Search
  • Follow NativePlanet
Share
» »ಈ ತೀರ್ಥಕ್ಷೇತ್ರಗಳಲ್ಲಿ ಒಂದಕ್ಕೆ ಭೇಟಿ ನೀಡಿದರೂ ಮೋಕ್ಷ ಪ್ರಾಪ್ತಿ...

ಈ ತೀರ್ಥಕ್ಷೇತ್ರಗಳಲ್ಲಿ ಒಂದಕ್ಕೆ ಭೇಟಿ ನೀಡಿದರೂ ಮೋಕ್ಷ ಪ್ರಾಪ್ತಿ...

By Sowmyabhai

ಅಖಂಢ ಭಾರತ ದೇಶದಲ್ಲಿ ಅತಿ ಪುರಾತನವಾದ ಹಾಗು ಪುರಾಣ ಕಾಲಕ್ಕಿಂತ ಪ್ರಾಚೀನವಾದ 7 ಕ್ಷೇತ್ರಗಳಿವೆ. ಇವುಗಳನ್ನೇ "ಸಪ್ತ ಪುರಾ" ಎಂದು ಕೂಡ ಕರೆಯುತ್ತಾರೆ. ಹಿಂದೂ ಪುರಾಣಗಳನ್ನು ಅನುಸರಿಸಿ ಭಾರತ ಜೀವನ ಚಕ್ರದಲ್ಲಿ ಈ ಏಳು ಕ್ಷೇತ್ರಗಳನ್ನು ಸಂದರ್ಶಿಸಿದರೆ ಪಾಪಗಳೆಲ್ಲಾ ತೊಲಗಿ ಸ್ವರ್ಗ ಲೋಕ ಪ್ರಾಪ್ತಿಯಾಗುತ್ತದೆ ಎಂದು ಪ್ರಜೆಗಳ ನಂಬಿಕೆಯಾಗಿದೆ.

ಪಾಂಡವರು ಕೂಡ ಮಹಾಭಾರತ ಯುದ್ಧದ ನಂತರ ಬ್ರಾಹ್ಮಣ, ಗುರು, ಬಂಧುಗಳು ಎಂದೂ ಕೂಡ ನೋಡದೇ ಹತ್ಯೆ ಮಾಡಿದ ದೋಷದಿಂದಾಗಿ ತಮ್ಮ ಪಾಪವನ್ನು ಕಳೆದುಕೊಳ್ಳುವ ಸಲುವಾಗಿ ಈ 7 ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಸ್ವರ್ಗಲೋಕಕ್ಕೆ ಪ್ರಯಾಣ ಆರಂಭಿಸಿದರು ಎಂದು ಹೇಳುತ್ತಾರೆ.

ಈ ಏಳು ಪುಣ್ಯಕ್ಷೇತ್ರಗಳಲ್ಲಿ ವೈಷ್ಣವ ದೇವಾಲಯದ ಜೊತೆ-ಜೊತೆಗೆ ಶೈವ ಕ್ಷೇತ್ರಗಳು ಕೂಡ ಇವೆ. ಅದ್ದರಿಂದಲೇ ಈ ಸಪ್ತಪುರಿ ಕ್ಷೇತ್ರಗಳನ್ನು ವೈಷ್ಣವ ಭಕ್ತರೇ ಅಲ್ಲದೇ ಶೈವ ಭಕ್ತರು ಕೂಡ ಸಂದರ್ಶಿಸುತ್ತಾ ಇರುತ್ತಾರೆ. ಈ ಲೇಖನದ ಮೂಲಕ ಯಾವ ತೀರ್ಥಕ್ಷೇತ್ರಗಳಲ್ಲಿ ಒಂದಕ್ಕೆ ಭೇಟಿ ನೀಡದರೂ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದರ ಕುರಿತು ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯೋಣ.

1.ಅಯೋಧ್ಯೆ

1.ಅಯೋಧ್ಯೆ

PC:YOUTUBE

ರಾಮಜನ್ಮ ಭೂಮಿ ಎಂದು ಪ್ರಸಿದ್ಧವಾಗಿರುವ ಈ ಅಯೋಧ್ಯೆ ಅತ್ಯಂತ ಪವಿತ್ರವಾದ ಸ್ಥಳಗಳಲ್ಲಿ ಒಂದಾಗಿದೆ. ಮಹಾವಿಷ್ಣುವಿನ ಅವತಾರವಾದ ಶ್ರೀರಾಮಚಂದ್ರನು ಹುಟ್ಟಿ ಬೆಳೆದ ಪ್ರದೇಶವೇ ಅಯೋಧ್ಯೆ. ರಾಮಾಯಣ ಕಾಲಕ್ಕಿಂತ ಹಿಂದೆಯೇ ಸಾಕೇತ ಪುರ ಎಂಬ ಹೆಸರಿನಿಂದ ಈ ಕ್ಷೇತ್ರವು ಪ್ರಸಿದ್ಧಿಯನ್ನು ಹೊಂದಿತ್ತು. ಸ್ಕಂಧ ಪುರಾಣದಲ್ಲಿ ಅಯೋಧ್ಯೆಯನ್ನು 7 ಪವಿತ್ರವಾದ ನಗರಗಳಲ್ಲಿ ಒಂದು ಎಂದು ಉಲ್ಲೇಖಿಸಲಾಗಿದೆ. ದೇವರು ನಿರ್ಮಿಸಿದ ನಗರವಾದ್ದರಿಂದ ಧಾರ್ಮಿಕವಾಗಿ ಈ ನಗರವು ಅತ್ಯಂತ ಪ್ರಾಧಾನ್ಯತೆ ಹೊಂದಿದೆ ಎಂದು ಭಕ್ತರ ನಂಬಿಕೆಯಾಗಿದೆ.

