Search
  • Follow NativePlanet
Share
» »ನಿಮ್ಮ ಲೈಫ್ ಟೈಂನಲ್ಲಿ ಒಮ್ಮೆ ಯಾದ್ರು ಚೆನ್ನೈಗೆ ಭೇಟಿ ನೀಡಲು ಇಲ್ಲಿವೆ ಹತ್ತು ಕಾರಣಗಳು

ನಿಮ್ಮ ಲೈಫ್ ಟೈಂನಲ್ಲಿ ಒಮ್ಮೆ ಯಾದ್ರು ಚೆನ್ನೈಗೆ ಭೇಟಿ ನೀಡಲು ಇಲ್ಲಿವೆ ಹತ್ತು ಕಾರಣಗಳು

ಪ್ರತಿಯೊಬ್ಬರು ಭಾರತದಲ್ಲಿ ಭೇಟಿ ನೀಡಲೇಬೇಕಾದ ನಗರಗಳಲ್ಲಿ ಚೆನ್ನೈ ಕೂಡ ಒಂದು. ವಾರಪೂರ್ತಿ ಹಬ್ಬಗಳು ಮತ್ತು ಕಡಲತೀರಗಳಿಂದ ಹಿಡಿದು ದೇವಾಲಯಗಳು ಮತ್ತು ಬಾಯಲ್ಲಿ ನೀರೂರಿಸುವ ಆಹಾರ, ಭಾರತದ ಆಟೋಮೊಬೈಲ್ ಸಿಟಿ ಅಥವಾ "ಡೆಟ್ರಾಯಿಟ್ ಆಫ್ ಇಂಡಿಯಾ" - ಎಂದು ಕರೆಯಲ್ಪಡುವ ಈ ನಗರ ವಾರಾಂತ್ಯದ ವಿಹಾರಕ್ಕಾಗಿ ಹೇಳಿ ಮಾಡಿಸಿದಂತಿದೆ. ನಿಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ನೀವು ಚೆನ್ನೈಗೆ ಏಕೆ ಭೇಟಿ ನೀಡಬೇಕು ಎಂಬುದಕ್ಕೆ ಹತ್ತು ಅತ್ಯುತ್ತಮ ಕಾರಣಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ .

1. ಆಹಾರ

1. ಆಹಾರ

ಚೆನ್ನೈ ದಕ್ಷಿಣ ಭಾರತದ ಪಾಕಪದ್ಧತಿಗೆ ಸಮಾನಾರ್ಥಕವಾಗಿದೆ. ವಾರಾಂತ್ಯವನ್ನು ಕಳೆಯಲು ಆಹ್ಲಾದಕರ ಮಾರ್ಗವೆಂದರೆ ಫುಡ್ ಸ್ಟ್ರೀಟ್ಗಳಲ್ಲಿ ಸುತ್ತಾಡುವುದು. ಉಷ್ಣವಲಯ ಮತ್ತು ಕರಾವಳಿ ನಗರವಾಗಿರುವ ಚೆನ್ನೈ ಒಂದು ವಿಶಿಷ್ಟ ಹವಾಮಾನವನ್ನು ಹೊಂದಿದೆ ತುಂಬಾ ಜನ ಇದು ಇಡ್ಲಿಸ್ ಮತ್ತು ದೋಸೆಗೆ ಫೇಮಸ್ ಅಂದುಕೊಂಡಿದ್ದಾರೆ, ಆದರೆ ಇಲ್ಲಿ ಅಂಕೆಕ ರೀತಿಯ ಮಸಾಲೆಗಳು , ಹಣ್ಣುಗಳು ಮತ್ತು ಅದಕ್ಕಿಂತ ಹೆಚ್ಚಿನದು ಸಿಗುತ್ತದೆ. ಅದೇನೇ ಇರ್ಲಿ, ನ್ಯಾಷನಲ್ ಜಿಯಾಗ್ರಫಿಕ್‌ನ "ಟಾಪ್ 10 ಆಹಾರ ನಗರಗಳ" ಪಟ್ಟಿಯಲ್ಲಿ ಇದು ಎರಡನೇ ಸ್ಥಾನದಲ್ಲಿದೆ. ಆದ್ದರಿಂದ, ನೀವು ಆಹಾರ ಪ್ರಿಯರಾಗಿದ್ದರೆ, ಅತ್ಯುತ್ತಮ ಭಕ್ಷ್ಯಗಳನ್ನು ಸವಿಯಲು ಚೆನ್ನೈನ ಯಾವುದೇ ಯಾವುದೇ ಸ್ಟ್ರೀಟ್ ಗೆ ಭೇಟಿ ನೀಡಿ.

