಿ ನಾಶ ಹೊಂದುತ್ತಿರುವಾಗ ಗಿಳಿಗಳು ಎಲ್ಲಿಂದ

ಗಿಳಿಗಳು ಎಂದರೆ ಯಾರಿಗೆ ಇಷ್ಟ ಆಗಲ್ಲ. ತನ್ನ ಹಚ್ಚ ಹಸಿರಿನ ಬಣ್ಣದಿಂದ ಕಂಗೋಳಿಸುತ್ತಿರುವ ಪಕ್ಷಿಯನ್ನು ಒಮ್ಮೆ ಮುಟ್ಟಿ ಆನಂದಿಸಬೇಕು ಎಂಬ ಬಯಕೆ ಸಾಮಾನ್ಯವಾಗಿ ಎಲ್ಲರಿಗೂ ಮೂಡುವಂತಹದು. ಪಕ್ಷಿಗಳ ಸಂತತಿ ನಾಶ ಹೊಂದುತ್ತಿರುವಾಗ ಗಿಳಿಗಳು ಎಲ್ಲಿಂದ ಬರುತ್ತದೆ ಎಂದು ಕೊಳ್ಳುತ್ತಿದ್ದೀರಾ ಅಲ್ಲವೇ? ಅದು ಸಾಧಾರಣವಾಗಿ ಎಲ್ಲರಲ್ಲೂ ಉದ್ಭವಿಸುವ ಪ್ರೆಶ್ನೆಯೇ. ಈಗ ಯಾವುದೇ ಪ್ರಾಣಿ, ಪಕ್ಷಿಗಳನ್ನು ಕಾಣಬೇಕಾದರೂ ಅಭಯಾರಣ್ಯಕ್ಕೆ ಅಥವಾ ಪಕ್ಷಿಧಾಮಕ್ಕೆ ತೆರಳಬೇಕು. ಅಲ್ಲಿಯೂ ಕೂಡ ಪ್ರಾಣಿ, ಪಕ್ಷಿಗಳ ಕೊರತೆ ಎದ್ದು ಕಾಣುತ್ತದೆ.

ನಮ್ಮ ಬಾಲ್ಯದಲ್ಲಿ ಎಷ್ಟೆಲ್ಲಾ ಪಕ್ಷಿಗಳನ್ನು ಕಾಣುತ್ತಿದ್ದೆವು. ಕೋಗಿಲೆ, ಗಿಳಿ, ಪಾರಿವಾಳ, ಗುಬ್ಬಚ್ಚಿ, ಕಾಗೆ. ಹದ್ದು. ಇದು ದಿನನಿತ್ಯ ನಾವು ಕಾಣುತ್ತಾ ಇದ್ದ ಪಕ್ಷಿಗಳೇ ಆದರೆ ಈಗ ಅವುಗಳು ಕಣ್ಮರೆಯಾಗಿವೆ. ಎಲ್ಲಿ ನೋಡಿದರು ಗುಬ್ಬಚ್ಚಿಗಳ ಚಿಲಿ ಪಿಲಿ ಶಬ್ಧ ಕೇಳಿ ಬರುತ್ತಿತ್ತು. ಆದರೆ ಈಗ ಆ ಸಂತತಿಯೇ ನಶಿಸಿದೆ. ನೀವು ಗಮನಿಸಿದ್ದೀರಾ ಬೆಂಗಳೂರಿನಲ್ಲಿ ಕಾಗೆಗಳು ಕೂಡ ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿದ್ದೆ. ಅದೇನೆ ಇರಲಿ, ಒಂದೇ ಸ್ಥಳದಲ್ಲಿ 2000 ಕ್ಕಿಂತ ಹೆಚ್ಚು ಗಿಳಿಗಳನ್ನು ಕಂಡರೆ ಹೇಗಿರುತ್ತದೆ? ಏನು 2000 ಸಾವಿರ ಗಿಳಿಗಳೇ? ಹೌದು ನೀವು ಅಷ್ಟು ಗಿಳಿಗಳನ್ನು ಕಾಣಬೇಕಾದರೆ ಒಮ್ಮೆ ಮೈಸೂರಿನ ಶುಕಗಳ ವನಕ್ಕೆ ಭೇಟಿ ನೀಡಿ......

