Search
  • Follow NativePlanet
Share
» »ಧೋನಿ ತವರಿನಲ್ಲೊಂದು ಪ್ರವಾಸ ಮಾಡಿ

ಧೋನಿ ತವರಿನಲ್ಲೊಂದು ಪ್ರವಾಸ ಮಾಡಿ

By Vijay

ಯಾವ ರೀತಿಯ ಒತ್ತಡವಿದ್ದರೂ ಸರಿ ಸಂಯಮ ಕಳೆದುಕೊಳ್ಳದೆ, ತಾಳ್ಮೆಗೆ ಹೆಸರುವಾಸಿಯಾದ, ಕ್ರಿಕೆಟ್ ಪಂದ್ಯದಲ್ಲಿ ತನ್ನದೆ ಆದ ವಿಭಿನ್ನ ಶೈಲಿಯ "ಹೆಲಿಕಾಪ್ಟರ್ ಶಾಟ್" ನ ನಿರ್ಮಾತೃವಾದ ಭಾರತೀಯ ಕ್ರಿಕೆಟ್ ಇತಿಹಾಸದ ಅತಿ ಯಶಸ್ಸಿನ ನಾಯಕ ಎಂದೆ ಕರೆಸಿಕೊಳ್ಳುವ ಎಂ.ಎಸ್.ಡಿ ಅಥವಾ ಮಹೇಂದ್ರ ಸಿಂಗ್ ಧೋನಿ ಅವರು ಹುಟ್ಟಿದ್ದು ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ.

ಬೇಸಿಗೆ ಕೊಡುಗೆ : ಮೇಕ್ ಮೈ ಟ್ರಿಪ್ ನಿಂದ ಹೋಟೆಲ್ ಬುಕ್ಕಿಂಗ್ ಮೇಲೆ 35% ರಷ್ಟು ವಿನಾಯಿತಿ

ಜಾರ್ಖಂಡ್ ರಾಜ್ಯದ ರಾಜಧಾನಿಯಾಗಿರುವ, ಪ್ರವಾಸಿ ದೃಷ್ಟಿಯಿಂದ ಮಹತ್ವವಾಗಿರುವ ರಾಂಚಿಯು ಜಲಪಾತಗಳ ನಗರವೆಂಬ ಖ್ಯಾತಿಗೆ ಪಾತ್ರವಾಗಿದೆ. ಇದು ಜಾರ್ಖಂಡ್ ರಾಜ್ಯದ ಎರಡನೆ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿಯೂ ಸಹ ಗುರುತಿಸಲ್ಪಟ್ಟಿದೆ. ಈ ನಗರದ ಸುತ್ತಮುತ್ತ ಹಲವಾರು ಜಲಪಾತಗಳು, ಶಿಲಾ ರಚನೆಗಳು ಮತ್ತು ಬೆಟ್ಟಗುಡ್ಡಗಳಿಂದ ಕೂಡಿದ್ದು ಭೇಟಿ ನೀಡಲು ಯೋಗ್ಯವಾಗಿವೆ.

ವಿಶೇಷ ಲೇಖನ : ಕುತೂಹಲ ಕೆರಳಿಸುವ ಕೊಲ್ಕತ್ತಾ ನಗರ ಜೀವನ

ಪ್ರಸ್ತುತ ಲೇಖನವು ರಾಂಚಿ ಹಾಗೂ ಸುತ್ತಮುತ್ತಲಿರುವ ಕೆಲ ಮಹತ್ತರ ಪ್ರವಾಸಿ ಆಕರ್ಷಣೆಗಳ ಕುರಿತು ತಿಳಿಸುತ್ತದೆ. ರಾಂಚಿಗೆ ರಾಜ್ಯದ ಎಲ್ಲಾ ಪ್ರಮುಖ ನಗರಗಳಿಂದ ರಸ್ತೆ ಮತ್ತು ರೈಲು ಮಾರ್ಗಗಳು ಉತ್ತಮವಾಗಿದ್ದು, ಉತ್ತಮ ಸಂಪರ್ಕವನ್ನು ಹೊಂದಿದೆ. ಸಮಯಾವಕಾಶ ದೊರೆತರೆ ಧೋನಿ ಹುಟ್ಟಿದ ಈ ನಗರಕ್ಕೊಮ್ಮೆ ಪ್ರವಾಸ ಮಾಡಲು ಮರೆಯದಿರಿ.