2. ಕಾಲಿವುಡ್

2. ಕಾಲಿವುಡ್

ಇಲ್ಲಿನ ಸ್ಥಳೀಯ ಚಿತ್ರಮಂದಿರದಲ್ಲಿ ಯಾವುದೇ ತಮಿಳು ಚಲನಚಿತ್ರ ನೋಡದೆ ಇದ್ರೆ ನಿಮ್ಮ ಚೆನ್ನೈ ಪ್ರವಾಸವು ಪೂರ್ಣಗೊಳ್ಳುವುದಿಲ್ಲ. ತಮಿಳು ಚಲನಚಿತ್ರಗಳು ತುಂಬಾ ವಿಶಿಷ್ಟವಾಗಿದ್ದು, ಸ್ಪೂರ್ತಿದಾಯಕ ಮತ್ತು ಆಕರ್ಷಕವಾಗಿರುತ್ತವೆ ಅದನ್ನ ಕೇವಲ ಪದಗಳಲ್ಲಿ ವಿವರಿಸಲಾಗುವುದಿಲ್ಲ; ನೀವು ಅದನ್ನು ನೋಡಿ ತಿಳ್ಕೊಬೇಕು. ಅದರ ಶ್ರೀಮಂತ ಚಲನಚಿತ್ರ ಇತಿಹಾಸದಿಂದ ಹಿಡಿದು ಕಾಲಿವುಡ್ ಪ್ರಪಂಚದಾದ್ಯಂತದ ಜನಸಾಮಾನ್ಯರನ್ನು ತನ್ನತ್ತ ಸುಲಭವಾಗಿ ಆಕರ್ಷಿಸಿದೆ. ಭಾರತದಲ್ಲಿ ಸಾಮೂಹಿಕ ಚಲನಚಿತ್ರಗಳನ್ನು ನಿರ್ಮಿಸಿದ ಮೊದಲ ಚಲನಚಿತ್ರ ನಿರ್ಮಾಣ ಉದ್ಯಮಗಳಲ್ಲಿ ಇದು ಕೂಡ ಒಂದಾಗಿದೆ - ರಜನಿಕಾಂತ್, ಕಮಲ್ ಹಾಸನ್, ಅಜಯ್ ಮತ್ತು ವಿಜಯ್ ಮುಂತಾದ ಹೀರೋಗಳನ್ನು ಅಭಿಮಾನಿಗಳು ತಮ್ಮ ದೇವರಂತೆ ಆರಾಧಿಸುತ್ತಾರೆ.