ನಮ್ಮ ಕರ್ನಾಟಕ ರಾಜ್ಯದ ಮೈಸೂರಿನಲ್ಲಿ ಸುಖವನ ಗಿನ್ನೆಸ್ ರೆರ್ಕಾಡ್‍ಗೆ ಸೇರಿದೆ ಎಂದರೆ ನೀವು ನಂಬುತ್ತೀರಾ?

ಶುಕ ವನ

ಶುಕ ವನ

ನಮ್ಮ ಮೈಸೂರಿನ ಗಿಳಿಗಳ ಸುಖವನವು ಈಗ ವಿಶ್ವ ವಿಖ್ಯಾತವಾಗಿದೆ. ಇಲ್ಲಿ ನೀವು ಬಣ್ಣ ಬಣ್ಣದ ಗಿಳಿಗಳನ್ನು ಕಾಣಬಹುದಾಗಿದೆ. ಇಂತಹ ಸುಂದರವಾದ ಗಿಳಿಗಳ ವನ ಇರುವುದು ನಮ್ಮ ಸುಯೋಗವೇ ಸರಿ. ಮೈಸೂರಿನ ಚಾಮುಂಡಿ ಬೆಟ್ಟ, ಅರಮನೆ, ನಂಜನಗೂಡು ಮುಂತಾದ ಪ್ರವಾಸಿ ತಾಣಗಳ ಜೊತೆ ಜೊತೆಗೆ ಈ ಶುಕಗಳ ವನಕ್ಕೆ ಕೂಡ ಒಮ್ಮೆ ಭೇಟಿ ಕೊಡಿ

ಎಲ್ಲಿದೆ?

ಎಲ್ಲಿದೆ?

ಈ ಸುಂದರವಾದ ಗಿಳಿಗಳ ಪಕ್ಷಿಧಾಮ ಇರುವುದು ನಮ್ಮ ಕರ್ನಾಟಕ ರಾಜ್ಯದಲ್ಲಿನ ಮೈಸೂರು ಜಿಲ್ಲೆಯಲ್ಲಿ. ಮೈಸೂರಿನಲ್ಲಿ ಶುಕಗಳ ಸುಖವನವಿದೆ. ಇದೊಂದು ಶುಕಗಳ ಪುರ್ನವಸತಿ ಕೇಂದ್ರವಾಗಿದೆ. ಇದು ಅವಧೂತಾ ದತ್ತ ಪೀಠದ ಪ್ರಶಾಂತ ಆವರಣದಲ್ಲಿದೆ.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಪಕ್ಷಿಗಳ ಸಂಗ್ರಾಹಕನಾಗಿದ್ದು, ಅಪರೂಪದ ಪಕ್ಷಿಗಳನ್ನು ಸಂಗ್ರಹಿಸುವುದೇ ಅಲ್ಲದೇ ಗಾಯಗೊಂಡ ಪಕ್ಷಿಗಳನ್ನು ರಕ್ಷಿಸುವ ವೈದ್ಯರಾಗಿದ್ದಾರೆ. ಇವರು ಅಂಥಹ ಪಕ್ಷಿಗಳಿಗೆ ಆಶ್ರಯ ಧಾತನಾಗಿದ್ದಾನೆ.

ಗಿಳಿ ವನ ನೋಡೊಣ ಬನ್ನಿ!!

ಗಿಳಿ ವನ ನೋಡೊಣ ಬನ್ನಿ!!

ಒಂದು ಗಿಳಿಗಳ ಜೋಡಿ ನೋಡುಲು ಎಷ್ಟೊ ಚೆನ್ನಾಗಿ ಇರುತ್ತವೆ. ಆದರೆ ಹೆಚ್ಚು ಗಿಳಿಗಳು ಇದ್ದರೆ ಇನ್ನೆಷ್ಟು ಚೆನ್ನಾಗಿರುತ್ತದೆ ಎಂದು ನೀವೆ ಊಹಿಸಿ ನೋಡಿ. ಇಲ್ಲಿನ ಗಿಳಿಗಳ ಸಾಮ್ರಾಜ್ಯವನ್ನು ಕಾಣಲು 2 ಕಣ್ಣು ಸಾಲದು.

