Search
  • Follow NativePlanet
Share
» »ಏಕಾಂತವಾಗಿ ಸಂಗಾತಿಯೊಂದಿಗೆ ಕಾಲ ಕಳೆಯಬೇಕೆ? ಹಾಗಾದರೆ ಒಮ್ಮೆ ಇಲ್ಲಿಗೆ ಭೇಟಿ ನೀಡಿ...

ಏಕಾಂತವಾಗಿ ಸಂಗಾತಿಯೊಂದಿಗೆ ಕಾಲ ಕಳೆಯಬೇಕೆ? ಹಾಗಾದರೆ ಒಮ್ಮೆ ಇಲ್ಲಿಗೆ ಭೇಟಿ ನೀಡಿ...

By Sowmyabhai

ಈ ತಿಂಗಳ ಹವಾಮಾನ ಬೇಸಿಗೆ. ಮಳೆ, ಚಳಿ ಮೂರು ಕಾಲವು ಒಟ್ಟಿಗೆ ಬಂದಿದೆ. ಸುಡು ಬೇಸಿಗೆಯಿಂದಾಗಿ ನಿಮ್ಮ ಪ್ರವಾಸಕ್ಕೆ ಅಡ್ಡಿಯಾಗಿದ್ದರೆ ಈ ತಿಂಗಳು ಅತ್ಯಂತ ಉತ್ತಮವಾದ ಕಾಲ ಎಂದೇ ಹೇಳಬಹುದು.

ನೀವು ನಿಮ್ಮ ಪ್ರೀತಿ ಪಾತ್ರದವರೊಂದಿಗೆ ಏಕಾಂತವಾಗಿ ಸಮಯ ಕಳೆಯಬೇಕು ಎಂದು ಇಷ್ಟಪಡುವುದು ಸಹಜ. ಬೆಂಗಳೂರಿನಂತಹ ನಗರದಲ್ಲಿ ಜನಸಂದಣಿಯ ಮಧ್ಯೆ ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಆಗುತ್ತಿಲ್ಲ. ಒಂದು ಸುಂದರ ಪ್ರದೇಶಕ್ಕೆ ಹೋಗಿ ಅಮೂಲ್ಯ ಕ್ಷಣವನ್ನು ನಿಮ್ಮ ಸಂಗಾತಿಯೊಂದಿಗೆ ಕಳೆಯಬೇಕು, ಜೀವನದಲ್ಲಿ ಎಂದೂ ಮರೆಯಲಾಗದಂತಹ ಅನುಭುತಿ ಪಡೆಯಬೇಕು ಎಂದು ನಿಮ್ಮ ಮನಸ್ಸು ಹಾತೊರೆಯುತ್ತಿರುತ್ತದೆ.

ಶಾಂತವಾದ ವಾತಾವಣ, ಹಚ್ಚ ಹಸಿರಿನ ಸೌಂದರ್ಯ, ತಂಪಾದ ಗಾಳಿ ಇಂತಹ ಪ್ರಾಕೃತಿಕ ಸೊಬಗಿನ ಮಧ್ಯೆ ನಿಮ್ಮ ಸಂಗಾತಿಯೊಂದಿಗೆ ಇರಲು ಸ್ಥಳಗಳ ಅನ್ವೇಷಣೆ ಮಾಡುತ್ತಿದ್ದರೆ. ಅಂತಹ ಪ್ರದೇಶದ ಬಗ್ಗೆ ಪ್ರಸ್ತುತ ಲೇಖನದಲ್ಲಿ ನಿಮ್ಮ ಏಕಾಂತಕ್ಕೆ ಭಂಗ ಭಾರದಂತಹ ಕೆಲವು ಸ್ಥಳಗಳ ಬಗ್ಗೆ ತಿಳಿಯಿರಿ.

