Search
  • Follow NativePlanet
Share
» »ಶಿರಿಡಿ ಸಾಯಿಬಾಬಾ ವಿಗ್ರಹವನ್ನು ಯಾರು ಪ್ರತಿಷ್ಟಾಪಿಸಿದರು ಗೊತ್ತ?

ಶಿರಿಡಿ ಸಾಯಿಬಾಬಾ ವಿಗ್ರಹವನ್ನು ಯಾರು ಪ್ರತಿಷ್ಟಾಪಿಸಿದರು ಗೊತ್ತ?

ಸಾಯಿಬಾಬಾ ಅವರ ಜನ್ಮ ವಿವರಗಳು ಇಂದಿಗೂ ಕೂಡ ಒಂದು ರಹಸ್ಯವಾಗಿಯೇ ಉಳಿದಿದೆ. ಹಾಗಾದರೆ ಆ ರಹಸ್ಯವಾದರೂ ಏನು? ಅವರ ವಿಗ್ರಹವನ್ನು ಯಾರು ಪ್ರತಿಷ್ಟಾಪನೆ ಮಾಡಿದರು ಎಂಬ ಹಲವಾರು ವಿಷಯವನ್ನು ಲೇಖನದ ಮೂಲಕ ತಿಳಿಯೋಣ.

ಸಾಯಿಬಾಬಾ ಹಿಂದೂ ಧರ್ಮದವರಿಗೆ ಅಲ್ಲದೇ ಎಲ್ಲಾ ಧರ್ಮದವರಿಗೂ ಕೂಡ ಆರಾಧ್ಯ ದೈವವಾಗಿದ್ದಾನೆ. ಇತನ ಮಹಿಮೆ ಅಪಾರವಾದುದು. ಹಲವಾರು ಪವಾಡಗಳಿಂದ ಹಾಗು ಸಬ್ ಕಾ ಮಾಲಿಕ್ ಏಕ್ ಎಂಬ ತತ್ವವನ್ನು ಸಾರಿದವರು. ಇದರಿಂದ ಜಾತಿ, ಧರ್ಮ ಎಂಬ ಭೇದಗಳಿಂದ ಹೊರಬರಲು ದೀಪವಾಗಿದ್ದವರು ಸಾಯಿ ಬಾಬಾ.

ಸಾಯಿಬಾಬಾ ಪವಾಡ ಪುರುಷ ಎಂಬುದಕ್ಕಿಂತ ಹೆಚ್ಚಾಗಿ ಆತ ದೇವ ಮಾನವ ಎಂದೇ ಹೇಳಬಹುದು. ದೇಶದಲ್ಲಿಯೇ ಅಲ್ಲದೇ ವಿದೇಶದಲ್ಲಿಯೂ ಕೂಡ ಹಲವಾರು ಭಕ್ತರನ್ನು ಹೊಂದಿರುವ ಪವಾಡ ಪುರುಷನಾಗಿದ್ದಾನೆ. ಶಿರಿಡಿ ಮಹಾರಾಷ್ಟ್ರದಲ್ಲಿನ ಅಹಮದಾಬಾದ್ ನಗರ ಜಿಲ್ಲೆಯ ನಾಸಿಕ್‍ಗೆ ಸುಮಾರು 88 ಕಿ.ಮೀ ದೂರದಲ್ಲಿದೆ. ಒಂದು ಕಾಲದಲ್ಲಿ ಹಳೆಯ ಹಾಗು ಚಿಕ್ಕದಾದ ಗ್ರಾಮವಾಗಿತ್ತು. ಈ ದಿನ ಆ ಸ್ಥಳವು ಕಿಕ್ಕಿರಿದ ಜನಸಂದಣಿಯಿಂದ ಕೂಡಿರುವ ಪವಿತ್ರವಾದ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಸಾಯಿಬಾಬಾ ಅವರ ಜೀವನ ಕಾಲದಲ್ಲಿ 50 ವರ್ಷಕ್ಕಿಂತ ಹೆಚ್ಚಾಗಿ ನಿವಾಸಿಸಿ ಒಂದು ದೊಡ್ಡ ಯಾತ್ರಾ ಸ್ಥಳವಾಗಿ ಪರಿರ್ವತನೆ ಮಾಡಿದರು.

