• Follow NativePlanet
Share
» »ಶಿವಲಿಂಗ ಬಿನ್ನವಾಗಿರುವಂತೆ ಕಾಣುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?

ಶಿವಲಿಂಗ ಬಿನ್ನವಾಗಿರುವಂತೆ ಕಾಣುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?

Written By:

ಸಾಮಾನ್ಯವಾಗಿ ದೇವಾಲಯದ ದೇವತಾ ಮೂರ್ತಿಗಳೇ ಆಗಲಿ ಅಥವಾ ದೇವರ ಮನೆಯಲ್ಲಿಯೇ ಆಗಲಿ ದೇವತಾ ಮೂರ್ತಿಗಳು ಬಿನ್ನವಾಗಿದ್ದರೆ ಮೊದಲು ಯಾವುದಾದರೂ ನದಿಯಲ್ಲಿಯೊ, ದೇವಾಲಯದ ಸಮೀಪದ ಮರದ ಕೆಳಗೆಯೋ ಇಟ್ಟು ಬರುತ್ತೇವೆ. ಆದರೆ ಆಂಧ್ರ ಪ್ರದೇಶದಲ್ಲಿನ ಈ ದೇವಾಲಯದಲ್ಲಿ ಆಶ್ಚರ್ಯಕರವಾದ ದೇವಾಲಯವಿದೆ. ಹಾಗೆಯೇ ಈ ದೇವಾಲಯಕ್ಕೆ ಸ್ವಾರಸ್ಯಕರವಾದ ಸ್ಥಳ ಪುರಾಣವು ಕೂಡ ಇದೆ.

ಆದರೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಗೆ ಸೇರಿದ ಒಂದು ಮಂಡಲವಿದೆ ಅದೇ ಪಾಲಕೊಲ್ಲು. ಇಲ್ಲಿನ ಶಿವಲಿಂಗದ ತಲೆಯ ಭಾಗವು ಬಿನ್ನವಾಗಿರುವಂತೆ ಕಾಣುತ್ತದೆ ಎಂತೆ. ದೇಶದಲ್ಲಿ ಪ್ರತಿಷ್ಟಾಪಿಸಿದ ಶಿವನ ದೇವಾಲಯದಲ್ಲಿ ಇದೇ ಪ್ರತ್ಯೇಕವಾದ ಲಿಂಗ ಎಂದೇ ಹೇಳಬಹುದಾಗಿದೆ. ಹಾಗೆಯೇ ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲು ಮಂಡಲಕ್ಕೆ ಸೇರಿದ ದೇವಾಲಯಲ್ಲಿ ಒಂದು ವಿಶೇಷವಿದೆ. ಅದೇನು? ಎಂಬ ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ಪಡೆಯಿರಿ.

ದೇವಾಲಯದ ವಿಶೇಷ

ದೇವಾಲಯದ ವಿಶೇಷ

ಈ ದೇವಾಲಯದಲ್ಲಿ 3.1/2 ಅಡಿ ಎತ್ತರವಿರುವ ಸುಂದರವಾದ ಶಿವಲಿಂಗದ ತಲೆಯಭಾಗ ಬಿನ್ನವಾಗಿದೆ ಎಂಬುವ ತರಹ ಕಂಡುಬರುತ್ತದೆ.

ಶಿವಾಲಯ ಪ್ರಾಧಾನ್ಯತೆ

ಶಿವಾಲಯ ಪ್ರಾಧಾನ್ಯತೆ

ಈ ಶಿವಾಲಯ ಇರುವುದು ಆಂಧ್ರ ಪ್ರದೇಶದ ಚಿಕ್ಕಾಲ ಗ್ರಾಮದಲ್ಲಿ. ಅದು ಇತ್ತೀಚೆಗೆ ಅಭಿವೃದ್ಧಿಯತ್ತಾ ಕಾಲಿಡುತ್ತಿದೆ.

ಸ್ಥಳ ಪುರಾಣ

ಸ್ಥಳ ಪುರಾಣ

ಪೂರ್ವ ರಾಮಾಯಣ ಕಾಲದಲ್ಲಿ ಲಂಕಕ್ಕೆ ಯುದ್ಧ ಮಾಡುವ ಮೊದಲು ಶಿವಪೂಜೆ ಮಾಡಿದ ನಂತರ ಲಂಕೆಯ ಮೇಲೆ ಯುದ್ಧ ಸಾರುವುದು ಉಚಿತ ಎಂದು ದೊಡ್ಡವರು ಶ್ರೀರಾಮನಿಗೆ ಹೇಳುತ್ತಾರೆ. ಶ್ರೀರಾಮನು ಇದಕ್ಕೆ ಒಪ್ಪಿ ಪೂಜಾ ಕಾರ್ಯಕ್ರಮಗಳನ್ನು ಮಾಡಲು ಸಿದ್ಧ ಮಾಡುತ್ತಾನೆ.

