Search
  • Follow NativePlanet
Share
» »ಅಹಮ್ಮದಾಬಾದ್‌ನಲ್ಲಿ ಶಾಪಿಂಗ್ ಮಾಡಬಹುದಾದ ತಾಣಗಳು ಇವು

ಅಹಮ್ಮದಾಬಾದ್‌ನಲ್ಲಿ ಶಾಪಿಂಗ್ ಮಾಡಬಹುದಾದ ತಾಣಗಳು ಇವು

By Manjula Balaraj

ಗುಜರಾತ್ ರಾಜ್ಯವು ಸೊಬಗು ಮತ್ತು ವೈವಿಧ್ಯತೆಗಳನ್ನು ತನ್ನಲ್ಲಿ ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ . ಈ ಪರಂಪರೆಯ ನಗರವಾದ ಅಹ್ಮದಾಬಾದ್ ಶ್ರೀಮಂತವರ್ಗದವರನ್ನೊಳಗೊಂಡ ಕೇಂದ್ರವಾಗಿದೆ. ಇಲ್ಲಿ ಅನೇಕ ಸಂಖ್ಯೆಯಲ್ಲಿ ಬಟ್ಟೆ ತಯಾರಿಸುವ ಮಿಲ್ ಗಳು ಇರುವುದರಿಂದ ಈ ನಗರವನ್ನು ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲಾಗುತ್ತದೆ.

ಈ ನಗರವು ಕೇವಲ ಶಾಪಿಂಗ್ ಮಾಲ್ ಗಳಿಗೆ ಮಾತ್ರ ನೆಲೆಯಾಗಿರುವುದಲ್ಲದೆ ಇದು ಕೆಲವು ದೊಡ್ಡ ದೊಡ್ಡ ವಿಭಿನ್ನವಾದ ಶಾಪಿಂಗ್ ಮಾರುಕಟ್ಟೆಗಳ ನೆಲೆಯೂ ಆಗಿದೆ. ಇಲ್ಲಿಯ ಮಾರುಕಟ್ಟೆಗಳು ಸಂಸ್ಕೃತಿ ಮತ್ತು ಪರಂಪರೆ ಮತ್ತು ಇನ್ನೂ ಅನೇಕ ಆಧುನಿಕತೆಯ ಪರಿಪೂರ್ಣವಾದ ಮಿಶ್ರಣವಾಗಿದೆ.

ಲಾಲ್ ದರ್ವಾಜಾ

ಲಾಲ್ ದರ್ವಾಜಾ

ಲಾಲ್ ದರ್ವಾಜಾ ನಗರದ ಒಂದು ಅತ್ಯಂತ ಜನಪ್ರಿಯ ಹಾಗೂ ಅತ್ಯಂತ ಕಾರ್ಯನಿರತವಾಗಿರುವ ಶಾಪಿಂಗ್ ಮಾರುಕಟ್ಟೆಯಾಗಿದೆ ಇಲ್ಲಿ ಸೀರೆಗಳು, ಪುರುಷರಿಗೆ ಮತ್ತು ಮಕ್ಕಳಿಗೆ ಬಟ್ಟೆಗಳು, ಶೂಗಳು, ಪರ್ಸ್ ಗಳು, ಹಳೆಯ ಪುಸ್ತಕಗಳು ಇನ್ನೂ ಅನೇಕ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಈ ಮಾರುಕಟ್ಟೆ ಪ್ರದೇಶವು ಸಾಕಷ್ಟು ಉತ್ತಮವಾಗಿದ್ದು ಇದು ಸ್ಟ್ರೀಟ್ ಪುಡ್ ಗಳಿಗಾಗಿ ಹೆಸರುವಾಸಿಯಾಗಿದೆ ಮತ್ತು ಅನೇಕ ಆಯ್ಕೆಗಳನ್ನು ಒದಗಿಸುತ್ತದೆ. ಇದು ಪಾನಿಪುರಿಯಿಂದ ಪ್ರಾರಂಭವಾಗಿ ದೋಸೆಗಳು ಮತ್ತು ಇನ್ನೂ ಅನೇಕ ವಿಷಗಳನ್ನು ಒಳಗೊಂಡಿದೆ. ನಿಮ್ಮ ಚರ್ಚೆ ಮಾಡುವ ಗುಣವನ್ನು ಈ ಮಾರುಕಟ್ಟೆಗೆ ಭೇಟಿ ಮಾಡುವ ಮೊದಲು ಒಮ್ಮೆ ಒರೆ ಹಿಡಿಯಿರಿ ಈ ಮಾರುಕಟ್ಟೆಯಲ್ಲಿ ಖರೀದಿಸುವುದು ನಿಮಗೆ ಲಾಭದಾಯಕ ಎನಿಸುವುದರಲ್ಲಿ ಸಂಶಯವಿಲ್ಲ

