Search
  • Follow NativePlanet
Share
» »24 ಕ್ಯಾರೆಟ್‌ ಚಿನ್ನದ ಈ ಐಸ್‌ಕ್ರೀಮ್‌ನ್ನು ನಿಮ್ಮ ಪ್ರೇಯಸಿಗೆ ಕೊಡಿಸಿದ್ದೀರಾ?

24 ಕ್ಯಾರೆಟ್‌ ಚಿನ್ನದ ಈ ಐಸ್‌ಕ್ರೀಮ್‌ನ್ನು ನಿಮ್ಮ ಪ್ರೇಯಸಿಗೆ ಕೊಡಿಸಿದ್ದೀರಾ?

24 ಕ್ಯಾರೆಟ್‌ ಚಿನ್ನದ ಪ್ಲೇಟೆಡ್‌ ಐಸ್‌ಕ್ರೀಮ್‌ನ್ನು ನೀವು ನಿಮ್ಮ ನಿಮ್ಮ ಪ್ರೇಯಸಿಗೆ ನೀಡಿ ಸಪ್ರೈಸ್‌ ಕೊಡಿ.

ಬೆಜ್ಜಿಯಂ ಚಾಕೋಲೆಟ್‌ ಐಸ್‌ಕ್ರೀಮ್‌, ಕ್ಯಾರಮಲೈಡ್‌ ಅಲ್ಮಂಡ್, ಗೋಲ್ಡನ್‌ ಚಾಕೋಲೆಟ್‌ ಐಸ್‌ಕ್ರೀಮ್ ಅಬ್ಬಾ ಇದರ ಹೆಸರು ಕೇಳುವಾಗಲೇ ಬಾಯಲ್ಲಿ ನೀರೂರುತ್ತದೆ. ಹುಡುಗಿಯರಿಗಂತೂ ಐಸ್‌ಕ್ರೀಮ್‌ ಅಂದರೆ ಅಚ್ಚುಮೆಚ್ಚು. ಇನ್ನೇನು ಪ್ರೇಮಿಗಳ ದಿನ ಬೇರೆ ಹತ್ತಿರ ಬಂದಿದೆ. ನೀವು ನಿಮ್ಮ ಪ್ರೇಯಸಿಗೆ ಏನಾದರೂ ವ್ಯಾಲೆಂಟೈನ್‌ ಡೇ ಗಿಫ್ಟ್ ನೀಡಬೇಕೆಂದಿದ್ದೀರಾ? ಪ್ರೇಮಿಗಳ ದಿನ ಅಂತಿಂಥ ಸಣ್ಣ ಪುಟ್ಟ ಗಿಫ್ಟ್‌ಗಳೆಲ್ಲಾ ನಡೆಯೋದಿಲ್ಲ. ಈ ಸ್ಪೆಶಲ್ ದಿನಕ್ಕಾಗಿ ಏನಾದರೂ ಸ್ಪೆಶಲ್ ಗಿಫ್ಟ್‌ನ್ನೇ ನೀಡಬೇಕು. ನಿಮ್ಮ ಪ್ರೇಮಿಗೆ ಏನಾದರೂ ಸ್ಪೆಶಲ್‌ ಸಪ್ರೈಸ್‌ ನೀಡಬೇಕೆಂದು ಯೋಚಿಸುತ್ತಿದ್ದರೆ ನಿಮಗೊಂದು ಐಡಿಯಾ ತಿಳಿಸಲಿದ್ದೇವೆ.

