Search
  • Follow NativePlanet
Share
» »ಶಿವಗಂಗೆಯ ಸೌಂದರ್ಯತೆಯ ಒಂದು ಅನಾವರಣ - ಬೆಂಗಳೂರಿನಿಂದ ಶಿವಗಂಗೆಗೆ ಒಂದು ಪ್ರಯಾಣ

ಶಿವಗಂಗೆಯ ಸೌಂದರ್ಯತೆಯ ಒಂದು ಅನಾವರಣ - ಬೆಂಗಳೂರಿನಿಂದ ಶಿವಗಂಗೆಗೆ ಒಂದು ಪ್ರಯಾಣ

ಕರ್ನಾಟಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಾಸ್ ಪೇಟೆಯ ಬಳಿ ಇರುವ ಬೆಟ್ಟವಾಗಿರುವ ಶಿವಗಂಗೆಯು ಸಮುದ್ರ ಮಟ್ಟದಿಂದ 2640 ಅಡಿ ಎತ್ತರದಲ್ಲಿದೆ. ಈ ಪೂಜ್ಯನೀಯವಾದ ಪರ್ವತವು ಶಿವದೇವರ ಒಂದು ಅವತಾರವಾದ ಶಿವಲಿಂಗದ ಆಕಾರದಲ್ಲಿದೆ. ಈ ಬೆಟ್ಟದ ಬಳಿಯಲ್ಲಿಯೇ ಒಂದು ಬುಗ್ಗೆಯು ಹರಿಯುತ್ತಿದ್ದು, ಇದನ್ನು ಗಂಗಾ ಎಂದು ಕರೆಯಲಾಗುತ್ತದೆ ಇವೆರಡನ್ನು ಒಟ್ಟಿಗೆ ಸೇರಿಸಿ ಈ ಪ್ರದೇಶವು ಶಿವಗಂಗೆ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.

ಇಲ್ಲಿಯ ಮನಮೋಹಕ ಸೌಂದರ್ಯ ಇಲ್ಲಿಗೆ ಹೋಗುವ ದಾರಿಯಲ್ಲಿ ಮತ್ತು ಬೆಟ್ಟದ ಮೇಲೆ ನೆಲೆಸಿರುವ ಅನೇಕ ದೇವಾಲಯಗಳ ಅಸ್ತಿತ್ವದಿಂದಾಗಿ ಈ ಸ್ಥಳವು ಪರಿಪೂರ್ಣವಾಗಿ ತೀರ್ಥಯಾತ್ರೆ ಮತ್ತು ಸಾಹಸ ಚಟುವಟಿಗೆಗಳ ತಾಣವಾಗಿದೆ. ಈ ಬೆಟ್ಟವು ಟ್ರಕ್ಕಿಂಗ್, ಮತ್ತು ರಾಕ್ ಕ್ಲೈಂಬಿಂಗ್ ನಂತಹ ಸಾಹಸಿ ಚಟುವಟಿಕೆಗಳನ್ನು ಒದಗಿಸುತ್ತದೆ ಆದುದರಿಂದ ಇದು ಸಾಹಸ ಪ್ರಿಯರ ನೆಚ್ಚಿನ ತಾಣವೂ ಹೌದು.

ಈ ಸ್ಥಳದ ಇತಿಹಾಸದ ಬಗ್ಗೆ ಹೇಳಬೇಕೆಂದರೆ, ಇದು ಹೊಯ್ಸಳ ಸಾಮ್ರಾಜ್ಯದ ಆಡಳಿತದಲ್ಲಿ ಇತ್ತು . ರಾಜ ವಿಷ್ಣುವರ್ಧನನ ರಾಣಿಯಾಗಿದ್ದಂತಹ ಶಾಂತಲದೇವಿಯು ಖಿನ್ನತೆಯ ಪರಿಣಾಮವಾಗಿ ಈ ಬೆಟ್ಟದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಇದರಿಂಡಾಗಿ ಈ ಸ್ಥಳವೆನ್ನು ಈಗ ಶಾಂತಲಾ ಡ್ರಾಪ್ ಎಂದು ಗುರುತಿಸಲ್ಪಡುತ್ತದೆ. ನಂತರದ ದಿನಗಳಲ್ಲಿ ಅಂದರೆ 16ನೇ ಶತಮಾನದ ಅವಧಿಯಲ್ಲಿ ಶಿವಪ್ಪ ನಾಯಕನು ಈ ಬೆಟ್ಟವನ್ನು ಭದ್ರಪಡಿಸಿದನು.

