Search
  • Follow NativePlanet
Share
» »ರಮ್ಜಾನ್ ಮಾಸ : ಪ್ರಾರ್ಥಿಸಿ, ಪ್ರೀತಿಸಿ, ತಿನ್ನಿ

ರಮ್ಜಾನ್ ಮಾಸ : ಪ್ರಾರ್ಥಿಸಿ, ಪ್ರೀತಿಸಿ, ತಿನ್ನಿ

By Vijay

ರಮ್ಜಾನ್ ಮಾಸ ಮುಸ್ಲಿಮ್ ಬಾಂಧವರಿಗೆ ಪವಿತ್ರವಾಗಿದ್ದಾಗಿದ್ದು ಸ್ನೇಹ, ಪ್ರೀತಿ, ಬಾಂಧವ್ಯ ತೋರಿಸಲು ಉತ್ತಮ ಸಮಯವಾಗಿರುತ್ತದೆ. ದಿನವೆಲ್ಲ ಉಪವಾಸವಿದ್ದು ಸಾಯಂಕಾಲ ಅತ್ಯದ್ಭುತ ತಿನಿಸುಗಳೊಂದಿಗೆ ಉಪವಾಸವನ್ನು ಅಂತ್ಯಗೊಳಿಸುವುದೂ ಸಹ ಒಂದು ಸುಂದರವಾದ ಅನುಭವ.

ನಿಮಗಿಷ್ಟವಾಗಬಹುದಾದ : ಬಿರಿಯಾನಿಗೆಂದೆ ಹೆಸರುವಾಸಿಯಾದ ಸ್ಥಳಗಳು

ರಮ್ಜಾನ ಮಾಸವು ಮುಸ್ಲೀಮೇತರರಿಗೂ ಸಹ ಒಂದು ರೀತಿಯ ರೋಮಾಂಚನ ಉಂಟು ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಅಲ್ಲಿ ಇಲ್ಲಿ ಪ್ರವಾಸ ಮಾಡುತ್ತ ತಿಂಡಿ ತಿನಿಸುಗಳನ್ನು ಇಷ್ಟಪಡುವವರಿಗೆ. ಕಬಾಬ್, ಶೂರ್ಮಾ, ಬಿರಿಯಾನಿ, ಸಮೋಸಾ, ಜಿಲೇಬಿ, ಹಾರೀಸ್, ಕುನಾಫಾ ಮುಂತಾದ ಬಾಯಲ್ಲಿ ನೀರೂರಿಸುವಂತಹ ಖಾದ್ಯಗಳು ಸಾಯಂಕಾಲದಲ್ಲಿ ದೊರೆಯುತ್ತವೆ.

ನಿಮಗಿಷ್ಟವಾಗಬಹುದಾದ : ಭಾರತದ ವಿವಿಧ ಸ್ಥಳಗಳ ವಿಶಿಷ್ಟ ಖಾದ್ಯಗಳು

ಭಾರತ ದೆಶದಲ್ಲಿ ಬಾಯಲ್ಲಿ ನೀರೂರಿಸುವಂತಹ ತಿಂಡಿ ತಿನಿಸುಗಳು ದೊರೆಯುವ ಅನೇಕ ಬೀದಿಗಳನ್ನು ಎಲ್ಲೆಡೆ ಕಾಣಬಹುದು. ಬನ್ನಿ, ಪ್ರಸ್ತುತ ಲೇಖನದ ಮೂಲಕ ಅಂತಹ ಕೆಲವು ದೇಶದ ಅತಿ ಗುರುತರವಾದ ಸ್ವಾದಿಷ್ಟ ಹಾಗೂ ವೈವಿಧ್ಯಮಯ ತಿಂಡಿ ತಿನಿಸುಗಳು ದೋರೆಯುವ ಸ್ಥಳಗಳ ಪ್ರವಾಸ ಮಾಡಿ ಬರೋಣ.