2.ದ್ವಾರಕ

2.ದ್ವಾರಕ

PC:YOUTUBE

ಸಪ್ತಪುರಿ ಕ್ಷೇತ್ರದಲ್ಲಿ ದ್ವಾರಕ ಕೂಡ ಒಂದು. ವಿಷ್ಣುವು ದಶಾವತಾರದಲ್ಲಿ ಒಂದಾದ ಶ್ರೀ ಕೃಷ್ಣನು ಮಧುರೆಯನ್ನು ಬಿಟ್ಟು ಸುಮಾರು ಸಾವಿರ ವರ್ಷ ನಿವಾಸಿಸಿದ ಪ್ರದೇಶವಾಗಿ ದ್ವಾರಕಕ್ಕೆ ಹೆಸರಿದೆ. ದ್ವಾಕರವು ಗುಜಾರಾತ್‍ನಲ್ಲಿನ ಗೋಮತಿ ನದಿ ತೀರದಲ್ಲಿದೆ. ದ್ವಾರಕಾದೀಶ ದೇವಾಲಯ, ರುಕ್ಮಿಣಿ ದೇವಾಲಯ, ಶಾರದಾಪೀಠದಂತಹ ಅನೇಕ ಮುಖ್ಯವಾದ ಧಾರ್ಮಿಕ ಕ್ಷೇತ್ರಗಳಿವೆ. ಇವುಗಳಲ್ಲಿ ಅನೇಕ ಮಂದಿ ಹಿಂದುಗಳು ಸಂದರ್ಶಿಸಿದರೆ ಪ್ರಸಿದ್ಧ ಕ್ಷೇತ್ರ ದ್ವಾರಕಧೀಶ ದೇವಾಲಯ.

3.ಹರಿದ್ವಾರ

3.ಹರಿದ್ವಾರ

PC:YOUTUBE

ಉತ್ತರಖಂಡದಲ್ಲಿನ ಹರಿದ್ವಾರದಲ್ಲಿನ ಸಪ್ತಗಿರಿ ಕ್ಷೇತ್ರದಲ್ಲಿ ವಿಶಿಷ್ಟವಾದ ಪುಣ್ಯಕ್ಷೇತ್ರವಾಗಿ ಹೇಳುತ್ತಾರೆ. ದೆಹಲಿಯಿಂದ ಸುಮಾರು 212 ಕಿ.ಮೀ ದೂರದಲ್ಲಿ ಈ ಪುಣ್ಯಕ್ಷೇತ್ರಕ್ಕೆ ಪ್ರತಿ ನಿತ್ಯ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಗಂಗಾನದಿ, ಗಂಗೋತ್ರಿಯ ಬಳಿ ಪ್ರಾರಂಭವಾಗಿ ಸುಮಾರು 2543 ಕಿ.ಮೀ ಪ್ರಯಾಣ ಮಾಡಿ ಹರಿದ್ವಾರದಲ್ಲಿ ಹರಿಯುತ್ತದೆ.

4.ವಾರಾಣಾಸಿ

4.ವಾರಾಣಾಸಿ

PC:YOUTUBE

ಕಾಶಿ, ಬನಾರಸ್ ಎಂದು ಕೂಡ ವಾರಾಣಾಸಿಗೆ ಕರೆಯುತ್ತಾರೆ. ಇಲ್ಲಿ ಪರಮೇಶ್ವರನು ನಿವಾಸಿಸುತ್ತಿದ್ದಾನೆ ಎಂದು ಭಕ್ತರು ನಂಬುತ್ತಾರೆ. ಅದ್ದರಿಂದಲೇ ಈ ಪುಣ್ಯಕ್ಷೇತ್ರಕ್ಕೆ ಹಿಂದೂ ಧಾರ್ಮಿಕ ಪ್ರವಾಸದಲ್ಲಿ ವಿಶೇಷವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಪ್ರಜೆಗಳು ಮೋಕ್ಷದ ಕ್ಷೇತ್ರವನ್ನು ಆಯ್ದುಕೊಳ್ಳುವ ನಗರಗಳ ಪೈಕಿ ಈ ವಾರಾಣಸಿಯು ಒಂದು. ಇದು ಏಶಿಯಾ ಖಂಡದಲ್ಲಿಯೇ ಅತ್ಯಂತ ಪ್ರಾಚೀನವಾದ ನಗರವಾಗಿದೆ.