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ರಾಂಚಿಯು ಒಂದು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ಸುತ್ತಮುತ್ತಲು ಗುಡ್ಡಗಾಡು ಪ್ರದೇಶಗಳನ್ನು ಒಳಗೊಂಡಿದೆ. ಇಲ್ಲಿನ ದಟ್ಟವಾದ ಅರಣ್ಯಗಳು ಇಲ್ಲಿ ವಿಶ್ರಾಂತಿ ಬಯಸಿ ಬರುವ ಪ್ರವಾಸಿಗರಿಗೆ ಆಹ್ಲಾದಕರವಾದ ವಾತಾವರಣವನ್ನು ನೀಡುವಲ್ಲಿ ಪ್ರಭಾವ ಬೀರುತ್ತವೆ. ರಾಂಚಿಯನ್ನು ಜಲಪಾತಗಳ ಮತ್ತು ಕೆರೆಗಳ ನಗರವೆಂದು ಕರೆಯಲಾಗುತ್ತದೆ.

ಚಿತ್ರಕೃಪೆ: Sankara Subramanian

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ಹುಂಡ್ರು ಜಲಪಾತವು ರಾಂಚಿಯ ಬಳಿಯಲ್ಲಿರುವ ಪ್ರಕೃತಿದತ್ತ ಸೌಂದರ್ಯದ ಪ್ರವಾಸಿ ಆಕರ್ಷಣೆಯಾಗಿದೆ. ರಾಂಚಿ - ಪುರುಲಿಯಾ ರಸ್ತೆಯ ಮೇಲೆ ರಾಂಚಿಯಿಂದ 45 ಕಿ.ಮೀ ಗಳಷ್ಟು ದೂರವಿರುವ ಈ ಜಲಪಾತವು ಸುಬರ್ಣರೇಖಾ ನದಿಯಿಂದ ರೂಪಗೊಂಡಿದ್ದು 320 ಅಡಿಗಳಷ್ಟು ಎತ್ತರದಿಂದ ಭೂಮಿಗೆ ಧುಮುಕುತ್ತದೆ.

ಚಿತ್ರಕೃಪೆ: Smeet Chowdhury

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ಜೊಹ್ನಾ ಜಲಪಾತ : ಗೌತಮಧಾರಾ ಎಂತಲೂ ಕರೆಯಲ್ಪಡುವ ಈ ಜಲಪಾತವು ರಾಂಚಿ ನಗರದಿಂದ ಸುಮಾರು 40 ಕಿ.ಮೀ ಗಳಷ್ಟು ದೂರದಲ್ಲಿ ಸ್ಥಿತವಿದೆ. ಇಲ್ಲಿಗೆ ರಸ್ತೆ ಹಾಗೂ ರೈಲಿನ ಅನುಕೂಲವಿದ್ದು, ಈ ಜಲಪಾತವನ್ನು 500 ಮೆಟ್ಟಿಲುಗಳಷ್ಟು ಕೆಳಗೆ ಇಳಿದು ನೋಡಿ ಆನಂದಿಸಬಹುದಾಗಿದೆ. ಕೆಳಗೆ ಪ್ರವಾಸಿ ಮಂದಿರವಿದ್ದು ಅಲ್ಲಿ ಬುದ್ಧನಿಗೆ ಮುಡಿಪಾಗಿರುವ ಒಂದು ದೇವಾಲಯವಿದೆ. ರಾರು ಎಂಬ ನದಿಯಿಂದ ಇದು ರೂಪಿತವಾಗಿದೆ.