ಕೌಸರ್ ಬಾಗ್, ಕೋಂಧ್ವಾ, ಪುಣೆ

ಚಿಕನ್ ಚಕೋರಿ ಕೇಳಿದ್ದೀರಾ? ತಿನ್ನಬೆಕೆಂಬ ಹಂಬಲವಿದೆಯಾ? ಹಾಗಿದ್ದರೆ ಪುಣೆಯ ಕೋಂಧ್ವಾದ ಕೌಸರ್ ಬಾಗ್ ಗೆ ಒಂದೊಮ್ಮೆ ಭೆಟಿ ನೀಡಲೇಬೇಕು. ಇದು ಇಫ್ತಾರ್ ಕೂಟದ ಸಮಯದಲ್ಲಿ ಭೇಟಿ ನೀಡಲೇಬೇಕಾದ ಅದ್ಭುತ ಸ್ಥಳಗಳಲ್ಲಿ ಒಂದು. ನಿವು ರಮ್ಜಾನ್ ಮಾಸದಲ್ಲಿ ಪುಣೆಯಲ್ಲೇನಾದರೂ ಇದ್ದರೆ ಇಲ್ಲೊಮ್ಮೆ ಭೇಟಿ ನೀಡಿ. ಸ್ವಾದಿಷ್ಟಕರ ಖಾದ್ಯಗಳನ್ನು ಸವಿಯಿರಿ. ಇಲ್ಲಿನ ಇತರೆ ವಿಶೇಷತೆಗಳು, ಚಿಕನ್ ಲಾಲಿಪಾಪ್, ಫಿರ್ನಿ, ಚಿಕನ್ ಬಿರಿಯಾನಿ.

ರಮ್ಜಾನ್ ಮಾಸ : ಪ್ರಾರ್ಥಿಸಿ, ಪ್ರೀತಿಸಿ, ತಿನ್ನಿ

ಚಿತ್ರಕೃಪೆ: flydime

ಮಸೀದಿ ರಸ್ತೆ, ಫ್ರೇಸರ್ ಟೌನ್, ಬೆಂಗಳೂರು

ರಮ್ಜಾನ್ ಮಾಸದಲ್ಲಿ ಸಾಯಂಕಾಲವಾದರೆ ಸಾಕು ಎಲ್ಲೆಡೆ ವಿವಿಧ ತಿಂಡಿ ತಿನಿಸುಗಳ ಮುಗ್ಗಟ್ಟುಗಳು ದಿಪ ಹೊತ್ತಿಸಿಕೊಂಡು ಸಿಂಗರಿಸಲ್ಪಡುತ್ತವೆ. ಘಮ್ ಎಂಬ ಖಾದ್ಯಗಳ ಪರಿಮಳವು ನೆರೆದವರ ಹಸಿವನ್ನು ಇನ್ನಷ್ಟು ಹೆಚ್ಚಿಸತೊಡಗುತ್ತವೆ. ಸಾಕಷ್ಟು ಬಗೆಯ ವಿವಿಧ ಮಾಂಸಾಹಾರ ಖಾದ್ಯಗಳು ಹಾಗೂ ಸಿಹಿ ತಿನಿಸುಗಳು ಇಲ್ಲಿ ದೊರೆಯುತ್ತವೆ. ಈ ಸಂದರ್ಭದಲ್ಲಿ ಇದೊಂದು ಭೇಟಿ ನೀಡಲೇಬೇಕಾದ ತಾಣವಾಗಿದೆ.

ರಮ್ಜಾನ್ ಮಾಸ : ಪ್ರಾರ್ಥಿಸಿ, ಪ್ರೀತಿಸಿ, ತಿನ್ನಿ

ಚಿತ್ರಕೃಪೆ:Hill93

ಬಾರಾ ಹಂಡಿ, ಮುಂಬೈ

ಪಾಯಾ ಸವಿಯ ಬೇಕೆನಿಸುತ್ತಿದೆಯೆ? ಹಾಗಿದ್ದಲ್ಲಿ ಮುಂಬೈನ ಬಾರಾ ಹಂಡಿಗೊಮ್ಮೆ ಭೆಟಿ ನೀಡಬಹುದು. ಇದಕ್ಕೆ ಈ ಹೆಸರು, ಇಲ್ಲಿ ಹನ್ನೆರಡು ಬೇರೆ ಕಡಾಯಿಗಳನ್ನು ಹನ್ನೆರಡು ರೀತಿಯ ಖಾದ್ಯಗಳಿಗಾಗಿ ಬಳಸಲಾಗುವುದರಿಂದ ಬಂದಿದೆ. ಬಾರಾ ಎಂದರೆ ಹನ್ನೆರಡು ಹಾಗೂ ಹಂಡಿ ಎಂದರೆ ಬಟ್ಟಲು ಅಥವಾ ಕಡಾಯಿ ಎಂದಾಗುತ್ತದೆ. ಈ ಸ್ಥಳಕ್ಕೆ 150 ವರ್ಷಗಳ ಇತಿಹಾಸವಿದೆ. ಇಲ್ಲಿ ದೊರೆಯುವ ಪಿಚೋಟಾ ಪಾಯಾ ಒಮ್ಮೆ ತಿನ್ನಲೇಬೇಕು.