3. ಹಬ್ಬಗಳು

3. ಹಬ್ಬಗಳು

ಭಾರತದ ಹೆಚ್ಚಿನ ಉತ್ಸವಗಳನ್ನು ಆಚರಿಸುವ ಹೆಮ್ಮೆ ಚೆನ್ನೈ ನಗರಕ್ಕಿದೆ, ಅಂದರೆ ಇದು ಅತ್ಯಂತ ವ್ಯಾಪಕವಾದ ಬೀದಿ ಉತ್ಸವಗಳನ್ನು ಸಹ ಹೊಂದಿದೆ. ಗಣೇಶ ಹಬ್ಬ ಮತ್ತು ಪೊಂಗಲ್ ಸಮಯದಲ್ಲಿ ಹತ್ತಾರು ಮತ್ತು ಸಾವಿರಾರು ಜನರು ಬೀದಿಗಳಲ್ಲಿ ನೃತ್ಯ ಮಾಡುತ್ತ, ಒಬ್ಬರಿಗೊಬ್ಬರು ಬೆರೆಯುತ್ತಾ ಎರಡು ವಾರಗಳು ಸಕತ್ ಎಂಜಾಯ್ ಮಾಡಲು ಈ ನಗರದಲ್ಲಿ ಅವಕಾಶವಿದೆ. ಮಕ್ಕಳು, ವಯಸ್ಕರು ಮತ್ತು ಮಹಿಳೆಯರು, ಎಲ್ಲಾ ವಯಸ್ಸಿನ ಜನರು ಬೀದಿಗಿಳಿದು ಒಟ್ಟಿಗೆ ಎಂಜಾಯ್ ಮಾಡೋದನ್ನ ಮಿಸ್ ಮಾಡ್ಕೋಬೇಡಿ.

4. ಮರೀನಾ ಬೀಚ್

4. ಮರೀನಾ ಬೀಚ್

ಮರೀನಾ ಬೀಚ್ 1880 ರ ದಶಕದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಹೆಚ್ಚು ಪ್ರಭಾವಶಾಲಿ ಪ್ರತಿನಿಧಿಗಳಿಗೆ ತನ್ನದೇ ಆದ ಹೆಸರನ್ನು ಪಡೆದುಕೊಂಡಿದೆ. ಉಲ್ಲಾಸಕರ ಸಮಯವನ್ನು ಆನಂದಿಸಲು ಮರೀನಾ ಬೀಚ್‌ನಲ್ಲಿ ಸಂಜೆ ಹೊತ್ತು ಹೋಗಬಹುದು. ಇತ್ತೀಚಿನ ದಿನಗಳಲ್ಲಿ, ಇದು ಪ್ರವಾಸಿ ತಾಣವಾಗಿದ್ದು ಸೆಲೆಬ್ರಿಟಿಗಳು ಮತ್ತು ಸನ್ ಬಾತ್ ಮಾಡುವವರು, ಬೀಚ್ ನಲ್ಲಿರುವ ಮಾರಾಟಗಾರರು ಮತ್ತು ಸಣ್ಣ ಕಡಲತೀರದ ಆಹಾರ ಮಳಿಗೆಗಳವರೆಗೆ ಹಲವು ಚಟುವಟಿಕೆಗಳಿಗೆ ನೆಲೆಯಾಗಿದೆ.

5. ರಾತ್ರಿಜೀವನ

5. ರಾತ್ರಿಜೀವನ

ಚೆನ್ನೈ ಭಾರತದ ನಾಲ್ಕನೇ ಅತಿದೊಡ್ಡ ಮೆಟ್ರೋಪಾಲಿಟನ್ ನಗರವಾಗಿರುವುದರಿಂದ, ಇದು ಭಾರತದಾದ್ಯಂತ ಲಕ್ಷಾಂತರ ಜನರಿಗೆ ಆತಿಥ್ಯ ವಹಿಸುತ್ತದೆ. ಆದ್ದರಿಂದ, ಚೆನ್ನೈನಲ್ಲಿ ಹೆಚ್ಚಿನ ಜನರನ್ನು ಪಾರ್ಟಿ ಮಾಡುವುದು ಸಾಮಾನ್ಯ. ಇದಲ್ಲದೆ, ಚೆನ್ನೈನಲ್ಲಿ ಉತ್ಸಾಹಭರಿತವದ ಹಲವು ನೈಟ್ ಕ್ಲಬ್ ಗಳಿವೆ. ಇದಲ್ಲದೆ, ಚೆನ್ನೈನಲ್ಲಿ ತಡರಾತ್ರಿಯವರೆಗೆ ಅನೇಕ ಹೋಟೆಲ್ ಗಳು ತೆರೆದಿರುತ್ತವೆ, ಇದರಿಂದಾಗಿ ನಿವಾಸಿಗಳು ಮತ್ತು ಪ್ರವಾಸಿಗರು ಮಧ್ಯರಾತ್ರಿಯಲ್ಲೂ ಸಹ ತಿಂಡಿಗಳನ್ನು ಸವಿಯಲು ಮತ್ತು ಆನಂದಿಸಲು ಸಾಧ್ಯವಾಗುತ್ತದೆ.