ಸಿಂಧಿ ಮಾರುಕಟ್ಟೆ

ಸಿಂಧಿ ಮಾರುಕಟ್ಟೆ

ಸಿಂಧಿ ಮಾರುಕಟ್ಟೆ ಇನ್ನೊಂದು ಜನಪ್ರಿಯ ಶಾಪಿಂಗ್ ಮಾಡುವ ಸ್ಥಳವಾಗಿದ್ದು ಇದು ಬೆಡ್ ಶೀಟುಗಳು, ಡ್ರೆಸ್ ಮೆಟೀರಿಯಲ್ ಗಳು , ಸೀರೆಗಳು ಮತ್ತು ಸಾಂಪ್ರದಾಯಿಕ ವಸ್ತುಗಳನ್ನು ಮಾರುವ ಮಾರುಕಟ್ಟೆಯಾಗಿದ್ದು ಇದು ಕಲುಪುರ್ ಗೇಟ್ ನ ಸಮೀಪದಲ್ಲಿ ನೆಲೆಸಿದೆ ಸಿಂಧಿ ಮಾರುಕಟ್ಟೆಯ ಸಮೀಪದಲ್ಲಿಯೇ ಇನ್ನೊಂದು ಪ್ರಸಿದ್ದ ರೇವ್ಡಿ ಮಾರುಕಟ್ಟೆಇದೆ ಇದೂ ಸೇರಿಸಿ ಈ ಪ್ರದೇಶವನ್ನು ಶಾಪಿಂಗ್ ಪ್ರಿಯರಿಗೆ ಭೇಟಿ ಮಾಡಲೇ ಬೇಕಾದ ಸ್ಥಳವನ್ನಾಗಿಸಿದೆ.

ಕೆಮ್ಮಣ್ಣುಗುಂಡಿ, ಸೋಮವಾರ ಪೇಟೆ ಹಿಲ್‌ಸ್ಟೇಶನ್‌ ನೋಡಿದ್ದೀರಾ?ಕೆಮ್ಮಣ್ಣುಗುಂಡಿ, ಸೋಮವಾರ ಪೇಟೆ ಹಿಲ್‌ಸ್ಟೇಶನ್‌ ನೋಡಿದ್ದೀರಾ?

ಮಾನೆಕ್ ಚೌಕ್

ಮಾನೆಕ್ ಚೌಕ್

ಇದು ನಗರದ ಅತ್ಯಂತ ಜನಪ್ರಿಯ ಚೌಕ ಆಗಿದ್ದು ಇದು ಬೆಳಗ್ಗಿನ ಸಮಯದಲ್ಲಿ ತರಕಾರಿ ಮಾರುಕಟ್ಟೆಯಾಗಿದ್ದು ಮಧ್ಯಾಹ್ನ ಇದು ಆಭರಣಗಳನ್ನು ಮಾರುವ ಮಾರುಕಟ್ಟೆಯಾದರೆ ರಾತಿ ಹೊತ್ತಿನಲ್ಲಿ ಇದೇ ಫ಼ುಡ್ ಸ್ಟ್ರೀಟ್ ಆಗಿ ಪರಿವರ್ತನೆಗೊಳ್ಳುತ್ತದೆ. ಮಾನೆಕ್ ನಾಥ ಎನ್ನುವ ಸಂತರ ಹೆಸರನ್ನು ಮಾನೆ ಚೌಕ್ ಗೆ ಇಡಲಾಗಿದೆ ಇವರು 1411ರಲ್ಲಿ ಮೊದಲನೇ ಅಹ್ಮದ್ ಷಹಾ ಅವರಿಗೆ ಭದ್ರಾ ಕೋಟೆಯನ್ನು ಕಟ್ಟಲು ಸಹಾಯ ಮಾಡಿದ್ದರು ಎನ್ನಲಾಗುತ್ತದೆ.