2000 ಗಿಳಿಗಳು

2000 ಗಿಳಿಗಳು

ಇಲ್ಲಿ ಬಣ್ಣ ಬಣ್ಣದ ಗಿಳಿಗಳನ್ನು ಕಾಣಬಹುದಾಗಿದೆ. ಇಲ್ಲಿನ ಗಿಳಿಗಳ ಸುಖವನದಲ್ಲಿನ ಪ್ರಾಂಗಣದಲ್ಲಿ ಸುಮಾರು 2000 ಗಿಳಿಗಳನ್ನು ಕಾಣಬಹುದಾಗಿದೆ.

ನಿರ್ವಹಣೆ

ನಿರ್ವಹಣೆ

ಈ ಶುಕಗಳ ವನವನ್ನು ಪ್ರವಾಸಿಗರಿಗೆ ಅಸ್ವಾಧಿಸಲು ಕರ್ನಾಟಕ ರಾಜ್ಯದ ಮೈಸೂರಿನಲ್ಲಿದ್ದು, ಗಣಪತಿ ಸಚ್ಚಿದಾನಂದ ದತ್ತ ಪೀಠದವರು ನಿರ್ವಹಿಸುತ್ತಿದ್ದಾರೆ. ಇಲ್ಲಿನ ಗಿಳಿಗಳು ಬಗೆ ಬಗೆಯ ಬಣ್ಣಗಳಿಂದ ಕಂಗೊಳಿಸುತ್ತಿದೆ.

ಗಿನ್ನಿಸ್ ಬುಕ್ ಆಫ್ ವಲ್ಡ್

ಗಿನ್ನಿಸ್ ಬುಕ್ ಆಫ್ ವಲ್ಡ್

ಈ ಸುಂದರವಾದ ವನವನ್ನು ಗಿನ್ನಿಸ್ ಬುಕ್ ಆಫ್ ವಲ್ಡ್‍ನಲ್ಲಿಯೂ ಕೂಡ ಗುರುತಿಸಲಾಗಿದೆ. ಇದು ನಮ್ಮ ಕರ್ನಾಟಕದ ಸುಯೋಗವೇ ಸರಿ. ಒಂದು ರೀತಿಯಲ್ಲಿ ಪಕ್ಷಿಗಳು ನಾಶ ಹೊಂದುತ್ತಿರುವ ಕಾಲದಲ್ಲಿ ಸಾವಿರಾರು ಗಿಳಿಗಳನ್ನು ಕಂಡಾಗ ಆನಂದವಾಗುತ್ತದೆ.

ಪಕ್ಷಿ ಪ್ರಪಂಚ

ಪಕ್ಷಿ ಪ್ರಪಂಚ

ಇಲ್ಲಿನ ಸ್ವಾಮಿಜಿಯು ಎಲ್ಲಾ ಪಕ್ಷಿಗಳನ್ನು ಅತ್ಯಂತ ಪ್ರೀತಿಸುತ್ತಾರೆ. ಅನಾರೋಗ್ಯದಿಂದ ಬಳಲುತ್ತಿರುವ ಪಕ್ಷಿಗಳನ್ನು ಉಪಚಾರ ಮಾಡುತ್ತಾರೆ. ಇಲ್ಲಿನ ಗಿಳಿಗಳ ಜಾತಿ ನಿಮ್ಮನ್ನು ಆಶ್ಚರ್ಯ ಚಕಿತರಾಗುವಂತೆ ಮಾಡದೇ ಬಿಡದು. ಏಕೆಂದರೆ ಒಂದೊಂದು ಗಿಳಿಯ ಸಂತತಿಯು ವಿಶೇಷವಾಗಿವೆ.

