Search
  • Follow NativePlanet
Share
» »ಶಿಖರ್ಜಿ - ನಿರ್ವಾಣ ಹೊಂದಲು ಒಂದು ಖಚಿತವಾದ ಸ್ಥಳ

ಶಿಖರ್ಜಿ - ನಿರ್ವಾಣ ಹೊಂದಲು ಒಂದು ಖಚಿತವಾದ ಸ್ಥಳ

By Manjula Balaraj Tantry

ಅರಣ್ಯಪ್ರದೇಶವನ್ನು ಹೊಂದಿರುವ ಸುಂದರವಾದ ರಾಜ್ಯದ ಬೆಟ್ಟಗಳ ತುದಿಯಲ್ಲಿ ನೆಲೆಸಿರುವ ಶಿಖರ್ಜಿ ಜೈನ ಧರ್ಮದವರ ಒಂದು ಪ್ರಮುಖ ಯಾತ್ರೀ ಕೇಂದ್ರವಾಗಿದೆ. ಪ್ರತಿ ವರ್ಷ ಲಕ್ಷಾಂತರ ಜೈನ ಧರ್ಮದ ಅನುಯಾಯಿಗಳು ಶಿಖರ್ಜಿಯ ಹಿತವಾದ ಮತ್ತು ಆರಾಮದಾಯಕ ಪರಿಸರದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತದೆ. ಅಲ್ಲದೆ ತಮ್ಮ ಜೈನ ಧರ್ಮದ ಶಿಕ್ಷಕರು ಮತ್ತು ಗುರುಗಳಿಗೆ ಗೌರವ ಸಲ್ಲಿಸುತ್ತಾರೆ.

ಪ್ರವಾಸಿಗರಲ್ಲಿ ಈ ಸ್ಥಳವು ಹೆಚ್ಚು ಪ್ರಾಮುಖ್ಯತೆಯನ್ನು ಗಳಿಸಿಲ್ಲವಾದರೂ ಶಿಖರ್ಜಿಯು ಪ್ರಕೃತಿ ಪ್ರೇಮಿಗಳನ್ನು ಇದರ ಶ್ರೀಮಂತ ಸಸ್ಯವರ್ಗ ಮತ್ತು ವಾತಾವರಣಗಳಿಂದಾಗಿ ಆಕರ್ಷಿಸುತ್ತದೆ ಶಿಖರ್ಜಿಯು ಜೀವನದಲ್ಲಿ ಮೋಕ್ಷವನ್ನು ಪಡೆಯಲು ಸೂಕ್ತವಾದ ಮತ್ತು ಪವಿತ್ರವಾದ ಸ್ಥಳವೆಂದು ನಂಬಲಾಗುತ್ತದೆ. ಜೀವನದ ಚಕ್ರವನ್ನು ಈ ಸುಂದರ ಶಿಖರ್ಜಿಯ ಪ್ರಕೃತಿಯಲ್ಲಿ ಕಂಡುಕೊಂಡರೆ ಹೇಗಿರಬಹುದು?

