» »ಈ ಬೇಸಿಗೆ ರಜೆಗೆ ನಿಮ್ಮ ಕುಟುಂಬದವರೊಡನೆ ಮನಸೋಲಿಸುವ ಮನಾಲಿಗೆ ತೆರಳಿ!

ಈ ಬೇಸಿಗೆ ರಜೆಗೆ ನಿಮ್ಮ ಕುಟುಂಬದವರೊಡನೆ ಮನಸೋಲಿಸುವ ಮನಾಲಿಗೆ ತೆರಳಿ!

Written By: Divya


ಭಾರತದ ಹಿಮಾಚಲ ಪ್ರದೇಶದ ಮಡಿಲಲ್ಲಿ ಇರುವ ರಮಣೀಯ ತಾಣಗಳು ಬೇಸಿಗೆಯ ಬಿಸಿಗೆ ತಂಪಾದ ಅನುಭವವನ್ನು ನೀಡುತ್ತವೆ. ಸದಾಕಾಲ ಮಂಜಿನ ಮಳೆ ಹಾಗೂ ಹಿಮದ ಗಾಳಿಯಿಂದ ಕೂಡಿರುವ ಈ ಪ್ರದೇಶದಲ್ಲಿ ಅದ್ಭುತ ಪ್ರವಾಸ ತಾಣಗಳಿವೆ. ಅದರಲ್ಲೂ ಚಂಡೀಗಡದಿಂದ ಮನಾಲಿಗೆ ಹೋಗುವ ಮಾರ್ಗದಲ್ಲಿ ಮನ ಮೋಹಕ ಪ್ರವಾಸ ಸ್ಥಳಗಳನ್ನು ನೋಡುತ್ತಾ ಸಾಗಬಹುದು. ಬೆಂಗಳೂರಿನಿಂದ ಚಂಡೀಗಡಕ್ಕೆ ಹೋಗಿ ತಲುಪಿದರೆ ಅಲ್ಲಿಂದ ಮನಾಲಿ ಪ್ರವಾಸ ಕೈಗೊಳ್ಳಬಹುದು.

ಹಿಮಾಚಲ ಪ್ರದೇಶದಲ್ಲಿರುವ ರಮ್ಯತಾಣ ಮನಾಲಿ. ಸಮೃದ್ಧ ಹಸಿರು ಕಣಿವೆಗಳು ಹಾಗೂ ಶಿಖರಗಳಿಂದ ಕೂಡಿರುವ ಈ ತಾಣ ಪ್ರವಾಸಿಗರಿಗೆ ಸ್ವರ್ಗದ ಅನುಭವ ನೀಡುತ್ತದೆ. ಇದಕ್ಕೆ ಹತ್ತಿರ ಇರುವ ಇನ್ನೊಂದು ಅದ್ಭುತ ತಾಣ ಕುಲ್ಲು ಕಣಿವೆ. ಸಮುದ್ರ ಮಟ್ಟದಿಂದ 6726 ಅಡಿ ಎತ್ತರದಲ್ಲಿರುವ ಈ ಪ್ರದೇಶದ ಉದ್ದಕ್ಕೂ ಬಿಯಾಸ್ ನದಿ ಹರಿಯುತ್ತದೆ. ಹಾವಿನಂತೆ ಹರಿದು ಬರುವ ಇದರ ದೃಶ್ಯ ಮನಮೋಹಕವಾಗಿರುತ್ತದೆ.

ಮನಾಲಿ ಆಕರ್ಷಕ ಸಾಹಸ ಕ್ರೀಡೆಗಳಿಗೆ ವೇದಿಕೆ ಕಲ್ಪಿಸಿಕೊಡುತ್ತದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಇಲ್ಲಿ ತಯಾತ್ರಿಕರ ಮನ ಸೆಳೆಯುವಂತಹ ಹೈಕಿಂಗ್, ಪ್ಯಾರಾಗ್ಲೈಡಿಂಗ್, ರಾಫ್ಟಿಂಗ್, ಸ್ಕೈಯಿಂಗ್, ಝೋರ್ಬಿಂಗ್ ಹಾಗೂ ಚಾರಣಗಳನ್ನು ಮಾಡಬಹುದು. ಇದಕ್ಕೆ ಹತ್ತಿರದ ನಗರವೆಂದರೆ ಚಂಡೀಗಡ. ಇಲ್ಲಿಂದ ಅನೇಕ ನಗರಗಳಿಗೆ ಸಾರಿಗೆ ಸಂಪರ್ಕದ ಮಾರ್ಗಗಳು ಉತ್ತಮವಾಗಿವೆ. ಹಾಗಾಗಿಯೇ ಹಲವಾರು ಪ್ರವಾಸೋದ್ಯಮದ ಮಾರ್ಗದರ್ಶಕರು ಈ ಮಾರ್ಗವನ್ನೇ ಪರಿಚಯಿಸುತ್ತಾರೆ.