6. ದೇವಾಲಯಗಳು

6. ದೇವಾಲಯಗಳು

ಇದಲ್ಲದೆ, ಮೇಲೆ ತಿಳಿಸಲಾದ ಎಲ್ಲಾ ಕಾರಣಗಳ ಜೊತೆಗೆ ಚೆನ್ನೈ ಅನೇಕ ಬೆರಗುಗೊಳಿಸುವ ಪಾರಂಪರಿಕ ದೇವಾಲಯಗಳು ಹೊಂದಿದೆ. ಇದು ಇತರ ನಗರಗಳಂತೆ ಆಕರ್ಷಕ ನಗರವಾಗಿದ್ದು ಕ್ರಿ.ಶ 15 ರ ಹಿಂದಿನ ಪುರಾತನ ದೇವಾಲಯಗಳು ಮತ್ತು ತಾಣಗಳೊಂದಿಗೆ, ಪ್ರವಾಸಿಗರು ಅದ್ಭುತ ವಾಸ್ತುಶಿಲ್ಪಗಳ ಸುತ್ತ ಶ್ರೀಮಂತ ಆಧ್ಯಾತ್ಮಿಕ ಪ್ರವಾಸವನ್ನು ನಿರೀಕ್ಷಿಸಬಹುದು. ಈ ದೇವಾಲಯಗಳು ಭಕ್ತರು ಮತ್ತು ಧಾರ್ಮಿಕ ಉತ್ಸಾಹಿಗಳನ್ನು ಮಾತ್ರವಲ್ಲದೆ ಪ್ರಪಂಚದಾದ್ಯಂತದ ಇತಿಹಾಸ ತಜ್ಞರನ್ನು ಆಕರ್ಷಿಸುತ್ತವೆ. ಅತೀಂದ್ರಿಯ ಮತ್ತು ಮೋಡಿಮಾಡುವ ಈ ಪಾರಂಪರಿಕ ದೇವಾಲಯಗಳು ಹೇಳಲು ಕೆಲವು ಆಕರ್ಷಕ ಪೌರಾಣಿಕ ಕಥೆಗಳನ್ನೂ ಸಹ ಹೊಂದಿವೆ.