ಲಾ ಗಾರ್ಡನ್

ಲಾ ಗಾರ್ಡನ್

ಲಾ ಗಾರ್ಡನ್ ಮಾರುಕಟ್ಟೆ ಪ್ರದೇಶವು ಕರಕುಶಲ ವಸ್ತುಗಳ ಮಾರಾಟಕ್ಕೆ ಹೆಸರುವಾಸಿಯಾದುದಾಗಿದೆ. ಇಲ್ಲಿಯ ಬೀದಿಗಳಲ್ಲಿ ಅನೇಕ ಸುಂದರವಾದ ಕರಕುಶಲ ವಸ್ತುಗಳ ಜೊತೆಗೆ ಡ್ರೆಸ್ ಮೆಟೀರಿಯಲ್ ಗಳು ಮತ್ತು ಇನ್ನಿತರ ಬಟ್ಟೆಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದು ಕಂಡುಬರುತ್ತದೆ.
ಈ ಮಾರುಕಟ್ಟೆಯಲ್ಲಿ ತಿರುಗಾಡಿ ಉತ್ತಮವಾದ ವಸ್ತುಗಳನ್ನು ಖರೀದಿಸ ಬಯಸುವ ಎಲ್ಲರಿಗೂ ಇದು ಅನೇಕ ಆಯ್ಕೆಗಳನ್ನು ಒದಗಿಸುತ್ತದೆ. ಇಲ್ಲಿ ಎಷ್ಟು ಖರೀದಿ ಮಾಡಿದರೂ ಸಾಲದು ಎನ್ನುವಷ್ಟು ಇದೆ.

ರಾಯ್ ಪುರ್ ಗೇಟ್

ರಾಯ್ ಪುರ್ ಗೇಟ್

ಗುಜರಾತಿಗಳು ಸಿಹಿ ತಿನಿಸುಗಳನ್ನು ಮಾಡುವುದರಲ್ಲಿ ಮತ್ತು ಕರಿದ ಮತ್ತು ಹಬೆಯಲ್ಲಿ ಬೇಯಿಸಿದ ಉಪಹಾರಗಳನ್ನು ಮಾಡುವುದರಲ್ಲಿ ನಿಪುಣರು. ಇಲ್ಲಿ ಮಾಡಿದ ಸ್ನ್ಯಾಕ್ಸ್ ಗಳು ಬಹಳ ಸಮಯದ ವರೆಗೆ ಹಾಳಾಗದಂತೆ ಇಡಬಹುದು ಆದುದರಿಂದ ಅವರ ಈ ಆಹಾರದ ಕಲೆಯಿಂದಾಗಿ ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಉತ್ತಮ ಆಹಾರಗಳ ಉಡುಗೊರೆಗಳನ್ನು ಕೊಂಡೊಯ್ಯಬಹುದು.

ರಾಯ್ ಪುರ್ ಗೇಟ್ ನ ಬೀದಿಗಳು ಅನೇಕ ಸಿಹಿ ತಿನಿಸುಗಳು ಮತ್ತು ಅದಕ್ಕೆ ಸಂಬಂಧಿಸಿದ ಇನ್ನಿತರ ಆಹಾರಗಳಿಗೆ ಪ್ರಸಿದ್ದವಾಗಿದೆ. ಅವುಗಳಲ್ಲಿ ಡೋಕ್ಲಾ, ಕಾಂಡ್ವಿ, ಫ಼ಾಫ್ ಡ ಜಿಲೇಬಿ, ಖಾಕ್ರಾ ಮತ್ತು ಇನ್ನೂ ಅನೇಕ ತಿನಿಸುಗಳನ್ನು ಸೇರಿದ್ದು ಇವುಗಳ ರುಚಿಯನ್ನು ಸವಿಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X