ಸುತ್ತಲೂ ಪ್ರಶಾಂತವಾದ ವಾತಾವರಣ, ತಂಪಾದ ಅನುಭವ ನೀಡುವ ಈ ತಾಣಗಳು ನವ ಜೋಡಿಗಳಿಗೆ ಮರೆಯಲಾಗದ ಅನುಭವ ನೀಡುತ್ತವೆ. ಅಲ್ಲದೆ ಪರಿಸರದ ಮಡಿಲಲ್ಲಿ ಹಾಯಾಗಿ ಕುಳಿತು, ನೀರಾಳ ಅನುಭವ ಬಯಸುವವರಿಗೂ ಇದೊಂದು ಸೂಕ್ತ ತಾಣ. ವರ್ಷ ಪೂರ್ತಿ ಆಕರ್ಷಕವಾದ ಹವಾಮಾನದಿಂದ ಕಂಗೊಳಿಸುವ ಇಲ್ಲಿ ಮಾರ್ಚ್ ನಿಂದ ಜೂನ್ ತಿಂಗಳ ಒಳಗೆ ಬರಬೇಕು. ಉಳಿದ ಕಾಲದಲ್ಲಿ ಅತಿಯಾದ ಮಳೆ ಹಾಗೂ ತಡೆಯಲಾಗದಷ್ಟು ಚಳಿ ಇರುವುದರಿಂದ ನೋಡಬಹುದಾದ ಸ್ಥಳಗಳೆಲ್ಲವನ್ನೂ ನೋಡಲು ಸಾಧ್ಯವಿಲ್ಲ. ಜೊತೆಗೆ ಕೆಲವು ರಸ್ತೆ ಮಾರ್ಗಗಳು ಹಾಗೂ ಪ್ರವಾಸ ಸ್ಥಳಗಳಿಗೆ ನಿಷೇಧ ಹೇರಿರಲಾಗುತ್ತದೆ.

ಹೋಗುವ ಮಾರ್ಗ

ಹೋಗುವ ಮಾರ್ಗ

ವಿಮಾನ ಮಾರ್ಗ: ಮನಾಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಕುಲ್ಲುವಿನ ಭಂಟರ್ ವಿಮಾನ ನಿಲ್ದಾಣ. ಮನಾಲಿಯಿಂದ 50 ಕಿ.ಮೀ. ದೂರದಲ್ಲಿರುವ ಈ ವಿಮಾನ ನಿಲ್ದಾಣ ಪ್ರಮುಖ ನಗರಗಳಾದ ದೆಹಲಿ ಮತ್ತು ಚಂಡೀಗಡದಿಂದ ಹಲವಾರು ವಿಮಾನ ಸಂಪರ್ಕಗಳಿವೆ. ಬಂಟರ್ ನಿಲ್ದಾಣದಿಂದ ಮನಾಲಿಗೆ ಅನುಕೂಲಕ್ಕೆ ತಕ್ಕಂತಹ ಖಾಸಗಿ ವಾಹನಗಳ ವ್ಯವಸ್ಥೆಯನ್ನು ಹೊಂದಬಹುದು.

