Search
  • Follow NativePlanet
Share
» »ಭಾರತದಲ್ಲಿ ರಾವಣನ ದೇವಸ್ಥಾನ ಎಲ್ಲೆಲ್ಲಿದೆ ಗೊತ್ತಾ?

ಭಾರತದಲ್ಲಿ ರಾವಣನ ದೇವಸ್ಥಾನ ಎಲ್ಲೆಲ್ಲಿದೆ ಗೊತ್ತಾ?

ರಾವಣ ರಾಕ್ಷಸನಾಗಿದ್ದರೂ ರಾವಣನಿಗೆ ಸಮರ್ಪಿತವಾಗಿರುವ ಕೆಲವು ಅಪರೂಪದ ದೇವಾಲಯಗಳು ಭಾರತದಲ್ಲಿಯೂ ಇವೆ. ರಾವಣ ರಾಕ್ಷಸನಾಗಿದ್ದರೂ ಆತ ಒಬ್ಬ ಮಹಾನ್ ತಪಸ್ವಿ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ರಾವಣನ ಈ ಅಂಶಗಳಿಗೆ ಗೌರವ ಸೂಚಕವಾಗಿ ಈ ದೇವಾಲಯಗಳಿವೆ ಎಂದು ಹೇಳಬಹುದು. ರಾವಣನಿಗೆ ಸಂಬಂಧಿಸಿದ ಭಾರತದಲ್ಲಿರುವ ಕೆಲವು ಅಪರೂಪದ ದೇವಸ್ಥಾನಗಳ ಕುರಿತು ಇಲ್ಲಿ ತಿಳಿಸಲಾಗಿದೆ. ನೀವೇನಾದರೂ ಈ ಸ್ಥಳಗಳಿಗೆ ಭೆಟಿ ನೀಡಿದರೆ ರಾವಣನ ದೇಗುಲಗಳಿಗೆ ಭೇಟಿ ನೀಡಲು ಮರೆಯದಿರಿ.

ಜೋಧಪುರ

ಜೋಧಪುರ

PC: Indi Samarajiva

ರಾಜಸ್ಥಾನದ ಜೋಧಪುರ ನಗರದಲ್ಲಿರುವ ಮುದ್ಗಲ್ ಬ್ರಾಹ್ಮಣರು ತಾವು ರಾವಣನ ವಂಶಜರೆಂದು ನಂಬಿದ್ದು ರಾವಣನಿಗೆ ಮುಡಿಪಾಗಿ ದೇವಸ್ಥಾನ ನಿರ್ಮಿಸುತ್ತಿದ್ದಾರೆ. ರಾವಣನ ಮಡದಿ ಮಂಡೋದರಿಯು ಮಂಡೋರ್ ಎಂಬ ಸ್ಥಳದವಳಾಗಿದ್ದು ಹಿಂದೆ ಮಂಡೋರ್ ಜೋಧಪುರದ ರಾಜಧಾನಿಯಾಗಿತ್ತೆಂದು ನಂಬಲಾಗಿದೆ.

ಬಿಸ್ರಾಖ್

ಬಿಸ್ರಾಖ್

PC: Suraj Belbase

ಉತ್ತರ ಪ್ರದೇಶದ ಗ್ರೇಟರ್ ನೊಯಿಡಾದಲ್ಲಿರುವ ಬಿಸ್ರಾಖ್ ಎಂಬ ಗ್ರಾಮದಲ್ಲಿ ರಾವಣನಿಗೆ ಮುಡಿಪಾದ ರಾವಣ ಮಂದಿರವಿದೆ. ಸ್ಥಳ ಪುರಾಣದ ಪ್ರಕಾರ ಈ ಸ್ಥಳ ರಾವಣನ ಜನ್ಮ ಸ್ಥಳ ಎಂದು ನಂಬಲಾಗಿದೆ. ಹೊಸದಾದ 42 ಅಡಿ ಉದ್ದದ ಶಿವಲಿಂಗ ಹಾಗೂ 5.5 ಅಡಿ ಎತ್ತರದ ರಾವಣನ ವಿಗ್ರಹಹೊಂದಿರುವ ನೂತನ ದೇವಾಲಯವೊಂದು ನಿರ್ಮಾಣ ಹಂತದಲ್ಲಿಯೂ ಇದೆ.

