Search
  • Follow NativePlanet
Share
» »100 ರೂ. ನೋಟಿನಲ್ಲಿರುವ ಈ ಸ್ಥಳ ಯಾವುದು ಹೇಳಬಲ್ಲಿರಾ?

100 ರೂ. ನೋಟಿನಲ್ಲಿರುವ ಈ ಸ್ಥಳ ಯಾವುದು ಹೇಳಬಲ್ಲಿರಾ?

ಹೊಸ 100 ರೂ. ನೋಟನ್ನು ನೋಡಿದ್ದೀರಾ? ಅದರಲ್ಲಿರುವ ಚಿತ್ರ ಎಲ್ಲಿಯದು ಅನ್ನೋದು ನಿಮಗ್ಯಾರಿಗಾದರೂ ಗೊತ್ತಾ? ಆರ್‌ಬಿಐ ಜಾರಿ ಮಾಡಿರುವ ಹೊಸ 100ರೂ. ನೋಟಿನ ಮೇಲೆ ಇರುವ ಸ್ಥಳ ಯಾವುವು? ಏನಿದರ ವಿಶೇಷತೆ. ಆರ್‌ಬಿಐ ಆ ಸ್ಥಳವನ್ನೇ ಆಯ್ಕೆ ಮಾಡಲು ಕಾರಣ ಏನು ಅನ್ನೋದನ್ನು ತಿಳಿಯೋಣ...

ಯಾವುದು ಈ ಸ್ಥಳ?

ಯಾವುದು ಈ ಸ್ಥಳ?

PC: Vistarphotos

ಆರ್‌ಬಿಐ ಯು ತನ್ನ ನೂತನ 100 ರೂ. ನೋಟಿಗೆ ಗುಜರಾತ್‌ ನ ಒಂದು ಪ್ರಸಿದ್ಧ ವಿಶ್ವಪಾರಂಪರ್ಯ ದರ್ಜೆಯನ್ನು ಹೊಂದಿರುವ ಐತಿಹಾಸಿಕ ಸ್ಥಳವನ್ನು ಆಯ್ಕೆ ಮಾಡಿದೆ. ಅದುವೇ ಗುಜರಾತ್‌ನ ರಾಣೀ ಕೀ ವಾವ್. ಅಂದರೆ ಮೆಟ್ಟಿಲು ಬಾವಿ.

ಈ ಊರಿಗೆಲ್ಲಾ ರೈಲಿನಲ್ಲಿ ಪ್ರಯಾಣಿಸೋದಕ್ಕಿಂತ ವಿಮಾನದಲ್ಲಿ ಪ್ರಯಾಣಿಸೋದೇ ಅಗ್ಗಈ ಊರಿಗೆಲ್ಲಾ ರೈಲಿನಲ್ಲಿ ಪ್ರಯಾಣಿಸೋದಕ್ಕಿಂತ ವಿಮಾನದಲ್ಲಿ ಪ್ರಯಾಣಿಸೋದೇ ಅಗ್ಗ

ಎಲ್ಲಿದೆ ಈ ರಾಣೀ ಕಿ ವಾವ್

ಎಲ್ಲಿದೆ ಈ ರಾಣೀ ಕಿ ವಾವ್

PC:Bernard Gagnon

ರಾಣಿ ಕೀ ವಾವ್ ಗುಜರಾತ್‌ನ ಪಾಟ್ನಾ ಜಿಲ್ಲೆಯಲ್ಲಿದೆ. ರಾಣೀ ಕೀ ವಾವ್‌ ಎಂದರೆ ಮೆಟ್ಟಿಲು ಬಾವಿ . 2004ರಲ್ಲಿ ಯುನೆಸ್ಕೋ ಈ ಸ್ಥಳಕ್ಕೆ ವಿಶ್ವ ಪಾರಂಪರೆಯ ದರ್ಜೆಯನ್ನು ನೀಡಿದೆ. ಈ ರಾಣೀ ಕೀ ವಾವ್ ಸರಸ್ವತಿ ನದಿ ಜೊತೆ ಸೇರಿಕೊಂಡಿದೆ. ಇದನ್ನು 11 ನೇ ಶತಮಾನದಲ್ಲಿ ರಾಜನ ನೆನಪಿಗಾಗಿ ನಿರ್ಮಿಸಲಾಯಿತು. 2016ರಲ್ಲಿ ರಾಣಿ ಕಿ ವಾವ್‌ಗೆ ಕ್ಲೀನೆಸ್ಟ್ ಐಕಾನಿಕ್ ಪ್ಲೇಸ್ ಎನ್ನುವ ಪಟ್ಟ ಲಭಿಸಿದೆ.