PC : Sabhay3

ಹೋಗುವ ಮಾರ್ಗ

ಹೋಗುವ ಮಾರ್ಗ

ರೈಲ್ವೆ ಮಾರ್ಗ: ಮನಾಲಿಗೆ ಹತ್ತಿರದ ರೈಲ್ವೆ ನಿಲ್ದಾಣವೆಂದರೆ 350 ಕಿ.ಮೀ. ದೂರದಲ್ಲಿರುವ ಚಂಡೀಗಡ ರೈಲ್ವೆ ನಿಲ್ದಾಣ ಮತ್ತು 360 ಕಿ.ಮೀ. ದೂರದಲ್ಲಿರುವ ಅಂಬಾಲ ರೈಲ್ವೆ ನಿಲ್ದಾಣ. ಒಮ್ಮೆ ಇಲ್ಲಿಗೆ ಬಂದರೆ ಬೇಕಾದ ಬಸ್ ಅಥವಾ ಕಾರ್ ವ್ಯವಸ್ಥೆ ಹೊಂದಬಹುದು.

PC : Sachinsonkusare85

ಹೋಗುವ ಮಾರ್ಗ

ಹೋಗುವ ಮಾರ್ಗ

ರಸ್ತೆ ಮಾರ್ಗ: ಮನಾಲಿಗೆ ಹತ್ತಿರದ ರಸ್ತೆ ಮಾರ್ಗವೆಂದರೆ 325 ಕಿ.ಮೀ. ದೂರದಲ್ಲಿರುವ ಚಂಡೀಗಡ-ಮನಾಲಿ ರಸ್ತೆ ಮಾರ್ಗ.

PC : Gayatri Priyadarshini

ಚಂಡೀಗಡದಿಂದ ಮನಾಲಿಗೆ ಮೂರು ಮಾರ್ಗಗಳಲ್ಲಿ ತಲುಪಬಹುದು.

ಚಂಡೀಗಡದಿಂದ ಮನಾಲಿಗೆ ಮೂರು ಮಾರ್ಗಗಳಲ್ಲಿ ತಲುಪಬಹುದು.

ಮೊದಲನೇ ಮಾರ್ಗ: ಚಂಡೀಗಡ-ರೂಪ್ನಗರ-ಬರ್ಮನಾ-ಮಂಡಿ-ಕುಲ್ಲು-ಮನಾಲಿ. ರಾಷ್ಟ್ರೀಯ ಹೆದ್ದಾರಿ 205 ಮತ್ತು ರಾಷ್ಟ್ರೀಯ ಹೆದ್ದಾರಿ 3ರ ರಸ್ತೆ ಮಾರ್ಗವನ್ನು ಹೊಂದಿದ್ದು, 309 ಕಿ.ಮೀ. ದೂರದಲ್ಲಿದೆ. ಈ ದಾರಿಯಲ್ಲಿ ಬಂದರೆ ಸುಮಾರು 7.30 ತಾಸುಗಳ ಪ್ರಯಾಣ ಬೆಳೆಸಬೇಕು.

PC : Gayatri Priyadarshini

ಚಂಡೀಗಡದಿಂದ ಮನಾಲಿಗೆ ಮೂರು ಮಾರ್ಗಗಳಲ್ಲಿ ತಲುಪಬಹುದು.

ಚಂಡೀಗಡದಿಂದ ಮನಾಲಿಗೆ ಮೂರು ಮಾರ್ಗಗಳಲ್ಲಿ ತಲುಪಬಹುದು.

ಎರಡನೇ ಮಾರ್ಗ: ಚಂಡೀಗಡ-ಮಂಗಲ-ಬಾರ್ಸರ್-ಮಂಡಿ-ಭಂಟರ್-ಮನಾಲಿ. ರಾಷ್ಟ್ರೀಯ ಹೆದ್ದಾರಿ 3ರ ಸಂಪರ್ಕವನ್ನು ಹೊಂದಿರುವ ಈ ಮಾರ್ಗ 370 ಕಿ.ಮೀ. ದೂರ ಚಲಿಸಬೇಕು. ಈ ಮಾರ್ಗದಲ್ಲಿ 8.45 ಗಂಟೆಗಳ ಪ್ರಯಾಣ ಮಾಡಬೇಕು.