ಸ್ಥಳ ಪುರಾಣ

ಸ್ಥಳ ಪುರಾಣ

ಆಗ ಶಿವಲಿಂಗವನ್ನು ತೆಗೆದುಕೊಂಡು ಬರುವಂತೆ ಹನುಮಂತನಿಗೆ ಶ್ರೀರಾಮನು ಆದೇಶಿಸುತ್ತಾನೆ.

ಸ್ಥಳ ಪುರಾಣ

ಸ್ಥಳ ಪುರಾಣ

ತನ್ನ ಸ್ವಾಮಿ ಶ್ರೀರಾಮ ಹೇಳಿದ ಮಾತಿನಂತೆ ಯಾವುದೇ ತಡ ಮಾಡದೇ ಹನುಮಂತ ಹಿಮಾಲಯಕ್ಕೆ ತೆರಳುತ್ತಾನೆ.

ಸ್ಥಳ ಪುರಾಣ

ಸ್ಥಳ ಪುರಾಣ

ಪ್ರತಿಷ್ಟಾಪನೆಗೆ ಬೇಕಾದ ಎಲ್ಲಾ ಗುಣವನ್ನು ಹೊಂದಿರುವ ಹಾಗು ಶ್ರೇಷ್ಟವಾದ ಬೆಳ್ಳನೆಯ ಶಿಲೆಯನ್ನು ತೆಗೆದುಕೊಂಡು ಹಿಂದಿರುಗಿ ಹೋಗುತ್ತಾನೆ.

ಸ್ಥಳ ಪುರಾಣ

ಸ್ಥಳ ಪುರಾಣ

ಮಾರ್ಗ ಮಧ್ಯೆಯಲ್ಲಿ ಮಹಾ ಶಿವನ ಒಂದು ಪ್ರಾಂತ್ಯಕ್ಕೆ ಹನುಮಂತನು ಸೇರುವ ಸಮಯಕ್ಕೆ ಆಗಲೇ ಸಾಯಂಕಾಲ ಸಮೀಪಿಸುತ್ತಿರುತ್ತದೆ. ಹಾಗಾಗಿ ಹನುಮಂತನು ಸಂಧ್ಯಾವಂದನೆ ಮಾಡುವ ಸಲುವಾಗಿ ಆ ಶಿಲೆಯನ್ನು ಕಾಳಿಂದಿಮಡುಗು ಎಂಬ ಸರೋವರದಲ್ಲಿ ಇರುವ ಚಿಕ್ಕ ಬೆಟ್ಟದ ಮೇಲೆ ಇಳಿಸಲು ಪ್ರಯತ್ನಿಸುತ್ತಾನೆ.

ಸ್ಥಳ ಪುರಾಣ

ಸ್ಥಳ ಪುರಾಣ

ಆಗ ಆ ಶಿಲೆಯು ಹನುಮಂತನ ಕೈಜಾರಿ ನದಿಯಲ್ಲಿ ಬಿದ್ದುಬಿಡುತ್ತದೆ.

ಸ್ಥಳ ಪುರಾಣ

ಸ್ಥಳ ಪುರಾಣ

ಹಾಗಾಗಿ ಹನುಮತನು ಆ ನದಿಯಲ್ಲಿ ಬಿದ್ದು, ಜಾರಿ ಹೋಗುತ್ತಿರುವ ಆ ಶಿಲೆಯನ್ನು ಹಿಡಿಯುತ್ತಾನೆ.

ಸ್ಥಳ ಪುರಾಣ

ಸ್ಥಳ ಪುರಾಣ

ಆದರೆ ಆ ಶಿಲೆಯ ತಲೆಭಾಗವು ಸ್ವಲ್ಪ ಹೊಡೆದುಹೋಗುತ್ತದೆ. ಇದನ್ನು ಗಮನಿಸಿದ ಹನುಮಂತ ಹೀಗೆ ಈ ಶಿಲೆ ಬಿನ್ನವಾಗಿರುವುದರಿಂದ ಆ ಬೆಟ್ಟದ ಮೇಲೆ ಪ್ರತಿಷ್ಟಾಪಿಸುವುದು ಉತ್ತಮ ಎಂದು ಭಾವಿಸುತ್ತಾನೆ.

ಸ್ಥಳ ಪುರಾಣ

ಸ್ಥಳ ಪುರಾಣ

ಹಾಗೆ ಆ ವಿಧವಾಗಿ ಹನುಮಂತ ಪ್ರತಿಷ್ಟಾಪಿಸಿದ ಆ ಲಿಂಗವೇ ಮಹಾಶಿವ ಎಂದು ಪೂಜಿಸಲಾಗುತ್ತಿದೆ.