 ಪ್ರೇಮಿಗಳ ದಿನವನ್ನು ಸ್ಪೇಶಲ್ ಆಗಿಸಿ

ಪ್ರೇಮಿಗಳ ದಿನವನ್ನು ಸ್ಪೇಶಲ್ ಆಗಿಸಿ

PC: Facebook

ಅದೇನೆಂದರೆ ನೀವು ನಿಮ್ಮ ಹುಡುಗಿಗೆ ಐಸ್‌ಕ್ರೀಮ್‌ ಕೊಟ್ಟು ಬಿಡಿ. ಅರೇ ಐಸ್‌ಕ್ರೀಮ್ ದಿನಾಲೂ ಕೊಡಿಸುತ್ತೇವೆ ಇದರಲ್ಲೇನಿದೆ ಸ್ಪೆಶಲ್‌ ಅಂತಾ ಯೋಚಿಸುತ್ತಿದ್ದೀರಾ? ನಾವು ಹೇಳುತ್ತಿರುವುದು ಬರೀ ಐಸ್‌ಕ್ರೀಮ್‌ ಬಗ್ಗೆ ಅಲ್ಲ ಗೋಲ್ಡನ್‌ ಐಸ್‌ಕ್ರೀಮ್ ಬಗ್ಗೆ. ಮೊದಲೇ ಹೆಣ್ಮಕ್ಕಳಿಗೆ ಚಿನ್ನ ಅಂದ್ರೆ ಇಷ್ಟ. ಇನ್ನು ಐಸ್‌ಕ್ರೀಮ್‌ ಜೊತೆಗೆ ಚಿನ್ನ ಅಂದ್ರೆ ಇಷ್ಟವಾಗದೇ ಇರುತ್ತಾ? ಅಯ್ಯೋ ಗೋಲ್ಡನ್‌ ಐಸ್‌ಕ್ರೀಮಾ ಅದನ್ನು ಹೇಗೆ ತಂದು ಕೋಡೋದು ಅಂತ ತಲೆ ಜಜ್ಜಿಕೊಳ್ಳ ಬೇಡಿ. ಇದು ತುಂಬಾ ಸುಲಭ.

ಸ್ಪೆಶಲ್ ಗೋಲ್ಡನ್‌ ಐಸ್‌ಕ್ರೀಮ್‌

ಸ್ಪೆಶಲ್ ಗೋಲ್ಡನ್‌ ಐಸ್‌ಕ್ರೀಮ್‌

PC: Facebook

ಹೌದು ನಾವು ಇಂದು ಒಂದು ವಿಶೇಷ ಐಸ್‌ಕ್ರೀಮ್‌ ಬಗ್ಗೆ ತಿಳಿಸಲಿದ್ದೇವೆ. ನೀವು ಸಾಮಾನ್ಯವಾಗಿ ಐಸ್‌ಕ್ರೀಮ್‌ ಪಾರ್ಲರ್‌ಗೆ ಹೋದಾಗ ಒಂದು ಐಸ್‌ಕ್ರೀಮ್‌ಗೆ ಹೆಚ್ಚೆಂದರೆ 150 ರಿಂದ 200 ರೂ. ಖರ್ಚು ಮಾಡುತ್ತೀರಿ. ಒಂದೊಂದು ಫ್ಲೇವರ್‌ನ ಐಸ್‌ಕ್ರೀಮ್‌ಗೆ ಒಂದೊಂದು ರೇಟ್‌ ಇರುತ್ತದೆ. ನಾವಿಂದು ಹೇಳ ಹೊರಟಿರುವುದು ದುಬಾರಿ ಐಸ್‌ಕ್ರೀಮ್‌ ಬಗ್ಗೆ, ಅದುವೇ ಗೋಲ್ಡನ್ ಐಸ್‌ಕ್ರೀಮ್. ಗೋಲ್ಡನ್‌ ಐಸ್‌ಕ್ರೀಮ್‌ ಅಂದ್ರೆ ಯಾವ ಹುಡುಗೀಯಾದ್ರೂ ಖುಷಿಯಾಗದೇ ಇರಲಾರರು.

ಹುಬರ್‌ & ಹೋಲಿ ಪಾರ್ಲರ್

ಹುಬರ್‌ & ಹೋಲಿ ಪಾರ್ಲರ್

PC: FaceBook

ಹೌದು ದುಬಾರಿ ಐಸ್‌ಕ್ರೀಮ್ ಇದು ಎಲ್ಲಾ ಕಡೆ ಸಿಗೋದಿಲ್ಲ . ಇದಕ್ಕೆ ನೀವು ಪ್ರವಾಸಕ್ಕೂ ಹೋಗಬೇಕು. ಐಸ್‌ಕ್ರೀಮ್‌ ತಿನ್ನುವ ನೆಪದಲ್ಲಿ ಟೂರ್‌ ಹೋದರೂ ಸರಿಯೇ, ಇಲ್ಲವಾದಲ್ಲಿ ಟೂರ್‌ ಹೋಗಿದ್ದಾಗ ಐಸ್‌ಕ್ರೀಮ್‌ ತಿಂದರೂ ಸರಿನೇ. ಅಂದಹಾಗೇ ಈ ಐಸ್‌ಕ್ರೀಮ್‌ ನಿಮಗೆ ಸಿಗೋದು ಹುಬರ್‌ & ಹೋಲಿ ಸ್ಟೋರ್‌ಗಳಲ್ಲಿ ಮಾತ್ರ.