ವಿಳಾಸ : ನಾಗದೇವಿ ಬೀದಿ, ಲೋಹಾರ್ ಚಾಳು, ಕಲ್ಬಾದೇವಿ, ಮುಂಬೈ

ರಮ್ಜಾನ್ ಮಾಸ : ಪ್ರಾರ್ಥಿಸಿ, ಪ್ರೀತಿಸಿ, ತಿನ್ನಿ

ಚಿತ್ರಕೃಪೆ: Hill93

ಕರೀಮ್ಸ್, ನವದೆಹಲಿ

ನವದೆಹಲಿಯ ಪ್ರಸಿದ್ಧ ಜಾಮಾ ಮಸೀದಿ ರಸ್ತೆಯಲ್ಲಿರುವ ಕರೀಮ್ಸ್ ಮುಘಲ್ ರಾಜವಂಶೀಯ ಖಾದ್ಯಗಳನ್ನು ತಯಾರಿಸುವಲ್ಲಿ ಪ್ರಸಿದ್ಧವಾಗಿದೆ ಹಾಗೂ ಅದ್ಭುತವಾದ ಇತಿಹಾಸವನ್ನೂ ಹೊಂದಿದೆ. ಇಲ್ಲಿ ದೊರೆಯುವ ಖಾದ್ಯಗಳು ಅತ್ಯಂತ ರುಚಿಕರ ಹಾಗೂ ಉತ್ತಮ ಗುಣಮಟ್ಟವನ್ನು ಹೊಂದಿದ್ದು ಅಪಾರ ಜನ ಮನ್ನಣೆಗಳಿಸಿದೆ. ದೆಹಲಿಯ ಹಳೆಯ ಶೈಲಿಯ ಕಬಾಬ್ ಗಳನ್ನು ಸವಿಯಲು ಬಯಸಿದ್ದಲ್ಲಿ ಈ ಉಪಹಾರಗೃಹಕ್ಕೆ ಭೇಟಿ ನೀಡಿ.

ವಿಳಾಸ : ಕರೀಮ್ಸ್, ಕಲಾನ್ ಮಹಲ್, ಚಾಂದಿನಿ ಚೌಕ್, ನವದೆಹಲಿ

ರಮ್ಜಾನ್ ಮಾಸ : ಪ್ರಾರ್ಥಿಸಿ, ಪ್ರೀತಿಸಿ, ತಿನ್ನಿ

ಚಿತ್ರಕೃಪೆ: orchidgalore

ಚಾರ್ಮಿನಾರ್ ಫುಡ್ ಸ್ಟಾಲ್ಸ್, ಹೈದರಾಬಾದ್

ರಾಜವೈಭವದ ನಗರವಾದ ಭಾರತದ ತೆಲಂಗಾಣ ಹಾಗೂ ಆಂಧ್ರದ ಜಂಟಿ ರಾಜಧಾನಿಯಾದ ಹೈದರಾಬಾದ್ ನಗರವೂ ಸಹ ರಮ್ಜಾನ್ ಹಬ್ಬಕ್ಕೆ ಪ್ರಸಿದ್ಧವಾಗಿದೆ. ಅಂತೆಯೆ ಇಲ್ಲಿ ರಮ್ಜಾನ್ ಮಾಸದ ಸಮಯದಲ್ಲಿ ಸಾಯಂಕಾಲವಾಗುತ್ತಿದ್ದಂತೆ ವೈವಿಧ್ಯಮಯ ತಿಂಡಿ ತಿನಿಸುಗಳ ಅಂಗಡಿಗಳು ನಳನಳಿಸುತ್ತವೆ. ನಗರದ ಪ್ರಖ್ಯಾತ ಚಾರ್ಮಿನಾರ್ ಬೀದಿಯಲ್ಲಿರುವ ಚಾರ್ಮಿನಾರ್ ಫುಡ್ ಸ್ಟಾಲ್ಸ್ ನೀವು ರಮ್ಜಾನ್ ಮಾಸದಲ್ಲಿ ಭೇಟಿ ನೀಡಿದ್ದಾಗ ಒಮ್ಮೆ ತೆರಳಲೇಬೇಕಾದ ಉಪಹಾರಗೃಹಗಳು. ಇಲ್ಲಿನ ಬಾಯಲ್ಲಿ ನೀರೂರಿಸುವ ಪರಾಠಾಗಳು ಹಾಗೂ ಕಬಾಬ್ ಗಳು ನಿಮ್ಮನ್ನು ಖಂಡಿತವಾಗಿ ನಿರಾಶರನ್ನಾಗಿಸುವುದಿಲ್ಲ.

ವಿಳಾಸ : ಚಾರ್ಮಿನಾರ್ ಫುಡ್ ಸ್ಟಾಲ್ಸ್, ಚಾರ್ಮಿನಾರ್ ಬೀದಿ, ಹೈದರಾಬಾದ್

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more