 ಮೆಟ್ಟಿಲು ಬಾವಿ

ಮೆಟ್ಟಿಲು ಬಾವಿ

PC:Azaz.sayyad

ಈ ಮೆಟ್ಟಿಲು ಬಾವಿಯು ಅಹಮದಾಬಾದ್‌ನಿಂದ ಸುಮಾರು 140 ಕಿ.ಮೀ ದೂರದಲ್ಲಿದೆ. ಇದನ್ನು ರಾಜ ಭೀಮದೇವನ ಪತ್ನಿ ರಾಣಿ ಉದಯಮತಿ 11ನೇ ಶತಮಾನದಲ್ಲಿ ನಿರ್ಮಿಸಿದಳು. ಇದನ್ನು ನಿರ್ಮಿಸುವ ಹಿಂದೆ ಒಂದು ಕಾರಣವೂ ಇದೆ. ಅದೇನೆಂದರೆ ನೀರಿನ ಅಭಾವ. ಈ ಊರಿನಲ್ಲಿ ಬಹಳ ಕಡಿಮೆ ಮಳೆಯಾಗುತ್ತಿತ್ತು. ಇನ್ನೊಂದು ಕಥೆ ಪ್ರಕಾರ ರಾಣಿ ಜನರಿಗೆ ನೀರನ್ನು ನೀಡಿ ಪುಣ್ಯವನ್ನು ಪಡೆಯಲು ಬಯಸಿದ್ದಳು ಎನ್ನಲಾಗುತ್ತದೆ. ಇಲ್ಲಿನ ಶಿಲ್ಪಕಲಾಕೃತಿಯನ್ನು ನೋಡಿದಾಗ ಅಲ್ಲಿ ಮಂದಿರವಿತ್ತು ಎನ್ನಲಾಗುತ್ತದೆ.

ಪುಟ್ಟಪರ್ತಿ ಸಾಯಿ ಬಾಬಾನ ಸನ್ನಿಧಿಗೆ ಹೋಗಿದ್ದೀರಾ ?ಪುಟ್ಟಪರ್ತಿ ಸಾಯಿ ಬಾಬಾನ ಸನ್ನಿಧಿಗೆ ಹೋಗಿದ್ದೀರಾ ?

 64 ಫೀಟ್ ಎತ್ತರವಿದೆ

64 ಫೀಟ್ ಎತ್ತರವಿದೆ

PC:Kshitij Charania

ಈ ಬಾವಿಯು 64 ಫೀಟ್ ಎತ್ತರವಿದೆ. ಹಾಗೂ 27 ಮೀಟರ್ ಆಳವಾಗಿದ್ದು, 20 ಮೀಟರ್ ಅಗಲವಿದೆ. ಹಿಂದಿನ ಕಾಲದ ಅದ್ಭುತ ನಿರ್ಮಾಣಗಳಲ್ಲಿ ಇದೂ ಒಂದು ಎನ್ನಲಾಗುತ್ತದೆ. ಇದು ನೀರು ಸಂಗ್ರಹಣೆಯ ಉತ್ಕೃಷ್ಟ ಉದಾಹರಣೆಯಾಗಿದೆ.