ಮೂರನೇ ಮಾರ್ಗ: ಚಂಡೀಗಡ-ಪಂಚಕುಲ-ಬತಲ್-ಮಂಡಿ-ಕುಲ್ಲು-ಮನಾಲಿ. ರಾಷ್ಟ್ರೀಯ ಹೆದ್ದಾರಿ 154 ಮತ್ತು ರಾಷ್ಟ್ರೀಯ ಹೆದ್ದಾರಿ 3ರ ಸಂಪರ್ಕದಲ್ಲಿ ಬರುವ ಈ ಮಾರ್ಗ 306 ಕಿ.ಮೀ. ದೂರವನ್ನು ಒಳಗೊಂಡಿದೆ. ಈ ಮಾರ್ಗದಲ್ಲಿ 9 ತಾಸುಗಳ ಪ್ರಯಾಣ ಮಾಡಬೇಕು.

PC : Gayatri Priyadarshini

ಚಂಡೀಗಡದಿಂದ ಮನಾಲಿಗೆ ತೆರಳುವ ಮಾಹಿತಿಗಳು

ಚಂಡೀಗಡದಿಂದ ಮನಾಲಿಗೆ ತೆರಳುವ ಮಾಹಿತಿಗಳು

ಮಾರ್ಗ 1 ಮತ್ತು 3 ಬಹಳ ಹತ್ತಿರದ ರಸ್ತೆ ಮಾರ್ಗಗಳು. ಮೂರನೇ ರಸ್ತೆ ಮಾರ್ಗದಲ್ಲಿ ಸಂಚರಿಸಿದರೆ ಸುಮಾರು 1.5 ಗಂಟೆಗಳ ಕಾಲ ಹೆಚ್ಚು ಪ್ರಯಾಣ ಮಾಡಬೇಕಾಗುತ್ತದೆ. ಮೊದಲನೇ ಮಾರ್ಗದ ಪ್ರಯಾಣವನ್ನು ಆಯ್ಕೆ ಮಾಡಿಕೊಂಡರೆ ಅನೇಕ ಸುಂದರ ತಾಣಗಳನ್ನು ವೀಕ್ಷಿಸುತ್ತಾ ಸಾಗಬಹುದು. ಅವು ಯಾವವು ಎನ್ನುವ ಮಾಹಿತಿ ಇಲ್ಲಿದೆ ನೋಡಿ...

PC : Gayatri Priyadarshini

ಚಂಡೀಗಡದಿಂದ ಮನಾಲಿಗೆ ತೆರಳುವ ಮಾಹಿತಿಗಳು

ಚಂಡೀಗಡದಿಂದ ಮನಾಲಿಗೆ ತೆರಳುವ ಮಾಹಿತಿಗಳು

ಚಂಡೀಗಡದಿಂದ ಮುಂಜಾನೆ ಬೇಗ ಹೊರಟರೆ ವಾಹನ ದಟ್ಟಣೆಯಿಂದ ಪಾರಾಗಬಹುದು. ಈ ಮಾರ್ಗದಲ್ಲಿ ಅನೇಕ ಗುರುದ್ವಾರಗಳನ್ನು ನೋಡುತ್ತಾ ಸಾಗಬಹುದು. ರೂಪನಗರ ಜಿಲ್ಲೆಯಲ್ಲಿರುವ ಸುಂದರ ಭಾಕ್ರಾ ಅಣೆಕಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಅನೇಕ ಭದ್ರತಾ ಪರಿಶೀಲನೆ ಮಾಡಲಾಗುತ್ತದೆ. ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುವುದು. ಈ ಜಿಲ್ಲೆಯಲ್ಲಿಯೇ ಇರುವ ವಿರಾಸತ್-ಎ-ಖಲ್ಸಾ ಎನ್ನುವ ಸುಂದರ ವಸ್ತು ಸಂಗ್ರಹಾಲಯವಿದೆ. ಭಾರತದ ಅನನ್ಯ ವಸ್ತು ಸಂಗ್ರಹಾಲಯ ಎನ್ನುವ ಪ್ರಸಿದ್ಧಿ ಪಡೆದಿದೆ.