ಸಾಯಿಬಾಬಾ ಅವರ ಜನ್ಮ ವಿವರಗಳು ಇಂದಿಗೂ ಕೂಡ ಒಂದು ರಹಸ್ಯವಾಗಿಯೇ ಉಳಿದಿದೆ. ಹಾಗಾದರೆ ಆ ರಹಸ್ಯವಾದರೂ ಏನು? ಅವರ ವಿಗ್ರಹವನ್ನು ಯಾರು ಪ್ರತಿಷ್ಟಾಪನೆ ಮಾಡಿದರು ಎಂಬ ಹಲವಾರು ವಿಷಯವನ್ನು ಲೇಖನದ ಮೂಲಕ ತಿಳಿಯೋಣ.

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಸಾಯಿ ಬಾಬಾರನ್ನು "ದೇವರ ಮಗ" ಎಂದೇ ಅಭಿವೃದ್ಧಿಗೊಳಿಸಿದ್ದಾರೆ. ಏಕೆಂದರೆ ಬಾಬಾನನ್ನು ಶಿವನ ಮತ್ತೊಂದು ಅವತಾರವೆಂದೇ ನಂಬಲಾಗುತ್ತದೆ. ಯಾವಾಗ "ಸಬ್ ಕಾ ಮಾಲಿಕ್ ಏಕ್" ಎನ್ನತ್ತಾ ತನ್ನ ಜೀವನವೆಲ್ಲಾ ಸರ್ವ ಮಾನವ ಸಮಾನ ಭಾತೃತ್ವಕ್ಕೆ ಹಾಗು ಸರ್ವ ಮತ ಶಾಂತಿಗೆ ಸಂದೇಶವನ್ನು ಭೋದನೆ ಮಾಡಿದ ಪುಣ್ಯ ಪುರುಷ. ಶಿರಿಡಿಯ ಅದ್ಭುತವಾದ ಪುಣ್ಯಕ್ಷೇತ್ರವನ್ನು ದರ್ಶನ ಮಾಡಿಕೊಳ್ಳಲು ದೇಶದಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

wikimedia.org

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಈ ಮಹಾಯೋಗಿಯು 1918 ರಲ್ಲಿ ಸಮಾಧಿಯಾದರೂ, ಅಂದಿನಿಂದ ಆತನ ಸಮಾಧಿಯನ್ನು ನಿತ್ಯವೂ ಲಕ್ಷಾದಿ ಮಂದಿ ಭಕ್ತರು ದರ್ಶನವನ್ನು ಪಡೆಯುತ್ತಾರೆ. ಬಾಲ ಯೋಗಿಯಾಗಿ ಬಾಬಾ ಶಿರಿಡಿಯನ್ನು ಸೇರಿಕೊಂಡ ಪ್ರದೇಶವನ್ನು "ಗುರುಸ್ಥಾನ" ಎಂದು ಕೂಡ ಕರೆಯುತ್ತಾರೆ. ಇಂದು ಅಲ್ಲಿ ಅದ್ಭುತವಾದ ದೇವಾಲಯವನ್ನು ಹಾಗು ಸ್ಮಾರಕವನ್ನು ಸ್ಥಾಪನೆ ಮಾಡಿದ್ದಾರೆ.

wikimedia.org

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಖಂಡೋಬಾ ದೇವಾಲಯ, ಸಾಕೋರಿ ಆಶ್ರಮ, ಶನಿ ದೇವಾಲಯ, ಚಂಗ್ ದೇವ್ ಮಹಾರಾಜ್ ಸಮಾಧಿ, ನರಸಿಂಹ ದೇವಾಲಯ ಶಿರಿಡಿಗೆ ತೆರಳುವ ಭಕ್ತರಿಗೆ ಆರ್ಕಷಿಸುತ್ತದೆ. ಬಾಬಾ ಅವರು ತಮ್ಮ ಸ್ವ ಹಸ್ತದಿಂದ ಬೆಳಸಿ ಪೋಷಿಸಿದ ತೋಟವು ಕೂಡ ಇದೆ. ಬಾಬಾ ನಿತ್ಯವು ಈ ವನವನ್ನು ದರ್ಶನ ಮಾಡಿ ನಿಂಬೆ ಮರದ ಕೆಳಗೆ ವಿಶ್ರಮಿಸುತ್ತಿದ್ದರು.