7. ರಾಷ್ಟ್ರೀಯ ಉದ್ಯಾನಗಳು

7. ರಾಷ್ಟ್ರೀಯ ಉದ್ಯಾನಗಳು

ರಾತ್ರಿ ಜೀವನ ಮತ್ತು ಆಹಾರವನ್ನು ಆನಂದಿಸಲು ಚೆನ್ನೈ ಉತ್ತಮ ಸ್ಥಳವಾಗಿದೆ, ಆದ್ಯಾಗೂ ಪ್ರಕೃತಿಯನ್ನು ಅತ್ಯುತ್ತಮವಾಗಿ ಅನ್ವೇಷಿಸಲು ಇದು ಅತ್ಯುತ್ತಮವಾದ ನೈಸರ್ಗಿಕ ಉದ್ಯಾನವನಗಳನ್ನು ಹೊಂದಿದೆ ಮತ್ತು ಹೆಚ್ಚಿನವುಗಳು ಚೆನ್ನೈನ ಹೊರವಲಯದಲ್ಲಿವೆ, ಈ ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡುವುದು ಉತ್ತಮವಾಗಿ ಸಮಯ ಕಳೆಯಲು ಸಹಾಯ ಮಾಡುತ್ತವೆ. ಈ ರಾಷ್ಟ್ರೀಯ ಉದ್ಯಾನಗಳು ಸಫಾರಿಗಳನ್ನು ಸಹ ಹೊಂದಿದ್ದು, ನೀವು ಕಾಡು ಪ್ರಾಣಿಗಳು, ಚಾರಣ ಮತ್ತು ನೈಸರ್ಗಿಕ ಸೌಂದರ್ಯವನ್ನು ಗುರುತಿಸಲು ಬಯಸಿದರೆ, ಚೆನ್ನೈ ನೀವು ಇರಬೇಕಾದ ಸ್ಥಳವಾಗಿದೆ.

8. ಪ್ರವಾಸಿಗರ ಆಕರ್ಷಣೆಗಳು

8. ಪ್ರವಾಸಿಗರ ಆಕರ್ಷಣೆಗಳು

ಪುರಾತನ ಕಾಲದಿಂದ ಸಮಕಾಲೀನ ವಾಸ್ತುಶಿಲ್ಪಗಳು ಮತ್ತು ನೈಸರ್ಗಿಕ ಅದ್ಬುತಗಳಿಂದ ಹಿಡಿದು ಪ್ರಮುಖ ಪಾರಂಪರಿಕ ತಾಣಗಳವರೆಗೆ, ಪ್ರವಾಸಿಗರನ್ನು ಪ್ರೇರೇಪಿಸಲು ಮತ್ತು ಮನರಂಜಿಸಲು ಚೆನ್ನೈನಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಳಗಳಿವೆ. ಚೆನ್ನೈಗೆ ಭೇಟಿ ನೀಡಬೇಕಾದ ಸ್ಥಳಗಳಲ್ಲಿ ಮರೀನಾ ಬೀಚ್, ಶ್ರೀ ಪಾರ್ಥಸಾರಥಿ ದೇವಸ್ಥಾನ, ಮಹಾಬಲಿಪುರಂ, ಬಿರ್ಲಾ ಪ್ಲಾನೆಟೇರಿಯಮ್, ಸ್ಯಾನ್ ಥೋಮ್ ಚರ್ಚ್, ಬಿರ್ಲಾ ಪ್ಲಾನೆಟೇರಿಯಮ್ ಕಪಲೀಶ್ವರ್ ದೇವಸ್ಥಾನ, ಫೋರ್ಟ್ ಸೇಂಟ್ ಜಾರ್ಜ್, ಸಾವಿರ ದೀಪಗಳ ಮಸೀದಿ, ಕೊನ್ನೆಮಾರ ಸಾರ್ವಜನಿಕ ಗ್ರಂಥಾಲಯ, ಗಿಂಡಿ ರಾಷ್ಟ್ರೀಯ ಉದ್ಯಾನ, ಪ್ರಾಚೀನ ಮತ್ತು ದೈವಿಕ ದೇವಾಲಯಗಳು ಮತ್ತು ದೇವತೆಗಳು ಮತ್ತು ಈ ಮಹಾನಗರವು ಎಲ್ಲಾ ವರ್ಗದ ಜನರು, ಧರ್ಮ, ಜಾತಿ, ಮತ ಮತ್ತು ವಯಸ್ಸಿನ ಜನರನ್ನು ವ್ಯಾಪಕವಾಗಿ ಸ್ವಾಗತಿಸುತ್ತದೆ. ಚೆನ್ನೈನಲ್ಲಿ ಪ್ರವಾಸಿಗರಿಗೆ ಸಾಕಷ್ಟು ಆಕರ್ಷಣೆಗಳು ಇವೆ.