ಚಿತ್ರಕೃಪೆ: Smeet Chowdhury

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ದಾಸ್ಸಂ ಜಲಪಾತ : ರಾಂಚಿ - ಟಾಟಾ ರಸ್ತೆಯ ಮೇಲೆ ರಾಂಚಿಯಿಂದ 34 ಕಿ.ಮೀ ಗಳಷ್ಟು ದೂರದಲ್ಲಿ ಈ ನಯನಮನೋಹರ ಜಲಪಾತವಿದೆ. ತೈಮರಾ ಎಂಬ ಹಳ್ಳಿಯ ಬಳಿ ಸ್ಥಿತವಿರುವ ಈ ಜಲಪಾತವು ಕಚನಿ ನದಿಯಿಂದ ರೂಪಗೊಂಡಿದ್ದು ಇದರ ಎತ್ತರ ಸುಮಾರು 144 ಅಡಿಗಳು.

ಚಿತ್ರಕೃಪೆ: Subhojit.sil

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ಹಿರ್ನಿ ಜಲಪಾತ : ರಾಂಚಿಯಿಂದ 65 ಕಿ.ಮೀ ಗಳಷ್ಟು ದೂರವಿರುವ ಹಿರ್ನಿ ಜಲಪಾತವು ರಾಂಚಿಗೆ ತೆರಳಿದ್ದಾಗ ಭೇಟಿ ನೀಡಭುದಾಂತಹ ಒಂದು ಸುಂದರ ಜಲಪಾತ ತಾಣವಾಗಿದೆ.

ಚಿತ್ರಕೃಪೆ: Skmishraindia

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ಸೀತಾ ಜಲಪಾತ : ಜೊಹ್ನಾ ಜಲಪಾತ ತಾಣದ ಬಳಿಯೆ ಮತ್ತೊಂದು ಸುಂದರವಾಗಿ ಕಾಣುವ ಜಲಪಾತವೆ ಸೀತಾ ಜಲಪಾತ. ಈ ಜಲಪಾತವನ್ನು ವೀಕ್ಷಿಸಲು ಬೆಳಗಿನ ಸಮಯವು ಆದರ್ಶಮಯವಾಗಿದ್ದು ಜೊಹ್ನಾ ಜಲಪಾತದಿಂದ ಕೇವಲ ಆರು ಕಿ.ಮೀ ಗಳಷ್ಟು ದೂರದಲ್ಲಿ ಈ ಜಲಪಾತವಿದೆ.

ಚಿತ್ರಕೃಪೆ: Skmishraindia

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ರಾಂಚಿ ಪಹಾಡಿ ಮಂದಿರ : ಇದರ ಅಕ್ಷರಶಃ ಅರ್ಥ ಕನ್ನಡದಲ್ಲಿ ರಾಂಚಿಯ ಬೆಟ್ಟದ ದೇವಾಲಯ ಎಂದಾಗುತ್ತದೆ. ಶಿವನಿಗೆ ಮುಡಿಪಾದ ಈ ದೇವಾಲಯವು ರಾಂಚಿಯ ಗುರುತರ ಸ್ಥಳವಾಗಿದೆ. ದೇವಾಲಯವು ಬೆಟ್ಟದ ಮೇಲೆ ನೆಲೆಸಿದ್ದು ಇದರ ಕೆಳಗೆ ರಾಂಚಿ ಕೆರೆಯು ಸ್ಥಿತವಿದೆ.

ಚಿತ್ರಕೃಪೆ: Biswarup Ganguly

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ಬೆಟ್ಟದ ಮೇಲೆ ಸ್ಥಿತವಿರುವ ದೇವಾಲಯಕ್ಕೆ ತಲುಪಲು ನಿರ್ಮಿಸಲಾಗಿರುವ ಮೆಟ್ಟಿಲುಗಳು.