ಇದರ ಇತಿಹಾಸದ ಬಗ್ಗೆ ಸ್ವಲ್ಪ ಮಾಹಿತಿ

ಇದರ ಇತಿಹಾಸದ ಬಗ್ಗೆ ಸ್ವಲ್ಪ ಮಾಹಿತಿ

PC- CaptVijay

ಶಿಖರ್ಜಿಯ ಈ ಸ್ಥಳದಲ್ಲಿ ಜೈನ ಧರ್ಮದ ಇಪ್ಪತ್ತನಾಲ್ಕು ಗುರುಗಳಲ್ಲಿ ಇಪ್ಪತ್ತು ಗುರುಗಳು ಇಲ್ಲಿ ನಿರ್ವಾಣವನ್ನು ಹೊಂದಿದ್ದರೆಂದು ಹೇಳಲಾಗುತ್ತದೆ. ಜೊತೆಗೆ ಜೈನ ಧರ್ಮದ ಅನುಯಾಯಿಗಳಿಗೆ ಇದು ಕಡೆಯ ನಿಲುಗಡೆಯ ಸ್ಥಳವಾಗಿದೆ. ಶಿಖರ್ಜಿಯ ವಿಕಸನದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲವಾದರೂ ಜೈನ ಧರ್ಮದ ಅನೇಕ ಧಾರ್ಮಿಕ ಪುಸ್ತಕಗಳಲ್ಲಿ ಈ ಆಧ್ಯಾತ್ಮಿಕ ತಾಣಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಇಂದು ಶಿಖರ್ಜಿ ಜಗತ್ತಿನಾದ್ಯಂತದ ಜೈನ ಧರ್ಮ ಅನುಯಾಯಿಗಳಲ್ಲಿ ಅತ್ಯಂತ ಪ್ರಸಿದ್ದಿಯನ್ನು ಪಡೆದ ಸ್ಥಳವಾಗಿದೆ ಮತ್ತು ಇಲ್ಲಿಯ ಬೆಟ್ಟಗಳು ಮತ್ತು ಸುತ್ತಲೂ ಹರಡಿರುವ ಸೌಂದರ್ಯತೆಗಳು ದೇವಾಲಯದ ಸುತ್ತಲೂ ಹರಡಿರುವುದರಿಂದ ಇದೊಂದು ಪ್ರವಾಸಿ ತಾಣವಾಗಿ ಮಾರ್ಪಡುತ್ತಿದೆ.

ಶಿಖರ್ಜಿಯಲ್ಲಿ ಭೇಟಿ ಕೊಡಬಹುದಾದ ಸ್ಥಳಗಳು

ಶಿಖರ್ಜಿಯಲ್ಲಿ ಭೇಟಿ ಕೊಡಬಹುದಾದ ಸ್ಥಳಗಳು

PC- Pankajmcait

ಶಿಖರ್ಜಿಯ ಪ್ರಮುಖ ಆಕರ್ಷಣೆಗಳಲ್ಲಿ ಇಲ್ಲಿಯ ದೇವಾಲಯಗಳು ಮತ್ತು ನೈಸರ್ಗಿಕ ಪರಿಸರವನ್ನು ಒಳಗೊಂಡಿದೆ. ಇದು ಪರಸ್ನಾಥ್ ಬೆಟ್ಟದ ತಳದಿಂದ ಮೇಲಕ್ಕೆ ಒಂದು ಚಾರಣದ ಸ್ಥಳವಾಗಿದ್ದರೂ ಕೂಡಾ ಇಲ್ಲಿ ಜೈನರ ಅತೀ ಪ್ರಮುಖ ಸ್ಥಳವನ್ನು ಹೊಂದಿದೆ. ಇಲ್ಲಿಯ ದಾರಿಯು ಅನುಕೂಲಕರವಾಗಿರುವುದರಿಂದ ಇಲ್ಲಿಯ ಶಿಖರವನ್ನು ಸುಲಭವಾಗಿ ತಲುಪಬಹುದು.

ಇಲ್ಲಿಯ ಪ್ರಮುಖ ದೇವಾಲಯಗಳಲ್ಲಿ ಜಲ್ ಮಂದಿರ್, ಕುಂತುನಾಥ ಮಂದಿರ್,ಗೌತಮ್ ಸ್ವಾಮಿ ದೇವಾಲಯ, ಮಲ್ಲಿನಾಥ್ ದೇವಾಲಯ ನೇಮಿನಾಥ್ ದೇವಾಲಯ ಮತ್ತು ಇನ್ನೂ ಅನೇಕ ದೇವಾಲಯಗಳು ಪರಶ್ ನಾಥ್ ಬೆಟ್ಟಗಳ ಸುತ್ತ ಮುತ್ತ ಚದುರಿಕೊಂಡಿರುವುದನ್ನು ಕಾಣಬಹುದಾಗಿದೆ.ಅಲ್ಲದೆ ಇಲ್ಲಿಯ ಹಲವು ದೇವಾಲಯಗಳು ಹೊಸದಾಗಿ ನಿರ್ಮಾಣ ಮಾಡಲಾದುದಾಗಿದೆ. ನೀವು ಇಲ್ಲಿ 18ನೇ ಶತಮಾನದ ದೇವಾಲಯಗಳನ್ನೂ ಕೂಡಾ ಕಾಣ ಬಹುದಾಗಿದೆ. ನೀವು ಇಲ್ಲಿಯ ನಂಬಲಸಾಧ್ಯವಾದ ನೀಲಿ ಬಣ್ಣದ ಹಿನ್ನೆಲೆ ಇರುವ ಆಕಾಶ ಇವು ಇಲ್ಲಿಯ ಸುತ್ತಮುತ್ತಲ ಸೌಂದರ್ಯತೆಯನ್ನು ಹೆಚ್ಚಿಸಲು ಸಹಕಾರಿಯಾಗುವಂತೆ ಕಾಣುವ ಪರಿಸರದಲ್ಲಿ ಆನಂದ ಪಡಬಹುದಾಗಿದೆ.