1.ಅಂತರ ಗಂಗೆ ಟ್ರೆಕ್ಕಿಂಗ್ ಮತ್ತು ಗುಹೆ

1.ಅಂತರ ಗಂಗೆ ಟ್ರೆಕ್ಕಿಂಗ್ ಮತ್ತು ಗುಹೆ

PC:solarisgirl

ಅಂತರಗಂಗೆಯು ಒಂದು ಸುಂದರವಾದ ತಾಣವಾಗಿದೆ. ವಿಶೇಷವೆನೆಂದರೆ ಇಲ್ಲಿ ಗುಹಾ ದೇವಾಲಯವಿದ್ದು, ಬೆಂಗಳೂರಿನಿಂದ ಸುಮಾರು 60 ಕಿ,ಮೀ ಅಂತರದಲ್ಲಿದೆ. ಈ ತಾಣವು ಟ್ರೆಕ್ಕಿಂಗ್ ಮಾಡಲು ಅತ್ಯಂತ ಜನಪ್ರಿಯ ಸ್ಥಳವಾಗಿದೆ ಹಾಗೂ ಒಂದು ದಿನದ ಮಟ್ಟಿಗೆ ಟ್ರೆಕ್ಕಿಂಗ್ ಮಾಡಲು ಬಯಸುವವರಿಗೆ ಇದು ಸೂಕ್ತವಾದ ಸ್ಥಳ. ಇಲ್ಲಿನ ಗೂಹ ದೇವಾಲಯವನ್ನು ಅನ್ವೇಷಿಸಲು ಪ್ರವಾಸಿಗರು ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತಾರೆ. ಅಂತರ ಗಂಗೆ ಟ್ರೆಕ್ಕಿಂಗ್ ಸುಮಾರು 4 ಕಿ,ಮೀ ಯಷ್ಟು ಅಂತರದಲ್ಲಿದ್ದು, ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳಿನವರೆಗೆ ಟ್ರೆಕ್ಕಿಂಗ್‍ಗೆ ಭೇಟಿ ನೀಡಲು ಅತ್ಯಂತ ಪ್ರಶ್ಯಸ್ತವಾದ ಸಮಯವಾಗಿದೆ. ಈ ಟ್ರೆಕ್ಕಿಂಗ್ ನಿಮಗೆ ಅತ್ಯಂತ ಆನಂದವನ್ನು ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ.

2.ಹೆಬ್ಬಾಳ ಸರೋವರ

2.ಹೆಬ್ಬಾಳ ಸರೋವರ

PC:कोल्हापुरी

ಹೆಬ್ಬಾಳದಲ್ಲಿ ಸುಂದರವಾದ ಸರೋವರವಿದೆ. ಈ ಸರೋವರಕ್ಕೆ ಹಲವಾರು ನವ ದಂಪತಿಗಳು, ಪ್ರೇಮಿಗಳು ಭೇಟಿ ನೀಡುತ್ತಿರುತ್ತಾರೆ. ಈ ಸರೋವರದಲ್ಲಿ ಹಲವಾರು ಬಗೆಯ ಪಕ್ಷಿಗಳನ್ನು ಕಾಣಬಹುದು. ಈ ಪಕ್ಷಿಗಳ ಇಂಪಾದ ಶಬ್ದ ನಿಮ್ಮನ್ನು ಮತ್ತಷ್ಟು ಆನಂದಮಯವಾಗಿರುವಂತೆ ಮಾಡುತ್ತದೆ. ಇಲ್ಲಿ ಹಚ್ಚ ಹಸಿರಿನ ಸೌಂದರ್ಯ, ಎತ್ತರವಾದ ಮರಗಳು, ಸರೋವರದ ನಿನಾದ, ಸೂರ್ಯನ ಸುಂದರ ಕಿರಣಗಳ ಮಧ್ಯೆ ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಕಾಲ ಕಳೆಯಲು ಉತ್ತಮವಾದ ಸ್ಥಳ ಇದಾಗಿದೆ. ಬೆಂಗಳೂರಿನಿಂದ ಈ ಸರೋವರಕ್ಕೆ ಕೇವಲ 12 ಕಿ,ಮೀ ಯಷ್ಟು ಅಂತರದಲ್ಲಿದೆ.

3.ಹೊಗೆನಕಲ್ ಜಲಪಾತ

3.ಹೊಗೆನಕಲ್ ಜಲಪಾತ

ಹಲವಾರು ಪ್ರವಾಸಿಗರು ತಿಳಿದಂತೆ ಹೊಗೆನಕಲ್ ಇರುವುದು ತಮಿಳುನಾಡಿನಲ್ಲಿ ಎಂದು ತಿಳಿದಿದ್ದಾರೆ ಆದರೆ ಈ ಜಲಪಾತ ಇರುವುದು ಕರ್ನಾಟಕದ ಸರಹದ್ದಿನಲ್ಲಿ. ಹೊಗೆನಕಲ್‍ನ ಇತರ ಪ್ರವಾಸಿ ಆಕರ್ಷಣೀಯ ಸ್ಥಳಗಳೆಂದರೆ ಮೊಸಳೆ ಫಾರಂ, ಪ್ರಾಣಿ ಸಂಗ್ರಹಾಲಯ ಮತ್ತು ಸಸ್ಯ ಅಭಿವೃದ್ದಿ ಕೇಂದ್ರ. ಒಮ್ಮೆ ಈ ಹಾಲಿನ ನೊರೆಯಂತೆ ಬೀಳುವ ಜಲಪಾತವನ್ನು ಒಮ್ಮೆ ಭೇಟಿ ಕೊಡಿ.

