• Follow NativePlanet
Share
Menu
» »ಭಾರತದಲ್ಲಿಯೇ ಮೊದಲನೆಯದು ನಮ್ಮ ಮೈಸೂರಿನ ಮರಳು ಶಿಲ್ಪ ಮ್ಯೂಸಿಯಂ!!!

ಭಾರತದಲ್ಲಿಯೇ ಮೊದಲನೆಯದು ನಮ್ಮ ಮೈಸೂರಿನ ಮರಳು ಶಿಲ್ಪ ಮ್ಯೂಸಿಯಂ!!!

Written By:

ಮೈಸೂರು ನಮ್ಮ ಕರ್ನಾಟಕದ ಹೆಮ್ಮೆಯ ಪ್ರದೇಶವಾಗಿದೆ. ನಮ್ಮ ರಾಜ್ಯದ ರಾಜ ಮನೆತನ ಬಾಳಿದ ಈ ಸುಂದರವಾದ ಸ್ಥಳದಲ್ಲಿ ನಾವು ಎಂದೂ ನೋಡಲಾಗದ ಸುಂದರವಾದ ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ. ಇದು ನಮ್ಮ ರಾಜ್ಯದ ಪ್ರವಾಸಕ್ಕೆ ಕೊಡುಗೆ ಎಂದರೆ ತಪ್ಪಾಗಲಾರದು. ಇಲ್ಲಿ ಹೆಚ್ಚಾಗಿ ದಸರಾ ಹಬ್ಬ ಮತ್ತು ರಜಾದಿನಗಳಲ್ಲಿ ಹೆಚ್ಚಾಗಿ ಭೇಟಿ ನೀಡುತ್ತಾರೆ.

ನೀವು ಸಾಮಾನ್ಯವಾಗಿ ಮೈಸೂರಿಗೆ ತೆರಳಿದಾಗ ಮೈಸೂರು ಅರಮನೆಗೆ ಭೇಟಿ ನೀಡೇ ಇರುತ್ತೀರಾ. ಹಾಗಾದರೆ ಕೇಳಿ ಇಲ್ಲೊಂದು ಸುಂದರವಾದ ಮರುಳು ಶಿಲ್ಪ ಮ್ಯೂಸಿಯಂ ಇದೆ. ಇದು ಇತ್ತೀಚಿನ ಪ್ರವಾಸಿ ತಾಣದಲ್ಲಿ ಸೇರ್ಪಡೆಗೊಂಡಿದೆ. ಈ ಸುಂದರವಾದ ಮರುಳು ಶಿಲ್ಪಗಳು ಚಾಮುಂಡಿ ಬೆಟ್ಟಕ್ಕೆ ತೆರಳುವ ದಾರಿಯಲ್ಲಿದೆ.

ಭಾರತದಲ್ಲಿಯೇ ಮೊದಲನೆಯದು

ಭಾರತದಲ್ಲಿಯೇ ಮೊದಲನೆಯದು

ಅದ್ಭುತವಾದ ಮರುಳು ಶಿಲ್ಪ ಮ್ಯೂಸಿಯಂ ಒಂದು ಅನನ್ಯ ವಸ್ತುಸಂಗ್ರಹಾಲಯವಾಗಿದೆ. ಆಶ್ಚರ್ಯ ಏನಪ್ಪ ಎಂದರೆ ಮೈಸೂರಿನಲ್ಲಿನ ಮರುಳು ಶಿಲ್ಪ ಮ್ಯೂಸಿಯಂ ಭಾರತದಲ್ಲಿಯೇ ಮೊದಲನೆಯದು ಎಂದು ಹೆಗ್ಗಳಿಕೆ ಪಡೆದಿದೆ.

ಸೃಜನಾತ್ಮಕ ಪ್ರತಿಭೆ

ಸೃಜನಾತ್ಮಕ ಪ್ರತಿಭೆ

ಇದೊಂದು ಸೃಜನಾತ್ಮಕವಾದ ಪ್ರತಿಭೆಯಾಗಿದೆ. ಇದು ಮರುಳಿನಿಂದ ಕಲಾತ್ಮಕ ಕೃತಿಗಳನ್ನು ಒದಗಿಸುತ್ತದೆ. ಮರಳಿನ ಮೇಲೆ ಕೆತ್ತನೆ ಮಾಡಿದ ಶಿಲ್ಪಕಲೆಗಳು ಅತ್ಯಂತ ವಿಶೇಷವಾಗಿರುತ್ತದೆ.