wikimedia.org

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಸುಂದರವಾದ ಬಾಬಾ ಅವರ ವಿಗ್ರಹವನ್ನು ದರ್ಶನ ಮಾಡಿ ಆರ್ಶಿವಾದ ಪಡೆಯಲು ಭಕ್ತರು ಸಾಧಾರಣವಾಗಿ ಮುಂಜಾನೆಯೇ ಎದ್ದು ತೆರಳುತ್ತಾರೆ. ಗುರುವಾರದಂದು ಭಾರಿ ಸಂಖ್ಯೆಯಲ್ಲಿಯೇ ಜನರು ಸೇರಿರುತ್ತಾರೆ. ಆ ದಿನವು ಪ್ರತ್ಯೇಕವಾದ ಪೂಜೆ, ಬಾಬಾ ವಿಗ್ರಹದ ಪ್ರತ್ಯೇಕವಾದ ದರ್ಶನವಿರುತ್ತದೆ. ಮಂದಿರದಲ್ಲಿ ಬೆಳಗಿನ ಜಾವದ 5 ಗಂಟೆಗೆ ಬಾಬಾಗೆ ಕಾಕಡ ಹಾರತಿಯನ್ನು ಮಾಡುತ್ತಾರೆ. ರಾತ್ರಿಯ ಸಮಯದಲ್ಲಿ ಪ್ರಾರ್ಥನೆಯ ನಂತರ 10 ಗಂಟೆಗೆ ದೇವಾಲಯವನ್ನು ಮುಚ್ಚುತ್ತಾರೆ.

wikimedia.org

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಮಂದಿರದಲ್ಲಿ ಸುಮಾರು 600 ಮಂದಿ ಭಕ್ತರಿಗೆ ಸರಿಹೋಗುವಂತಹ ಬೃಹತ್ ಹಾಲ್ ಕೂಡ ಇದೆ. ಮೊದಲನೇ ಅಂತಸ್ತಿನಲ್ಲಿ ಬಾಬಾರ ಜೀವನದಲ್ಲಿನ ಮುಖ್ಯವಾದ ಘಟ್ಟಗಳನ್ನು ಕಾಣುವ ಚಿತ್ರಗಳು ಇವೆ. ಈ ಪವಿತ್ರವಾದ ಸ್ಥಳದಲ್ಲಿನ ಅಂಗಡಿಗಳಲ್ಲಿಯೂ ಬಾಬಾ ಅವರ ಜೀವನಕ್ಕೆ ಸಂಬಂಧಿಸಿದ ಪುಸ್ತಕಗಳು, ಚಿತ್ರಗಳನ್ನು ಮಾರಾಟ ಮಾಡುತ್ತಾರೆ.

wikimedia.org

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಶಿರಿಡಿ ಎಂಬುದು ಚಿಕ್ಕದಾದ ಪಟ್ಟಣ. ಇದು ಪ್ರಪಂಚ ವ್ಯಾಪಕವಾಗಿ ಇರುವ ಸಾಯಿ ಭಕ್ತರು, ಭಕ್ತಿಭಾವದಿಂದ ಈ ದೇವಾಲಯಕ್ಕೆ ತೆರಳುತ್ತಾರೆ. ಪ್ರಪಂಚದಲ್ಲಿನ ಆಧ್ಯಾತ್ಮಿಕತೆಯಲ್ಲಿ ಈ ಸ್ಥಳಕ್ಕೆ ಅಗ್ರ ಸ್ಥಾನವನ್ನು ನೀಡಿದ್ದಾರೆ. ಸಮೀಪದಲ್ಲಿಯೇ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರಗಳೆಂದರೆ ಅದು ಶನಿ, ಗಣಪತಿ, ಶಿವಾಲಯಗಳು ಕೂಡ ಇವೆ.

wikimedia.org

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಎಷ್ಟೊ ಪವಿತ್ರವಾಗಿ ಭಾವಿಸುವ ಶಿರಿಡಿ ಸಾಯಿನಾಥನನ್ನು ಯಾರು ಪ್ರತಿಷ್ಟಾಪಿಸಿದರು? ಈ ವಿಷಯವನ್ನು ಮುಂದೆ ತಿಳಿಯೋಣ ಬನ್ನಿ. ಗುಜರಾತ್‍ನಲ್ಲಿ 1889 ರಲ್ಲಿ ಜನ್ಮಿಸಿದ ಸ್ವಾಮಿ ಸಾಯಿಚರಣ್ ಮೊಟ್ಟಮೊದಲ ಬಾರಿಗೆ ಸಾಯಿಬಾಬಾ ಅವರನ್ನು ತನ್ನ ತಂದೆಯ ಜೊತೆ ಸೇರಿ ಮೊಟ್ಟ ಮೊದಲ ಬಾರಿಗೆ ಅಂದರೆ 1911 ರಲ್ಲಿ ಬಾಬಾರನ್ನು ಆನಂದ ದರ್ಶನ ಮಾಡಿಕೊಂಡನು.

