Search
  • Follow NativePlanet
Share
» »ಮಧ್ಯಪ್ರದೇಶ ಪ್ರವಾಸೋದ್ಯಮಕ್ಕೆ ಸಲ್ಮಾನ್‌ ಸಾಥ್

ಮಧ್ಯಪ್ರದೇಶ ಪ್ರವಾಸೋದ್ಯಮಕ್ಕೆ ಸಲ್ಮಾನ್‌ ಸಾಥ್

ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಇಂದೋರ್‌ ಮೊದಲನೇ ಸ್ಥಾನದಲ್ಲಿದೆ. ಇದೀಗ ಮಧ್ಯಪ್ರದೇಶದ ಪ್ರವಾಸೋದ್ಯಮವನ್ನು ಇನ್ನಷ್ಟು ಪ್ರಸಿದ್ಧಿಗೊಳಿಸಲು ಮಧ್ಯಪ್ರದೇಶ ಸರ್ಕಾರವು ಪ್ರವಾಸೋದ್ಯಮದ ರಾಯಬಾರಿಯನ್ನಾಗಿ ಸೂಪರ್‌ ಸ್ಟಾರ್‌ನ್ನೇ ಆಯ್ಕೆ ಮಾಡಿದೆ.

ಮಧ್ಯಪ್ರದೇಶದ ಪ್ರವಾಸೋಧ್ಯಮದ ರಾಯಬಾರಿ

ಮಧ್ಯಪ್ರದೇಶದ ಪ್ರವಾಸೋಧ್ಯಮದ ರಾಯಬಾರಿ

PC:Superfast1111
ಬಾಲಿವುಡ್‌ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಇದೀಗ ಮಧ್ಯಪ್ರದೇಶದ ಪ್ರವಾಸೋಧ್ಯಮದ ರಾಯಬಾರಿಯಾಗಿದ್ದಾರೆ. ಸಲ್ಮಾನ್‌ ಖಾನ್‌ಗೂ ಇಂದೋರ್‌ಗೂ ಅವಿನಾಭಾವ ಸಂಬಂಧವಿದೆ. ಅದೇನೆಂದರೆ ಸಲ್ಮಾನ್‌ನ ಪೂರ್ವಜರು ಇಂದೋರ್‌ನಲ್ಲೇ ಇದ್ದರು. ಅಷ್ಟೇ ಅಲ್ಲದೆ ಸಲ್ಮಾನ್ ಹುಟ್ಟಿದ್ದೂ ಇಂದೋರ್‌ನಲ್ಲೇ. ಇಲ್ಲಿ ಬಾಲ್ಯವನ್ನು ಕಳೆದಿದ್ದಾರೆ. ಸಲ್ಮಾನ್‌ ಖಾನ್ ತಂದೆ ಸಲೀಂ ಖಾನ್ ಮುಂಬೈಗೆ ಶಿಫ್ಟ್ ಆಗುವ ಮೊದಲು ಇಂಧೋರ್‌ನಲ್ಲೇ ನೆಲೆಸಿದ್ದರು.

ಪ್ರಮುಖ ಆಕರ್ಷಣೆಗಳು

ಪ್ರಮುಖ ಆಕರ್ಷಣೆಗಳು

PC: Wikindia24x7
ಒಂದು ವೇಳೆ ನೀವು ಮಧ್ಯಪ್ರದೇಶ, ಇಂದೋರ್‌ ಪ್ರವಾಸ ಕೈಗೊಳ್ಳಬೇಕೆಂದಿದ್ದರೆ ಅಲ್ಲಿನ ಪ್ರಮುಖ ಆಕರ್ಷಣೆಗಳ ಬಗ್ಗೆ ನಾವು ತಿಳಿಸಿಕೊಡಲಿದ್ದೇವೆ. ಇಂದೋರ್‌ನಲ್ಲಿ ಮುಖ್ಯವಾಗಿ ರಾಜ್‌ವಾಡಾ ಪ್ಯಾಲೇಸ್ , ಲಾಲ್‌ ಬಾಗ್ ಮಹಲ್, ಗಾಂಧಿ ಹಾಲ್, ರೀಜನಲ್ ಪಾರ್ಕ ರೋಡ್, ಬಿಜಾಸನ್ ಮಾತಾ ಮಂದಿರ ಹೀಗೆ ಹಲವಾರು ಪ್ರಮುಖ ತಾಣಗಳಿವೆ.

ರಾಜ್‌ವಾಡ ಪ್ಯಾಲೇಸ್

ರಾಜ್‌ವಾಡ ಪ್ಯಾಲೇಸ್

PC:Anupams123
ರಾಜ್‌ವಾಡ ಪ್ಯಾಲೇಸ್ ಇಂದೋರ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ವಿದೇಶೀಯರು ಇಲ್ಲಿಗೆ ಭೇಟಿ ನೀಡುತ್ತಾ ಇರುತ್ತಾರೆ. ಈ ಅರಮನೆಯು ಹೋಲ್ಕರ್ ರಾಜವಂಶಜರ ನಿವಾಸವಾಗಿತ್ತು. ಸುಮಾರು 200 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಈ ಅರಮನೆಯ ವಾಸ್ತುಕಲೆಯಲ್ಲಿ ಮರಾಠ, ಫ್ರೆಂಚ್ ಹಾಗೂ ಮೊಘಲ್ ವಾಸ್ತುಶಿಲ್ಪವನ್ನು ಕಾಣಬಹುದು.

