» »ರಕ್ತದ ಮಳೆ ಸುರಿಯುವುದಾದರೂ ಎಲ್ಲಿ?

ರಕ್ತದ ಮಳೆ ಸುರಿಯುವುದಾದರೂ ಎಲ್ಲಿ?

Written By:

ಕೇರಳ ರಾಜ್ಯ ಪ್ರವಾಸ ತಾಣದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಸುಂದರವಾದ ಪ್ರದೇಶ, ಕುಬ್ಬರಿ ತೋಟ, ಅಹ್ಲಾದಕರವಾದ ಬೀಚ್‍ಗಳು, ಅನೇಕ ದೇವಾಲಯಗಳು, ಆರ್ಯುವೇದ ವೈದ್ಯ ಸುಂಗಧಗಳು, ಸಮುದ್ರ ಪ್ರದೇಶಗಳು, ನಿರ್ಮಲ ಸರೋವರಗಳು ಮೊದಲಾದ ಆಕರ್ಷಣೆಗಳುನ್ನು ಕಾಣಬಹುದಾಗಿದೆ. ಕೇರಳ ರಾಜ್ಯ ಪ್ರವಾಸವು ಪ್ರಪಂಚ ವ್ಯಾಪಕವಾಗಿ ಗುರುತಿಸಿರುವ ಒಂದು ಆಹ್ಲಾದಕರವಾದ ತಾಣ.

ನ್ಯಾಷನಲ್ ಜಿಯಾಗ್ರಾಫಿಕ್ ಆಂಡ್ ಟ್ರಾವೆಲ್ ಪ್ಲಸ್ ಲಿಷರ್ ಸಂಸ್ಥೆಯ ಮ್ಯಾಗಜಿನ್, ಕೇರಳ ರಾಷ್ಟ್ರವನ್ನು ಪ್ರಪಂಚದಲ್ಲಿಯೇ ಸ್ವರ್ಗಗಳಲ್ಲಿ ಒಂದು ಎಂದೂ ಹಾಗೂ ಜೀವನದಲ್ಲಿ ನೋಡಲೇಬೇಕಾದ 50 ಪ್ರವಾಸಿ ಪ್ರದೇಶಗಳ ಬಗ್ಗೆ ವೈಭವಿಕರಿಸಿದ್ದಾರೆ. ಇವೆಲ್ಲಾ ಕೇರಳದ ಪ್ರವಾಸದ ಬಗ್ಗೆ ಯಾದರೆ. ಕೇರಳದಲ್ಲೂ ಕೂಡ ಹಲವಾರು ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಅದೆನೆಂದರೆ...........

ಸಾಮಾನ್ಯವಾಗಿ ಮಳೆ ಎಂದರೆ ಎಲ್ಲಾರಿಗೂ ಪ್ರಿಯ. ಮಳೆ ಬೀಳುವಾಗ ಕೆಲವೊಮ್ಮೆ ಐಸ್ ಗಡ್ಡೆಗಳ ತುಂಡುಗಳು ಬೀಳುವುದು ಸಹಜ. ಆದರೆ ನಾನು ಹೇಳಲು ಬಯಸುತ್ತಿರುವ ಕೇರಳದ ಗ್ರಾಮ ಇಡುಕ್ಕಿಯ ಸ್ಥಳದಲ್ಲಿ ಮಾತ್ರ ಕೆಂಪು ಮಳೆಯಾಗುತ್ತದೆ. ಏನೂ ರಕ್ತದ ಮಳೆಯೇ ಎಂದು ಕೊಳ್ಳುತ್ತಿದ್ದೀರಾ? ಹಾಗಾದರೆ ನೀವು ಈ ಲೇಖನ ಓದಲೇಬೇಕು.

ಕೆಂಪು ಮಳೆ

ಕೆಂಪು ಮಳೆ

ಈ ಕೆಂಪು ಮಳೆ ಸುರಿದ್ದಿದ್ದು ಬೇರೆಲ್ಲೂ ಅಲ್ಲ. ಇಂದಿಗೂ ಸೌಂದರ್ಯಯುತವಾದ ರಾಜ್ಯ ಎಂದು ಹೆಸರುವಾಸಿಯಾಗಿರುವ ಕೇರಳದಲ್ಲಿ. ಕೆಂಪು ಮಳೆ 2001ರ ಜುಲೈ 25 ನೇ ತಾರೀಖಿನಿಂದ ಸೆಪ್ಟೆಂಬರ್ 23 ನೇ ತಾರೀಖಿನವರೆಗೂ ಸುರಿಯಿತು.

pc:youtube

1896ನಲ್ಲಿಯೂ ಸುರಿದಿತ್ತು

1896ನಲ್ಲಿಯೂ ಸುರಿದಿತ್ತು

ಆದರೆ ಈ ಮಳೆ ಸುರಿದ್ದಿದ್ದು ಮೊದಲ ಬಾರಿ ಅಲ್ಲ. ಬದಲಾಗಿ 1896ರಿಂದ ಈ ಕೆಂಪು ಮಳೆ ಆಗಾಗ ಸುರಿಯುತ್ತಿರುತ್ತದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ.