3 ಎಕರೆಗಳ ವಿಸ್ತೀರ್ಣದಲ್ಲಿ

3 ಎಕರೆಗಳ ವಿಸ್ತೀರ್ಣದಲ್ಲಿ

ನೆಮ್ಮದಿಯ ಜೀವನ ನೆಡೆಸಲು ಸ್ವಾಮಿಯು ಈ ಪಕ್ಷಿಗಳಿಗೆ ಒಂದು ಪಕ್ಷಿಧಾಮವನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು 3 ಎಕರೆಗಳ ವಿಸ್ತೀರ್ಣದಲ್ಲಿ ಹಾಗು 100 ಅಡಿ ಎತ್ತರದಲ್ಲಿ ನೆಟ್ ಅನ್ನು ಏರ್ಪಟು ಮಾಡಿ. ಗಿಳಿಗಳ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ.

465 ಜಾತಿಯ ಗಿಳಿಗಳು

465 ಜಾತಿಯ ಗಿಳಿಗಳು

ಇಲ್ಲಿ ವಿಭಿನ್ನವಾದ ಗಿಳಿಗಳು ದೇಶದ ಖಂಡದಲ್ಲಿಯೇ ಒಟ್ಟು 465 ಜಾತಿಯ ಗಿಳಿಗಳು ಇಲ್ಲಿ ಇವೆ. ಹಾಗೆಯೇ ಒಟ್ಟು 2000 ಕ್ಕೂ ಹೆಚ್ಚಾಗಿ ಗಿಳಿಗಳನ್ನು ಇಲ್ಲಿ ಕಾಣಬಹುದಾಗಿದೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ಗಿಳಿಗಳ ಜಾತಿ ಹೊಂದಿರುವ ವನ ಎಂದು ಖ್ಯಾತಿ ಪಡೆದಿದೆ.

ವೈದ್ಯ ಸಿಬ್ಬಂದಿ

ವೈದ್ಯ ಸಿಬ್ಬಂದಿ

ಇಲ್ಲಿನ ವನದಲ್ಲಿನ ಪಕ್ಷಿಗಳನ್ನು ನೋಡಿಕೊಳ್ಳಲು ನಿರಂತರವಾಗಿ ವೈದ್ಯ ಸಿಬ್ಬಂದಿ ಇಲ್ಲಿ ನೇಮಕ ಮಾಡಲಾಗಿದೆ. ಈ ಶುಕಗಳ ಆರೈಕೆಗಾಗಿ ಒಟ್ಟು 80 ಕ್ಕಿಂತ ಹೆಚ್ಚು ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಪ್ರವೇಶ ಶುಲ್ಕ

ಪ್ರವೇಶ ಶುಲ್ಕ

ಅವಧೂತಾ ದತ್ತ ಪೀಠದ ಆಶ್ರಮ ಪ್ರಾಂಗಣದಲ್ಲಿರುವ ಸುಖವನದ ಪ್ರವೇಶಕ್ಕೆ ಯಾವುದೇ ಶುಲ್ಕವಿಲ್ಲ. ಬದಲಾಗಿ ಉಚಿತವಾಗಿ ನಿಮ್ಮ ಕುಟುಂಬಿಕರೊಂದಿಗೆ ಒಮ್ಮೆ ಗಿಳಿಗಳ ಪ್ರಪಂಚಕ್ಕೆ ಭೇಟಿ ನೀಡಬಹುದಾಗಿದೆ. ಇಲ್ಲಿ ಸಾಮಾನ್ಯವಾಗಿ ಭಾನುವಾರ ರಜಾ ದಿನವಾದ್ದರಿಂದ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಈ ಸುಂದರವಾದ ಅವಧೂತಾ ದತ್ತಪೀಠ ಆಶ್ರಮವು ಮೈಸೂರಿನಲ್ಲಿದ್ದು, ಮೈಸೂರಿಗೆ ಹಲವಾರು ರೈಲ್ವೆ ಸಂಪರ್ಕವಿದೆ. ಮೈಸೂರಿನಿಂದ ಕೇವಲ 5 ಕಿ.ಮೀ ದೂರದಲ್ಲಿ ಈ ಶುಕವನವಿದೆ. ಮೈಸೂರಿಗೆ ಒಮ್ಮೆ ಭೇಟಿ ನೀಡಿದಾಗ ಈ ಶುಕವನಕ್ಕೆ ಕೂಡ ಒಮ್ಮೆ ಭೇಟಿ ನೀಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X