ಕಾಕಿನಾಡಾ

ಕಾಕಿನಾಡಾ

PC:Gane Kumaraswamy

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಕರಾವಳಿ ಪಟ್ಟಣ ಕಾಕಿನಾಡಾದಲ್ಲಿರುವ ರಾವಣನ ದೇವಾಲಯವು ವಿಶಿಷ್ಟವಾಗಿದೆ. ಶಿವಲಿಂಗವೂ ಇರುವ ಈ ದೇವಾಲಯದ ಹೊರ ಭಾಗದಲ್ಲಿ ರಾವಣನ ಹತ್ತು ತಲೆಗಳುಳ್ಳ ಬೃಹತ್ ವಿಗ್ರಹವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಶಿವ ಹಾಗೂ ರಾವಣನನ್ನು ಪೂಜಿಸಲಾಗುತ್ತದೆ.

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ

PC:Claire H.

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಪಾಲಂಪುರದಿಂದ ಕೇವಲ 16 ಕಿ.ಮೀ ದೂರದಲ್ಲಿರುವ ಬೈಜನಾಥ (ವೈದ್ಯನಾಥ) ದೇವಾಲಯವು ರಾವಣನ ಕುರಿತು ವಿಶಿಷ್ಟವಾದ ಹಿನ್ನಿಲೆ ಹೊಂದಿದೆ. ಕಠಿಣ ತಪಗೈದು ಶಿವನನ್ನು ಪ್ರಸನ್ನಗೊಳಿಸಿ ಆತ್ಮಲಿಂಗ ಪಡೆದು ರಾವಣ ಮರಳುವಾಗ ಪ್ರಕೃತಿ ಕರೆ ಓಗೊಟ್ಟು ದನಗಾಹಿಯೊಬ್ಬನಿಗೆ ಆತ್ಮ ಲಿಂಗ ಹಿಡಿಯಲು ಕೊಟ್ಟು ಆ ದನಗಾಹಿ ಅದರ ಬಾರ ತಾಳದೇ ನೆಲದಲ್ಲಿಟ್ಟನು ಆ ಸ್ಥಳವೇ ಬೈಜನಾಥ ದೇವಾಲಯ ಎನ್ನಲಾಗುತ್ತದೆ.

ಕಾನಪುರ

ಕಾನಪುರ

PC: Raja Ravi Varma

ಉತ್ತರ ಪ್ರದೇಶದ ಕಾನಪುರದಲ್ಲಿ ದಶಾನನ ರಾವಣ ದೇವಾಲಯವಿದೆ. ನಗರದ ಶಿವಾಲಾ ಪ್ರದೇಶದಲ್ಲಿರುವ ಶಿವ ದೇವಸ್ಥಾನದ ಪಕ್ಕದಲ್ಲಿಯೆ ಈ ರಾವಣನಿಗೆ ಮುಡಿಪಾದ ದೇವಾಲಯವಿದ್ದು ವರ್ಷಕ್ಕೊಂದು ಬಾರಿ ದಸರಾ ಸಂದರ್ಭದಲ್ಲಿ ಮಾತ್ರವೆ ಇದನ್ನು ತೆರೆಯಲಾಗುತ್ತದೆ.

ಮಧ್ಯಪ್ರದೇಶ

ಮಧ್ಯಪ್ರದೇಶ

ಮಧ್ಯಪ್ರದೇಶದ ವಿದೀಶಾ ಜಿಲ್ಲೆಯ ರಾವಣಗ್ರಾಮದಲ್ಲಿ ರಾವಣನಿಗೆ ಮುಡಿಪಾದ ದೇವಾಲಯವಿದೆ. ಇಲ್ಲಿ ಹತ್ತು ಅಡಿಗಳಷ್ಟು ಎತ್ತರದ ರಾವಣನ ವಿಗ್ರಹವಿದ್ದು ಮಲಗಿರುವ ಭಂಗಿಯಲ್ಲಿದೆ. ಗ್ರಾಮದ ಜನರು ಶೃದ್ಧೆ ಭಕ್ತಿಗಳಿಂದ "ರಾವಣ ಬಾಬಾ ನಮಃ" ಎಂದು ಹೇಳಿ ಪೂಜಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more