ಇಲ್ಲಿಯ ಕೋಟೆ ಈಗ ಪಾಳು ಬಿದ್ದಿದೆ. ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರು ನಂತರ ಕೋಟೆಯ ಭಾಗಗಳನ್ನು ಅಭಿವೃದ್ದಿ ಪಡಿಸಿದ್ದರು ಮತ್ತು ಈ ಕೋಟೆಯಲ್ಲಿ ತಮ್ಮ ನಿಧಿಯ ಭಾಗವನ್ನು ಕೂಡಿ ಹಾಕಿದ್ದರು ಎಂದು ಹೇಳಲಾಗುತ್ತದೆ. ಈ ಸ್ಥಳದ ಪಾವಿತ್ರ್ಯತೆಯನ್ನು ಹೆಚ್ಚಿಸುವ ಹಲವಾರು ದೇವಾಲಯಗಳಿರುವುದರಿಂದ ಇದನ್ನು ದಕ್ಷಿಣದ ಕಾಶಿ( ಕಾಶೀ ಆಫ್ ಸೌತ್) ಎಂದೂ ಕರೆಯಲಾಗುತ್ತದೆ.

ಇಸ್ಕಾನ್ ದೇವಾಲಯದ ಸೌಂದರ್ಯತೆ

ಇಸ್ಕಾನ್ ದೇವಾಲಯದ ಸೌಂದರ್ಯತೆ

ಹರೇಕೃಷ್ಣ ಬೆಟ್ಟದ ಮೇಲೆ ನಿರ್ಮಿಸಲಾದ ಇಸ್ಕಾನ್ ದೇವಾಲಯವು ವೆಂಕಟೇಶ್ವರ , ಬಲರಾಮ ಮುಂತಾದ ದೇವರುಗಳನ್ನು ಒಳಗೊಂಡಿದೆ. ವೆಸ್ಟ್ ಆಫ್ ಕಾರ್ಡ ರಸ್ತೆಯಲ್ಲಿರುವ ಈ ಇಸ್ಕಾನ್ ದೇವಾಲಯವು ಇಸ್ಕಾನ್ ದೇವಾಲಯಗಳ ಶಾಖೆಗಳಲ್ಲಿರುವ ಅತ್ಯಂತ ದೊಡ್ಡದಾದ ದೇವಾಲಯಗಳಲಿ ಒಂದಾಗಿದೆ.

ಇದಾದ ನಂತರ ಇಸ್ಕಾನ್ ದೇವಾಲಯದಿಂದ ಸುಮಾರು ಒಂದು ಗಂಟೆಗಳ ಅವಧಿಯ ಪ್ರಯಾಣದ ನಂತರ ಸಿಗುವ ತಾಣವೆಂದರೆ ಅದು ಮಾಕಳಿ. ಇಸ್ಕಾನ್ ನಿಂದ ಇಲ್ಲಿಗೆ 22 ಕಿ.ಮೀ ಅಂತರವಿದ್ದು, ಇಲ್ಲಿಂದ ಶಿವಗಂಗೆಗೆ ಸುಮಾರು 35 ಕಿ.ಮೀ ಗಳ ದೂರವಿದೆ ಹಾಗು ಕೇವಲ 45 ನಿಮಿಷಗಳಲ್ಲಿ ತಲುಪಬಹುದಾಗಿದೆ.