ಚಿತ್ರಕೃಪೆ: Biswarup Ganguly

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ದೂರದಿಂದ ಅದ್ಭುತವಾಗಿ ಕಂಡುಬರುವ ರಾಂಚಿ ಕೆರೆ.

ಚಿತ್ರಕೃಪೆ: Biswarup Ganguly

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ರಾಂಚಿ ಬಳಿಯಿರುವ ಒಂದು ಸಣ್ಣ ಪಟ್ಟಣ ಕಂಕೆ. ಇಲ್ಲಿ ನಿರ್ಮಿಸಲಾಗಿರುವ ಕಂಕೆ ಜಲಾಶಯವು ಒಂದು ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿ ಸಂಗ್ರಹಿಸಲಾಗುವ ನೀರನ್ನು ಮುಖ್ಯವಾಗಿ ರಾಂಚಿ ನಗರಕ್ಕೆ ಸರಬರಾಜು ಮಾಡಲು ಉಪಯೋಗಿಸಲಾಗುತ್ತದೆ. ಇದು ರಾಂಚಿ ನಗರದಿಂದ ಐದು ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Biswarup Ganguly

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ಜಗನ್ನಾಥಪುರ ಮಂದಿರ : ರಾಂಚಿ ನಗರದಿಂದ ಹತ್ತು ಕಿ.ಮೀ ದೂರದಲ್ಲಿರುವ ಜಗನ್ನಾಥ ಮಂದಿರವು ಒಂದು ಪುರಾತನ ದೇವಾಲಯವಾಗಿದೆ. ಒಡಿಶಾದ ಪುರಿ ದೇವಾಲಯದೊಂದಿಗೆ ಸಾಕಷ್ಟು ಸಾಮ್ಯತೆ ಹೊಮ್ದಿರುವ ಈ ದೇವಾಲಯದ ನಿರ್ಮಾಣ ಕ್ರಿ.ಶ 1691 ರಲ್ಲಾಗಿದೆ.

ಚಿತ್ರಕೃಪೆ: Rshahdeo

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ಗೊಂದಾ ಬೆಟ್ಟ : ನಗರದಿಮ್ದ ನಾಲ್ಕು ಕಿ.ಮೀ ದೂರದಲ್ಲಿ ರಾಂಚಿ - ಕಂಕಾ ರಸ್ತೆಯ ಮೇಲೆ ಸಾಗುವಾಗ ಗೊಂದಾ ಬೆಟ್ಟವು ಸಿಗುತ್ತದೆ. ಇದೊಂದು ಪ್ರವಾಸಿ ಆಕರ್ಷಣೆಯ ಬೆಟ್ಟವಾಗಿದ್ದು ಇಲ್ಲಿ ಶಿಲಾ ಉದ್ಯಾನವನ್ನೂ ಸಹ ಕಾಣಬಹುದಾಗಿದೆ.

ಚಿತ್ರಕೃಪೆ: Biswarup Ganguly

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ನಕ್ಷತ್ರ ವನ : ಈ ಉದ್ಯಾನವು ರಾಂಚಿ ನಗರದ ಹೃದಯ ಭಾಗದಲ್ಲಿ ನೆಲೆಸಿದ್ದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಉದ್ಯಾನದ ಮಧ್ಯ ಭಾದಲ್ಲಿ ಹಲವಾರು ಆರ್ಕ್ ಗಳನ್ನು ನಿರ್ಮಿಸಲಾಗಿದ್ದು ಪ್ರತಿ ಆರ್ಕ್ ಗಳಲ್ಲಿ ನಿರ್ದಿಷ್ಟ ರಾಶಿಗಳನ್ನು ಪ್ರತಿನಿಧಿಸುವ ವಿವಿಧ ಗಿಡಗಳನ್ನು ನೆಡಲಾಗಿದೆ.

