Search
  • Follow NativePlanet
Share
» »ರಣಕ್‍ಪುರದಲ್ಲಿರುವ ಈ ಅದ್ಭುತ ತಾಣಗಳಿಗೊಮ್ಮೆ ಭೇಟಿ ನೀಡಿ

ರಣಕ್‍ಪುರದಲ್ಲಿರುವ ಈ ಅದ್ಭುತ ತಾಣಗಳಿಗೊಮ್ಮೆ ಭೇಟಿ ನೀಡಿ

ರಣಕ್‍ಪುರವು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಈ ಗ್ರಾಮವು ಪಶ್ಚಿಮದಲ್ಲಿ ಅರಾವಳಿ ಪರ್ವತ ಶ್ರೇಣಿಯನ್ನು ಹೊಂದಿದ್ದು, ಉದಯ್‍ಪುರ್ ಮತ್ತು ಜೋಧ್‍ಪುರ್ ಹಾದಿಯ ಮಧ್ಯೆ ನೆಲೆಗೊಂಡಿದೆ. ಈ ಪುಟ್ಟ ಗ್ರಾಮವು ಸಾಕಷ್ಟು ಆಕರ್ಷಣೆಗಳನ್ನು ತನ್ನಲ್ಲಿ ಹೊಂದಿದೆ. ಹಾಗಾದರೆ ಬನ್ನಿ ರಾಜಸ್ಥಾನದ ರಣಕ್‌ಪುರದಲ್ಲಿರುವ ಆಕರ್ಷಣೆಗಳ ಬಗ್ಗೆ ತಿಳಿಯೋಣ.

ಜೈನ ದೇವಾಲಯ

ಜೈನ ದೇವಾಲಯ

PC: Nagarjun Kandukuru
ಈ ಗ್ರಾಮವು ತನ್ನಲ್ಲಿರುವ 15ನೆಯ ಶತಮಾನದ ಜೈನ ದೇವಾಲಯಕ್ಕಾಗಿ ಖ್ಯಾತಿ ಪಡೆದಿದೆ. ಈ ದೇವಾಲಯವು ಧಾರ್ಮಿಕತೆಯ ದೃಷ್ಟಿಯಿಂದ ಜೈನರಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದೆ. ಈ ದೇವಾಲಯದ ಭವ್ಯತೆಯು ಇಲ್ಲಿನ ಮನಮೋಹಕ ಕಂಬಗಳಲ್ಲಿ ಅಡಗಿದೆ. ಈ ದೇವಾಲಯದ ಸೌಂದರ್ಯವು ಮರುಭೂಮಿಯ ಹಿನ್ನಲೆಯಲ್ಲಿ ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತದೆ.

ಸೂರ್ಯನಾರಾಯಣ ದೇವಾಲಯ

ಸೂರ್ಯನಾರಾಯಣ ದೇವಾಲಯ

PC: Acred99
ರಣಕ್‍ಪುರದಲ್ಲಿನ ಆಕರ್ಷಣೆಗಳಲ್ಲಿ ಸೂರ್ಯದೇವನಿಗಾಗಿ ನಿರ್ಮಿಸಲಾದ ಸೂರ್ಯನಾರಾಯಣ ದೇವಾಲಯವು ಒಂದು. ರಣಕ್‍ಪುರ್‌ನಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಾಲಯದ ಬಹುಭುಜಾಕೃತಿಯ ಗೋಡೆಗಳಲ್ಲಿ ದೇವಾನು ದೇವತೆಗಳ, ಕುದುರೆಗಳ ಮತ್ತು ಸೈನಿಕರನ್ನು ಒಳಗೊಂಡಿರುವ ಕೆತ್ತನೆಗಳು, ಸ್ಥಳೀಯ ಕಲಾವಿದರ ಕಲೆಯನ್ನು ಬಣ್ಣಿಸುತ್ತದೆ. ರಣಕ್‍ಪುರ್‌ಗೆ ಬರುವ ಪ್ರವಾಸಿಗರು ಇಲ್ಲಿನ ಜೈನರ ಪ್ರಸಿದ್ಧ ಯಾತ್ರಾ ಸ್ಥಳವಾದ ಸದ್ರಿಗೆ ಸಹ ಭೇಟಿಕೊಡುತ್ತಿರುತ್ತಾರೆ.

ಮುಚ್ಛಲ್ ಮಹಾವೀರ ದೇವಾಲಯ

ಮುಚ್ಛಲ್ ಮಹಾವೀರ ದೇವಾಲಯ

PC: Daniel Villafruela
ಈಶ್ವರನಿಗಾಗಿ ನಿರ್ಮಿಸಲಾಗಿರುವ ಮುಚ್ಛಲ್ ಮಹಾವೀರ ದೇವಾಲಯ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಇದು ಕುಂಭಾಲ್‍ಘರ್ ವನ್ಯಧಾಮದಿಂದ 5 ಕಿ.ಮೀ ದೂರದಲ್ಲಿರುವ ಘಣೇರಾವ್ ಬಳಿಯಲ್ಲಿ ನೆಲೆಗೊಂಡಿದೆ. ಈ ದೇವಾಲಯದ ಪ್ರಮುಖ ಅಂಶವೆಂದರೆ ಇಲ್ಲಿನ ಶಿವನ ಮೂರ್ತಿಗೆ ಮೀಸೆ ಇರುವಂತೆ ಕೆತ್ತಲಾಗಿದೆ. ಈ ಪ್ರಾಂತ್ಯದಲ್ಲಿರುವ ಕಂಡುಬರುವ 11 ಜೈನ ದೇವಾಲಯಗಳ ಜೊತೆಗೆ ಮುಚ್ಛಲ್ ಮಹಾವೀರ್ ದೇವಾಲಯ ಮತ್ತು ಗಜಾನಂದ್ ದೇವಾಲಯಗಳು ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿವೆ.
ರಣಕ್‍ಪುರದಿಂದ 6 ಕಿ.ಮೀ ದೂರದಲ್ಲಿರುವ ನರ್ಲೈ ಗ್ರಾಮವು ತನ್ನಲ್ಲಿರುವ ಹಿಂದೂ ಮತ್ತು ಜೈನ ಮಂದಿರಗಳಿಗಾಗಿ, ಇಡೀ ಪ್ರಾಂತ್ಯದಲ್ಲಿಯೆ ಖ್ಯಾತಿ ಪಡೆದಿದೆ. ಈ ದೇವಾಲಯಗಳ ವಾಸ್ತುಶಿಲ್ಪ ಮತ್ತು ಮಂದಿರದ ಒಳಗಡೆ ಕಾಣಸಿಗುವ ಚಿತ್ರಕಲೆಗಳು ನಿಜಕ್ಕೂ ಸುಂದರವಾಗಿದೆ.

