Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಕ್‍ಪುರ್ » ಹವಾಮಾನ

ರಣಕ್‍ಪುರ್ ಹವಾಮಾನ

ಚಳಿಗಾಲವು ರಣಕ್‍ಪುರಕ್ಕೆ ಭೇಟಿಕೊಡಲು ಅತ್ಯಂತ ಸೂಕ್ತಕಾಲವೆಂದು ಪರಿಗಣಿಸಲ್ಪಟ್ಟಿದೆ. ಈ ಕಾಲವು ವರ್ಷದಲ್ಲಿ ಅತ್ಯಂತ ಹಿತವಾಗಿ ಪ್ರವಾಸಿಗರಿಗೆ ಮುದನೀಡುವಂತೆ ಇರುತ್ತದೆ. ಆದರೆ ಪ್ರವಾಸಿಗರು ಇಲ್ಲಿಗೆ ಈ ಕಾಲದಲ್ಲಿ ಭೇಟಿಕೊಡುವುದಾದರೆ ಉಣ್ಣೆಯ ಬಟ್ಟೆಗಳನ್ನು ಮರೆಯದೆ ತರಬೇಕಾಗುತ್ತದೆ.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್); ರಣಕ್‍ಪುರದಲ್ಲಿ ಬೇಸಿಗೆಯು ಏಪ್ರಿಲ್ ನಿಂದ ಜೂನ್‍ವರೆಗೆ ವ್ಯಾಪಿಸಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು 22° ರಿಂದ 42° ಸೆಲ್ಶಿಯಸ್‍ವರೆಗೆ ಇರುತ್ತದೆ. ಆಗ ಇಲ್ಲಿ ಸಹಿಸಲಸಾಧ್ಯವಾದ ಬಿಸಿಲಿದ್ದು, ಮೇ ತಿಂಗಳು ಅತ್ಯಂತ ಬಿಸಿಲಿನ ತಿಂಗಳೆಂದು ಪರಿಗಣಿಸಲ್ಪಟ್ಟಿದೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್); ಮಳೆಗಾಲವು ಜುಲೈನಿಂದ ಆರಂಭವಾಗಿ ಸೆಪ್ಟೆಂಬರ್‌ವರೆಗೆ ವ್ಯಾಪಿಸಿರುತ್ತದೆ. ಈ ಪ್ರಾಂತ್ಯದಲ್ಲಿ ಮಳೆಯು ಅಲ್ಪ ಪ್ರಮಾಣದಲ್ಲಿ ಮತ್ತು ಅನುಕ್ರಮವಿಲ್ಲದೆ ಬೀಳುತ್ತದೆ. ಆಗಾಗಿ ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶ ಏರು ಪೇರಾಗಿ ಕುಸಿಯುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ); ರಣಕ್‍ಪುರದಲ್ಲಿ ಚಳಿಗಾಲವು ಡಿಸೆಂಬರ್ ನಿಂದ ಫೆಬ್ರವರಿಯವರೆಗೆ ಇರುತ್ತದೆ. ಆಗ ಇಲ್ಲಿ ಗರಿಷ್ಠ 20° ಮತ್ತು ಕನಿಷ್ಠ 10° ಸೆಲ್ಶಿಯಸ್ ಉಷ್ಣಾಂಶವಿರುತ್ತದೆ. ಈ ಕಾಲದಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿಕೊಡಲು ಯೋಚಿಸುವುದಾದರೆ ಉಣ್ಣೆಯ ಬಟ್ಟೆಗಳನ್ನು ತರುವುದು ಸೂಕ್ತ.