• Follow NativePlanet
Share
» »ಈ ಪ್ರವಾಸಿ ಪ್ರದೇಶಗಳು...ನಿಮಗೆ ಸವಾಲು ಹಾಕುತ್ತದೆ....

ಈ ಪ್ರವಾಸಿ ಪ್ರದೇಶಗಳು...ನಿಮಗೆ ಸವಾಲು ಹಾಕುತ್ತದೆ....

Posted By:

ಪ್ರವಾಸದಲ್ಲಿ ಅಡ್ವೆಂಚರ್ ಟೂರಿಸಂ ಎಂಬ ವಿಧಾನದ ಮೇಲೆ ಪ್ರವಾಸಿಗರು ಹೆಚ್ಚಾಗಿ ಆಸಕ್ತಿ ಹೊಂದಿದ್ದಾರೆ. ರಿವರ್ ರಾಪ್ಟಿಂಗ್, ಕೇವಿಂಗ್, ಡೈವಿಂಗ್, ರಾಕ್ ಕ್ಲೈಬಿಂಗ್, ಟ್ರೆಕ್ಕಿಂಗ್, ವಿಂಡ್ ಸರ್ಫಿಂಗ್ ತದಿತರ ಸಹಾಸಕ್ರೀಡೆಗಳು. ಈ ಕ್ರೀಡೆಗೆ ಪೂರಕವಾಗಿರುವ ಪ್ರದೇಶಗಳಿಗೆ ಇಂದಿಗೂ ಯವಕರು ಅತ್ಯಂತ ಉತ್ಸಹದಿಂದ ಭೇಟಿ ನೀಡುತ್ತಾರೆ. ಅದರಲ್ಲಿಯೂ ರಾಕ್ ಕ್ಮೈಬಿಂಗ್‍ನ ಮೇಲೆ ಯವಕರು ಆಸಕ್ತಿ ತೋರಿಸುತ್ತಾರೆ. ಎತ್ತರವಾದ, ಕಠಿಣ ಶಿಲೆಗಳನ್ನು ಏರುವುದೇ ರಾಕ್ ಕ್ಲೈಬಿಂಗ್. ಈ ಕ್ರೀಡೆಗೆ ಕಠಿಣವಾದ ಶ್ರಮ ಬೇಕೆ ಬೇಕು ಎಂದ ಮಾನಸಿಕ ನಿಪುಣರು ಕೂಡ ಹೇಳುತ್ತಾರೆ. ಇದರಿಂದಾಗಿ ನಮ್ಮ ಕರ್ನಾಟದಲ್ಲಿ ರಾಕ್ ಕ್ಲೈಬಿಂಗ್‍ಗೆ ಅನುಕೂಲಕರವಾದ ಪ್ರದೇಶ ಎಂದೂ ಕೂಡ ಹೇಳುತ್ತಿರುತ್ತಾರೆ.

ಹಾಗಾದರೆ ಬನ್ನಿ ಅಂಥಹ ಸುಂದರವಾದ ಪ್ರದೇಶಗಳ ಬಗ್ಗೆ ಲೇಖನದ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ಪಡೆಯೋಣ.

1.ಯಾಣಾ ರಾಕ್ಸ್

1.ಯಾಣಾ ರಾಕ್ಸ್

Image source

ಉತ್ತರ ಕನ್ನಡ ಜಿಲ್ಲೆಯಲ್ಲಿನ ಯಾಣಾ ಗ್ರಾಮದ ಸಮೀಪದಲ್ಲಿ ಈ ಕಠಿಣವಾದ ಶಿಲೆಗಳು ಇವೆ. ಭೈರವೇಶ್ವರ ಶಿಖರ, ಮೋಹಿನಿ ಶಿಖರ ಎಂಬ 2 ಶಿಲೆಗಳ ಸಮೂಹವೇ ಯಾಣಾ ರಾಕ್ಸ್. ಕರ್ನಾಟಕ ಪರಿಧಿಯಲ್ಲಿನ ಪಶ್ಚಿಮ ಭಾಗದಲ್ಲಿ ಸಹ್ಯಾದ್ರಿ ಪರ್ವತ ಶಿಖರದಲ್ಲಿ ಈ ಯಾಣಾ ರಾಕ್ಸ್ ಇವೆ. ಭೈರವ ಶಿಖರವು 390 ಅಡಿ ಎತ್ತರದಲ್ಲಿದ್ದರೆ, ಮೋಹಿನಿ ಶಿಖರವು 90 ಅಡಿ ಎತ್ತರದಲ್ಲಿದೆ.