wikimedia.org

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಕುಷ್ಠರೋಗಿಗಳನ್ನು ನಯ ಮಾಡುತ್ತಿದ್ದ ಬಾಬಾ ಅವರನ್ನು ಕಂಡು ಆಶ್ಚರ್ಯಗೊಂಡ ಆನಂದನು ತನ್ನ ತಂದೆಯವರ ಅನುಮತಿಯ ಮೇರೆಗೆ ಸಾಷ್ಟಾಂಗ ಸಮಸ್ಕಾರವನ್ನು ಮಾಡಿದ. ಆಗ ಬಾಬಾ ಅವರು ಆನಂದನಿಗೆ ದೇವರು ಇದ್ದಾನೆಯೋ, ಇಲ್ಲವೋ ಎಂದು ಎಂದಿಗೂ ಅನುಮಾನ ಬೇಡ ಎಂದರು. ತದನಂತರ 1912 ರಲ್ಲಿ ಗುರು ಪೌರ್ಣಮಿಯಂದು ಬಾಬಾ ಆನಂದನ ಕನಸ್ಸಿನಲ್ಲಿ ಬಂದು "ನೀನೆಂದರೆ ನನಗೆ ಇಷ್ಟ" ಎಂದು ಹೇಳಿದರು.


wikimedia.org

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಅಂದಿನಿಂದ ಆನಂದನು ಆ ಶಿರಿಡಿಯಲ್ಲಿಯೇ ಉಳಿದುಕೊಂಡನು. ಬಾಬಾ ಭಕ್ತರಿಂದ ದಕ್ಷಿಣೆಯನ್ನು ತೆಗೆದುಕೊಳ್ಳುವುದನ್ನು ಆನಂದನು ಹಲವಾರು ಬಾರಿ ಕಂಡಿದ್ದನು. ಬಾಬಾ ಅವರ ಜೀವಿತಾವಧಿಯಲ್ಲಿ ಹಲವಾರು ಅದ್ಭುತಗಳು, ಭೋದನೆಗಳನ್ನು ಸಮೀಪದಲ್ಲಿಯೇ ಇದ್ದು ಪುಸ್ತಕಗಳನ್ನು ರಚನೆ ಮಾಡಬೇಕು ಎಂದು ಅಂದುಕೊಂಡನು.

wikimedia.org

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಬಾಬಾ ಸಮಾಧಿಯಾದ ನಂತರ ಸಾಯಿ ಸಂಸ್ಥಾನದಲ್ಲಿ ಕಾರ್ಯಕಲಾಪಗಳಲ್ಲಿ ಆನಂದನು ಪಾಲ್ಗೊಳ್ಳುತ್ತಿದ್ದನು. 1945 ರಲ್ಲಿ ಶಿರಿಡಿ ಸಮಾಧಿ ಮಂದಿರದಲ್ಲಿ ಬಾಬಾರವನ್ನು ಅಮೃತ ಶಿಲೆಯಲ್ಲಿ ವಿಗ್ರಹವನ್ನು ಪ್ರತಿಷ್ಟಾನೆ ಮಾಡಿದರು. ಆನಂದ್ 1963 ರಲ್ಲಿ ಸನ್ಯಾಸವನ್ನು ಸ್ವೀಕಾರ ಮಾಡಿ ಸ್ವಾಮಿಜೀಯಾಗಿ ಮಾರ್ಪಾಟಾದರು.


wikimedia.org

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಈ ಪವಿತ್ರವಾದ ಕ್ಷೇತ್ರವನ್ನು ವರ್ಷದ ಯಾವುದೇ ಕಾಲದಲ್ಲಿಯಾದರೂ ಸೇರಿಕೊಳ್ಳಬಹುದು. ಬೇಸಿಗೆ ಕಾಲದಲ್ಲಿ ಸ್ವಲ್ಪ ಸುಡು ಬಿಸಿಲು ಇರುವುದರಿಂದ ಚಳಿಗಾಲದಲ್ಲಿ ತೆರಳುವುದು ಉತ್ತಮ ಎಂದೇ ಹೇಳಬಹುದು. ಶಿರಿಡಿಯಲ್ಲಿ ನಡೆಯುವ ಪ್ರಧಾನವಾದ ಹಬ್ಬಗಳೆಂದರೆ ಅವು ಗುರು ಪೌರ್ಣಿಮಾ, ದಸರಾ, ಶ್ರೀರಾಮ ನವಮಿ. ಆ ಸಮಯದಲ್ಲಿಯೂ ಕೂಡ ಸಾಯಿ ಬಾಬಾ ಅವರನ್ನು ದರ್ಶನ ಮಾಡಿಕೊಳ್ಳಬಹುದು.