ಎಲ್ಲೆಲ್ಲಿದೆ ಈ ಐಸ್‌ಕ್ರೀಮ್ ಪಾರ್ಲರ್

ಎಲ್ಲೆಲ್ಲಿದೆ ಈ ಐಸ್‌ಕ್ರೀಮ್ ಪಾರ್ಲರ್

PC: FaceBook
ಹುಬರ್‌-ಹೋಲಿ ಮುಂಬೈ, ಹೈದರಾಬಾದ್‌ ಹಾಗೂ ಅಹಮದಾಬಾದ್‌ಗಳಲ್ಲಿ ತಮ್ಮ ಮಳಿಗೆಗಳನ್ನು ತೆರೆದಿದೆ. ೨೪ ಕ್ಯಾರೇಟ್‌ ಗೋಲ್ಡ್‌ ಫ್ಲೇಕ್ಸ್‌ನ ಈ ಐಸ್‌ಕ್ರೀಮ್‌ನ್ನು ಮೊತ್ತ ಮೊದಲಿಗೆ ಲಾಂಚ್‌ ಮಾಡಿದ್ದು ಅಹಮದಾಬಾದ್‌ನಲ್ಲಿ ಅದೂ ಕೂಡಾ 2017ರ ಅಕ್ಟೋಬರ್‌ನಲ್ಲಿ. ಆ ನಂತರ ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ಈ ಐಸ್‌ಕ್ರೀಮ್ ಮಳಿಗೆಯನ್ನು ತೆರೆಯಲಾಯಿತು.

ಐಸ್‌ಕ್ರೀಮ್‌ನ ಹೆಸರು

ಐಸ್‌ಕ್ರೀಮ್‌ನ ಹೆಸರು

PC: FaceBook
ಈ ಐಸ್‌ಕ್ರೀಮ್‌ನ ಹೆಸರು ಮೈಟಿ ಮಿದಾಸ್. ಇದು ಕೋನ್‌ನಲ್ಲಿ ನಿಮ್ಮ ಮೆಚ್ಚಿನ ಲಿಪ್-ಸ್ಮ್ಯಾಕಿಂಗ್ ಆಯ್ಕೆಗಳನ್ನು ಹೊಂದಿರುತ್ತದೆ. ಮೊದಲ ನೋಟದಲ್ಲೇ ನಿಮ್ಮನ್ನು ಆಕರ್ಷಿಸುತ್ತದೆ. ಈ ಐಸ್‌ಕ್ರೀಮ್‌ನ್ನು ಕೆಲವು ವಿರಳವಾಗಿ ಸಿಗುವ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ. ಅದನ್ನು ಬೇರೆಡೆ ಕಂಡುಕೊಳ್ಳುವುದು ಕಷ್ಟ. ಫ್ರೆಶ್ ಗೂಯಿ ಬ್ರೌನಿ , ಕ್ಯಾರಮೆಲೈಸ್ಡ್ ಬಾದಾಮಿ, ನಟ್ಟಿ ಪ್ರಾಲಿನ್, ರೋಚೆರ್ ಬಾಲ್ಸ್, ಹಾಟ್ ಮಿಠಾಯಿ, ಬೆಲ್ಜಿಯಂ ಡಾರ್ಕ್ ಚಾಕೊಲೇಟ್ ಐಸ್ ಕ್ರೀಮ್ ಮತ್ತು ಹ್ಯಾಝೆಲ್ನಟ್ ಚಾಕೊಲೇಟ್ ಮುಂತಾದವುಗಳನ್ನು ಬಳಸಿ ಇದನ್ನು ತಯಾರಿಸಲಾಗಿದೆ.

1000 ರೂ. ಐಸ್‌ಕ್ರೀಮ್‌

1000 ರೂ. ಐಸ್‌ಕ್ರೀಮ್‌

ದುಬಾರಿ ಐಸ್‌ಕ್ರೀಮ್‌ ಆಂದ್ರೆ ಎಷ್ಟು ರೂಪಾಯಿದ್ದಾಗಿರಬಹುದು ಎಂದು ನೀವು ಯೋಚಿಸುತ್ತಿದ್ದರೆ, ಈ ದುಬಾರಿ ಐಸ್‌ಕ್ರೀಮ್‌ ಬೆಲೆ 1000ರೂ. ಒಂದು ಐಸ್‌ಕ್ರೀಮ್‌ ಬೆಲೆ 1000ರೂ ಅಂದ್ರೆ ಶಾಕ್‌ ಆಗೋದು ಸಹಜ. ಇದು ಭಾರತದಲ್ಲೇ ಅತ್ಯಂತ ದುಬಾರಿ ಐಸ್‌ಕ್ರೀಮ್ ಆಗಿದೆ. ಇದರ ಬೆಲೆ ಸಾವಿರ ರೂಪಾಯಿ. ಈ ಐಸ್‌ಕ್ರೀಮ್‌ನ್ನು ಗೋಲ್ಡ್‌ ಫ್ಲೇಕ್ಸ್‌ ಮೂಲಕ ಅಲಂಕರಿಸಲಾಗುತ್ತದೆ. ನೋಡಲು ಒಂದು ಕೋನ್‌ ಐಸ್‌ಕ್ರೀಮ್‌ ರೀತಿ ಇದೆ. ಆದರೆ ಅದಕ್ಕೆ ಹಾಕುವ ಐಟಂಗಳು ಬಹಳ ದುಬಾರಿ ಹಾಗೂ ರುಚಿಕರವಾಗಿದೆ.