ಬೆಂಗಳೂರಿನಿಂದ ಯಾಣಾ ಗ್ರಾಮವು 460 ಕಿ.ಮೀ ಇದ್ದರೆ, ಕಾರ್ವಾರ್‍ನಿಂದ 60 ಕಿ.ಮೀ ಇದೆ. ಇಲ್ಲಿ ಹಿಂದೂಗಳ ಪುಣ್ಯಕ್ಷೇತ್ರವಾದ ಭೈರವೇಶ್ವರ ದೇವಾಲಯ ಕೂಡ ಇದೆ. ಇಲ್ಲಿರುವ ಲಿಂಗದ ಮೇಲೆ ನಿತ್ಯವು ನೀರಿನ ಧಾರೆಯು ಬೀಳುತ್ತಾ ಇರುತ್ತದೆ. ಶಿವರಾತ್ರಿಯಂಥಹ ಪರ್ವದಿನಗಳಲ್ಲಿ ಇಲ್ಲಿ ಪ್ರತ್ಯೇಕವಾದ ಪೂಜೆಗಳನ್ನು ನಡೆಸುತ್ತಾರೆ.

2.ರಾಮನಗರ

2.ರಾಮನಗರ

Image source

ಬೆಂಗಳೂರಿನ ಸಮೀಪದಲ್ಲಿಯೇ ಇರುವ ರಾಮದೇವರ ಬೆಟ್ಟ ರಾಕ್ ಕ್ಲೈಂಬರ್ಸ್‍ಗಳಿಗೆ ಸ್ವರ್ಗದಂತೆ. ಇಲ್ಲಿನ ಶಿಲೆಗಳು ಅತಿ ಕಡಿಮೆ ಎತ್ತರದಲ್ಲಿದ್ದರೂ ಕೂಡ ಜಾರುವ ಗುಣವನ್ನು ಹೊಂದಿದೆ. ಇದರಿಂದಾಗಿ ರಾಕ್ ಕ್ಲೈಂಬರ್ಸ್‍ಗಳಿಗೆ ಈ ಶಿಲೆಗಳು ಎಂದಿಗೂ ಪರೀಕ್ಷೆಯಾಗಿಯೇ ಇದೆ. ನಗರದಿಂದ ಕೇವಲ 55 ಕಿ.ಮೀ ದೂರದಲ್ಲಿ ಪ್ರಯಾಣವನ್ನು ಮಾಡಿದರೆ ಸಾಕು ರಾಮದೇವರ ಬೆಟ್ಟಕ್ಕೆ ಸೇರಿಕೊಳ್ಳಬಹುದು. ಇಲ್ಲಿಗೆ ಟ್ರೆಕ್ಕಿಂಗ್ ಕೂಡ ಮಾಡಬಹುದು.

3.ಹಂಪಿ

3.ಹಂಪಿ

Image source

ಚಾರಿತ್ರಿಕಾತ್ಮವಾಗಿಯೇ ಅಲ್ಲದೇ ಶಿಲ್ಪ ಕಲಾ ಸಂಪತ್ತಿಗೆ ಕೂಡ ಹಂಪಿ ಕನ್ನಡಿ ಎಂಬ ವಿಷಯ ನಿಮಗೆ ತಿಳಿದಿರುವುದೇ. ಒಂದು ಪಕ್ಕದಲ್ಲಿ ಚರಿತ್ರೆಗೆ ಹೆಸರುವಾಸಿಯಾಗಿರುವ ಈ ಪ್ರದೇಶವು ಸಾಹಸಿಗಳಿಗೂ ಕೂಡ ಪರೀಕ್ಷೆಯನ್ನು ಒಡ್ಡುತ್ತದೆ. ಮುಖ್ಯವಾಗಿ ಇಲ್ಲಿರುವ ಶಿಲೆಗಳು ರಾಕ್ ಕ್ಲೈಬಿಂರ್ಸ್‍ಗೆ ಆಹ್ವಾನಿಸುತ್ತದೆ. ಬೆಂಗಳೂರಿನಿಂದ ಸುಮಾರು 350 ಕಿ.ಮೀ ದೂರವನ್ನು ಹೊಂದಿರುವ ಈ ಪ್ರದೇಶವು ಏ ವೀಕ್ ಎಂಡ್ ಆದ ರಾಕ್ ಕ್ಲೈಬಿಂಗ್‍ಗೆ ಅನುಕೂಲಕರವಾಗಿದೆ. ಆದರೆ ಮಳೆಗಾಲದಲ್ಲಿ ಮಾತ್ರವೇ ಸ್ವಲ್ಪ ಕಷ್ಟಷವಾಗಿರುತ್ತದೆ ಎಂದು ಹೇಳುತ್ತಾರೆ ನಿಪುಣರು.