 ಏಳು ಅಂತಸ್ತಿನ ಬಾವಿ

ಏಳು ಅಂತಸ್ತಿನ ಬಾವಿ

PC:Shakti

ಏಳು ಅಂತಸ್ತಿನ ಈ ಕಟ್ಟಡದಲ್ಲಿ ಮರೂ ಹಾಗೂ ಗುರ್ಜರ ಶೈಲಿಯ ಸುಂದರ ಉಪಯೋಗವನ್ನು ಮಾಡಲಾಗಿತ್ತು. ರಾಣೀ ಕೀ ಬಾವಡಿಯಲ್ಲಿ ಅನೇಕ ರೀತಿಯ ಕಲಾಕೃತಿಗಳು, ಮೂರ್ತಿಗಳ ಚಿತ್ರವನ್ನು ಕೆತ್ತಲಾಗಿದೆ. ಇದು ವಿಷ್ಣುವಿಗೆ ಸಂಂಧಿಸಿದ್ದು ಎನ್ನಲಾಗುತ್ತದೆ. ಇಲ್ಲಿ ವಿಷ್ಣುವಿನ ದಶಾವತಾರದ ಮೂರ್ತಿಯನ್ನು ನಿರ್ಮಾಣ ಮಾಡಲಾಗಿತ್ತು.

ಲಿಟಲ್ ಇಂಗ್ಲೆಂಡ್‌ಗೆ ಹೋಗಬೇಕಾದ್ರೆ ಪಾಸ್‌ಪೋರ್ಟ್, ವೀಸಾ ಬೇಕಾಗಿಲ್ಲಲಿಟಲ್ ಇಂಗ್ಲೆಂಡ್‌ಗೆ ಹೋಗಬೇಕಾದ್ರೆ ಪಾಸ್‌ಪೋರ್ಟ್, ವೀಸಾ ಬೇಕಾಗಿಲ್ಲ

ಮಂದಿರದ ರೂಪದಲ್ಲಿ ನಿರ್ಮಾಣ ಮಾಡಲಾಗಿದೆ

ಮಂದಿರದ ರೂಪದಲ್ಲಿ ನಿರ್ಮಾಣ ಮಾಡಲಾಗಿದೆ

ನೀರಿನ ಪವಿತ್ರತತೆ ಹಾಗೂ ಅದರ ಮಹತ್ವವನ್ನು ತಿಳಿಸುವುದಕ್ಕಾಗಿ ಈ ಬಾವಿಯನ್ನು ಒಂದು ಮಂದಿರದ ರೂಪದಲ್ಲಿ ನಿರ್ಮಾಣ ಮಾಡಲಾಗಿದೆ. ಏಳು ತಳಗಳಾಗಿ ವಿಭಜಿಸಲಾಗಿರುವ ಈ ಬಾವಿಯಲ್ಲಿ 500 ಕ್ಕೂ ಅಧಿಕ ದೊಡ್ಡ ಮೂರ್ತಿಗಳಿದ್ದರೆ 1000 ಕ್ಕೂ ಅಧಿಕ ಸಣ್ಣ ಮೂರ್ತಿಗಳಿವೆ.

 ಶೇಷ ಶಯನಾವಸ್ಥೆಯಲ್ಲಿ ವಿಷ್ಣುವಿನ ಮೂರ್ತಿ

ಶೇಷ ಶಯನಾವಸ್ಥೆಯಲ್ಲಿ ವಿಷ್ಣುವಿನ ಮೂರ್ತಿ

PC: Bernard Gagnon

ಈ ಬಾವಿಯಲ್ಲಿ ನೀವು ಮೇಲಿನಿಂದ ನೋಡಿದರೆ ಸರಿಯಾಗಿ ಏನೂ ಕಾಣಿಸೋದಿಲ್ಲ. ಗೋಡೆಗಳಿಂದ ಹೊರಬಂದಿರುವ ಕೆಲವು ಭಾಗಗಳಷ್ಟೇ ಕಾಣಸಿಗುತ್ತದೆ. ಈ ಬಾವಿಯಲ್ಲಿ ಕೊನೆಯವರೆಗೆ ಹೋಗಲು ಮೆಟ್ಟಿಲುಗಳಿವೆ. ಮೆಟ್ಟಿಲುಗಳ ಮುಖಾಂತರ ಅದರೊಳಗೆ ಹೋದರೆ ಶೇಷ ಶಯನ ಅಚಸ್ಥೆಯಲ್ಲಿ ಮಲಗಿರುವ ವಿಷ್ಣುವಿನ ಮೂರ್ತಿ ಕಾಣಸಿಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X