ಶಿಖರ್ಜಿಗೆ ತಲುಪುವುದು ಹೇಗೆ

ಶಿಖರ್ಜಿಗೆ ತಲುಪುವುದು ಹೇಗೆ

ವಿವರವಾದ ನಕ್ಷೆ ಇಲ್ಲಿದೆ

ವಾಯು ಮಾರ್ಗ ಮೂಲಕ : ರಾಂಚೀ ವಿಮಾನ ನಿಲ್ದಾಣವು ಶಿಖರ್ಜಿಗೆ ಹತ್ತಿರವಿರುವ ವಿಮಾನ ನಿಲ್ದಾಣವಾಗಿದ್ದು ಇದು ಪ್ರರಶ್ ನಾಥ್ ಬೆಟ್ಟದಿಂದ 103 ಕಿ.ಮೀ ಅಂತರದಲ್ಲಿದೆ.

ರೈಲು ಮೂಲಕ : ಪರಶ್ ನಾಥ್ ರೈಲ್ವೇ ನಿಲ್ದಾಣ ಹತ್ತಿರದ ಅನೇಕ ನಗರಗಳಿಗೆ ಮತ್ತು ಪಟ್ಟಣಗಳಿಗ್ ಸಂಪರ್ಕಿಸುತ್ತದೆ

ರಸ್ತೆ ಮೂಲಕ : ಪರಶ್ ನಾಥ್ ಗೆ ರಸ್ತೆ ಮೂಲಕ ಅನೇಕ ನಗರ ಮತ್ತು ಪಟ್ಟಣಗಳಿಂದ ಸುಲಭವಾಗಿ ಸಂಪರ್ಕಿಸಬಹುದು. ಆದರೂ ಪರಶ್ ನಾಥ್ ಗೆ ನೇರ ಬಸ್ಸು ಸಂಪರ್ಕವಿರುವುದಿಲ್ಲ

ಶಿಖರ್ಜಿಗೆ ಭೇಟಿ ನೀಡಲು ಸೂಕ್ತ ಸಮಯ

ಶಿಖರ್ಜಿಗೆ ಭೇಟಿ ನೀಡಲು ಸೂಕ್ತ ಸಮಯ

PC- vsvinaykumar

ಪರಶ್ ನಾಥವು ತೀವ್ರ ತಾಪಮಾನವನ್ನು ಅನುಭವಿವುದರಿಂದ ಬೇಸಿಗೆಯಲ್ಲಿ ಶಿಖರ್ಜಿಗೆ ಭೇಟಿ ಕೊಡುವುದನ್ನು ತಪ್ಪಿಸುವುದು ಒಳಿತು.ನೀವು ಪ್ರಕೃತಿ ಮತ್ತು ಆಧ್ಯಾತ್ಮದ ಸಮ್ಮಿಲನದ ಜಾಗದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ನೋಡುತ್ತಿರುವಿರಾ ಹಾಗಿದ್ದಲ್ಲಿ ಶಿಖರ್ಜಿಗೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅಕ್ಟೋಬರ್ ತಿಂಗಳಿನಿಂದ ಎಪ್ರಿಲ್ ತಿಂಗಳಿನ ಕೊನೆಯವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more