pc:youtube

ಹಿಂದೂ ಧರ್ಮದ ಪ್ರಕಾರ

ಹಿಂದೂ ಧರ್ಮದ ಪ್ರಕಾರ

ಹಿಂದೂ ಧರ್ಮದ ಪ್ರಕಾರ ರಕ್ತದ ಮಳೆ ಸುರಿಯುವುದು ಯಾವುದೋ ಒಂದು ವಿನಾಶ ನಡೆಯುತ್ತದೆ ಎಂದೇ ಅದರ ಅರ್ಥವಾಗಿದೆ ಎಂದು ಹೇಳುತ್ತಾರೆ.

pc:youtube

ಪ್ರಜೆಗಳು

ಪ್ರಜೆಗಳು

ಹಿಂದೂ ಧರ್ಮದ ಪ್ರಕಾರದ ಭಯಾನಕವಾದ ಹೇಳಿಕೆಗಳನ್ನು ಆಲಿಸಿದ ಜನರು ಹೆದರಿದರು. ಕೇರಳದ ಇಡುಕ್ಕಿ ಪ್ರದೇಶದಲ್ಲಿ ಸುರಿದ ರಕ್ತದ ಮಳೆಯು ಎಲ್ಲಾರಿಗೂ ಆಶ್ಚರ್ಯಕರ ಎಂದು ಅನಿಸತೊಡಗಿತು.


pc:youtube

ಪ್ರಕೃತಿಯ ಕೆಲವು ವಿಶೇಷಗಳು

ಪ್ರಕೃತಿಯ ಕೆಲವು ವಿಶೇಷಗಳು

ಈ ರಕ್ತದ ಮಳೆ ಅಥವಾ ಕೆಂಪು ಮಳೆಯು ಪ್ರಕ್ರತಿಯಲ್ಲಿ ಸಂಭವಿಸುವ ಕೆಲವು ವಿಶೇಷವಾದ ಬದಲಾವಣೆಗಳಿಂದ ಈ ರೀತಿಯಾಗಿ ಮಳೆ ಸುರಿದಿದೆ ಎಂದು ಹಾಗೂ ಇದರ ಬಗ್ಗೆ ಹೆಚ್ಚಿಗೆ ಭಯಪಡುವ ಅಗತ್ಯವಿಲ್ಲ ಎಂದು ಕೇರಳ ಸರ್ಕಾರ ಹಾಗೂ ಶಾಸ್ತ್ರಜ್ಞಾರು ತಿಳಿಸಿದರು.

pc:youtube

ಪ್ರಾಥಮಿಕ ಪರೀಕ್ಷೆ

ಪ್ರಾಥಮಿಕ ಪರೀಕ್ಷೆ

ಈ ರಕ್ತದ ಮಳೆಯನ್ನು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದರು. ಆಗ ರಕ್ತದ ಮಳೆಯಲ್ಲಿ ಕೆಂಪು ಕಣಗಳು ಹೆಚ್ಚಾಗಿ ಇರುವುದರಿಂದ ಮಳೆಯು ಕೆಂಪು ಮಳೆಯಾಗಿ ಸುರಿದಿದೆ ಎಂದು ಹೇಳಲಾಯಿತು.

pc:youtube

ಸಿ.ಇ.ಎಸ್,ಎಸ್

ಸಿ.ಇ.ಎಸ್,ಎಸ್

ಆದರೆ ಈ ಕೆಂಪು ಮಳೆಯ ಬಗ್ಗೆ ಇನ್ನಷ್ಟೂ ಪರೀಕ್ಷೆಗೆ ಒಳಪಡಿಸಲು ಕೆಂಪು ಮಳೆಯ ಶ್ಯಾಂಪಲ್ ಅನ್ನು ಸಿ.ಇ.ಎಸ್,ಎಸ್‍ಗೆ ಒಪ್ಪಿಸಿದರಂತೆ.


pc:youtube

ವರದಿ

ವರದಿ

ಆ ಸಂಸ್ಥೆಯು ಹಲವಾರು ಪರೀಕ್ಷೆಗಳನ್ನು ಮಾಡಿ ಒಂದು ವರದಿಯನ್ನು ತಯಾರು ಮಾಡಿ ನೀಡಿದರಂತೆ. ಆ ವರದಿಯ ಪ್ರಕಾರ ಆ ಮಳೆಯ ನೀರಿನಲ್ಲಿ ಉಪ್ಪಿನ ಅಂಶ ಇಲ್ಲದೇ ಮಾಂಗನೀಸ್, ಟೈಟಾನಿಯಂ, ಕ್ರೊಮಿಯಂ ಮತ್ತು ಕಾಪರ್ ಅಂತಹ ಪದಾರ್ಥಗಳು ಇವೆ ಎಂದು ಹೇಳಿತು.