ಮೈಸೂರು ಸ್ಯಾಂಡ್ ಸ್ಕಲ್ಪ್ಚರ್ ಮ್ಯೂಸಿಯಂ

ಮೈಸೂರು ಸ್ಯಾಂಡ್ ಸ್ಕಲ್ಪ್ಚರ್ ಮ್ಯೂಸಿಯಂ

ಮರಳು ಶಿಲ್ಪ ಮ್ಯೂಸಿಯಂ ಸುಮಾರು 13500 ಚದರ ಅಡಿ ಪ್ರದೇಶದಲ್ಲಿ ಇರಿಸಲಾಗಿದೆ. ಇಲ್ಲಿ 16 ವಿವಿಧ ವಿಷಯಗಳಲ್ಲಿ 150 ಮರಳಿನ ಶಿಲ್ಪಗಳನ್ನು ಪ್ರದರ್ಶಿಸಲಾಗುತ್ತದೆ. ಆಶ್ಚರ್ಯವೆನೆಂದರೆ ಈ ಮರಳಿನ ಶಿಲ್ಪಗಳನ್ನು 115 ಟ್ರಕ್ ಲೋಡ್‍ಗಳ ಮರಳನ್ನು ಬಳಸಿ ರಚಿಸಲಾಗಿದೆ.

ಮೈಸೂರು ಪರಂಪರೆ

ಮೈಸೂರು ಪರಂಪರೆ

ಇಲ್ಲಿ ಮೈಸೂರಿನ ಶ್ರೀಮಂತ ಪರಂಪರೆ, ವನ್ಯಜೀವಿ, ಸಂಸ್ಕøತಿ, ವಿಭಿನ್ನವಾದ ಧಾರ್ಮಿಕ ಮಹಾಕಾವ್ಯ ಮತ್ತು ಕಾಲ್ಪನಿಕ ಕಥೆಗಳ ಅದ್ಭುತವಾದ ಮರಳು ಶಿಲ್ಪಗಳನ್ನು ಕಾಣಬಹುದಾಗಿದೆ. ಇದೊಂದು ಅದ್ಭುತವಾದ ವಸ್ತುಸಂಗ್ರಹಾಲಯವಾಗಿದೆ.

ಪ್ರವೇಶ ದ್ವಾರ

ಪ್ರವೇಶ ದ್ವಾರ

ಪ್ರವಾಸಿಗರು ಮ್ಯೂಸಿಯಂನ ಪ್ರವೇಶ ಮಾಡುತ್ತಿದ್ದಂತೆ 15 ಅಡಿ ಎತ್ತರದ ಗಣೇಶನ ಪ್ರತಿಮೆಯನ್ನು ಕಾಣುತ್ತಾರೆ. ಈ ಮ್ಯೂಸಿಯಂನಲ್ಲಿನ ಇತರ ಮರಳು ಶಿಲ್ಪಗಳೆಂದರೆ ಚಾಮುಂಡೇಶ್ವರಿ ದೇವತೆ, ಕುದುರೆ ರಥ ಮೇಲೆ ಕುಳಿತಿರುವ ಅರ್ಜುನ, ಲಾಫಿಂಗ್ ಬುದ್ಧ, ಕ್ರಿಸ್‍ಮಸ್ ಮರ, ಸಾಂಟಾ ಕ್ಲಾಸ್. ಪ್ರಾಚೀನ ಈಜಿಫ್ಟ್, ರಾಶಿಚಕ್ರ ಮತ್ತು ಟಾಮ್ ಆಂಡ್ ಜೆರ್ರಿ ಕಾರ್ಟೂನ್ ಇನ್ನೂ ಇತ್ಯಾದಿ.

ಪ್ರವಾಸಿಗರು

ಪ್ರವಾಸಿಗರು

ಈಗಾಗಲೇ ಈ ಮ್ಯೂಸಿಯಂಗೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಮರಳು ಮತ್ತು ನೀರನ್ನು ಸಣ್ಣ ಪ್ರಮಾಣದ ಅಂಟುಗಳಿಂದ ಈ ಶಿಲ್ಪಗಳನ್ನು ರಚಿಸಲಾಗುತ್ತದೆ. ಈ ಸುಂದರವಾದ ಮರಳು ಶಿಲ್ಪಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ರಕ್ಷಣೆ