ಕುಂಬಲ್‍ಘಡ್

ಕುಂಬಲ್‍ಘಡ್

PC: Aryarakshak
ಈ ಐತಿಹಾಸಿಕ ತಾಣದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಕುಂಬಲ್‍ಘಡ್. ಈ ಸ್ಥಳವು ಇಲ್ಲಿನ ಎತ್ತರವಾದ ಮತ್ತು ಅಗಲವಾದ ಗೋಡೆಗಳಿಂದ ಕೂಡಿರುವ ಮೇವಾಡದ ಕೋಟೆಯಿಂದಾಗಿ ಗಮನಸೆಳೆಯುತ್ತದೆ. ಸಮುದ್ರ ಮಟ್ಟದಿಂದ 1100 ಮೀಟರ್ ಎತ್ತರದಲ್ಲಿ ನೆಲೆಸಿರುವ ಈ ಸ್ಥಳವು ಮಂತ್ರ ಮುಗ್ಧಗೊಳಿಸುವಂತಹ ಅರಾವಳಿ ಪರ್ವತ ಶ್ರೇಣಿಗಳನ್ನು ಮತ್ತು ಥಾರ್ ಮರುಭೂಮಿಯ ಅತ್ಯಾಕರ್ಷಕವಾದ ಮರಳು ದಿಬ್ಬಗಳ ನೋಟವನ್ನು ಒದಗಿಸುತ್ತದೆ. ಪ್ರಸ್ತುತ ಈ ಕೋಟೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದ್ದು, ಸಾಮಾನ್ಯ ಜನರ ಸಂದರ್ಶನಕ್ಕಾಗಿ ತೆರೆಯಲಾಗಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ರಣಕ್‍ಪುರಕ್ಕೆ ಹೋಗಲು ಬಯಸುವವರಿಗೆ ಚಳಿಗಾಲವು ಅತ್ಯಂತ ಸೂಕ್ತವಾದ ಕಾಲವಾಗಿದೆ. ಆಗ ಇಲ್ಲಿನ ಹವಾಗುಣವು ಅತ್ಯಂತ ಹಿತಕರವಾಗಿದ್ದು, ಇಲ್ಲಿ ಸುತ್ತಾಡಲು ಅನುಕೂಲಕರವಾಗಿರುತ್ತದೆ. ಮಳೆಗಾಲದಲ್ಲಿ ಈ ಪ್ರಾಂತ್ಯದಲ್ಲಿ ಬೀಳುವ ಮಳೆಯು ಅಲ್ಪ ಪ್ರಮಾಣದ್ದಾಗಿರುತ್ತದೆ. ಅಲ್ಲದೆ ಈ ಸಮಯದಲ್ಲಿ ಇಲ್ಲಿನ ರಾತ್ರಿಯ ಉಷ್ಣಾಂಶವು ಕುಸಿಯುತ್ತಿರುತ್ತದೆ.

ರಣಕ್‍ಪುರ ತಲುಪುವುದು ಹೇಗೆ?

ರಣಕ್‍ಪುರ ತಲುಪುವುದು ಹೇಗೆ?

PC: Heman kumar meena
ಉದಯ್‍ಪುರದ ಮಹಾರಾಣ ಪ್ರತಾಪ್ ವಿಮಾನ ನಿಲ್ದಾಣವು ರಣಕ್‍ಪುರಕ್ಕೆ ಸಮೀಪದ ವಿಮಾನ ನಿಲ್ದಾಣವಾಗಿದೆ. ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಣಕ್‍ಪುರಕ್ಕೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇಲ್ಲಿಂದ ಉದಯ್‍ಪುರದ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ವಿಮಾನಗಳು ದೊರೆಯುತ್ತವೆ. ರಣಕ್‍ಪುರಕ್ಕೆ ಸಮೀಪದ ರೈಲು ನಿಲ್ದಾಣವು ಫಾಲ್‌ನದಲ್ಲಿದ್ದು, ಅದು ಇಲ್ಲಿಂದ 35 ಕಿ.ಮೀ ದೂರದಲ್ಲಿದೆ. ಕ್ಯಾಬ್‍ಗಳು ಮತ್ತು ಟ್ಯಾಕ್ಸಿಗಳ ಮುಖಾಂತರ ನೀವು ಸುಲಭವಾಗಿ ರಣಕ್‍ಪುರವನ್ನು ತಲುಪಬಹುದು. ಅಲ್ಲದೆ ಹತ್ತಿರದ ನಗರಗಳಿಂದ ರಣಕ್‍ಪುರಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಸಹ ಸಂಚರಿಸುತ್ತಿರುತ್ತವೆ. ಅವುಗಳ ಮೂಲಕ ಈ ಊರನ್ನು ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X