pc:youtube

ರಾಸಾಯನಿಕ ಕ್ರಿಯೆ

ರಾಸಾಯನಿಕ ಕ್ರಿಯೆ

ಇದೇ ಸಂಸ್ಥೆಯ ಕೆಲವರು ಇನ್ನೂ ಹಲವಾರು ಸಿದ್ಧಾಂತಗಳನ್ನು ಮಂಡಿಸಿದರು. ಅದೇನೆಂದರೆ ಭೂಮಿಯ ಮೇಲೆ ಬಿದ್ದ ವುಲ್ಕೆಗಳು ಒಡೆದು ಮೋಡಗಳಲ್ಲಿ ಸೇರಿ ರಾಸಾಯನಿಕ ಕ್ರಿಯೆ ನಡೆದು ಈ ತರಹದ ಮಳೆ ಸುರಿದಿದೆ ಎಂದು ತಿಳಿಸಿದರು.


pc:youtube

ಬೂದಿಬಣ್ಣದ ಮಚ್ಚೆಗಳು

ಬೂದಿಬಣ್ಣದ ಮಚ್ಚೆಗಳು

ಆದರೆ ಈ ಮಳೆ ಸುರಿಯುವ ಪ್ರದೇಶ ಮಾತ್ರ ಅತ್ಯಂತ ಕಡಿಮೆ. ಈ ಕೆಂಪು ಮಳೆ ಬೀಳುವ ಪ್ರದೇಶದ ಮರದ ಮೇಲೆ ಬೂದಿಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ ಎಂತೆ.


pc:youtube

ಪ್ರಯೋಗಗಳು

ಪ್ರಯೋಗಗಳು

ಈ ವಿಷಯದ ಮೇಲೆ ಟಿ,ಬಿ,ಜಿ,ಆರ್,ಐ ಎನ್ನುವ ಒಂದು ಸಂಸ್ಥೆಯು ಸಿ,ಇ,ಸಿ,ಸಿ ಜೊತೆಗೂಡಿ ಕೆಲವು ಪ್ರಯೋಗಗಳನ್ನು ಮಾಡಿ ಇನ್ನೂ ಹಲವಾರು ವರದಿಗಳನ್ನು ನೀಡಿದರು.

pc:youtube

ಫಂಗಸ್

ಫಂಗಸ್

ಆ ವರದಿಯ ಪ್ರಕಾರ ಈ ಕೆಂಪು ಮಳೆ ಒಂದು ರೀತಿಯ ಫಂಗಸ್‍ನಿಂದ ಕೂಡಿವುದಾಗಿದೆ. ಈ ಫಂಗಸ್ ಹೆಚ್ಚಾಗಿ ಸಮುದ್ರದಲ್ಲಿ ಹಾಗೂ ನೀರಿನಲ್ಲಿ ಇರುವಂತಹ ಪ್ರದೇಶದಲ್ಲಿ ಇರುತ್ತದೆ ಎಂದು ತಿಳಿಸಿದರು.


pc:youtube

ಗಾಡ್ಸ್ ಓನ್ ಕಂಟ್ರಿ

ಗಾಡ್ಸ್ ಓನ್ ಕಂಟ್ರಿ

ಚರಿತ್ರೆಯನ್ನು ಕೆದಕುತ್ತ ಹೋದರೆ ಕೇರಳ ರಾಜ್ಯ, ನಗರ, ಗ್ರಾಮ ಕೂಡ ತಮ್ಮದೇ ಆದ ಪ್ರತ್ಯೇಕವಾದ ವಿಶೇಷವಿರುವ ಈ ರಾಜ್ಯಕ್ಕೆ ಗಾಡ್ಸ್ ಓನ್ ಕಂಟ್ರಿ ಎಂದು ಬಣ್ಣಿಸಲಾಗಿದೆ.


pc:youtube

ಎಷ್ಟು ದೂರ?

ಎಷ್ಟು ದೂರ?

ಕೇರಳದ ಒಂದು ಗ್ರಾಮದಲ್ಲಿನ ಇಡುಕ್ಕಿಯಲ್ಲಿ ಇಂತಹ ಅಪರೂಪದ ಮಳೆ ಸುರಿದಿದೆ. ಬೆಂಗಳೂರಿನಿಂದ ಇಡುಕ್ಕಿ ಗ್ರಾಮಕ್ಕೆ ಸುಮಾರು 526 ಕಿ,ಮೀ ದೂರದಲ್ಲಿದೆ.


pc:youtube

ಇಡುಕ್ಕಿಗೆ ವಿಮಾನ ಮಾರ್ಗದ ಮೂಲಕ

ಇಡುಕ್ಕಿಗೆ ವಿಮಾನ ಮಾರ್ಗದ ಮೂಲಕ

ಕೇರಳದ ಇಡುಕ್ಕಿಗೆ ಸಮೀಪದ ವಿಮಾನ ಮಾರ್ಗವೆಂದರೆ ಅದು ಕೊಚ್ಚಿ ವಿಮಾನ ಯಾನ. ಇಲ್ಲಿಂದ ಇಡುಕ್ಕಿಗೆ ಸುಮಾರು 110 ಕಿ,ಮೀ ದೂರದಲ್ಲಿದೆ.

pc:youtube