ರಕ್ಷಣೆ

ಕಣ್ಣಿಗೆ ಮುದ ನೀಡುವ ಈ ಮರಳು ಶಿಲ್ಪಗಳನ್ನು ಮಳೆ ಹಾಗು ಸೂರ್ಯನಿಂದ ರಕ್ಷಿಸಲಾಗುತ್ತದೆ. ಕೀಟಗಳಿಂದ ರಕ್ಷಿಸಲು ಸಹ ಕೀಟನಾಶಕಗಳನ್ನು ಬಳಸಲಾಗುತ್ತಿದೆ. ಈ ಮರಳಿನ ಶಿಲ್ಪಗಳು 1 ವರ್ಷದ ಕಾಲದವರೆಗೆ ಇರುತ್ತದೆ. ಈ ಸುಂದರವಾದ ಶಿಲ್ಪಗಳನ್ನು ಮಾಡಲು ಸುಮಾರು 100 ಟ್ರಕ್‍ಗಳಿಗೂ ಹೆಚ್ಚಿನ ಮರಳನ್ನು ಬಳಲಾಗಿದೆ ಎಂದು ಅಂದಾಜಿಸಲಾಗಿದೆ.

ಯಾರು ಮಾಡಿರುವುದು?

ಯಾರು ಮಾಡಿರುವುದು?

ಈ ಸುಂದರವಾದ ಮ್ಯೂಸಿಯಂ ಮಾಡಲು ಎಮ್.ಎನ್ ಗೌರಿಯವರ ಯೋಜನೆಯೇ ಆಗಿದೆ. ಇವರು ಭಾರತದ ಪ್ರಮುಖ ಮರಳು ಶಿಲ್ಪಕಲೆಗಳಲ್ಲಿ ಒಬ್ಬರಾಗಿದ್ದಾರೆ. 4 ತಿಂಗಳುಗಳ ಕಾಲ ಕಠಿಣ ಪರಿಶ್ರಮದಿಂದ ಈ ಅನನ್ಯವಾದ ವಸ್ತುಸಂಗ್ರಾಲಯವನ್ನು ಸೃಷ್ಟಿ ಮಾಡಿದ್ದಾರೆ.

ಮ್ಯೂಸಿಯಂ ಸಮಯ ಮತ್ತು ಪ್ರವೇಶ ಶುಲ್ಕ

ಮ್ಯೂಸಿಯಂ ಸಮಯ ಮತ್ತು ಪ್ರವೇಶ ಶುಲ್ಕ

ಈ ಮ್ಯೂಸಿಯಂ ವಾರದ ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ. ಮರಳು ಶಿಲ್ಪ ಮ್ಯೂಸಿಯಂಗೆ ಭೇಟಿ ನೀಡುವ ಸಮಯವೆಂದರೆ ಅದು ಬೆಳಗ್ಗೆ 8:30 ರಿಂದ ಸಂಜೆ 6:30 ರವರೆಗೆ. ಪ್ರವೇಶ ಶುಲ್ಕವು ದೊಡ್ಡವರಿಗೆ ರೂ 40 ಹಾಗು ಮಕ್ಕಳಿಗೆ ರೂ 20 ಆಗಿದೆ.

ಮೈಸೂರು ಮರಳು ಶಿಲ್ಪ ಮ್ಯೂಸಿಯಂಗೆ ತಲುಪುವ ಬಗೆ ಹೇಗೆ?

ಮೈಸೂರು ಮರಳು ಶಿಲ್ಪ ಮ್ಯೂಸಿಯಂಗೆ ತಲುಪುವ ಬಗೆ ಹೇಗೆ?

ಮರಳು ಮ್ಯೂಸಿಯಂ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಇದು ಮೈಸೂರು ಬಸ್ ನಿಲ್ದಾಣದಿಂದ ಸುಮಾರು 6 ಕಿ,ಮೀ ದೂರದಲ್ಲಿದೆ. ಪ್ರವಾಸಿಗರು ಕ್ಯಾಬ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು ಅಥವಾ ಆಟೋ ರಿಕ್ಷಾದ ಮೂಲಕ ತಲುಪಬಹುದಾಗಿದೆ. ಮೈಸೂರಿನ ಹಲವಾರು ಬಸ್ಸುಗಳು ಈ ಮ್ಯೂಸಿಯಂ ಮೂಲಕ ಸಂಚಾರವನ್ನು ಆರಂಭಿಸಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