ಹೈದರಾಬಾದ್‌ನಲ್ಲಿ ಎಲ್ಲಿದೆ?

ಹೈದರಾಬಾದ್‌ನಲ್ಲಿ ಎಲ್ಲಿದೆ?

ಹೈದರಾಬಾದ್‌ಗೆ ನೀವು ಪ್ರವಾಸಕ್ಕೆ ಹೋಗಿದ್ದಾಗ ಈ ಐಸ್‌ಕ್ರೀಮ್‌ನ್ನು ಸವಿಯೋದನ್ನು ಮರೆಯಬೇಡಿ. ಹೈದರಾಬಾದ್‌ನಲ್ಲಿ ಬಂಜಾರ ಹಿಲ್ಸ್‌ನಲ್ಲಿರುವ ಕೆಬಿಆರ್‌ ಪಾರ್ಕ್ ಎದುರುಗಡೆ ಇರುವ ಹುಬರ್‌ & ಹೋಲಿ ಮಳಿಗೆಯಲ್ಲಿ ನಿಮಗೆ ಈ ಐಸ್‌ಕ್ರೀಮ್ ಸಿಗುತ್ತದೆ. ನಿಮ್ಮ ಸಂಗಾತಿ ಜೊತೆ ಹೈದರಾಬಾದ್‌ ಸುತ್ತಾಡುತ್ತಾ ಅಲ್ಲಿನ ತಾಣಗಳನ್ನೂ ನೋಡುತ್ತಾ ಮೈಟಿ ಮಿದಾಸ್ ಐಸ್‌ಕ್ರೀಮ್ ಸವಿಯುತ್ತಾ ಈ ಬಾರಿಯ ಪ್ರೇಮಿಗಳ ದಿನವನ್ನು ಆಚರಿಸಿ.

ಮುಂಬೈನಲ್ಲೂ ಟ್ರೈ ಮಾಡಬಹುದು

ಮುಂಬೈನಲ್ಲೂ ಟ್ರೈ ಮಾಡಬಹುದು

ಒಂದು ವೇಳೆ ನಿಮಗೆ ಹೈದರಾಬಾದ್ ಬೇಡವೆಂದಾದರೆ ನೀವು ಮುಂಬೈಗೂ ಹೋಗಬಹುದು. ಮುಂಬೈನಲ್ಲಿ ಸಾಕಷ್ಟು ಪ್ರವಾಸಿ ತಾಣಗಳೂ ಇವೆ ಜೊತೆಗೆ ಮೈಟಿ ಮಿದಾಸ್ ಐಸ್‌ಕ್ರೀಮ್‌ ಕೂಡಾ ದೊರೆಯುತ್ತದೆ. ಮುಂಬೈನಲ್ಲಿ ಜುಹೂನಲ್ಲಿರುವ ಹುಬರ್‌ & ಹೋಲಿ ಐಸ್‌ಕ್ರೀಮ್‌ ಮಳಿಗೆಗಳಲ್ಲಿ ಲಭ್ಯವಿದೆ.

ಅಹಮದಾಬಾದ್‌ನಲ್ಲಿ

ಅಹಮದಾಬಾದ್‌ನಲ್ಲಿ

ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಹುಬರ್‌ & ಹೋಲಿ ಫ್ಲ್ಯಾಗ್‌ಶಿಪ್ ಐಸ್‌ಕ್ರಿಮ್ ಕೆಫೆಯಲ್ಲಿ ಈ ಐಸ್‌ಕ್ರೀಮ್ ಸಿಗುತ್ತದೆ. ನೀವು ಗುಜರಾತ್ ಪ್ರವಾಸ ಕೈಗೊಂಡಿದ್ದಲ್ಲಿ ಅಹಮದಾಬಾದ್‌ನಲ್ಲಿ ಇದನ್ನು ಟ್ರೈ ಮಾಡಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+