wikimedia.org

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಆ ಹಬ್ಬದ ಸಮಯದಲ್ಲಿ ಭಕ್ತರು ಹೆಚ್ಚಾಗಿ ಇರುತ್ತಾರೆ. ವಾತಾವರಣವೆಲ್ಲಾ ಸಾಯಿ ಬಾಬಾ ಭಜನೆಗಳಿಂದ ತುಂಬಿರುತ್ತದೆ. ಆ ಸಮಯದಲ್ಲಿ ನಡೆಯುವ ರಥ ಯಾತ್ರೆಗಳಲ್ಲಿಯೂ ಕೂಡ ಪಾಲ್ಗೊಳ್ಳಬಹುದು. ಈ ದಿನಗಳಲ್ಲಿ ಮಾತ್ರವೇ ಶಿರಿಡಿಯಲ್ಲಿ ಸಮಾಧಿ ಮಂದಿರವು ರಾತ್ರಿಯಲ್ಲಿಯೂ ಕೂಡ ತೆರದೇ ಇರುತ್ತದೆ.

Brunda Nagaraj

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಸಾಯಿ ಬಾಬಾರ ಈ ಪವಿತ್ರವಾದ ಕ್ಷೇತ್ರಕ್ಕೆ ರಸ್ತೆ, ರೈಲು, ವಾಯು ಮಾರ್ಗಗಳ ಮೂಲಕ ಸುಲಭವಾಗಿಯೇ ಸೇರಿಕೊಳ್ಳಬಹುದು. ಶಿರಿಡಿಯಿಂದ ಸುಮಾರು 305 ಕಿ.ಮೀ ದೂರದಲ್ಲಿ ಇರುವ ಮುಂಬೈನಲ್ಲಿನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣವು ಅತ್ಯಂತ ಸಮೀಪದ ಅಂತರ್ ಜಾತಿಯ ವಿಮಾನ ನಿಲ್ದಾಣವಾಗಿದೆ.

ನಾಸಿಕ್‍ನಲ್ಲಿನ ಗಾಂಧಿ ನಗರ ವಿಮಾನ ನಿಲ್ದಾಣವು ವಾಯು ಮಂಡಲ ದೂರದಲ್ಲಿದ್ದು, 76 ಕಿ.ಮೀ ದೂರದಲ್ಲಿದೆ. ಔರಂಗಾಬಾದ್‍ನಲ್ಲಿನ ವಿಮಾನ ನಿಲ್ದಾಣದಿಂದ ಶಿರಿಡಿಗೆ ಸುಮಾರು 104 ಕಿ.ಮೀ ದೂರದಲ್ಲಿದೆ.

ಶಿರಿಡಿ ಸಾಯಿಬಾಬಾ

ಶಿರಿಡಿ ಸಾಯಿಬಾಬಾ

ಇತ್ತೀಷೆಗೆ ದೇಶದಲ್ಲಿ ವಿವಿಧ ನಗರಗಳಿಂದ ಶಿರಿಡಿಗೆ ಹಲವಾರು ರೈಲುಗಳ ಸೇವೆಗಳನ್ನು ಸರ್ಕಾರವು ಒದಗಿಸುತ್ತಿದೆ. ಶಿರಿಡಿಯಲ್ಲಿ ಹೊಸದಾಗಿ ನಿರ್ಮಾಣ ಮಾಡಿದ ರೈಲ್ವೆ ನಿಲ್ದಾಣವು ಬಾಬಾ ಮಂದಿರಕ್ಕೆ ಕೇವಲ 10 ಕಿ.ಮೀ ದೂರದಲ್ಲಿಯೇ ಇದೆ. ಇಲ್ಲಿಂದ ಹಲವಾರು ನಗರಗಳಿಂದ ರೈಲುಗಳ ಸಂಚಾರವನ್ನು ಮಾಡುತ್ತಿರುತ್ತವೆ.


Viswaprasad Raju

ತಿರುಮಲದಲ್ಲಿದೆ ಬಂಗಾರದ ಬಾವಿ !ತಿರುಮಲದಲ್ಲಿದೆ ಬಂಗಾರದ ಬಾವಿ !

<strong></strong>ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಚೋರ್ ಬಜಾರ್ ಎಲ್ಲಿದೆ ಗೊತ್ತ?ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಚೋರ್ ಬಜಾರ್ ಎಲ್ಲಿದೆ ಗೊತ್ತ?

<strong></strong>ಬೆಂಗಳೂರಿನ ಸಮೀಪ ಒಂದು ಅದ್ಭುತವಾದ ಗಿರಿಧಾಮ!ಬೆಂಗಳೂರಿನ ಸಮೀಪ ಒಂದು ಅದ್ಭುತವಾದ ಗಿರಿಧಾಮ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X