 ಶಿವಗಂಗೆ

ಶಿವಗಂಗೆ

ಶಿವಗಂಗೆ ಬೆಟ್ಟವು ರಾಕ್ ಕ್ಲೈಂಬಿಂಗ್ ಮತ್ತುಟ್ರಕ್ಕಿಂಗ್ ಮಾಡಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ ಆದುದರಿಂದ ಈ ಸ್ಥಳವು ಹೆಚ್ಚಾಗಿ ಗುರುತಿಸಲ್ಪಡುತ್ತದೆ ಮತ್ತು ಇಲ್ಲಿ ಮಾನವ ನಿರ್ಮಿತ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು ಇದು ಬೆಟ್ಟದ ತುದಿಗೆ ಪ್ರಯಾಣ ಮಾಡಲು ಅನುಕೂಲವಾಗುವಂತೆ ಮಾಡುತ್ತದೆ. ಇಲ್ಲಿಗೆ ಆರೋಹಣವು ಸುಮಾರು 2.3 ಕಿಮೀ ಗಳಷ್ಟು ದೂರವಿದ್ದು ಸುಮಾರು 800 ಮೀ ಎತ್ತರವನ್ನು ಆರೋಹಣ ಮಾಡಬೇಕಾಗುತ್ತದೆ. ಅರ್ಕಾವತಿ ನದಿಯ ಉಪನದಿಯಾಗಿರುವ ಕುಮುದಾವತಿ ನದಿಯು ಶಿವಗಂಗೆಯಲ್ಲಿ ಹುಟ್ಟುತ್ತದೆ ಎಂದು ಹೇಳಲಾಗುತ್ತದೆ.

ಒಳಕಲ ತೀರ್ಥ

ಒಳಕಲ ತೀರ್ಥ

ಒಳಕಲ ತೀರ್ಥವು ಬಂಡೆಗಳು ಮತ್ತು ಬಂಡೆಗಳ ನಡುವಿನ ಭಾಗಗಳಲ್ಲಿ ಹರಿಯುವ ಒಂದು ಚಿಲುಮೆಯಾಗಿದೆ. ಈ ತೀರ್ಥವನ್ನು ಇಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇಲ್ಲಿ ಪಾತಾಳ ಗಂಗೆಯು ಭೂಮಿಯಿಂದ ಉಗಮವಾಗುವ ಇನ್ನೊಂದು ಚಿಲುಮೆಯಾಗಿದ್ದು, ಇದರ ನೀರಿನ ಹರಿವು ಅಂತರಗಂಗೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ನಂಬಲಾಗಿದೆ, ಇಲ್ಲಿ ನಂದಿಯ ಬಾಯಿಯಿಂದ ನೀರು ದೀರ್ಘಕಾಲ ಹರಿಯುತ್ತದೆ.

ಗವಿ ಗಂಗಾಧರೇಶ್ವರ ದೇವಾಲಯ

ಗವಿ ಗಂಗಾಧರೇಶ್ವರ ದೇವಾಲಯ

ಶಿವಗಂಗೆಯಲ್ಲಿರುವ ಶಿವ ದೇವರನ್ನು ಪೂಜಿಸಲ್ಪಡುವ ಗವಿಗಂಗಾಧರೇಶ್ವರ ದೇವಾಲಯವು ಇಲ್ಲಿ ಸಿಗುವ ಮೊದಲನೆಯ ದೇವಾಲಯವಾಗಿರುತ್ತದೆ.ಇಲ್ಲಿ ದೇವರಿಗೆ ಅಭಿಷೇಕ ಮಾಡುವ ತುಪ್ಪವು ಬೆಣ್ಣೆಯಾಗಿ ಬದಲಾಗುತ್ತದೆ ಎಂಬ ನಂಬಿಕೆಯಿದೆ. ಈ ಬೆಣ್ಣೆಯು ಅಸಾಧಾರಣವಾದ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯದಿಂದ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದವರೆಗೆ ರಹಸ್ಯ ಸುರಂಗವೊಂದು ಅಸ್ತಿತ್ವದಲ್ಲಿದೆ ಎಂದು ಪುರಾಣ ಹೇಳುತ್ತದೆ!