PC : vinodbahal

ಚಂಡೀಗಡದಿಂದ ಮನಾಲಿಗೆ ಹೋಗುವಾಗ ಸಿಗುವ ಆಕರ್ಷಣೆಗಳು

ಚಂಡೀಗಡದಿಂದ ಮನಾಲಿಗೆ ಹೋಗುವಾಗ ಸಿಗುವ ಆಕರ್ಷಣೆಗಳು

ಇಲ್ಲಿಗೆ ಬಂದರೆ ಸಿಖ್ ಮತ್ತು ಖಲ್ಸಾ ಪಂಥದ ಸ್ಥಾಪನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಹೀಗೆ ಮುಂದೆ ಸಾಗಿದರೆ ಹಿಮಾಚಲ ಪರ್ವತ ಶ್ರೇಣಿಯ ಕೆಳಭಾಗದಲ್ಲಿ ಆನಂದಪುರ ಸಾಹಿಬ್ ಎನ್ನುವ ಸುಂದರ ಗುರುದ್ವಾರವಿದೆ. ನದಿಯ ದಡದಲ್ಲಿ ಕಂಗೊಳಿಸುವ ಈ ತಾಣ ಸುಂದರ ಗಿರಿಧಾಮಗಳಿಂದ ಕೂಡಿದೆ. ಇಲ್ಲಿ ಹೊಲ್ಲಾ ಮೊಹೊಲ್ಲಾ ಎನ್ನುವ ವಾರ್ಷಿಕ ಮಹೋತ್ಸವವು ಬಹಳ ಅದ್ದೂರಿಯಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಮೂರು ದಿನಗಳ ಕಾಲ ನಡೆಯುತ್ತದೆ.

PC : Koshy Koshy

ಚಂಡೀಗಡದಿಂದ ಮನಾಲಿಗೆ ಹೋಗುವಾಗ ಸಿಗುವ ಆಕರ್ಷಣೆಗಳು

ಚಂಡೀಗಡದಿಂದ ಮನಾಲಿಗೆ ಹೋಗುವಾಗ ಸಿಗುವ ಆಕರ್ಷಣೆಗಳು

ಇದೇ ಮಾರ್ಗದಲ್ಲಿ ಮಂಡಿ ಜಿಲ್ಲೆ ಆವೃತ್ತಿಯಲ್ಲಿರುವ ರೇವಾಲಸರ್ ಕೆರೆಯು ಕೈ ಬೀಸಿ ಕರೆಯುತ್ತದೆ. ಇದನ್ನು ಟಾಸೊ ಪೇಮಾ ಎಂದು ಸಹ ಕರೆಯುತ್ತಾರೆ. ಈ ಪವಿತ್ರ ಕ್ಷೇತ್ರದಲ್ಲಿ ಹಿಂದೂ, ಬೌದ್ಧ ಹಾಗೂ ಸಿಖ್ಖರ ದೇಗುಲ ಇರುವುದು ವಿಶೇಷ. ಇಲ್ಲಿ ಶಿವ ಹಾಗೂ ಕೃಷ್ಣನ ದೇಗುಲ ಹಾಗೂ ಬೌದ್ಧ ಮಠಟಗಳು ಇವೆ. ಮಹಾಭಾರತದ ಸಮಯದಲ್ಲಿ ಅರಗಿನ ಅರಮನೆಯನ್ನು ಸುಟ್ಟ ಕಥೆಯ ಇತಿಹಾಸವನ್ನು ಈ ಸ್ಥಳ ಒಳಗೊಂಡಿದೆ ಎನ್ನಲಾಗುತ್ತದೆ.