4. ಮಾಕಳೀ ದುರ್ಗ

4. ಮಾಕಳೀ ದುರ್ಗ

PC:Sakeeb Sabakka

ಮಾಕಳೀ ದುರ್ಗವು ಅತ್ಯಂತ ಸುಂದರವಾದ ಪ್ರದೇಶ ನೋಡುಗರನ್ನು ತನ್ನ ಪ್ರಕೃತಿ ಸೌಂದರ್ಯದಿಂದಲೇ ಮರಳು ಮಾಡುವ ಅದ್ಭುತ ಸ್ಥಳ ಈ ಮಾಕಳೀ ಟ್ರೆಕ್ಕಿಂಗ್. ಬೆಂಗಳೂರಿನಿಂದ ಮಾಕಳೀದುರ್ಗಕ್ಕೆ 60 ಕಿ,ಮೀ ಯಷ್ಟು ಅಂತರದಲ್ಲಿದೆ. ಇದೊಂದು ಪ್ರಖ್ಯಾತವಾದ ಟ್ರೆಕ್ಕಿಂಗ್ ಯೋಗ್ಯವಾದ ಸ್ಥಳವಾಗಿದ್ದು ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಸುಮಾರು 1.350 ಮೀಟರ್‍ಗಳಷ್ಟು ಎತ್ತರದಲ್ಲಿದೆ ಹಾಗೂ ಈ ಟ್ರೆಕ್ಕಿಂಗ್ ಕೈಗೊಳ್ಳಲು ಅತ್ಯಂತ ಉತ್ತಮವಾದ ಕಾಲವೆಂದರೆ ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗೆ ಅತ್ಯಂತ ಸೂಕ್ತವಾದ ಕಾಲಾವಧಿಯಾಗಿದೆ. ಮಾಕಳೀ ದುರ್ಗ ಟ್ರೆಕ್ಕಿಂಗ್ ಸರಾಸರಿ 7 ಕಿ,ಮೀಯಷ್ಟಿದೆ.

5.ನಂದಿ ಬೆಟ್ಟ

5.ನಂದಿ ಬೆಟ್ಟ

PC:.Ravikantibi67

ಅತ್ಯಂತ ರೋಮಾಂಚನಕಾರಿ ಸ್ಥಳದಲ್ಲಿ ನಂದಿಬೆಟ್ಟ ಆಗ್ರ ಸ್ಥಾನದಲ್ಲಿದೆ. ಇಲ್ಲಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುವ ಸುಂದರ ತಾಣ ಇದಾಗಿದೆ. ನವ ವಿವಾಹಿತರು, ಸ್ನೇಹಿತರು, ಪ್ರೇಮಿಗಳು ಈ ಬೆಟ್ಟಗಳಲ್ಲಿ ಅಡ್ಡಾಡಲು ಈ ನಂದಿ ಬೆಟ್ಟಕ್ಕೆ ಭೇಟಿ ಕೊಡುತ್ತಿರುತ್ತಾರೆ. ಈ ಪ್ರಕೃತಿಯ ಸೌಂದರ್ಯವು ದೇವರು ನೀಡಿರುವ ಬಳುವಳಿ. ನಿಮ್ಮ ಸಂಗಾತಿಯೊಂದಿಗೆ ಇಲ್ಲಿನ ಬೆಟ್ಟಗಳು, ಸುತ್ತಲೂ ಎತ್ತರದ ಮರಗಳು, ತಂಪಾದ ಗಾಳಿ ಸವಿಯುವ ಸದಾವಕಾಶ ನಿಮ್ಮದು ಮಾಡಿಕೊಳ್ಳಿ. ಬೆಂಗಳೂರಿನಿಂದ ಈ ಬೆಟ್ಟಕ್ಕೆ ಕೇವಲ 61 ಕಿ,ಮೀ ನಷ್ಟು ಅಂತರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more