ಲಾಲ್‌ಬಾಗ್ ಮಹಲ್

ಲಾಲ್‌ಬಾಗ್ ಮಹಲ್

PC: DipankarSn
ಲಾಲ್‌ಬಾಗ್ ಮಹಲ್ ನ ನಿರ್ಮಾಣವನ್ನು ಮಹಾರಾಜ ಶಿವಾಜೀ ರಾವ್ ಹೋಲ್ಕರ್ ಮಾಡಿದ್ದರು. ಈ ಅರಮನೆಯು ಖಾನ್ ನದಿಯ ತೀರದಲ್ಲಿದೆ. ಇದು ಮೂರು ಅಂತಸ್ಥನ್ನು ಹೊಂದಿದೆ. ಹೋಲ್ಕರ್ ರಾಜವಂಶಜರು ಈ ಅರಮನೆಯನ್ನು ಅತಿಥಿಗಳ ಅತಿಥಿ ಸತ್ಕಾರಕ್ಕಾಗಿ ಮಾಡುತ್ತಿದ್ದರು ಎನ್ನುವುದು ತಿಳಿದು ಬಂದಿದೆ. ಈ ಅರಮನೆಯ ಮುಖ್ಯ ದ್ವಾರವನ್ನು ಇಂಗ್ಲೆಂಡ್‌ನ ಬಾರ್ದಿಗಾಮ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಭಾರತ ಹಾಗೂ ಇಟಲಿಯಲ್ಲಿ ದೊರೆಯುವ ಭವ್ಯವಾದ ಕಲಾತ್ಮಕತೆಗಳಿಂದ ಈ ಅರಮನೆಯನ್ನು ಅಲಂಕರಿಸಲಾಗಿದೆ. 28 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಅರಮನೆಯಲ್ಲಿ ಗುಲಾಬಿಯ ಹೂವಿನ ಸುಂದರವ ಹೂ ತೋಟವೂ ಇದೆ.

ಇಂದೋರ್‌ ಮ್ಯೂಸಿಯಂ

ಇಂದೋರ್‌ ಮ್ಯೂಸಿಯಂ

PC:Ganesh Dhamodkar
ಇಂದೋರ್‌ನಲ್ಲಿ ಒಂದು ಸುಂದರ ವಸ್ತುಸಂಗ್ರಹಾಲಯವಿದೆ. ಇಂದೋರ್‌ನ ಇತಿಹಾಸವನ್ನು ಈ ವಸ್ತು ಸಂಗ್ರಹಾಲಯದಲ್ಲಿ ಜಾಗರೂಕತೆಯಿಂದ ಸಂಗ್ರಹಿಸಿಡಲಾಗಿದೆ. ಇದನ್ನು ಕೇಂದ್ರೀಯ ವಸ್ತು ಸಂಗ್ರಹಾಲಯ ಎಂದೂ ಕರೆಯಲಾಗುತ್ತದೆ. ಇಲ್ಲಿ ಕೇವಲ ರಾಜವಂಶಜ ವೈಭವಗಳನ್ನು ಮಾತ್ರವಲ್ಲ ಇತಿಹಾಸಕಕ್ಕೆ ಸಂಬಂಧಿಸಿದ ಶಿಲ್ಪಕಲಾಕೃತಿಗಳನ್ನೂ ಕಾಣಬಹುದು.

ಅನ್ನಪೂರ್ಣ ಮಂದಿರ

ಅನ್ನಪೂರ್ಣ ಮಂದಿರ

PC: Krisbillore

ಅನ್ನಪೂರ್ಣೇಗೆ ಸಮರ್ಪಿತವಾಗಿರುವ ಈ ಭವ್ಯ ಮಂದಿರನ್ನು ಕ್ರಿ.ಶ ೯ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಇದನ್ನು ಇಂದೋರ್‌ನ ಪುರಾತನ ಮಂದಿರ ಎನ್ನಲಾಗುತ್ತದೆ. ಇಲ್ಲಿ ಆರ್ಯರು, ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿಗೆ ಭೇಟಿ ನೀಡಿದಾಗ ಮನಸ್ಸಿಗೆ ಏನೋ ಶಾಂತಿ ಸಿಗುತ್ತದೆ.

ರಾಲಮಂಡಲ ಜೈವಿಕ ವನ್ಯಧಾಮ

ರಾಲಮಂಡಲ ಜೈವಿಕ ವನ್ಯಧಾಮ

PC:Nirmalameena
ಇಂದೋರ್‌ನಲ್ಲಿರುವ ರಾಲಮಂಡಲ ವನ್ಯ ಜೀವಿ ಧಾಮವು ಪ್ರಕೃತಿಯ ಜೀವಂತ ಮನೆ ಎಂದೇ ಹೇಳ ಬಹುದು. ಇಲ್ಲಿ ಅನೇಕ ಪ್ರಜಾತಿಯ ಗಿಡ ಮರಗಳನ್ನು ಕಾಣಬಹುದು. ಜೊತೆಗೆ ಸಾಕಷ್ಟು ಪ್ರಾಣಿಗಳೂ ಇವೆ. ಇಲ್ಲಿ ನೀವು ಜಿಂಕೆ ಸಫಾರಿಯ ಅನುಭವವನ್ನು ಪಡೆಯಬಹುದು.