4.ಸ್ಕಂಧಗಿರಿ

4.ಸ್ಕಂಧಗಿರಿ

Image source

ಬೆಂಗಳೂರಿಗೆ ಕೇವಲ 62 ಕಿ.ಮೀ, ಚಿಕ್ಕಬಳ್ಳಾಪುರದಿಂದ ಕೇವಲ 3 ಕಿ.ಮೀ ದೂರದಲ್ಲಿರುವ ಈ ಪ್ರದೇಶವು ರಾಕ್ ಕ್ಲೈಬಿಂಗ್‍ನ ಮೇಲೆ ಇತ್ತೀಚೆಗೆ ಆಸಕ್ತಿ ಹೊಂದುತ್ತಿರುವವರಿಗೆ, ಈ ಕ್ರೀಡೆಯನ್ನು ಕಲಿಯುತ್ತಿರುವವರಿಗೆ ಅನುಕೂಲಕರವಾದ ಪ್ರದೇಶ ಇದಾಗಿದೆ. ಇಲ್ಲಿನ ಹಚ್ಚ ಹಸಿರಿನ ವಾತಾವರಣವು ಟ್ರೆಕ್ಕಿಂಗ್‍ಗೆ ಕೂಡ ಅನುಕೂಲಕರವಾಗಿದೆ.

5.ಶಿವಗಂಗ ದುರ್ಗ

5.ಶಿವಗಂಗ ದುರ್ಗ

Image source

ಬೆಂಗಳೂರಿನಿಂದ 54 ಕಿ.ಮೀ ದೂರದಲ್ಲಿ ತುಮಕೂರಿನಿಂದ 19 ಕಿ.ಮೀ ದೂರದಲ್ಲಿನ ಈ ಬೆಟ್ಟದಲ್ಲಿ 2640 ಅಡಿ ಎತ್ತರದ ಶಿಖರವಿದೆ. ಅಷ್ಟೇ ಅಲ್ಲದೇ ಇಲ್ಲಿರುವ ದೊಡ್ಡ-ದೊಡ್ಡ ಬಂಡೆಗಳು ರಾಕ್ ಕ್ಲೈಂಬರ್ಸ್‍ಗೆ ಬೇಸಿಗೆಯ ಸಮಯದಲ್ಲಿ ಆಹ್ವಾನಿಸುತ್ತದೆ. ಇದೊಂದು ಶೈವ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಟ್ರೆಕ್ಕಿಂಗ್‍ಗೆ ಕೂಡ ಅನುಕೂಲಕರವಾಗಿದ್ದು, 2.3 ಕಿ.ಮೀ ಮಾರ್ಗವಿದೆ. ಕರ್ನಾಟಕದಲ್ಲಿ ಅತ್ಯಂತ ಪ್ರಚಾರವನ್ನು ಹೊಂದಿರುವ ಟ್ರೆಕ್ಕಿಂಗ್, ರಾಕ್ ಕ್ಲೈಬಿಂಗ್ ಪ್ರದೇಶದಲ್ಲಿ ಇದು ಶಿವಗಂಗ ದುರ್ಗ ಮೊದಲ ಸ್ಥಾನದಲ್ಲಿದೆ.

6.ಬಾದಾಮಿ

6.ಬಾದಾಮಿ

Image source

ಹಂಪಿಗೆ ಸುಮಾರು 150 ಕಿ.ಮೀ ದೂರದಲ್ಲಿ ಬಾದಾಮಿ ರಾಕ್ ಕ್ಲೈಂಬರ್ಸ್‍ಗೆ ಸ್ವರ್ಗದಂತೆ. ಬಾಗಲ್ ಕೋಟೆ ಜಿಲ್ಲೆಯಲ್ಲಿ ಈ ಪ್ರದೇಶವಿದೆ. ಈ ಕ್ರೀಡೆಯಲ್ಲಿ ಶಿಕ್ಷಣ ಹೊಂದಬೇಕು ಎಂದುಕೊಳ್ಳವವರಿಗೆ ಸಹಜ ಪರಿಸರ ಪ್ರದೇಶದಲ್ಲಿ ಇಲ್ಲಿ ಅವಕಾಶವನ್ನು ಕಲ್ಪಿಸುತ್ತಾರೆ. ವೀಕ್ ಎಂಡ್‍ಗೆ ತೆರಳಬೇಕು ಎಂದು ಅಂದುಕೊಳ್ಳುವವರು ಒಮ್ಮೆ ಈ ಎಲ್ಲಾ ಸ್ಥಳಗಳಿಗೆಲ್ಲಾ ಒಮ್ಮೆ ಭೇಟಿ ನೀಡಿ ಬನ್ನಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