• Follow NativePlanet
Share
» »ಮಂದಿರಗಳಲ್ಲಿನ ಕಾಮುಕ ಶಿಲ್ಪಕಲಾಕೃತಿಯ ರಹಸ್ಯ ಏನು ?

ಮಂದಿರಗಳಲ್ಲಿನ ಕಾಮುಕ ಶಿಲ್ಪಕಲಾಕೃತಿಯ ರಹಸ್ಯ ಏನು ?

Written By: Rajatha

ಮಧ್ಯಪ್ರದೇಶದ ಬುಂದೇಲ್ ಖಂಡದ ಪ್ರದೇಶದಲ್ಲಿ ಸುಂದರವಾಗಿ ನಿರ್ಮಿಸಲಾಗಿರುವ ಮಂದಿರಗಳೇ ಖಜುರಾರೋ. ಇಲ್ಲಿ ಕಲ್ಲಿನಿಂದ ಕೆತ್ತನೆ ಮಾಡಿ ಸುಂದರವಾದ ಶಿಲ್ಪಕಲಾಕೃತಿಯನ್ನು ತಯಾರಿಸಲಾಗುತ್ತಿತ್ತು. ಖಜುರಾರೋ ಮೂರ್ತಿ ಇಂದಿಗೂ ಇಡೀ ವಿಶ್ವದಲ್ಲೇ ಖ್ಯಾತಿ ಪಡೆದಿದೆ. ಖಜುರಾಹೋ ಮಂದಿರದ ಮೂರ್ತಿಗಳು ಸಾಂಸಾರಿಕ ಸುಖದ ಬಗ್ಗೆ ಸಾಕಷ್ಟು ತಿಳಿಸುತ್ತದೆ. ಇಲ್ಲಿ ಇವಿಷ್ಟೇ ಅಲ್ಲ ನಮ್ಮ ದೈನಿಕ ಜೀವನದ ಕಥೆಯನ್ನು ಉಲ್ಲೇಖಿಸುವಂತಹ ಇನ್ನೂ ಅನೇಕ ಮೂರ್ತಿಗಳಿವೆ .

ವಿಭೀಷಣ ಗಣೇಶನ ತಲೆಗೆ ಮಾಡಿದ ಗಾಯ ಇಂದಿಗೂ ಇದೆಯಂತೆ ಈ ದೇವಸ್ಥಾನದಲ್ಲಿ

ಇಂತಹ ಮೂರ್ತಿ ಮಂದಿರದಲ್ಯಾಕೆ ಇದೆ ಪ್ರಶ್ನೆ ಮೂಡಿರಬಹುದು

ಇಂತಹ ಮೂರ್ತಿ ಮಂದಿರದಲ್ಯಾಕೆ ಇದೆ ಪ್ರಶ್ನೆ ಮೂಡಿರಬಹುದು

Pc: flicker
ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಯಾತ್ರಿಗಳು ಈ ದೇವಸ್ಥಾನವನ್ನು ನೋಡಲು ಬರುತ್ತಾರೆ. ಬಹಳಷ್ಟು ಖಜುರಾಹೋ ಮಂದಿರಗಳ ನಿರ್ಮಾಣ 950 ಹಾಗೂ 1050 ಇಸವಿಯಲ್ಲಿ ಚಂದೇಲ್ ಸಾಮ್ರಾಜ್ಯದಲ್ಲಿ ಆಗಿತ್ತು. ಇದನ್ನು ನೋಡಿ ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಬರುವ ಬದಲು ಆ ಕಲಾಕೃತಿಯನ್ನು ನೋಡಿದವರು ಮಂದಿರದ ಸೌಂದರ್ಯದಲ್ಲೇ ಮೈ ಮರೆಯುತ್ತಾರೆ. ಮಂದಿರಗಳಲ್ಲಿ ಇಂತಹ ಶಿಲ್ಪಕಲಾಕೃತಿಯನ್ನು ಕಂಡಾಗ ಇಂತಹ ಚಿತ್ರಗಳನ್ನು ಮಂದಿರಗಳಲ್ಲಿ ಯಾಕೆ ಇಟ್ಟಿದ್ದಾರೆ ಎನ್ನುವ ಪ್ರಶ್ನೆ ಮೂಡುವುದು ಸಹಜ.