ಸ್ಥಳ ಪುರಾಣ

ಸ್ಥಳ ಪುರಾಣ

ಇಂದಿಗೂ ಸುಮಾರು 3.1/2 ಅಡಿ ಗೋಧಿ ಬಿಳಿ ವರ್ಣವನ್ನು ಹೊಂದಿರುವ ಈ ಶಿವಲಿಂಗ ಹಾಗೆಯೇ ಅರ್ಧ ಒಡೆದಿರುವ ರೀತಿ 2 ಭಾಗಗಳಂತೆ ಶಿವಲಿಮಗವು ಕಾಣುತ್ತದೆ.

ಸ್ಥಳ ಪುರಾಣ

ಸ್ಥಳ ಪುರಾಣ

ಈ ದೇವಾಲಯದ ಪಕ್ಕದಲ್ಲಿಯೇ ಒಂದು ಕಾಳಿಂದಿ ನದಿ ಇದೆ. ಇಲ್ಲಿ ದೊಡ್ಡದಾದ ತಾಂಡವ ಕೃಷ್ಣನ ಶಿಲ್ಪವನ್ನು ಕಾಣಬಹುದಾಗಿದೆ. ಆ ಹೊಡೆದ ಲಿಂಗವನ್ನು ಪ್ರತಿಷ್ಟಾಪಿಸಿದ ನಂತರ ಹನುಮಂತ ಮತ್ತೊಂದು ಶಿಲೆಗಾಗಿ ಹುಡುಕಾಟ ಪ್ರಾರಂಭ ಮಾಡಿದನು.

ಸ್ಥಳ ಪುರಾಣ

ಸ್ಥಳ ಪುರಾಣ

ಹನುಮಂತ ಹಿಂದಿರುಗಿ ಬಾರದ ಕಾರಣ ರಾಮನೇ ಮರಳಿನಿಂದ ಶಿವಲಿಂಗವನ್ನು ಮಾಡಿ ಪೂಜೆಗಳನ್ನು ನೇರವೇರಿಸುತ್ತಾನೆ.

ಸ್ಥಳ ಪುರಾಣ

ಸ್ಥಳ ಪುರಾಣ

ತದನಂತರ ಹನುಮಂತ ತೆಗೆದುಕೊಂಡು ಬಂದ ಶಿವಲಿಂಗವನ್ನು ರಾಮೇಶ್ವರದಲ್ಲಿ ಪ್ರತಿಷ್ಟಾಪಿಸುತ್ತಾರೆ.

ಸ್ಥಳ ಪುರಾಣ

ಸ್ಥಳ ಪುರಾಣ

ಈ ಸ್ಥಳದಿಂದ ಸುಮಾರು 8 ಕಿ.ಮೀ ದೂರದಲ್ಲಿ ಕ್ಷೀರ ರಾಮಲಿಂಗೇಶ್ವರ ಕ್ಷೇತ್ರವಿದೆ. ಈ ಪ್ರದೇಶದಿಂದ ಸುಮಾರು 15 ಕಿ.ಮೀ ದೂರದಲ್ಲಿ ಪಂಚರಾಮ ಕ್ಷೇತ್ರವಿದೆ ಅದೇ ಭೀಮವರಂ, ಶ್ರೀ ಸೋಮೆಶ್ವರ ಜನಾರ್ಥನ ಸ್ವಾಮಿ ದೇವಾಲಯವಿದೆ.

ಸ್ಥಳ ಪುರಾಣ

ಸ್ಥಳ ಪುರಾಣ

ಶಿವರಾತ್ರಿಯ ಸಮಯದಲ್ಲಿ ಲಕ್ಷಾಧಿ ಭಕ್ತರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ಹಲವಾರು ಉತ್ಸವಗಳು, ಹಬ್ಬಗಳನ್ನು ವೈಭವವಾಗಿ ಆಚರಿಸಲಾಗುತ್ತದೆ.

ಸ್ಥಳ ಪುರಾಣ

ಸ್ಥಳ ಪುರಾಣ

ಆನೇಕ ಮಂದಿ ಭಕ್ತರು ಸಂತಾನಕ್ಕಾಗಿ ಈ ದೇವಾಲಯಲ್ಲಿ ತೆಂಗಿನ ಮರದ ಸಸಿಯನ್ನು ನೆಟ್ಟು ಬೆಳೆಸುತ್ತಾರೆ. ಸಸಿ ನಾಟಿ ಸರಾಸರಿ ಒಂದು ವರ್ಷಕ್ಕೆ ಸರಿಯಾಗಿ ಅವರ ಕೋರಿಕೆ ನೇರವೇರುತ್ತದೆ ಎಂಬುವುದು ಅಲ್ಲಿನ ಭಕ್ತರ ನಂಬಿಕೆಯಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಮೊದಲು ಹೈದ್ರಾಬಾದ್‍ನಿಂದ ಆಂಧ್ರ ಪ್ರದೇಶಕ್ಕೆ ತಲುಪಿ ಅಲ್ಲಿಂದ ಸುಲಭವಾಗಿ ಈ ಗ್ರಾಮಕ್ಕೆ ಪ್ರವಾಸ ಕೈಗೊಳ್ಳಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