PC : Mystic nishant99

ಚಂಡೀಗಡದಿಂದ ಮನಾಲಿಗೆ ಹೋಗುವಾಗ ಸಿಗುವ ಆಕರ್ಷಣೆಗಳು

ಚಂಡೀಗಡದಿಂದ ಮನಾಲಿಗೆ ಹೋಗುವಾಗ ಸಿಗುವ ಆಕರ್ಷಣೆಗಳು

ಇಲ್ಲಿಯ ಇನ್ನೊಂದು ಆಕರ್ಷಕ ತಾಣ ಪರಶರ ಕೆರೆ. ಇದು ಪರಶುರಮನು ಧ್ಯಾನ ಮಾಡಿದ ಸ್ಥಳವೆಂದು ಗುರುತಿಸಲಾಗಿದೆ. ಇಲ್ಲಿ ಪರಶುರಾಮನಿಗೆ ಮೀಸಲಾಗಿಯೇ ಒಂದು ದೇಗುಲ ಇರುವುದನ್ನು ಕಾಣಬಹುದು. ಇದರ ಸುತ್ತಲೂ ಅಂಡಾಕಾರದಲ್ಲಿ ಸುತ್ತುವರಿದ ಕೆರೆಯಿದೆ. ಹಾಗಾಗಿ ಇದು ಒಂದು ತೇಲುವ ದ್ವೀಪದಂತೆ ಕಾಣುತ್ತದೆ. ಹೀಗೆ ಮುಂದೆ ಸಾಗಿದರೆ ಬಿಯಾಸ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಪಂಡೋಹ್ ಅಣೆಕಟ್ಟು ಸ್ವಾಗತಿಸುತ್ತದೆ. ಸುತ್ತಲೂ ಸುರಿಯುವ ನೀರು ಹಾಗೂ ದಟ್ಟವಾದ ಹಸಿರು ವನ ಈ ತಾಣದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

PC : Rohit21122012

ಚಂಡೀಗಡದಿಂದ ಮನಾಲಿಗೆ ಹೋಗುವಾಗ ಸಿಗುವ ಆಕರ್ಷಣೆಗಳು

ಚಂಡೀಗಡದಿಂದ ಮನಾಲಿಗೆ ಹೋಗುವಾಗ ಸಿಗುವ ಆಕರ್ಷಣೆಗಳು

ಮಂಡಿಯ ಅದ್ಭುತ ಆಕರ್ಷಣೆಯಲ್ಲಿ ಒಂದಾದ ಶಿಕಾರಿ ದೇವಿ ದೇವಾಲಯವೂ ಈ ಮಾರ್ಗದಲ್ಲಿಯೇ ಇದೆ. ಸಮುದ್ರ ಮಟ್ಟದಿಂದ 3332 ಮೀ. ಎತ್ತರದಲ್ಲಿರುವ ಈ ತಾಣ ಮಂಡಿಯಿಂದ 15 ಕಿ.ಮೀ. ದೂರದಲ್ಲಿದೆ. ಗಿರಿಧಾಮದಲ್ಲಿರುವ ಪ್ರದೇಶದಲ್ಲಿರುವ ಈ ತಾಣದ ಸುತ್ತಲೂ ಮನೋಹರವಾದ ದೃಶ್ಯವನ್ನು ಸೆರೆಹಿಡಿಯಬಹುದು. ಇಲ್ಲಿ ಸೂರ್ಯಾಸ್ತ ಹಾಗೂ ಸೂರ್ಯೋದಯದ ದೃಶ್ಯ ನೋಡುವಂತಿರುತ್ತದೆ.

PC : Prasanthpj

ಕಸೋಲ್ ಎಂಬ ಸುಂದರ ಹಳ್ಳಿ

ಕಸೋಲ್ ಎಂಬ ಸುಂದರ ಹಳ್ಳಿ

ಕಸೋಲ್ ಎನ್ನುವ ಸುಂದರ ತಾಣ ಒಂದು ಪುಟ್ಟ ಹಳ್ಳಿ. ಇಲ್ಲಿರುವ ಶಾಪಿಂಗ್ ಸ್ಟ್ರೀಟ್ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಪಾರ್ವತಿ ಕಣಿವೆಯಲ್ಲಿರುವ ಈ ತಾಣದಲ್ಲಿ ಬಣ್ಣಬಣ್ಣದ ಹೂಗಳನ್ನು ನೋಡಬಹುದು. ಹಸಿರು ಗಿಡಗಳ ನಡುವೆ ಕಂಗೊಳಿಸುವ ಈ ಹೂಗಳು ಇಲ್ಲಿಯ ವಿಶೇಷ ಆಕರ್ಷಣೆ. ಕಸೋಲ್ ನಿಂದ 15 ನಿಮಿಷದ ದಾರಿಯಲ್ಲಿ ಮನಿಕರನ್ ಗುರುದ್ವಾರವಿದೆ. ಇದು ಹಿಂದೂ ಹಾಗೂ ಸಿಖ್ಖರ ಪವಿತ್ರ ತಾಣ.