ಕಾಂಚ್ ಕಾ ಮಂದಿರ

ಕಾಂಚ್ ಕಾ ಮಂದಿರ

PC:Malaiya
ಕಾಂಚ್ ಕಾ ಮಂದಿರದ ಒಳಭಾಗವು ಸಂಪೂರ್ಣವಾಗಿ ಗಾಜಿನ ಫಲಕಗಳಿಂದ ಆವೃತವಾಗಿರುತ್ತದೆ. ಮಹಡಿ, ಕಂಬಗಳು, ಗೋಡೆಗಳು ಮತ್ತು ಛಾವಣಿಗಳನ್ನು ಒಳಗೊಂಡಂತೆ ಎಲ್ಲವೂ ಗಾಜಿನಿಂದ ಮಾಡಲಾಗಿದೆ. ಸೇಠ್ ಹುಕುಮ್ಚಂದ್ ಅವರು ಜೈಪುರದಿಂದ ಹಾಗೂ ಇರಾನ್ನಿಂದ ಕೆಲವರು ಕುಶಲಕರ್ಮಿಗಳನ್ನು ನೇಮಕ ಮಾಡಿ ಈ ದೇವಸ್ಥಾನದ ಕೆಲಸ ಮಾಡಿಸಿದ್ದಾರೆ. ಅಲಂಕಾರಿಕವು ಹಳೆಯ ಮತ್ತು ಮಧ್ಯಕಾಲೀನ ಜೈನ ಶೈಲಿಯನ್ನು ಅನುಸರಿಸುತ್ತದೆ, ಬಹುವರ್ಣದ ಗಾಜಿನ ಮತ್ತು ಕನ್ನಡಿಗಳ ಬಳಕೆಯು ಪ್ರಮುಖ ನಾವೀನ್ಯತೆಯಾಗಿದೆ.

ಗಾಂಧಿ ಹಾಲ್

ಗಾಂಧಿ ಹಾಲ್

PC: Asif0717

ಇಂದೋರ್‌ನಲ್ಲಿರುವ ಗಾಂಧಿ ಹಾಲ್ ಮಧ್ಯಪ್ರದೇಶದಲ್ಲಿರುವ ಒಂದು ಐತಿಹಾಸಿಕ ಸ್ಮಾರಕವಾಗಿದೆ. ಇದು ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದೆ. ಆಗಿನ ಕಾಲದಲ್ಲಿ ಈ ಸ್ಮಾರಕವು ಸಮಯವನ್ನು ತಿಳಿಸುತ್ತಿತ್ತಂತೆ ಹಾಗಾಗಿ ಇದನ್ನು ಘಂಟಾಘರ್ ಎಂದೂ ಕರೆಯುತ್ತಿದ್ದರು. ಈ ಕಟ್ಟಡದ ಗೋಪುರದ ನಾಲ್ಕೂ ಬದಿಗಳಲ್ಲಿ ದೊಡ್ಡ ಗಂಟೆಗಳನ್ನು ಅಳವಡಿಸಲಾಗಿದೆ. ಇದರಿಂದ ದೂರದಿಂದಲೇ ಸಮಯವನ್ನು ತಿಳಿಯಲು ಸಾಧ್ಯವಾಗುತ್ತಿತ್ತು.

ಹರಿಸಿದ್ಧಿ ದೇವಾಲಯ

ಹರಿಸಿದ್ಧಿ ದೇವಾಲಯ

PC: Bernard Gagnon
ಈ ದೇವತೆ ಬಹಳ ಶಕ್ತಿಶಾಲಿ ಎಂದು ಇಲ್ಲಿನ ಸ್ಥಳೀಯರು ನಂಬುತ್ತಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಹರಿಸಿದ್ಧಿ ದೇವಾಲಯವು ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿರುವ ಪ್ರವಾಸಿ ತಾಣವಾಗಿದೆ. ಈ ಸ್ಥಳವು ಪುರಾಣದ ಕಥೆಗಳೊಂದಿಗೆ ನಂಟು ಹೊಂದಿರುವ ಕಾರಣ ಬಹಳ ಪ್ರಮುಖವಾಗಿದೆ. ಶ್ರೀ ಹರಿಸಿದ್ಧಿ ದೇವಿ ದೇವಸ್ಥಾನ ಮಧ್ಯ ಪ್ರದೇಶ ಭಾರತದ ಪುರಾತನ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಇದು ಮಾ ಸತಿಯ 51 ಶಕ್ತಿ ಪೀಠಗಳಲ್ಲಿ 13 ನೇ ಶಕ್ತಿ ಪೀಠವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X