9. ಅಮ್ಮ ಕ್ಯಾಂಟೀನ್ ಗಳು

9. ಅಮ್ಮ ಕ್ಯಾಂಟೀನ್ ಗಳು

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗಲು ದಿವಂಗತ ಜೆ.ಜಯಲಲಿತಾ ಅವರು 2013 ರಲ್ಲಿ ಅಮ್ಮ ಕ್ಯಾಂಟೀನ್‌ಗಳನ್ನು ಸಬ್ಸಿಡಿ ಯಾಗಿ ಆಹಾರ ನೀಡುವ ಕಾರ್ಯಕ್ರಮವಾಗಿ ಪ್ರಾರಂಭಿಸಿದರು. ಚೆನ್ನೈನಲ್ಲಿ ಯಾರೂ ಹಸಿವಿನಿಂದ ಮಲಗಬಾರದು ಎಂಬ ಸದ್ದುದ್ದೇಶ ಹೊಂದಿರುವ ಇದು ಅಂದಿನಿಂದ ಭಾರಿ ಯಶಸ್ಸನ್ನು ಗಳಿಸಿದೆ. ಈ ಕ್ಯಾಂಟೀನ್ ಗಳು ಆಹಾರವನ್ನು 1 ರು ರಿಂದ 5 ರುಪಾಯಿಗೆ ಇಡ್ಲಿ, ಸಾಂಬಾರ್ ಕರಿಬೇವು ರೈಸ್ ಮತ್ತು ಮೊಸರು ಅನ್ನವನ್ನು ನೀಡುತ್ತವೆ. ಈ ಕಾರ್ಯಕ್ರಮ ದೇಶಾದ್ಯಂತ ಶ್ಲಾಘನಗೆ ಪಾತ್ರವಾಗಿದೆ ಮತ್ತು ಭಾರತದ ಅನೇಕ ನಗರಗಳು ಜನರನ್ನು ಸಬಲೀಕರಣಗೊಳಿಸಲು ಈ ಆಲೋಚನೆಯನ್ನು ಜಾರಿಗೆ ತರಲು ಪ್ರಾರಂಭಿಸಿವೆ

10. ವಿವಾಹಗಳು

10. ವಿವಾಹಗಳು

ಇಂದಿನ ಜಗತ್ತಿನಲ್ಲಿ, ವಿವಾಹಗಳು ತುಂಬಾ ವೈಯಕ್ತಿಕವಾಗಿವೆ ಮತ್ತು ಹಳೆಯ-ಕಾಲದ ಸಂಪ್ರದಾಯಗಳನ್ನು ಮರೆತು ಜರುಗುಟ್ಟವಿದೆ. ಆದಾಗ್ಯೂ, ಚೆನ್ನೈನಲ್ಲಿ, ವಿವಾಹವು ತುಂಬಾ ಸಾಂಪ್ರದಾಯಿಕವಾಗಿದೆ. ಎದ್ದುಕಾಣುವ ಬಣ್ಣಗಳು, ಚೈತನ್ಯ, ಸಂತೋಷ, ನಗೆ ಮತ್ತು ಸಾಂಪ್ರದಾಯಿಕ ಪಾಕಪದ್ಧತಿಗಳಿಂದ, ಚೆನ್ನೈನಲ್ಲಿ ವಿವಾಹಗಳು ತಮ್ಮದೇ ಆದ ಸುಂದರವಾದ ಮಹತ್ವವನ್ನು ಹೊಂದಿವೆ. ಕೊನೆಯಲ್ಲಿ ಹೇಳಬೇಕೆಂದರೆ ನಿಮ್ಮ ವಿವಾಹವನ್ನು, ಸುಂದರವಾಗಿಯೂ ಮತ್ತು ಸ್ಮರಣೀಯ ವಾಗಿಯೂ ಮಾಡುವ ಸಂಪ್ರದಾಯ ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X