PC : BenSalo

ಕಸೋಲ್ ಎಂಬ ಸುಂದರ ಹಳ್ಳಿ

ಕಸೋಲ್ ಎಂಬ ಸುಂದರ ಹಳ್ಳಿ

ಪವರ್ತಸಾಲುಗಳಿಗೆ ಅಂಟಿಕೊಂಡಿರುವಂತೆ ತೋರುವ ಈ ತಾಣದಲ್ಲಿ ಬಿಸಿನೀರಿನ ಬುಗ್ಗೆ ಇರುವುದನ್ನು ಕಾಣಬಹುದು. ಇದು ದೇಶದಾದ್ಯಂತ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಹತ್ತಿ ಚೀಲದಲ್ಲಿ ಇರುವ ಅಕ್ಕಿಯನ್ನು ಈ ಬಿಸಿನೀರಿನಲ್ಲಿ ಸ್ವಲ್ಪ ಸಮಯ ಅದ್ದಿದರೆ ಸಾಕು, ಅಕ್ಕಿ ಅನ್ನವಾಗಿ ಪರಿವರ್ತನೆ ಗೊಳ್ಳುತ್ತದೆ. ಅಷ್ಟು ಬಿಸಿಯಾದ ನೀರಿನ ಬುಗ್ಗೆ ಇದು ಎಂದು ಹೇಳಲಾಗುತ್ತದೆ.

PC : Devendra Makkar

ಕಸೋಲ್ ಎಂಬ ಸುಂದರ ಹಳ್ಳಿ

ಕಸೋಲ್ ಎಂಬ ಸುಂದರ ಹಳ್ಳಿ

ಈ ಅಪರೂಪದ ತಾಣವನ್ನು ತಪ್ಪದೆ ನೋಡಬೇಕು. ಒಮ್ಮೆ ಕುಲ್ಲುವಿಗೆ ತಲುಪಿದರೆ ಸಾಕು. ಬೇಕಾದಷ್ಟು ಸಾಹಸಕ್ರೀಡೆ ಹಾಗೂ ಆಧುನಿಕ ವಿಶೇಷ ಆಟಗಳನ್ನು ಆಡಬಹುದು.

PC : Harshit38

ಮನಾಲಿಯ ಸುಂದರ ತಾಣಗಳು

ಮನಾಲಿಯ ಸುಂದರ ತಾಣಗಳು

ರೂಹತಂಗ್ ಪಾಸ್ :
ಬೇಸಿಗೆಯಲ್ಲಿ ಅನೇಕ ಪ್ರವಾಸಿಗರನ್ನು ಆಕರ್ಷಿಸುವ ಈ ತಾಣ ಸಮುದ್ರ ಮಟ್ಟದಿಂದ 4111 ಮೀ. ಎತ್ತರದಲ್ಲಿದೆ. ಅದ್ಭುತ ರಸ್ತೆ ಮಾರ್ಗ, ಸುಂದರ ಪರಿಸರವನ್ನು ಹೊಂದಿರುವ ಈ ತಾಣದಲ್ಲಿ ಚಾರಣ, ಬಂಡೆ ಏರುವುದು, ಸೈಕ್ಲಿಂಗ್, ಬೈಕ್ ಸವಾರಿ ಸೇರಿದಂತೆ ಅನೇಕ ಸಾಹಸ ಕ್ರೀಡೆಗಳನ್ನು ಕೈಗೊಳ್ಳಬಹುದು.

PC : Balaji B

ಮನಾಲಿಯ ಸುಂದರ ತಾಣಗಳು

ಮನಾಲಿಯ ಸುಂದರ ತಾಣಗಳು

ಮಾಲ್ ರಸ್ತೆ:
ವಿಶೇಷ ಪದಕಗಳು ಹಾಗೂ ಸ್ಮಾರಕ ವಸ್ತುಗಳನ್ನು ಪಡೆದುಕೊಳ್ಳಲು ಇದೊಂದು ಸೂಕ್ತ ಸ್ಥಳ. ಇಲ್ಲಿ ವಿವಿಧ ಬಗೆಯ ಅಂಗಡಿಗಳು ಹಾಗೂ ರೆಸ್ಟೋರೆಂಟ್ಗಳಿವೆ. ಈ ಸ್ಥಳದಲ್ಲಿ ಯಾವಾಗಲೂ ವಿವಿಧ ಚಟುವಟಿಕೆಗಳು ಝೇಂಕರಿಸುತ್ತಲೇ ಇರುತ್ತವೆ. ಇಲ್ಲಿಗೆ ಬಂದಾಗ ವಿಶೇಷ ತಿಂಡಿಯಾದ ಮೊಮೊಸ್ ಅನ್ನು ತಿಂದು, ಚಹಾವನ್ನು ಸವಿಯಲೇಬೇಕು.