ಚಿತ್ರಕೃಪೆ: ranchi.nic.in

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ರಾಂಚಿ ವಿಜ್ಞಾನ ಕೇಂದ್ರ : ರಾಂಚಿಯಲ್ಲಿರುವ ಈ ವಿಜ್ಞಾನ ಕೇಂದ್ರವು ಜಾರ್ಖಂಡ್ ರಾಜ್ಯದ ಮೊದಲ ವಿಜ್ಞಾನ ಕೇಂದ್ರವಾಗಿದೆ. ರಾಂಚಿ ಬಳಿಯ ಟ್ಯಾಗೋರ್ ಬೆಟ್ಟದಲ್ಲಿ ನಿರ್ಮಾಣಗೊಂಡಿರುವ ಈ ಕೇಂದ್ರವು 2010 ರಲ್ಲಿ ಉದ್ಘಾಟನೆಗೊಂಡಿದ್ದು ಹಲವಾರು ವೈಜ್ಞಾನಿಕ ಅಣಕುಗಳನ್ನು ಕಾಣಬಹುದು.

ಚಿತ್ರಕೃಪೆ: Biswarup Ganguly

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ಇನ್ನೂ ರಾಂಚಿ ನಗರವೂ ಸಹ ಶೀಘ್ರವಾಗಿ ಅಭಿವೃದ್ಧಿಗೊಳ್ಳುತ್ತಿದ್ದು ನವನವೀನವಾದ ಕಾಫಿ ಡೇ ಕೇಂದ್ರ, ಪ್ಯಾಂಟಾಲೂನ್ಸ್ ಮಳಿಗೆ, ಬರಿಸ್ಟಾ, ಪಿಜ್ಜಾ ಹಟ್, ಸಬ್ ವೇ, ಡಾಮಿನೋಸ್ ನಂತಹ ಆಧುನಿಕ ಮಳಿಗೆಗಳು ಎಲ್ಲೆಂದರಲ್ಲಿ ಕಾಣಬಹುದಾಗಿದೆ. ಚಿತ್ರದಲ್ಲಿರುವುದು ರಾಂಚಿಯಲ್ಲಿನ ರಿಲಯನ್ಸ್ ಮಾರ್ಟ್.

ಚಿತ್ರಕೃಪೆ: Biswarup Ganguly

ರಾಂಚಿಯ ಆಕರ್ಷಣೆಗಳು:

ರಾಂಚಿಯ ಆಕರ್ಷಣೆಗಳು:

ರಾಷ್ಟ್ರೀಯ ಹೆದ್ದಾರಿ 33 ಮತ್ತು 23ಗಳು ರಾಂಚಿಯ ಮೂಲಕ ಹಾದು ಹೋಗುತ್ತವೆ. ಜಾರ್ಖಂಡ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ರಾಂಚಿಯನ್ನು ಇತರ ನಗರಗಳ ಜೊತೆಗೆ ಸಂಪರ್ಕಿಸಲು ನೆರವಾಗುತ್ತವೆ. ರಾಂಚಿಯು ದೇಶದ ಪ್ರಮುಖ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದ್ದು, ಈ ನಿಲ್ದಾಣವು ಆಗ್ನೇಯ ರೈಲ್ವೇಯ ಅತ್ಯಂತ ಆದಾಯ ತರುವ ನಿಲ್ದಾಣವಾಗಿ ಗುರುತಿಸಲ್ಪಟ್ಟಿದೆ. ರಾಂಚಿಯು ದೆಹಲಿ, ಜೈಪುರ್, ಚೆನ್ನೈ, ಬಿಲಾಸ್ ಪುರ್, ಮುಂಬಯಿ, ಕೊಲ್ಕತ್ತಾ ಮತ್ತು ಭುವನೇಶ್ವರ್ ನಂತಹ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ.

ಚಿತ್ರಕೃಪೆ: Smeet Chowdhury

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X