5.ಕಾಂಚೀಪುರಂ

5.ಕಾಂಚೀಪುರಂ

PC:YOUTUBE

ಸಪ್ತಪುರಿ ಕ್ಷೇತ್ರಗಳಲ್ಲಿ ದಕ್ಷಿಣ ಭಾರತ ದೇಶದಲ್ಲಿರುವ ಏಕೈಕ ಪುಣ್ಯಕ್ಷೇತ್ರವಾಗಿ ಕಾಂಚಿಪುರಂ ಹೆಸರುವಾಸಿಯಾಗಿದೆ. ಇಲ್ಲಿರುವ ದೇವಾಲಯಗಳಲ್ಲಿ ಪ್ರಮುಖವಾದುದು ಕಾಮಾಕ್ಷಿ ದೇವಿಯ ದೇವಾಲಯ. ಇದೊಂದು ಶಕ್ತಿಪೀಠವಾಗಿದೆ. ಉಳಿದ ಶಕ್ತಿಪೀಠಗಳಿಗಿಂತ ಇದು ವಿಭಿನ್ನವಾದುದು. ಇಲ್ಲಿ ಮಹಾಶಿವನು ಕೂಡ ಇರುತ್ತಾನೆ. ಅದ್ದರಿಂದಲೇ ಶೈವರಿಗೆ ಇದೊಂದು ಪವಿತ್ರವಾದ ಕ್ಷೇತ್ರವಾಗಿ ಕಂಗೊಳಿಸುತ್ತಿದೆ.

6.ಉಜ್ಜಯಿನಿ

6.ಉಜ್ಜಯಿನಿ

PC:YOUTUBE

ಮಧ್ಯಪ್ರದೇಶದಲ್ಲಿನ ಉಜ್ಜಯಿನಿ ಸಪ್ತಪುರಿ ಕ್ಷೇತ್ರಗಳಲ್ಲಿ ಒಂದು. ಕ್ಷಿಪ್ರಾ ನದಿ ತೀರದಲ್ಲಿ ನೆಲೆಸಿರುವ ಈ ಪುಣ್ಯಕ್ಷೇತ್ರವನ್ನು ವೈಷ್ಣವರೇ ಅಲ್ಲದೇ ಶೈವರು ಕೂಡ ಅತ್ಯಂತ ಪವಿತ್ರವಾದ ನಗರವಾಗಿ ಎಂದು ಹೆಸರು ಪಡೆದಿದೆ. ಇಲ್ಲಿ ಶಿವರಾತ್ರಿ ಉತ್ಸವಗಳು ಅತ್ಯಂತ ವಿಜೃಂಬಣೆಯಿಂದ ನಡೆಸುತ್ತಾರೆ. ಮಹಾಕಾಳೇಶ್ವರ, ಕಾಲಭೈರವ, ಚಿಂತಾಮಣಿ ಗಣೇಶ, ಗೋಪಾಲ ಮಂದಿರ ಇನ್ನು ಅನೇಕ ದೇವಾಲಯಗಳು ಉಜ್ಜಯಿನಿ ಪುಣ್ಯಕ್ಷೇತ್ರವು ಹೆಜ್ಜೆ-ಹೆಜ್ಜೆಗೂ ಕಾಣಿಸುತ್ತದೆ. ಮುಖ್ಯವಾಗಿ ಮಹಾಕಾಳೇಶ್ವರ ದೇವಾಲಯವು ದೇಶದಲ್ಲಿಯೇ ಅತ್ಯಂತ ಪರಮ ಪವಿತ್ರವಾದ 12 ಜ್ಯೋತಿರ್ ಲಿಂಗಗಳಲ್ಲಿ ಒಂದಾಗಿದೆ.

7.ಮಧುರ

7.ಮಧುರ

PC:YOUTUBE

ಶ್ರೀಕೃಷ್ಣನ ಜನ್ಮಸ್ಥಾನವೇ ಮಧುರಾ, ದ್ವಾಪರ ಕಾಲದಿಂದ ಇಂದಿನವರೆವಿಗೂ ಈ ಮಧುರಾ ಒಂದು ಪುಣ್ಯಕ್ಷೇತ್ರವಾಗಿ ಕಂಗೋಳಿಸುತ್ತಿದೆ. ಇದನ್ನು ಲ್ಯಾಂಡ್ ಆಫ್ ಎಟರ್ನಲ್ ಲವ್ ಎಂದು ಕೂಡ ಕರೆಯುತ್ತಾರೆ. ಶ್ರೀ ಕೃಷ್ಣ ಭಗವಾನನು ತನ್ನ ಬಾಲ್ಯದಲ್ಲಿ ಗೋಪಿಕೆಯರೊಂದಿಗೆ ಕಾಲವನ್ನು ಕಳೆದ ಸ್ಥಳವಾದ್ದರಿಂದ ಇದಕ್ಕೆ ಆ ಹೆಸರು ಬಂದಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more