PC : Biswarup Ganguly

ಮನಾಲಿಯ ಸುಂದರ ತಾಣಗಳು

ಮನಾಲಿಯ ಸುಂದರ ತಾಣಗಳು

ಹಿಡಿಂಬೆ ದೇಗುಲ:
ಇದು ಪಾಂಡವರಲ್ಲೊಬ್ಬನಾದ ಭೀಮನ ಹೆಂಡತಿ ಹಿಡಿಂಬೆಯ ದೇಗುಲ. ಇಲ್ಲಿ ಭೀಮನ ಮಗ ಘಟೋತ್ಕಚನ ದೇಗುಲ ಇರುವುದನ್ನು ಕಾಣಬಹುದು. ವಿಶೇಷ ವಿನ್ಯಾಸ ಹಾಗೂ ವಾಸ್ತುಶಿಲ್ಪವನ್ನು ಒಳಗೊಂಡಿದೆ. ಪ್ರತಿವರ್ಷ ಮೇ ತಿಂಗಳಲ್ಲಿ 3 ದಿನದ ಹಿಡಿಂಬೆ ಉತ್ಸವವನ್ನು ಮಾಡಲಾಗುತ್ತದೆ.

PC : Ashsish3724

ಮನಾಲಿಯ ಸುಂದರ ತಾಣಗಳು

ಮನಾಲಿಯ ಸುಂದರ ತಾಣಗಳು

ವಸಿಷ್ಠ ದೇಗುಲ:
ವಸಿಷ್ಠ ಮುನಿಗಳಿಗೆ ಮೀಸಲಾದ ಈ ದೇಗುಲ ಪವಿತ್ರ ಪುಣ್ಯ ಕ್ಷೇತ್ರ. ಇಲ್ಲಿ ಬಿಸಿ ನೀರಿನ ಬುಗ್ಗೆ ಇರುವುದನ್ನು ಕಾಣಬಹುದು. ಇದು ಔಷಧೀಯ ಗುಣವನ್ನು ಹೊಂದಿದೆ. ಈ ನೀರಿನಲ್ಲಿ ಸ್ನಾನ ಮಾಡಿದರೆ ಅನೇಕ ಚರ್ಮರೋಗಗಳು ಗುಣವಾಗುವವು ಎನ್ನುವ ಪ್ರತೀತಿ ಇದೆ. ಪುರುಷರಿಗೆ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಸ್ನಾನ ಕೊಳವನ್ನು ನಿರ್ಮಿಸಲಾಗಿದೆ.

PC : Ashish3724

ಮನಾಲಿಯ ಸುಂದರ ತಾಣಗಳು

ಮನಾಲಿಯ ಸುಂದರ ತಾಣಗಳು

ಸೋಲಾಂಗ್ ಕಣಿವೆ, ಪಾರ್ವತಿ ಕಣಿವೆ ಹಾಗೂ ಬಿಯಾಸ್ ಕುಂಡ್ ನೋಡಲೇ ಬೇಕಾದ ಇಲ್ಲಿಯ ಸುಂದರ ತಾಣಗಳು. ಈ ಪ್ರದೇಶದಲ್ಲಿರುವ ರಮಣೀಯ ದೃಶ್ಯ, ಹಿಮದಿಂದ ಆವೃತ್ತವಾದ ಪರ್ವತಗಳು, ಹಿಮನದಿಗಳು, ಸುಂದರ ಕಣಿವೆಗಳು ಹಾಗೂ ಸಾಹಸ ಕ್ರೀಡೆಗಳು ಮರೆಯಲಾಗದ ಅನುಭವ ನೀಡುತ್ತವೆ.

PC : Jigme Bodh