ದೇವರಾಯನ ದುರ್ಗ

ದೇವರಾಯನ ದುರ್ಗ

ದೇವರಾಯನ ದುರ್ಗ ಶಿವಗಂಗೆಯ ಹತ್ತಿರದಲ್ಲಿರುವ ಮತ್ತೊಂದು ಹೆಸರಾಂತ ಸ್ಥಳವಾಗಿದೆ. ಇದು ಶಿವಗಂಗೆಯಿಂದ 30 ಕಿ.ಮೀ ಅಂತರದಲ್ಲಿದೆ. ಇದೊಂದು ಸಣ್ಣ ಗಿರಿಧಾಮವಾಗಿದ್ದು, ಇದು ಇಲ್ಲಿಯ ಹವಾಮಾನ ಮತ್ತು ದೇವಾಲಯಗಳಿಗಾಗಿ ಪ್ರಸಿದ್ದಿಯನ್ನು ಪಡೆದಿದೆ. ಸಮುದ್ರ ಮಟ್ಟದಿಂದ 3940 ಅಡಿ ಎತ್ತರದಲ್ಲಿರುವ ದೇವರಾಯನದುರ್ಗವು ನಾಮದ ಚಿಲ್ಲುಮೆಯ ನೆಲೆಯೂ ಆಗಿದೆ.

ಶ್ರೀರಾಮನ ಧನುಸ್ಸು ಇಲ್ಲಿ ನೆಲವನ್ನು ಚುಚ್ಚಿದಾಗ ಈ ಚಿಲುಮೆಯು ಉಂಟಾಯಿತು ಎಂದು ಹೇಳಲಾಗುತ್ತದೆ. ದೇವರಾಯನದುರ್ಗದಲ್ಲಿರುವ ದೇವಾಲಯಗಳೆಂದರೆ ಭೋಗನರಸಿಂಹ ದೇವಾಲಯ (ಬೆಟ್ಟದ ತಪ್ಪಲಿನಲ್ಲಿದೆ), ಲಕ್ಷ್ಮಿ ನರಸಿಂಹ ದೇವಾಲಯ (ಮೊದಲ ಎತ್ತರದಲ್ಲಿದೆ) ಮತ್ತು ಯೋಗನರಸಿಂಹ ದೇವಾಲಯ (ಬೆಟ್ಟದ ತುದಿಯಲ್ಲಿದೆ). ನರಸಿಂಹ ಜಯಂತಿಯನ್ನು ಈ ಪ್ರದೇಶದಲ್ಲಿ ಸಂಭ್ರಮದಿಂದ ಆಚರಿಸಲಾಗುತ್

ಶಿವಗಂಗೆಗೆ ಭೇಟಿ ಕೊಡಲು ಸೂಕ್ತ ಸಮಯ

ಬೇಸಿಗೆಯಲ್ಲಿ ಈ ಸ್ಥಳದಲ್ಲಿ ತಾಪಮಾನವು ವಿಪರೀತವಾಗಿದ್ದು ನಿಮಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಯಾವುದೇ ಹಸಿರು ಹೊದಿಕೆ ಅಥವಾ ನೆರಳಿನ ಆಶ್ರಯ ಪಡೆಯಲು ಈ ಸಮಯದಲ್ಲಿ ಸಾಧ್ಯವಾಗುವುದಿಲ್ಲ. ಮಾನ್ಸೂನ್ ಮಳೆಗಾಲವು ಸ್ವಲ್ಪ ಕಷ್ಟಕರ ಏಕೆಂದರೆ ಇಲ್ಲಿ ಸಾಗುವ ಹಾದಿಗಳು ಜಾರುವಂತಿರುತ್ತದೆ ಆದುದರಿಂದ ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಶಿವಗಂಗೆಗೆ ಭೇಟಿ ಕೊಡದೇ ಇರುವುದು ಉತ್ತಮ. ಆದುದರಿಂದ ನವೆಂಬರ್ ತಿಂಗಳಿನಿಂದ ಫ಼ೆಬ್ರವರಿ ತಿಂಗಳುಗಳ ಅವಧಿಯು ಈ ಸ್ಥಳಕ್ಕೆ ಭೇಟಿ ಕೊಡಲು ಅತ್ಯಂತ ಸೂಕ್ತವಾದುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X