ಕಾಮುಕ ಮೂರ್ತಿಗಳ ಶಿಲ್ಪಕಲಾಕೃತಿ

ಕಾಮುಕ ಮೂರ್ತಿಗಳ ಶಿಲ್ಪಕಲಾಕೃತಿ

Pc: Vu2sga
ಮಂದಿರಗಳಲ್ಲಿ ಇಂತಹ ಕಾಮುಕ ಮೂರ್ತಿಗಳ ಶಿಲ್ಪಕಲಾಕೃತಿ ಇಡುವುದರ ಹಿಂದೆ ಹಿಂದೂ ಧರ್ಮದ ರಕ್ಷಣೆ ಇದೆ ಎನ್ನಲಾಗುತ್ತದೆ. ಆ ಸಂದರ್ಭದಲ್ಲಿ ಗೌತಮ ಬುದ್ಧರ ಉಪದೇಶಗಳಿಂದ ಪ್ರೇರಿತರಾಗಿ ಜನಸಾಮಾನ್ಯರಲ್ಲಿ ಕೆಲಸದತ್ತ ರುಚಿ ಕಡಿಮೆಯಾಗುತ್ತಿತ್ತು. ಆದರೆ ಹಿಂದೆ ಸೆಕ್ಸ್ ಹಾಗೂ ಕಾಮದತ್ತ ಜನರು ಹೆಚ್ಚಾಗಿ ಸೆಳೆಯಲ್ಪಡುತ್ತಾರೆ ಎನ್ನುವುದು ಅವರಿಗೆ ತಿಳಿದಿತ್ತು. ಹಾಗಾಗಿ ಚಂದೇಲ್ ಶಾಸಕರು ಈ ಮಾರ್ಗವನ್ನು ಅನುಸರಿಸಿದರು. ಮಂದಿರದ ಹೊರಗಡೆ ಇಂತಹ ಶಿಲ್ಪಕಲಾಕೃತಿಗಳನ್ನು ಅಳವಡಿಸಲಾಗುತ್ತಿತ್ತು. ಅದನ್ನು ನೋಡಬಂದ ಜನರು ಮಂದಿರದ ಒಳಗೆಯೂ ಹೋಗುತ್ತಿದ್ದರು.

ಸಾಂಸಾರಿಕತೆಯ ಬಗ್ಗೆ ಜ್ಞಾನ

ಸಾಂಸಾರಿಕತೆಯ ಬಗ್ಗೆ ಜ್ಞಾನ

Pc: wikimedia
ಪ್ರಾಚೀನ ಕಾಲದಲ್ಲಿ ಹೆಚ್ಚಿನ ಮಕ್ಕಳೆಲ್ಲಾ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅಂತಹ ಸಂದರ್ಭದಲ್ಲಿ ಅವರಿಗೆ ಸಾಂಸಾರಿಕತೆಯ ಬಗ್ಗೆ ಜ್ಞಾನ ನೀಡುವ ಸಲುವಾಗಿ ಈ ಮಂದಿರಗಳ ನಿರ್ಮಾಣ ಮಾಡಲಾಯಿತು ಎನ್ನಲಾಗುತ್ತದೆ. ಎಲ್ಲಾ ರೀತಿಯ ಜನರು ಹೋಗುವಂತಹ ಸ್ಥಳವೆಂದರೆ ಅದು ಮಂದಿರ. ಹಾಗಾಗಿ ಇದಕ್ಕೆ ಮಂದಿರವನ್ನೇ ಆಯ್ಕೆ ಮಾಡಲಾಯಿತು ಎನ್ನಲಾಗುತ್ತದೆ.

 ರಾಜರು ಭೋಗವಿಲಾಸಿಗಳಾಗಿದ್ದರು

ರಾಜರು ಭೋಗವಿಲಾಸಿಗಳಾಗಿದ್ದರು

Pc: Rajenver
ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ಭೋಗವಿಲಾಸದಲ್ಲಿ ಹೆಚ್ಚಾಗಿ ತಲ್ಲೀನರಾಗಿರುತ್ತಿದ್ದರು. ಹಾಗಾಗಿ ಖಜುರಾಹೋ ಮಂದಿರದ ಹೊರಗೆ ನಗ್ನವಾಗಿ , ಸಂಭೋಗ ರೀತಿಯಲ್ಲಿ ಶಿಲ್ಪಕಲಾಕೃತಿಗಳನ್ನು ಅಳವಡಿಸಲಾಗಿತ್ತು ಎನ್ನುತ್ತಾರೆ ಕೆಲವರು.

ಕಾಮದ ನಂತರವೇ ಮೋಕ್ಷ

ಕಾಮದ ನಂತರವೇ ಮೋಕ್ಷ

PC:sfu.marcin
ಮನುಷ್ಯನಿಗೆ ಮೋಕ್ಷ ದೊರೆಯಬೇಕಾದರೆ ನಾಲ್ಕು ಬಾಗಿಲನ್ನು ದಾಟಬೇಕಾಗುತ್ತದೆ. ಧರ್ಮ, ಅರ್ಥ, ಯೋಗ ಹಾಗೂ ಕಾಮ. ಹಾಗಾಗಿ ಮಂದಿರದ ಹೊರಗೆ ನಗ್ನ ಮೂರ್ತಿಗಳನ್ನು ಅಳವಡಿಸಲಾಗಿದೆ. ಇದೇ ಕಾಮ. ಇದು ಹೋಗುತ್ತಿದ್ದಂತೆ ದೇವರ ಶರಣವೇ ಸಿಗುತ್ತದೆ ಎನ್ನುವುದು ಕೆಲವು ವಿಶ್ಲೇಷಣಾಕಾರರ ವಾದ.

Read more about: madhya pradesh temple

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